ಬುಗುಡನಹಳ್ಳಿ ಕೆರೆ ಏರಿ ಶಿಥಿಲ- ಆತಂಕದಲ್ಲಿ ಜನರು!  -ಕುಚ್ಚಂಗಿ ಪ್ರಸನ್ನ

ಬುಗುಡನಹಳ್ಳಿ ಕೆರೆ ಏರಿ ಶಿಥಿಲ- ಆತಂಕದಲ್ಲಿ ಜನರು!  ಕುಚ್ಚಂಗಿ ಪ್ರಸನ್ನ

ಬುಗುಡನಹಳ್ಳಿ ಕೆರೆ ಏರಿ ಶಿಥಿಲ- ಆತಂಕದಲ್ಲಿ ಜನರು!    -ಕುಚ್ಚಂಗಿ ಪ್ರಸನ್ನ


ಬುಗುಡನಹಳ್ಳಿ ಕೆರೆ ಏರಿ ಶಿಥಿಲ- ಆತಂಕದಲ್ಲಿ ಜನರು!

-ಕುಚ್ಚಂಗಿ ಪ್ರಸನ್ನ


ತುಮಕೂರು: ಗುರುವಾರ ಊರುಕೆರೆ , ಹಂಚಿಹಳ್ಳಿ ಸುತ್ತ ಮುತ್ತ ಹಾಹಾಕಾರ ಎಬ್ಬಿಸಿದ ಹೆಬ್ಭಾಕ ಕೆರೆಯಿಂದ ಹೊರ ಬಿಡಲಾದ ದೊಡ್ಡ ಪ್ರಮಾಣದ ನೀರು ಬುಗುಡನಹಳ್ಳಿ ಕೆರೆ ತಲುಪಿದೆ, ಬುಗುಡನಹಳ್ಳಿ ಕೆರೆಯೂ ಈಗಾಗಲೇ ರ‍್ತಿಯಾಗಿದ್ದರಿಂದ ಏಳು ಕೋಡಿ ಬಾಗಿಲುಗಳ ಪೈಕಿ ಆರನ್ನು ತೆರೆದು ನೀರನ್ನು ಹೊರ ಬಿಡಲಾಗಿದೆ. ಹೊರ ಹರಿವಿನ ಪ್ರಮಾಣ ಕೋಡಿ ಹಳ್ಳದ ಸಾರ‍್ಥ್ಯದ ಐದಾರು ಪಟ್ಟು ಹೆಚ್ಚಿಗೆ ಇರುವುದರಿಂದ ಹಳ್ಳದ  ವ್ಯಾಪ್ತಿಯನ್ನೂ ಮೀರಿ ಸಾವಿರಾರು ಎಕೆರೆ ಫಲವತ್ತಾದ ಅಡಿಕೆ, ತೆಂಗು ಹಾಗೂ ಬಾಳೆಯ ತೋಟಗಳು ಮತ್ತು ಗದ್ದೆಗಳನ್ನು ಆವರಿಸಿಕೊಂಡು ಪ್ರವಾಹದೋಪಾದಿಯಲ್ಲಿ ನೀರು  ಗುಬ್ಬಿ ತಾಲೂಕಿನ ಮೂಕನಹಳ್ಳಿ ಪಟ್ನದ ಕೆರೆ ಕಡೆ ಧಾವಿಸುತ್ತಿದೆ. ಜೊತೆಗೆ ಬುಗುಡನಹಳ್ಳಿ ಕೆರೆಯ ಒಂದು ಭಾಗ ದರ‍್ಬಲಗೊಂಡು ನೀರು ಜಿನುಗುತ್ತಿದ್ದು ಯಾವ ಕ್ಷಣದಲ್ಲಿ ಬೇಕಾದರೂ ಒಡೆಯಬಹುದು ಎಂದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಚನೆಗಳನ್ನು ನೀಡಿ ಹೋಗಿದ್ದಾರೆ ಎಂದು ತಹಶೀಲ್ದಾರ್ ಜಿ.ವಿ.ಮೋಹನಕುಮಾರ್ ‘ ಬೆವರ ಹನಿ’ಗೆ ಸ್ಪಷ್ಟನೆ ನೀಡಿದರಾದರೂ, ಸ್ಥಳಕ್ಕೆ ಭೇಟಿ ನೀಡಿದಾಗ ಒಂದಷ್ಟು ಕ್ರಶರ್ ಡಸ್ಟ್ ರ‍್ತಿ ಮಾಡಿದ ಚೀಲಗಳನ್ನು ತಂದು ಏರಿಯ ಒಳ ಮತ್ತು ಹೊರ ಭಾಗದಲ್ಲಿ ಪೇರಿಸಿರುವುದು ಕಂಡು ಬಂತು. ಆದರೆ ಮುಕ್ಕಾಲು ಟಿಎಂಸಿ ನೀರು ತುಂಬಿಕೊಂಡಿರುವ ಜಲಾಶಯಕ್ಕೆ ಈ ಚೀಲಗಳೆಲ್ಲ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ , ರಾತ್ರಿ ಏನಾದರೂ ಮಳೆಯಾದರೆ ಕ್ಷಣರ‍್ಧದಲ್ಲಿ ಕೊಚ್ಚಿ ಹೋಗುತ್ತವೆ ಎಂದು ಸ್ಥಳದಲ್ಲಿದ್ದ ಬುಗುಡನಹಳ್ಳಿಯ ರೈತ ಸಂಪಯ್ಯ ಹೇಳಿದರು. 

1 ಬುಗುಡನಹಳ್ಳಿ ಕರೆ ಕೋಡಿಯಿಂದ ನೀರಿನ ಹರಿವು


ತುಮಕೂರು ನಗರಕ್ಕೆ ಕುಡಿಯವ ನೀರು ಪೂರೈಸುವ ಹೇಮಾವತಿ ನೀರನ್ನು ಹಿಡಿದಿಡುವ  ಬುಗುಡನಹಳ್ಳಿ ಕೆರೆಯ (ಜಲ ಸಂಗ್ರಹಗಾರ) ನರ‍್ವಹಣೆ ಮಾಡುವ ತುಮಕೂರು ಮಹಾನಗರಪಾಲಿಕೆಗೆ ಸೇರಿದೆ. ಪಾಲಿಕೆ ಈ ಕೆರೆಯ ಏರಿಯನ್ನು ಸರ‍್ಪಕವಾಗಿ ನರ‍್ವಹಣೆ ಮಾಡುತ್ತಿಲ್ಲ ಎಂಬುದು ಆಳೆತ್ತರಕ್ಕೆ ಬೆಳೆದಿರುವ ಗಿಡ ಗಂಟಿಗಳನ್ನು ನೋಡಿದರೇ ರ‍್ಥವಾಗುತ್ತದೆ. ಊರಿನಿಂದ ಕೋಡಿಯನ್ನು ತಲುಪುವ ರಸ್ತೆಯೂ ಅದ್ವಾನವಾಗಿದೆ. ಕೋಡಿಯ ಏಳು ಬಾಗಿಲುಗಳ ಪೈಕಿ ಒಂದು ಕರ‍್ಯನರ‍್ವಹಿಸುತ್ತಿಲ್ಲ, ಮತ್ತು ಹಗಲಿರುಳೂ ಅಲ್ಲಿ ಕಾವಲಿಗೆ ಯಾರನ್ನೂ ಇರಿಸಿಲ್ಲ, ಏರಿಯ ಒಂದು ಭಾಗ ಶಿಥಿಲವಾಗಿ ನೀರು ಜಲಿಸುತ್ತಿದೆ ಎಂದು ಎರಡು ತಿಂಗಳ ಹಿಂದೆಯೇ ಮಾಜಿ ಮಂತ್ರಿ ಸೊಗಡು ಶಿವಣ್ಣನವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ಕರೆಸಿ ತೋರಿಸಿದರೂ, ಯಾವುದೇ ದುರಸ್ತಿ ಮಾಡಿಲ್ಲ ಎನ್ನುವುದು ಈ ದಿನ ತಂದು ಬೇಕಾಬಿಟ್ಟಿ ಎಳೆದಿರುವ ಡಸ್ಟ್ ಚೀಲಗಳನ್ನು ನೋಡಿದರೇ ತಿಳಿಯುತ್ತದೆ. 

2 ಬುಗುಡನಹಳ್ಳಿ ಕೆರೆ ಏರಿ ಶಿಥಿಲ: ಜನರಲ್ಲಿ ಆತಂಕ 


ತೋಟಗಳನ್ನು ಆವರಿಸಿಕೊಂಡು ಹರಿಯುತ್ತಿರುವ ಪ್ರವಾಹವು ಫಲವತ್ತಾದ ಗೊಬ್ಬರ ಮತ್ತು ಮಣ್ಣನ್ನು ಕೊಚ್ಚಿ ಹಾಕುವುದರಿಂದ ರೈತರ ಸಾವಿರಾರು ಎಕರೆ ತೋಟಗಳು ಸುಲಭಸಾಧ್ಯಕ್ಕೆ ಸರಿಪಡಿಸಲಾಗದಷ್ಟು ಬರಡಾಗಲಿವೆ. 30 ರ‍್ಷಗಳ ಹಿಂದೆ 1992-94ರಲ್ಲಿ ಈ ಬುಗುಡನಹಳ್ಳಿ ಕೆರೆಯನ್ನು ಹೇಮಾವತಿ ನೀರನ್ನು ಹೆಚ್ಚುವರಿಯಾಗಿ ತುಂಬಿಸಿಇಡಲೆಂದು ಅಭಿವೃದ್ಧಿ ಪಡಿಸುವಾಗ ಉದ್ದೇಶಿತ ವಿನ್ಯಾಸವನ್ನು ನೀರಾವರಿ ಇಲಾಖೆಗೆ ಸಲ್ಲಿಸಿ ಅನುಮೋದನೆ ಪಡೆದಿರಲಿಲ್ಲ ಹಾಗೂ ಇಡೀ ಜಲಸಂಗ್ರಹಾಗಾರದ ನರ‍್ಮಾಣ ದೋಷಪೂರಿತವಾಗಿದೆ ಎಂದು ತಜ್ಞರ ತಿಳುವಳಿಕೆ ಆಧರಿಸಿದ ವರದಿಯನ್ನು 1994ರ ಜುಲೈ ನಾಲ್ಕರಂದು ಆಗ ನಾನು ಕಾರ‍್ಯ ನಿರ‍್ವಹಿಸುತ್ತಿದ್ದ ಪತ್ರಿಕೆಯಲ್ಲಿ ಬರೆದಿದ್ದನ್ನು ಓದುಗರ ಗಮನಕ್ಕೆ ತರಬಯಸುತ್ತೇನೆ. 

 ತೋಟಗಳಲ್ಲಿ ನಿಂತ ನೀರು 


ಬುಗುಡನಹಳ್ಳಿ ಕೆರೆಯನ್ನು ವಿಸ್ತರಿಸಿ ಏರಿ ಹಾಗೂ ಕೋಡಿಯನ್ನು ಎತ್ತರಿಸುವಾಗ ಎಂದಾದರೊಮ್ಮೆ ಇಡೀ ಕೆರೆ ಭರ‍್ತಿಯಾಗಿ ಒಮ್ಮೆಲೇ ಎಲ್ಲ ಏಳೂ ಗೇಟ್ಗಳನ್ನು ತೆರೆದಲ್ಲಿ ಹೊರ ಬರುವ ನೀರಿನ ಪ್ರಮಾಣ ಎಷ್ಟು, ಆ ಕೋಡಿಯ ಮುಂದಿರುವ ಹಳ್ಳದ ಧಾರಣ ಸಾಮರ‍್ಥ್ಯ ಎಷ್ಟು ಎಂಬುದನ್ನು ಯಾವ ಇಂಜಿನಿಯರ್ ಕೂಡಾ ಊಹಿಸಿರಲಿಲ್ಲ ಎಂಬುದು ಈ 28 ವರ‍್ಷಗಳ ಬಳಿಕ ಮೊಟ್ಟ ಮೊದಲು ಭರ‍್ತಿಯಾದ ಬುಗುಡನಹಳ್ಳಿ ಕೆರೆ ಕೋಡಿಯಿಂದ ಹರಿವ ನೀರನ್ನು ನೋಡಿದಾಗ ಗೊತ್ತಾಗುತ್ತದೆ. 


ಈ ಸಲ ಮಳೆಗಾಲಕ್ಕೂ ಮುನ್ನವೇ ಹೇಮಾವತಿ ನೀರನ್ನು ಹರಿಸಿ ಭರ‍್ತಿ ಮಾಡಲಾಗಿದೆ, ಜೊತೆಗ ದೊಡ್ಡ ಪ್ರಮಾಣದ ಮಳೆ ಬಂದಿದೆ. ಹೆಬ್ಬಾಕ ಕೆರೆಯಿಂದಲೂ ನೀರು ಹರಿದು ಬರುತ್ತಿದೆ. ಎರಡು ತಿಂಗಳ ಹಿಂದೆಯೇ ಏರಿ ಶಿಥಿಲವಾಗಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ದುರಸ್ತಿಗೆ ಮುಂದಾಗಲಿಲ್ಲ. ಈಗ ನೆಪಮಾತ್ರಕ್ಕೆ ಕಲ್ಲಿನ ಪುಡಿ ಚೀಲಗಳನ್ನು ಹಾಕಿದ್ದಾರೆ. ಕೆರೆ ಕೋಡಿಯ ಸಮೀಪದಲ್ಲೇ ತೋಟದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನಮಗೆ ರಾತ್ರಿ ನಿದ್ದೆ ಬಾರದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದವರು ಕಶ್ಯಪ್. 


2018-19ರಲ್ಲಿ ಕೆರೆಯ ಹೂಳಲು ತೆಗೆದು ಆಳಗೊಳಿಸಲು ಸರ‍್ಕಾರ 65 ಕೋಟಿ ರೂ ಬಿಡುಗಡೆ ಮಾಡಿದೆ. 2020-21ರ ಜೂನ್ವರೆಗೆ ಕಾಮಗಾರಿ ನಡೆದು ರೂ.20 ಕೋಟಿ ಖರ‍್ಚಾಗಿದೆ. ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದುದರಿಂದ ಕೆಲಸ ಪೂರ‍್ಣಗೊಂಡಿಲ್ಲ ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಪ್ರಭಾರ ಕರ‍್ಯಪಾಲಕ ಇಂಜಿನಿಯರ್ ಕಾಶಿ ವಿಶ್ವನಾಥ ಶೆಟ್ಟಿ ಅವರು ‘ ಬೆವರ ಹನಿ’ಗೆ ತಿಳಿಸಿದರು. ಕೆರೆಯ ಹೂಳಲು ತೆಗೆಯುವ ಹಾಗೂ ಆಳ ಗೊಳಿಸುವ ಕೆಲಸ ನಮ್ಮ ಮಂಡಳಿಗೆ ಸೇರಿದೆಯಾದರೂ ಇಡೀ ಏರಿ ಹಾಗೂ ಇನ್ನುಳಿದ ನಿರ‍್ವಹಣೆಯೆಲ್ಲ ಕಾರ್ಪೋರೇಶನ್ಗೆ ಸೇರಿದ್ದು ಎಂದು ಸ್ಷಷ್ಟಪಡಿಸಿದರು. ಈ ಕುರಿತು ಮಾಹಿತಿ ಪಡೆಯಲು ಕಳೆದ ಎರಡು ದಿನಗಳಿಂದ ಮಹಾನಗರಪಾಲಿಕೆ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ಅವರು ಪತ್ರಿಕೆಯ ದೂರವಾಣಿ ಕರೆ ಸ್ವೀಕರಿಸಲಿಲ್ಲ ಹಾಗೂ ಮರು ಕರೆಯನ್ನೂ ಮಾಡಿಲ್ಲ, ಸಂದೇಶವನ್ನೂ ನೀಡಿಲ್ಲದೇ ಇರುವುದರಿಂದ ಪೂರ‍್ಣ ಮಾಹಿತಿಯನ್ನುನೀಡಲು ಸಾಧ್ಯವಾಗಿಲ್ಲ.


ಹೀಗಾಗಿ ಒಂದು ವಾರದಿಂದ ನಿರಂತರ ಧೋ ಎಂದು ಸುರಿದ ಮಳೆ ಗುರುವಾರ ರಾತ್ರಿ ಮಾತ್ರವೇ ಬಿಡುವು ನೀಡಿದೆ. ಮಹಾನಗರ ಪಾಲಿಕೆಯಲ್ಲಿ ಹತ್ತಾರು ವರ‍್ಷಗಳಿಂದ ಬೇರು ಬಿಟ್ಟುಕೊಂಡಿರುವ ಕಾರ‍್ಯಪಾಲಕ ಇಂಜಿನಿಯರ್ ಅವರೇ ಈಗ ಅಧೀಕ್ಷಕ ಇಂಜಿನಿಯರ್ ಹುದ್ದೆಯ ಪ್ರಬಾರವನ್ನೂ ಹೊಂದಿದ್ದು ಅವರ ಕಣ್ಣಿಗೆ ಬುಗುಡನಹಳ್ಳಿ ಕೆರೆಯ ದುಸ್ಥಿತಿ ಬಿದ್ದಿಲ್ಲವೇ ಎಂದು ಜನಪ್ರತಿನಿಧಿಗಳೇ ಕೇಳಬೇಕಿದೆ.