ಇನ್ನು ಮುಂದೆ ಕನ್ನಡಸಮಾರಂಭಗಳಲ್ಲಿ ಮುದ್ರಿತ ನಾಡ ಗೀತೆ ಬೇಡ: ಬರಗೂರು

ಇನ್ನುಮುಂದೆಕನ್ನಡಸಮಾರಂಭಗಳಲ್ಲಿ ಮುದ್ರಿತನಾಡಗೀತೆಬೇಡ: ಬರಗೂರು

ಇನ್ನು ಮುಂದೆ ಕನ್ನಡಸಮಾರಂಭಗಳಲ್ಲಿ   ಮುದ್ರಿತ ನಾಡ ಗೀತೆ ಬೇಡ: ಬರಗೂರು

ಇನ್ನು ಮುಂದೆ ಕನ್ನಡ ಸಮಾರಂಭಗಳಲ್ಲಿ


ಮುದ್ರಿತ ನಾಡಗೀತೆ ಬೇಡ: ಬರಗೂರು


ತುಮಕೂರು: ಇನ್ನು ಮುಂದೆ ಕನ್ನಡದ ಯಾವುದೇ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಕ್ಯಾಸೆಟ್‌ನಲ್ಲಿ ಹಾಡಿಸದೆ, ಸಭಿಕರ ಬಾಯಿಂದಲೇ ಹಾಡಿಸುವ ಕಾರ್ಯವಾಗಬೇಕು ಎಂದುಬಂಡಾಯ ಸಾಹಿತ್ಯ ಸಂಘಟನೆ ಮುಖ್ಯಸ್ಥ ಬರಗೂರು ರಾಮಚಂದ್ರಪ್ಪ ಸಲಹೆ ಮಾಡಿದ್ದಾರೆ.


ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆ.ಎಸ್.ಸಿದ್ಧಲಿಂಗಪ್ಪ ಚುನಾಯಿತರಾಗಿ ವರ‍್ ಷತುಂಬಿದ ಸಂದರ‍್ಭದಲ್ಲಿ ನಗರದ ಕನ್ನಡ ಭವನದಲ್ಲಿ ಬುಧವಾರ ಸಂಜೆ ಏರ‍್ಪಡಿಸಿದ್ದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಪ್ರಭುತ್ವದ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಪ್ರವೃತ್ತಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಕುವೆಂಪು ರಚಿಸಿದ ನಾಡಗೀತೆಯಲ್ಲಿ ಬರುವ ಸರ್ವಜನಾಂಗದ ಶಾಂತಿಯ ತೋಟದ ಸಾಮರಸ್ಯದ ಆಶಯಗಳ ಅರಿವನ್ನು ಪ್ರತಿಯೊಬ್ಬರಲ್ಲಿ ಮೂಡಿಸುವಅಗತ್ಯವಿದೆ ಎಂದರು.


ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಕಸಾಪ ವಾರ್ಷಿಕ ಚಟುವಟಿಕೆಗಳ ಕಿರುನೋಟ ನುಡಿಹೆಜ್ಜೆ-1 ಬಿಡುಗಡೆಗೊಳಿಸಿ ಮಾತನಾಡಿದರು. ಡಾ.ಕವಿತಾಕೃಷ್ಣ, ಎಸ್.ನಾಗಣ್ಣ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿದರು.


ಪರಿಷತ್ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿ ಡಿಸೆಂಬರ್ ಅಂತ್ಯದೊಳಗೆ ಜಿಲ್ಲಾ ಸಮ್ಮೇಳನ, ಐದಾರು ತಾಲ್ಲೂಕು ಸಮ್ಮೇಳನವನ್ನು ಜಿಲ್ಲಾ, ತಾಲ್ಲೂಕು ಪರಿಷತ್ ಘಟಕಗಳು ಸಂಘಟಿಸುತ್ತಿವೆ ಎಂದರು. 


ಪ್ರಶಸ್ತಿ ಪ್ರದಾನ:


ಎಸ್.ಆರ್.ದೇವಪ್ರಕಾಶ್, ಡಾ.ಚೆಲುವರಾಜನ್, ಸುಶೀಲಾ ಸದಾಶಿವಯ್ಯ, ಸಾಹಿತಿಡಾ.ಸತ್ಯಮಂಗಲ ಮಹದೇವ್, ಡಾ.ಕೆ.ಬಿ.ರಂಗಸ್ವಾಮಿ ಹಾಗೂ ಮುದಿಗೆರೆ ರಮೇಶ್‌ ಅವರಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ಹಾಗೂ ಪತ್ಕಕರ‍್ತರಾದ ಕೆ.ಜೆ.ಮರಿಯಪ್ಪ, ಎಸ್.ಹರೀಶ್‌ ಆಚಾರ್ಯ ಅವರಿಗೆ ಮಾಧ್ಯಮ ಪ್ರಶಸ್ತಿ ನೀಡಲಾಯಿತು.


ಸಂಘಟನಾ ಕಾರ್ಯದರ್ಶಿ ಎಸ್.ಯೋಗಾನಂದ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ನಿರೂಪಿಸಿದರು. ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಜಿ.ಎಚ್.ಮಹದೇವಪ್ಪ, ತಾಲ್ಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ನಗರಾಧ್ಯಕ್ಷೆ ಕಮಲಾ ಬಡ್ಡಿಹಳ್ಳಿ, ರಾಣಿಚಂದ್ರಶೇಖರ್‌ ವೇದಿಕೆಯಲ್ಲಿದ್ದರು.