‘ಬೆವರ ಹನಿ’ಯ ಮೊದಲ ಪ್ರಕಟಣೆ ‘ ದಲಿತ ಚಳವಳಿಯ ಹೆಜ್ಜೆಗಳು’ ಬಿಡುಗಡೆ ದಸಂಸ ಇನ್ನೂ ಶಕ್ತಿಯುತ: ಅಗ್ರಹಾರ ಕೃಷ್ಣಮೂರ್ತಿ

dalitha-chaluvaliya-hejjegalu-book-release-agrahara-krishnamurthy

‘ಬೆವರ ಹನಿ’ಯ ಮೊದಲ ಪ್ರಕಟಣೆ ‘ ದಲಿತ ಚಳವಳಿಯ ಹೆಜ್ಜೆಗಳು’ ಬಿಡುಗಡೆ   ದಸಂಸ ಇನ್ನೂ ಶಕ್ತಿಯುತ: ಅಗ್ರಹಾರ ಕೃಷ್ಣಮೂರ್ತಿ

 

‘ಬೆವರ ಹನಿ’ಯ ಮೊದಲ ಪ್ರಕಟಣೆ ‘ ದಲಿತ ಚಳವಳಿಯ ಹೆಜ್ಜೆಗಳು’ ಬಿಡುಗಡೆ


ದಸಂಸ ಇನ್ನೂ ಶಕ್ತಿಯುತ: ಅಗ್ರಹಾರ ಕೃಷ್ಣಮೂರ್ತಿ

ತುಮಕೂರು: 70-80ರ ದಶಕದ ದಲಿತ ಹೋರಾಟಗಳು, ಹಾಗೂ ಬೂಸಾ ಪ್ರಕರಣದಲ್ಲಿ ನಡೆದ ವಿದ್ಯಮಾನಗಳು ಕರ್ನಾಟಕದ ಸಾಹಿತ್ಯ ಚರಿತ್ರೆಯೊಳಗೆ ಬಿಟ್ಟು ಹೋಗಲಾರದ ವಿಷಯಗಳಾಗಿವೆ ದಲಿತ ಸಂಘರ್ಷ ಸಮಿತಿಯು ನಿಜ ರಾಜಕಾರಣದಿಂದ ಮುಂದೆ ಸಾಗಿ ಅಧಿಕಾರ ರಾಜಕಾರಣದಲ್ಲಿ ತೊಡಗಲು ಹೊರಡುತ್ತದೆಯೋ ಆಗ ವ್ಯಕ್ತಿ ಆಧಾರಿತ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೂ ಈಗ ಸಕ್ರಿಯವಾಗಿರುವ ಎಲ್ಲ ಬಣಗಳು ಶಕ್ತಿಯುತವಾಗೇ ಇವೆ, ಇವುಗಳನ್ನು ಬಣ ಎನ್ನುವದಕ್ಕಿಂತ ಟಿಸಿಲು ಎಂದು ಕರೆಯಬಯಸುತ್ತೇನೆ ಎಂದು ಎಂದು ಲೇಖಕ  ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.


ನಗರದÀ ಕನ್ನಡ ಭವನದಲ್ಲಿ ‘ಬೆವರ ಹನಿ’ ಪ್ರಕಾಶನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಶಿವಾಜಿ ಗಣೇಶನ್ ಅವರ ‘ದಲಿತ ಚಳವಳಿಯ ಹೆಜ್ಜೆಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಕುರಿತು ಅವರು  ಮಾತನಾಡಿದರು.


ದಲಿತ ಸಂಘರ್ಷ ಸಮಿತಿಗೆ ದೊಡ್ಡ ಶಕ್ತಿ ಇತ್ತು. ಬಸವಲಿಂಗಪ್ಪನAಥವರು ಆ ಶಕ್ತಿಯನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಮಾತುಗಳು ನಿಜ. ಆದರೆ ಈ ಶಕ್ತಿಯನ್ನು ಬಳಸಿಕೊಳ್ಳಲು ರಾಜಕಾರಣಿಯಾಗಿದ್ದ ಬಸವಲಿಂಗಪ್ಪನವರಿಗೆ ಸಾಧ್ಯವಾಗದೇ ಇರುವುದಕ್ಕೆ ವೋಟ್ ಬ್ಯಾಂಕ್ ರಾಜಕಾರಣ ಕಾರಣ.


ತುರ್ತುಪರಿಸ್ಥಿಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಲ್ಲದೆ, ಉಳುವವನೇ ಹೊಲದ ಒಡೆಯ ಎಂಬ ಕಾನೂನನ್ನು ತಂದರು. ಇದು ಕ್ರಾಂತಿಕಾರಕ ಹೆಜ್ಜೆ ಎಂದರು.


ಕಾನ್ಶಿರಾA ದಲಿತರ ಸ್ಥಿತಿಗತಿಗಳ ಬಗ್ಗೆ ಬೆಳಕು ಚಲ್ಲುವ ಹಿನ್ನೆಲೆಯಲ್ಲಿ ಪತ್ರಿಕೆಗಳು ಅಗತ್ಯ ಎಂದು ಪ್ರತಿಪಾದಿಸಿ ಪತ್ರಿಕೆ ಹೊರತಂದರು. ಅದಕ್ಕೂ ಮೊದಲೇ ಕರ್ನಾಟಕದಲ್ಲಿ ಪಂಚಮದಂತಹ ಪತ್ರಿಕೆಗಳನ್ನು ಹೊರತರಲಾಗುತ್ತಿತ್ತು ಎಂದು ಹೇಳಿದರು. 


ಕೃತಿ ಬಿಡುಗಡೆ ಮಾಡಿದ ದಲಿತ ಸಂಗಾತಿ ಹಾಗೂ ವಿಶ್ರಾಂತ ಕೆಎಎಸ್ ಅಧಿಕಾರಿ ರುದ್ರಪ್ಪ ಹನಗವಾಡಿಯವರು ಮಾತನಾಡಿ ಪತ್ರಕರ್ತ ಮತ್ತು ಪತ್ರಿಕೋದ್ಯಮ ಎರಡು ಬದಲಾಗಿದೆ. ಹಿಂದೆ ಪತ್ರಕರ್ತರಿಗೆ ಇದ್ದ ಮೌಲ್ಯಗಳು ಇಂದು ಮಾಯವಾಗಿವೆ. ದಲಿತ ಚಳವಳಿಯಿಂದ ಪತ್ರಿಕಾವೃತ್ತಿಗೆ ಬಂದ ಶಿವಾಜಿ ಗಣೇಶನ್ ನಿಷ್ಪಕ್ಷಪಾತ ಗುಣವನ್ನು ಉಳಿಸಿ,ಬೆಳೆಸಿಕೊಂಡು ಬಂದಿದ್ದಾರೆ ಎಂದರು.


ಲೇಖಕ ಶಿವಾಜಿ ಗಣೇಶನ್ ಮಾತನಾಡಿ, ಪುಸ್ತಕವನ್ನು ಬರೆಯಲು ಬೂಸಾ ಪ್ರಕರಣ ಬರೆದಿರುವ ಹಾಗೂ ಪಂಚಮ ಕುರಿತು ಬಹುಪಾಲು ಜನರು ವಸ್ತುನಿಷ್ಟ ವಾಸ್ತವವನ್ನು ತಿಳಿಸಿಲ್ಲವಾಗಿ ಈ ಪುಸ್ತಕವನ್ನು ಬರೆಯಬೇಕಾಗಿ ಬಂದಿತು, ಇದು ಸಂಪೂರ್ಣ ಎಂದು ಭಾವಿಸಿಲ್ಲ, ಟೀಕೆ ಹಾಗೂ ಪ್ರತಿಕ್ರಿಯೆಗಳಿಗೆ ತೆರೆದ ಮನಸ್ಸಿನಿಂದ ಸ್ವಾಗತಿಸುವುದಾಗಿ ತಿಳಿಸಿದರು. 
ಮುಖ್ಯ ಅತಿಥಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಅನ್ಯಾಯ, ಕ್ರರ‍್ಯ, ತುಳಿತಕ್ಕೆ ಒಳಗಾದ ಎಲ್ಲರೂ ಶೋಷಿತರು, ಎಲ್ಲರ ಸಮಸ್ಯೆಗೆ ಚಳುವಳಿ ಪರಿಹಾರವಾಗಬೇಕು ಎಂದರು.


ಪಿಯುಸಿಎಲ್ ಜಿಲ್ಲಾಧ್ಯಕ್ಷ  ಕೆ.ದೊರೈರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. (ಇವರ ಭಾಷಣದ ವರದಿ ಇದೇ ಸಂಚಿಕೆಯಲ್ಲಿ ಪ್ರತ್ಯೇಕವಾಗಿ ಪ್ರಕಟವಾಗಿದೆ)


‘ಬೆವರ ಹನಿ’ ದಿನಪತ್ರಿಕೆಯ ಸಂಪಾದಕ ಹಾಗೂ ‘ಬೆವರ ಹನಿ’ ಪ್ರಕಾಶನದ ಕುಚ್ಚಂಗಿ ಪ್ರಸನ್ನ ಪ್ರಾಸ್ತಾವಿಕ ಮಾತನಾಡಿ, ಕಾಲೇಜು ದಿನಗಳಲ್ಲಿ ಆಕಸ್ಮಿಕವಾಗಿ ರೈತ ಚಳವಳಿಯ ಸಂಪರ್ಕಕ್ಕೆ ಬಂದ ತಾವು, ರೈತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ , ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ಕರ‍್ಯಕ್ರಮಗಳಲ್ಲಿ ಸಂಯುಕ್ತವಾಗಿ ಕಾರ್ಯ ನಿರ್ವಹಿಸಿದ್ದನ್ನು ಸ್ಮರಿಸಿದರು. 


‘ಬೆವರ ಹನಿ’ ಪ್ರಕಾಶನದ ಪ್ರಕಾಶಕ ಎಂ.ಹೆಚ್.ನಾಗರಾಜು ವಂದಿಸಿದರು. ರೇಡಿಯೋ ಸಿದ್ದಾರ್ಥದ ಕರ‍್ಯಕ್ರಮ ನಿರೂಪಕಿ ಸುಲೋಚನಾ ಸುಗುಣ ನಿರೂಪಿಸಿದರು.