ಕಾಂಗ್ರೆಸ್ ಮುಳುಗಿದ ಹಡಗು ಎಂದವರಿಗೆ ಫಲಿತಾAಶ ತಕ್ಕ ಉತ್ತರ ನೀಡಿದೆ: ಡಿಕೆಶಿ

ಕಾಂಗ್ರೆಸ್ ಮುಳುಗಿದ ಹಡಗು ಎಂದವರಿಗೆ
ಫಲಿತಾAಶ ತಕ್ಕ ಉತ್ತರ ನೀಡಿದೆ: ಡಿಕೆಶಿ
ಬೆಂಗಳೂರು: ಕಾಂಗ್ರೆಸ್ ಮುಳುಗಿದ ಹಡಗು, ಇಬ್ಭಾಗ ಆಗಿದೆ ಎಂದು ಬಾಯಿಗೆ ಬಂದAತೆ ಮಾತನಾಡಿದವರಿಗೆ ಈ ಉಪಚುನಾವಣೆ ಫಲಿತಾಂಶ ಸ್ಪಷ್ಟ ಉತ್ತರ ನೀಡಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿಯವರು ಎಷ್ಟೇ ಒತ್ತಡ ಹೇರಿದರೂ, ಎಷ್ಟೇ ಹಣ ಹಂಚಿದರೂ, ಆಮಿಷ ಒಡ್ಡಿದರೂ ಕ್ಷೇತ್ರದ ಮತದಾರರು ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದ್ದರು. ಮತದಾರರು ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಅಭಿನಂದಿಸುತ್ತೇನೆ ಎಂದಿದ್ದಾರೆ.
ಇAಧನಗಳ ಬೆಲೆ ಇಳಿಕೆ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಅವರು, ಹಾನಗಲ್ ಉಪಚುನಾವಣೆ ಫಲಿತಾಂಶದ ಫಲವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ ಎಂದಿದ್ದಾರೆ.
ಬೆಲೆ ಇಳಿಕೆ ಇಷ್ಟಕ್ಕೇ ನಿಲ್ಲಬಾರದು. ಇನ್ನೂ ಬೆಲೆ ಕಡಿಮಯಾಗಬೇಕಾದ ಪದಾರ್ಥಗಳು ಸಾಕಷ್ಟಿವೆ. ಬಿಜೆಪಿಗೆ ಜನ ಉತ್ತರ ಕೊಡುವ ದಿನಗಳು ಹತ್ತಿರ ಬರ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ
ಹಾನಗಲ್ ಕ್ಷೇತ್ರದ ಗೆಲುವು ನನ್ನ ಗೆಲುವಲ್ಲ. ಇದು ಮತದಾರರ ಗೆಲುವು. ಪಕ್ಷದ ಕಾರ್ಯಕರ್ತರ ಗೆಲುವು, ಬಿಜೆಪಿ ದುರಾಡಳಿತದ ವಿರುದ್ಧದ ಮತದಾರರ ತೀರ್ಪು ಇದಾಗಿದೆ ಎಂದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ, ಜನವಿರೋಧಿ, ದುರಾಡಳಿತದ ವಿರುದ್ಧ ಮತದಾರರು ತೀರ್ಪು ನೀಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.