ತಿಪಟೂರು ತಾನಲ್ಲಿ ಭರಣಿ ಮಳೆ ಆರ‍್ಭಟ: ತೆಂಗು, ಬಾಳೆ, ಅಡಿಕೆ ಮರನೆಲಸಮ: ಭಾರೀನಷ್ಟ

ತಿಪಟೂರು ತಾನಲ್ಲಿ ಭರಣಿ ಮಳೆ ಆರ‍್ಭಟ: ತೆಂಗು, ಬಾಳೆ, ಅಡಿಕೆ ಮರನೆಲಸಮ: ಭಾರೀನಷ್ಟ

ತಿಪಟೂರು ತಾನಲ್ಲಿ ಭರಣಿ ಮಳೆ ಆರ‍್ಭಟ: ತೆಂಗು, ಬಾಳೆ, ಅಡಿಕೆ ಮರನೆಲಸಮ: ಭಾರೀನಷ್ಟ


ತಿಪಟೂರು ತಾನಲ್ಲಿ ಭರಣಿ ಮಳೆ ಆರ‍್ಭಟ:
ತೆಂಗು, ಬಾಳೆ, ಅಡಿಕೆ ಮರನೆಲಸಮ: ಭಾರೀನಷ್ಟ


ತಿಪಟೂರು : ಕಳೆದ 4-5 ದಿನಗಳಿಂದ ಗಾಳಿ ಸಹಿತಮಳೆಯಾಗುತ್ತಿದ್ದು ಭಾನುವಾರತಾಲ್ಲೂಕಿನಾದ್ಯಂತ ಹಲವು ಕಡೆಗಳಲ್ಲಿ ರೈತರತೆಂಗು, ಅಡಿಕೆ, ಬಾಳೆ ಬೆಳೆಗಳು ಗಾಳಿ ಮತ್ತು ಸಿಡಿಲ ಅಬ್ಬರಕ್ಕೆ ನೆಲಕ್ಕುರುಳಿರುಳಿವೆ. 


ತಾಲ್ಲೂಕಿನ ಕಿಬ್ಬನಹಳ್ಳಿ, ಕಸಬಾ ಹೋಬಳಿಗಳಲ್ಲಿ ಅತೀ ಹೆಚ್ಚು ಹಾನಿ ಉಂಟಾಗಿದ್ದುರೈತರುಕAಗಾಲಾಗಿದ್ದಾರೆ. ಕಳೆದ ಏಳು ದಿನಗಳಿಂದ ತಾಲ್ಲೂಕಿನಾದ್ಯಂತ ಸರಾಸರಿ 62.40 ಮಿ.ಮೀ ಮಳೆಯಾಗಿದ್ದು ಸಾಮಾನ್ಯವಾಗಿ ಸುಮಾರು 19.10 ಮಿ.ಮೀ ನಿರೀಕ್ಷೆಯಲ್ಲಿತ್ತು.ತಾಲ್ಲೂಕಿನ ಕಸಬಾ ಹೋಬಳಿಯ ಮಡೆನೂರುಗ್ರಾಮದ ಶಂಕರಮೂರ್ತಿಎAಬುವರ ಎರಡು ಎಕರೆತೋಟದಲ್ಲಿ ಸುಮಾರು 1200 ಬಾಳೆ ಗಿಡ ಹಾಕಿದ್ದು ಫಸಲಿಗೆ ಬಂದಿದ್ದವುಆದರೆತಡರಾತ್ರಿ ಗಾಳಿಯ ರಭಸಕ್ಕೆ ಗಿಡಗಳು ಬಿದ್ದಿದ್ದು ಸುಮಾರು 4 ಲಕ್ಷದಷ್ಟು ನಷ್ಟ ಉಂಟಾಗಿದೆ. ರಂಗಾಪುರಗ್ರಾಮದಲ್ಲಿ ಬಸವಲಿಂಗಪ್ಪಎAಬುವರಿಗೆ ಸೇರಿದತೋಟದಲ್ಲಿ ಗಾಳಿಗೆ ಎರಡು ತೆಂಗಿನ ಮರಗಳು ಬಿದ್ದು ಪಕ್ಕದಗ್ರಾಮಕೆರೆಗೋಡಿಯಲ್ಲಿ ಹಲವು ತೋಟಗಳಲ್ಲಿ ಮರಗಳು ಬಿದ್ದಿವೆ. 


ಇನ್ನೂಕಲ್ಕೆರೆಗ್ರಾಮದಲ್ಲಿ ಸರಸು ಬಾಯಿ ಎಂಬುವರತೋಟಕ್ಕೆ ಸಿಡಿಲು ಬಡಿದಿದ್ದು 7 ಕ್ಕೂ ಹೆಚ್ಚು ತೆಂಗಿನ ಮರಗಳ ಹೊತ್ತಿಉರಿದಿವೆ. ರಾತ್ರಿ ವೇಳೆ ಆಗಿದ್ದರಿಂದಯಾವುದೇತೊAದರೆಆಗಿಲ್ಲ. ಪಕ್ಕದ ಕೆಲ ತೆಂಗಿನ ಮರಗಳಿಗೂ ಹಾನಿ ಉಂಟಾಗಿದೆ. ಕಿಬ್ಬನಹಳ್ಳಿ ಹೋಬಳಿಯ ತಿಮ್ಲಾಪುರ, ಲಕ್ಮಗೊಂಡನಹಳ್ಳಿ, ಬಿಳಿಗೆರೆ, ಕಟ್ಟಿಗೇನಹಳ್ಳಿ ಗ್ರಾಮಗಳಲ್ಲಿನ ರೈತರತೋಟದಲ್ಲಿತೆಂಗಿನ ಮರಗಳು ಮಧು ಬಿಳಿಗೆರೆ, ಪ್ರಭುಸ್ವಾಮಿತಿಮ್ಲಾಪುರರೈತರ ತೋಟಗಳಲ್ಲಿ ನೂರಾರು ತೆಂಗಿನಮರಗಳು ಬಿದ್ದು ಹೋಗಿವೆ. ಅಲ್ಲದೇತಾಲ್ಲೂಕಿನ ವಿವಿದೆಡೆಗಳಲ್ಲಿ ದನ ಮತ್ತು ಕುರಿಗಳಿಗೆ ಮಾಡಿಕೊಂಡಿದ್ದ ಶೆಡ್‌ಗಳು ಸಹ ಗಾಳಿಯರಭಸಕ್ಕೆ ಕಿತ್ತು ಹೋಗಿದ್ದುಜನರು ಸರ್ಕಾರ ಸಹಾಯಧನದ ನಿರೀಕ್ಷೆಯಲ್ಲಿದ್ದಾರೆ.


ಕಳೆದ ಹಲವು ವರ್ಷಗಳಿಂದ ಅತಿವೃಷ್ಠಿಯ ಸಂದರ್ಭದಲ್ಲಿ ಪರಿಹಾರ ನೀಡುತ್ತಿದ್ದು ಬ್ರಿಟಿಷರಕಾಲದ ಪರಿಹಾರ ಮೊತ್ತವನ್ನುತೋಟಗಾರಿಕೆ ಮತ್ತುತಾಲ್ಲೂಕು ಆಡಳಿತ ನೀಡುತ್ತಾ ಬಂದಿದ್ದು ಮುಖ್ಯಮಂತ್ರಿಗಳ ಪರಿಹಾರದ ನಿಧಿಯಿಂದ ವೈಜ್ಞಾನಿಕ ಬೆಲೆ ನಿಗಧಿ ಮುಂದಾಗಬೇಕಿದೆ. ಅಲ್ಲದೇಗ್ರಾಮ ಪಂಚಾಯಿತಿ ಮಟ್ಟದಲ್ಲಿಗ್ರಾಮ ಲೆಕ್ಕಿಗರು, ಪಿಡಿಓಗಳಿಂದ ಪ್ರಾಮಾಣಿಕವಾಗಿ ಮಾಹಿತಿ ಪಡೆದುಎಲ್ಲಾಎಐತರಿಗೂ ವೈಜ್ಞಾನಿಕ ಪರಿಹಾರದೊರಕುವಂತಾಗಬೇಕುಎAಬುದುರೈತರಒತ್ತಾಯವಾಗಿದೆ.

ಅತಿವೃಷ್ಠಿ ಸಂದರ್ಭದಲ್ಲಿ ಸರ್ಕಾರದ ಪರಿಹಾರವು ರೈತರ ಜಮೀನಿನಲ್ಲಿ ಶೇ.33 ರಷ್ಟು ಹಾನಿಗೆ ಒಳಗಾಗಿದ್ದರೆ ಮಾತ್ರವೇ ಪರಿಹಾರ ದೊರಕಿಸುವ ಬಗ್ಗೆ ಹಿಂದಿನಿಂದಲೂ ಇದೆ. ಆದರೆ ಸಾವಿರಾರರು ರೂ ಬೆಳೆ ನೀಡುವ ತೆಂಗಿನ ಮರಗಳು 10-15 ಬಿದ್ದರೆ ರೈತರಿಗೆ ಪರಿಹಾರವೇ ದೊರಕುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಂದು ಮರಕ್ಕೂ ವೈಜ್ಞಾನಿಕ ಪರಿಹಾರವನ್ನು ನೀಡಬೇಕುಎಂಬುದು ರೈತರಒತ್ತಾಯವಾಗಿದೆ.

 ಆರ್.ಜೆ.ಚಂದ್ರಶೇಖರ್, ತಹಶೀಲ್ದಾರ್, ತಿಪಟೂರು

ತೋಟಗಾರಿಕೆ ಹಾಗೂ ಗ್ರಾಮ ಲೆಕ್ಕಿಗರಿಂದ ಮಾಹಿತಿ ಪಡೆಯಲಾಗುತ್ತಿದೆ. ನಾಳೆಯ ಒಳಗಾಗಿ ಇಲಾಖೆಗೆ ಸಂಪೂರ್ಣ ಮಾಹಿತಿಯನ್ನುರವಾನೆ ಮಾಡಲಾಗುವುದು. ಸರ್ಕಾರದಿಂದದೊರಕುವಂತಹ ಪರಿಹಾರವನ್ನುಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

 ತಿಮ್ಲಾಪುರದೇವರಾಜು, ಹಸಿರುಸೇನೆ, ತಾಲ್ಲೂಕುಘಟಕಅಧ್ಯಕ್ಷರು


ರೈತರು ಈಗಾಗಲೇ ಆರ್ಥಿಕವಾಗಿತೊಂದರೆಯಲ್ಲಿ ಸಿಲುಕಿದಾಗಲೇ ಅತಿವೃಷ್ಠಿ ಸಂಭವಿಸುತ್ತಿದೆ. ಸರ್ಕಾರಗಳು ಎಚ್ಚೆತ್ತು ವೈಜ್ಞಾನಿಕ ಬೆಲೆ ನಿಗಧಿಗೆ ಮುಂದಾಗಬೇಕಿದೆ. ತೋಟಗಾರಿಕೆಇಲಾಖೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಅನುಕೂಲವನ್ನುರೈತರಿಗೆ ಸಿಗುವಂತೆ ಮಾಡಬೇಕಿದೆ.

 ಶಂಕರಮೂರ್ತಿ, ರೈತ, ಮಡೆನೂರುಗ್ರಾಮ

ಸುಮಾರು 4 ಎಕರೆತೋಟದಲ್ಲಿ 1200 ಬಾಳೆ ಹಾಕಿದ್ದು ಸಂಪೂರ್ಣವಾಗಿ ಹಾನಿಯಾಗಿ ಹೋಗಿದ್ದು ಕೈಗೆ ಬಂದತುತ್ತು ಬಾಯಿಗೆ ಬರದಂತಾಗಿದೆ. ಬಾಳೆ ಫಸಲು ಸಂಪೂರ್ಣವಾಗಿ ನೆಲಕ್ಕೆ ಬಿದ್ದು ಹಾಳಾಗಿದೆ ಎಂದು ನೋವಿನಿಂದಲೇ ಹೇಳಿಕೊಳ್ಳುತ್ತಾರೆ.