ದಿನನಿತ್ಯ ಬಳಕೆ ಮಾಡುವ ಮೂಲಕ ಕನ್ನಡ ಬೆಳೆಸಬೇಕು: ಶಾಸಕ ಶ್ರೀನಿವಾಸಗೌಡ

ದಿನನಿತ್ಯ ಬಳಕೆ ಮಾಡುವ ಮೂಲಕ ಕನ್ನಡ ಬೆಳೆಸಬೇಕು: ಶಾಸಕ ಶ್ರೀನಿವಾಸಗೌಡ
ಕೋಲಾರ: ನಮ್ಮ ರಾಜ್ಯ ಕರ್ನಾಟಕ. ನಮ್ಮ ಮಾತೃ ಭಾಷೆ ಕನ್ನಡವನ್ನು ದಿನನಿತ್ಯ ಬಳಕೆ ಮಾಡುವ ಮೂಲಕ ಕನ್ನಡವನ್ನು ಉಳಿಸಿ ಬೆಳಸಬೇಕು. ಕನ್ನಡಕ್ಕಾಗಿ ನಾವು, ಕನ್ನಡವನ್ನೇ ಮಾತನಾಡಬೇಕು. ಕರ್ನಾಟಕ ಸರ್ಕಾರ ಮಾತಾಡು ಮಾತಾಡು ಕನ್ನಡ ಎನ್ನುವ ಕಾರ್ಯಕ್ರಮ ಮಾಡುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸುತ್ತಿದೆ ಎಂದು ಶಾಸಕ ಕೆ. ಶ್ರೀನಿವಾಸಗೌಡ ತಿಳಿಸಿದರು.
ಗುರುವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಲಕ್ಷö ಕಂಠಗಳ ಸಾಮೂಹಿಕ ಗೀತಾ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕುರಿತು ಅವರು ಮಾತನಾಡಿದರು. ಗಡಿಭಾಗದಲ್ಲಿ ಕನ್ನಡ ಮಾತನಾಡುವುದು ಹೆಚ್ಚಿಸಬೇಕು. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು. ಕನ್ನಡದ ಮಹತ್ವದ ಬಗ್ಗೆ ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಮಾತನಾಡಿ, ನಾವು ಕನ್ನಡದಲ್ಲಿ ಮಾತಾಡೋಣ, ಕನ್ನಡದಲ್ಲಿಯೇ ವ್ಯವಹರಿಸೋಣ, ಕನ್ನಡದ ಪ್ರೇಮಿಗಳಾಗೋಣ ಎಂದು ತಿಳಿಸಿದರು.
ಕೋಲಾರ ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಯ ಮುಂಭಾಗ ಗುರುವಾರ ಕನ್ನಡಕ್ಕಾಗಿ ನಾವು ಕನ್ನಡ ರಾಜ್ಯೋತ್ಸವ ಅಭಿಯಾನ ಅಂಗವಾಗಿ ಜಿಲ್ಲಾ ಶಸ್ತçಚಿಕಿತ್ಸಕ ಡಾ|| ಬಿ.ಹೆಚ್.ರವಿಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ|| ಬಾಲಸುಂದರ್, ಡಾ|| ಶಿಲ್ಪಶ್ರೀ, ಪ್ಯಾರಾ ಮೆಡಿಕಲ್ ಶಿವಾರೆಡ್ಡಿ, ಸುಮತಿ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಸಮೂಹ ಗಾಯನ ಮತ್ತು ಸಂಕಲ್ಪ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಕೇಶ್ ಕುಮಾರ್. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ, ಸಾಕ್ಷರತಾ ಜಿಲ್ಲಾ ಸಂಯೋಜಕ, ಗಾಯಕ ಡಿ.ಆರ್. ರಾಜಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು, ಎಸ್.ಡಿ.ಸಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಎಸ್.ಎಫ್.ಎಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, ಗೋಕುಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಇದ್ದರು.