``ಸಮರ್ಪಕ ಪಹಣಿ, ಖಾತೆ ಇಟ್ಟುಕೊಳ್ಳಿ’’ ರೈತ ಸಮುದಾಯಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ

``ಸಮರ್ಪಕ ಪಹಣಿ, ಖಾತೆ ಇಟ್ಟುಕೊಳ್ಳಿ’’ ರೈತ ಸಮುದಾಯಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ

``ಸಮರ್ಪಕ ಪಹಣಿ, ಖಾತೆ ಇಟ್ಟುಕೊಳ್ಳಿ’’ ರೈತ ಸಮುದಾಯಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ



``ಸಮರ್ಪಕ ಪಹಣಿ, ಖಾತೆ ಇಟ್ಟುಕೊಳ್ಳಿ’’
ರೈತ ಸಮುದಾಯಕ್ಕೆ ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ


ಚಿಕ್ಕನಾಯಕನಹಳ್ಳಿ: ನಿಮ್ಮ ಜಮೀನಿನ ಪಹಣಿ ಖಾತೆಗಳನ್ನು ರೈತರು ಸದಾಕಾಲ ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ ನೀಡಿದರು.  


ಕಂದಿಕೆರೆ ಹೋಬಳಿಯ ಸಾದರಹಳ್ಳಿ ಗ್ರಾಮದಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮದ ಸಲುವಾಗಿ ರೈತರ ಕುಟುಂಬ ಮನೆಗಳಿಗೆ ಭೇಟಿ ನೀಡಿ ಪಹಣಿ, ಆದಾಯ ಹಾಗು ಜಾತಿ ಪ್ರಮಾಣ ಪತ್ರ, ಅಟ್ಲಾಸ್ ದಾಖಲೆಗಳನ್ನು ವಿತರಿಸಿ ಬಳಿಕ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 


ನಿಧನ ಹೊಂದಿದವರ ಹೆಸರಿನಲ್ಲಿ ದಾಖಲೆಗಳನ್ನು ಬಿಡಬಾರದು. ಭೂ ಮಾಲಿಕರು ಮೃತಪಟ್ಟು ಎಷ್ಟೋ ವರ್ಷ ಕಳೆದಿದ್ದರೂ ಇನ್ನೂ ಖಾತೆ ಬದಲಾವಣೆ ಮಾಡಿಕೊಳ್ಳದೆ ಸರಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ ಇಲ್ಲದಂತಾಗಿದೆ. ಕೆಲವರು ಬೇರೆಯವರಿಂದ ಭೂಮಿ ಖರೀದಿಸಿ ಮೂಲ ವಾರಸುದಾರರ ಹೆಸರಲ್ಲೇ ಬಿಟ್ಟಿದ್ದು ನಂತರ ಪರದಾಡುತ್ತಾರೆ. ಸ್ವಾತಂತ್ರö್ಯಕ್ಕೂ ಮೊದಲು ಭೂಮಿ ಖರೀದಿಸಿ ಕ್ರಯ ಪತ್ರ ಇದ್ದವರು ಅರ್ಜಿ ಸಲ್ಲಿಸಿ ಖಾತೆ ಮಾಡಿಸಿಕೊಳ್ಳಬಹುದು. ಪ್ರತಿ ಐದು ವರ್ಷಕ್ಕೊಮ್ಮೆ ಕಂದಾಯ ಇಲಾಖೆ ನಾಲ್ಕು ದಾಖಲೆಗಳನ್ನು ಉಚಿತವಾಗಿ ನೀಡಬೇಕೆಂದು ಕಾನೂನಿನಲ್ಲಿದೆ. ಅದನ್ನು ಈವರೆಗೆ ಯಾರು ಜಾರಿಗೆ ತಂದಿರಲಿಲ್ಲ ಇದು ಸರಕಾರದ ಐತಿಹಾಸಿಕ ತೀರ್ಮಾನವಾಗಿದ್ದು ಈ ಕಾರ್ಯಕ್ರಮದ ಮೂಲಕ ಉಚಿತವಾಗಿ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲಾಗುವುದು ಎಂದರು.


ಗ್ರಾಮ ಪಂಚಾಯಿತಿಗೆ ಸೇರಬೇಕಾದ ಮೀನು ಸಾಕಾಣಿಕೆ ಹರಾಜಿನ ಹಣವು ಅನಧಿಕೃತವಾಗಿ ನಡೆಯುತ್ತಿರುವ ಹರಾಜಿನ ಮೂಲಕ ಅಡ್ಡದಾರಿ ಹಿಡಿದಿದೆ. ಕೆರೆಯನ್ನು ಗ್ರಾಮಗಳ ಯಜಮಾನರು, ಸೇರಿ ಹರಾಜು ಹಾಕುತ್ತಾರೆ. ಈ ಪ್ರಕ್ರಿಯೆಯಲ್ಲಿ ಗ್ರಾ.ಪಂ ಕೆಲವು ಸದಸ್ಯರು ಶಾಮೀಲಾಗಿರುತ್ತಾರೆ! ಅದರಲ್ಲಿ ಬಂದ ಲಕ್ಷಾಂತರ ಹಣವನ್ನು ಆಯಾ ಗ್ರಾಮಗಳ ದೇವಾಲಯಗಳ ನಿರ್ಮಾಣ ಮತ್ತು ಅಭಿವೃದ್ದಿಗೆ ವಿನಿಯೋಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ತಹಸೀಲ್ದಾರ್ ತೇಜಸ್ವಿನಿ ಮಾತನಾಡಿ ಸರಕಾರಿ ಬೀಳು ಪ್ರದೇಶದಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದರೆ ಅಂಥವರು ಅಕ್ರಮ ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಎಲ್ಲಾ ಗ್ರಾಮಗಳಿಗೂ ಸ್ಮಶಾನ ಮಂಜೂರಾಗಿದೆ ಎಂದರು.


ತಾ.ಪA ಮಾಜಿ ಉಪಾಧ್ಯಕ್ಷ ನಿರಂಜನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೇಶವಮೂರ್ತಿ, ಹಾಗು ಕಂದಾಯ ಇಲಾಖೆಯ ಅಧಿಕಾರಿಗಳಿದ್ದರು.



‘ದೋಷಮುಕ್ತ ತಾಲ್ಲೂಕು’ ಘೋಷಿಸಲು ಶ್ರಮಿಸಿ 


ದಾಖಲೆಗಳನ್ನು ಸರಿಪಡಿಸಿ ಕಂಪ್ಯೂಟರ್‌ಗೆ ಅಳವಡಿಸಬೇಕಾಗಿತ್ತು. ಪಹಣಿ ತಿದ್ದುಪಡಿ ಸರಿಯಾಗಿ ನಡೆದಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ 15 ರಿಂದ 20 ಸಾವಿರ ಭೂ ದಾಖಲೆಗಳ ತಕರಾರು ಅರ್ಜಿಗಳು ಎಸಿ ಕೋರ್ಟ್ನಲ್ಲಿದೆ. ಪ್ರತಿಯೊಬ್ಬ ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯ ಅರ್ಜಿಗಳನ್ನು ವಿಲೇವಾರಿ ಮಾಡಿ. ಮುಂದಿನ ದಿನಗಳಲ್ಲಿ ವಿಭಾಗ ಪತ್ರ, ಖಾತೆ ಮತ್ತಿತರ ಬಾಕಿ ಇರುವ ಅರ್ಜಿಗಳನ್ನು ತಿದ್ದುಪಡಿ ಮಾಡುವ ಮೂಲಕ ದೋಷಮುಕ್ತ ತಾಲ್ಲೂಕು ಎಂದು ಘೋಷಿಸಲು ಶ್ರಮವಹಿಸಿ - ಜೆ.ಸಿ.ಮಾಧುಸ್ವಾಮಿ, ಸಚಿವರು