ದೇಹದಾರ್ಢ್ಯ ಸ್ಪರ್ಧೆ: ಶರತ್ ಜಿಲ್ಲೆಗೆ ಪ್ರಥಮ

ದೇಹದಾರ್ಢ್ಯ ಸ್ಪರ್ಧೆ: ಶರತ್ ಜಿಲ್ಲೆಗೆ ಪ್ರಥಮದೇಹದಾರ್ಢ್ಯ ಸ್ಪರ್ಧೆ: ಶರತ್ ಜಿಲ್ಲೆಗೆ ಪ್ರಥಮ


ಕುಣಿಗಲ್: ತುಮಕೂರು ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕುಣಿಗಲ್ ಪಟ್ಟಣದ ಶರತ್ ಆರ್ ಎಂಬ ವಿದ್ಯಾರ್ಥಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿ ತಾಲ್ಲೂಕಿನ ಹಿರಿಮೆ ಹೆಚ್ಚಿಸಿದ್ದಾನೆ. 


 ಪಟ್ಟಣದ ಕೋಟೆ ಪ್ರದೇಶದಲ್ಲಿ ವಾಸವಾಗಿರುವ ವ್ಯಾಪಾರಿ ರೇಣುಕಯ್ಯ ಮತ್ತು ಜಯಮ್ಮನ ಮಗನಾಗಿರುವ ಶರತ್ ಬೆಳಗ್ಗೆ ದಿನಪತ್ರಿಕೆಗಳನ್ನ ಹಂಚಿ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ. ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಮಿಸ್ಟರ್ ಇಂಡಿಯಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾದ ಶೇಷಪ್ಪನವರ ಮಾರ್ಗದರ್ಶನದಲ್ಲಿ ಮತ್ತು ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ರವೀಶ್ ಸಹಕಾರದಲ್ಲಿ ಸತತ ನಾಲ್ಕು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದು ಫೆ. 23 ಬುಧವಾರದಂದು ಕಾಲೇಜು ಶಿಕ್ಷಣ ಇಲಾಖೆ, ತುಮಕೂರು ವಿಶ್ವವಿದ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸುಮಾರು 25 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ಇವರಲ್ಲಿ ಶರತ್ ತನ್ನ ದೇಹ ದಾರ್ಢ್ಯವನ್ನ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ಪಂಜಾಬ್‌ನಲ್ಲಿ ನಡೆಯುವ ರಾಷ್ಟç ಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. 


ಈತನ ಗೆಲುವಿಗೆ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.