ಮೇ21,22ರಂದು ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ:  ಕಟ್ಟುನಿಟ್ಟಿನಕ್ರಮವಹಿಸಿ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರ ಸೂಚನೆ 

exam-teachers-may-22-DC-ys-patil, ಮೇ21,22ರಂದು ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ: ಕಟ್ಟುನಿಟ್ಟಿನಕ್ರಮವಹಿಸಿ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರ ಸೂಚನೆ

ಮೇ21,22ರಂದು ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ:    ಕಟ್ಟುನಿಟ್ಟಿನಕ್ರಮವಹಿಸಿ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರ ಸೂಚನೆ 



ಮೇ21,22ರಂದು ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ: 


ಕಟ್ಟುನಿಟ್ಟಿನಕ್ರಮವಹಿಸಿ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲರ ಸೂಚನೆ 


ತುಮಕೂರು:ಸಾರ್ವಜನಿಕ ಶಿಕ್ಷಣ ಇಲಾಖೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ8ನೇ ತರಗತಿ) ನೇಮಕಾತಿ ಸಂಬAಧ ಮೇ 21 ಹಾಗೂ 22,2022ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯುಜಿಲ್ಲೆಯ 11 ಕೇಂದ್ರಗಳಲ್ಲಿ ನಡೆಯಲಿದ್ದು,  ಪರೀಕ್ಷೆಯನ್ನುಅತ್ಯಂತಗೌಪ್ಯತೆ, ಸುರಕ್ಷತೆ ಮತ್ತು ವ್ಯವಸ್ಥಿತವಾಗಿ ಯಾವುದೇ ಸಣ್ಣ ಲೋಪದೋಷಕ್ಕೂಆಸ್ಪದ ನೀಡದಂತೆ ನಿಯಮಾನುಸಾರ ನಡೆಸಲು ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.


 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಗುರುವಾರ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದಅವರು, ಎಲ್ಲಾ ಕೇಂದ್ರಗಳ ಪ್ರತಿಯೊಂದುಪರೀಕ್ಷಾಆವರಣ ಮತ್ತುಕೊಠಡಿಗಳಲ್ಲೂ ಸಹ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮತ್ತುಎಲ್ಲಾ ಕೇಂದ್ರಗಳಲ್ಲೂ ಮೆಟಲ್‌ಡಿಟೆಕ್ಟರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 


 ಶಿಕ್ಷಣ ಇಲಾಖೆಯಜಿಲ್ಲಾ ನೋಡಲ್ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾಕಾರ್ಯದ ಉಸ್ತುವಾರಿಗಳನ್ನಾಗಿ ನೇಮಿಸುವಂತೆ ಮತ್ತುಗ್ರೂಪ್-ಎ ಅಧಿಕಾರಿಗಳನ್ನು ಸಿಟ್ಟಿಂಗ್ ಸ್ಕಾ÷್ವಡ್‌ಗಳಾಗಿ ತೊಡಗಿಸಿಕೊಳ್ಳುವಂತೆ ತಿಳಿಸಿದರು. 
 ಪರೀಕ್ಷಾರ್ಥಿಗಳಲ್ಲದ ಪರೀಕ್ಷಾಉಸ್ತುವಾರಿಇಲ್ಲದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರುಅಥವಾಯಾವುದೇಅನಧೀಕೃತ ವ್ಯಕ್ತಿ ಪರೀಕ್ಷಾಕೇಂದ್ರದ ಆವರಣದೊಳಗೆ ಪ್ರವೇಶಿಸುವಂತಿಲ್ಲ. ನಿಯಮ ಉಲ್ಲಂಘಿಸಿ ಪ್ರವೇಶಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸೂಚಿಸಿದರು. 


 ಪರೀಕ್ಷಾಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ಸ್ಮಾರ್ಟ್ ಫೋನ್‌ಅಥವಾಯಾವುದೇ ಮೊಬೈಲ್‌ಗಳನ್ನು ಬಳಸುವಂತಿಲ್ಲ ಎಂದು ತಿಳಿಸಿದ ಅವರು,  ಅಗತ್ಯವಿದ್ದಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸುವಂತೆ ತಿಳಿಸಿದರು. 
 ಖಾಸಗೀ ಅನುದಾನಿತ/ ಅನುದಾನರಹಿತ ಸಂಸ್ಥೆಗಳ ಕಟ್ಟಡಗಳನ್ನು ಪರೀಕ್ಷಾ ಕೇಂದ್ರಗಳಾಗಿ ನಿಗಧಿಪಡಿಸಿದ್ದಲ್ಲಿ ಆ ಸಂಸ್ಥೆಯಎಲ್ಲಾ ಸಿಬ್ಬಂದಿಗಳನ್ನು ಪರೀಕ್ಷಾಕಾರ್ಯದಿಂದ ಹೊರತುಪಡಿಸುವುದು ಮತ್ತುಇವರಿಗೆ ಪರೀಕ್ಷೆಯಯಾವುದೇಕಾರ್ಯಕ್ಕೆ ನಿಯುಕ್ತಿಗೊಳಿಸತಕ್ಕದ್ದಲ್ಲ ಎಂದು ತಿಳಿಸಿದರು. 


 ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾಕ್ರಮ ಕೈಗೊಳ್ಳಬೇಕು ಹಾಗೂ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ಧರಿಸುವಂತೆಕ್ರಮವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. 


 ಪರೀಕ್ಷೆಯ ಸಂಬAಧ ಸಂಪೂರ್ಣ ನಿಯಂತ್ರಣ ಸಾಧಿಸಿ ಕಾನೂನು ಸುವ್ಯವಸ್ಥೆಯೊಂದಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಪರೀಕ್ಷಾಕೇಂದ್ರದ ಸುತ್ತಮುತ್ತಕನಿಷ್ಠ 200 ಮೀಟರ್ ವ್ಯಾಪ್ತಿಯೊಳಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುವುದುಎಂದರು. 


 ಪರೀಕ್ಷಾಕೇಂದ್ರವು ಸಾಧಾರಣ, ಸೂಕ್ಷö್ಮ, ಅತೀಸೂಕ್ಷö್ಮ ಕೇಂದ್ರಗಳಾಗಿದ್ದಲ್ಲಿ ಅವುಗಳಿಗೆ ಅಗತ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುವುದು ಮತ್ತು ಪರೀಕ್ಷಾಕೇಂದ್ರಕ್ಕೆ ಪೊಲೀಸ್‌ಇಲಾಖೆಯಿಂದ ಕಾಲಕಾಲಕ್ಕೆ ಗಸ್ತುಪಡೆಯನ್ನು ನಿಯೋಜಿಸಿ ಯಾವುದೇಅಕ್ರಮಅಹಿತಕರಘಟನೆ ನಡೆಯದಂತೆ ಮುಂಜಾಗ್ರತಾಕ್ರಮ ವಹಿಸಲಾಗುವುದುಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿರಾಹುಲ್‌ಕುಮಾರ್ ಶಹಪೂರ ವಾಡ್‌ಅವರು ಸಭೆಗೆ ತಿಳಿಸಿದರು. 


 ಸಭೆಯಲ್ಲಿ ಈ ಮೇಲ್ಕಂಡ ವಿಷಯಗಳಲ್ಲದೆ ಗೌಪ್ಯ ಸಾಮಗ್ರಿಗಳನ್ನು ಸ್ವೀಕರಿಸುವ ಬಗ್ಗೆ, ಮಾರ್ಗಾಧಿಕಾರಿಗಳ ಕರ್ತವ್ಯದ ಬಗ್ಗೆ, ಪರೀಕ್ಷಾ ದಿನಗಳಂದು e಼ೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವ ಬಗ್ಗೆ, ಪ್ರಶ್ನೆ ಪತ್ರಿಕೆಗಳಿಗೆ ಪೊಲೀಸ್ ಬೆಂಗಾವಲು ನೀಡುವ ಬಗ್ಗೆ, ಪರೀಕ್ಷಾಕಾರ್ಯಕ್ಕೆ ವಾಹನಗಳ ವ್ಯವಸ್ಥೆ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು. 


ಸಭೆಯಲ್ಲಿಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ: ಕೆ. ವಿದ್ಯಾಕುಮಾರಿ, ಡಿಡಿಪಿಐಗಳಾದ ನಂಜಯ್ಯ, ರೇವಣ್ಣ ಸಿದ್ದಪ್ಪ, ಜಿಲ್ಲಾಖಜಾನೆಯಉಪನಿರ್ದೇಶಕರಾದ ಮುನಿರೆಡ್ಡಿ  ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು



ನಿಷೇಧಿತಎಲೆಕ್ಟಾçನಿಕ್ ವಸ್ತುಗಳು


     ಪರೀಕ್ಷಾರ್ಥಿಗಳಿಗೆ ಎಲ್ಲಾಎಲೆಕ್ಟಾçನಿಕ್ಸ್ ಉಪಕರಣಗಳನ್ನು ನಿಷೇಧಿಸಲಾಗಿರುತ್ತದೆ. ಮೊಬೈಲ್, ಕ್ಯಾಲ್ಕೂö್ಯಲೇಟರ್, ಎಲೆಕ್ಟಾçನಿಕ್ ವಾಚ್, ಮೈಕ್ರೋಫೋನ್, ಬ್ಲೂಟೂತ್, ಯಾವುದೇರೀತಿಯಕೈಗಡಿಯಾರ, ಜಾಮಿಟ್ರಿಬಾಕ್ಸ್ಇದ್ದಲ್ಲಿಕಡ್ಡಾಯವಾಗಿ ತಪಾಸಣೆಗೊಳಪಡಿಸಿ ರೇಖಾಗಣಿತ ಪರಿಕರಗಳನ್ನು ಮಾತ್ರಅನುಮತಿಸಲಾಗುವುದು.