ಇನ್ನೆರಡು ದಿನ ಅತಿವೃಷ್ಟಿ ಸಾಧ್ಯತೆ: ಇಂದು,ನಾಳೆ ಶಾಲೆಗಳಿಗೆ ರಜೆ
Due to heavy rain holiday for schools
ಇನ್ನೆರಡು ದಿನ ಅತಿವೃಷ್ಟಿ ಸಾಧ್ಯತೆ:
ಇಂದು,ನಾಳೆ ಶಾಲೆಗಳಿಗೆ ರಜೆ
ತುಮಕೂರು: ಚಂಡಮಾರುತದ ಕಾರಣ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯು ಮುಂದಿನ ಎರಡು ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೀಳುವ ವರದಿಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನ.19 ಹಾಗೂ 20ರಂದು ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರು ಆದೇಶ ಹೊರಡಿಸಿದ್ದಾರೆ.
ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರು ಅತಿಮಳೆ ನಿರೀಕ್ಷೆಯಲ್ಲಿ ಶಿಕ್ಷಣ ಆಯುಕ್ತರ ಪತ್ರವನ್ನು ಉಲ್ಲೇಖಿಸಿ, ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಿಗೆ ಶುಕ್ರವಾರ ಹಾಗೂ ಶನಿವಾರಗಳಂದು ರಜೆ ಘೋಷಿಸಿದ್ದು, ಈ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಸರಿಹೊಂದಿಸಿಕೊಳ್ಳುವAತೆ ಸೂಚಿಸಿದ್ದಾರೆ.