ಆಧುನಿಕ ಮೈಸೂರಿನ ಸಾಮಾಜಿಕ ನ್ಯಾಯದ ಒಡೆಯ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ 

ಆಧುನಿಕ ಮೈಸೂರಿನ ಸಾಮಾಜಿಕ ನ್ಯಾಯದ ಒಡೆಯ ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ 

“ಇಂಡಿಯಾದ ಇತರ ಎಲ್ಲಾ ರಾಜ ಮಹಾರಾಜರು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಥರ ಇದ್ದಿದ್ದರೆ ಇಂಡಿಯಾಕ್ಕೆ ಸ್ವಾತಂತ್ರ್ಯ ಬೇಕಾಗಿರಲಿಲ್ಲ ಅಂತ. ಇಂತಹ ಅಪರೂಪದ ಅಪೂರ್ವ ಆದರ್ಶ ದೊರೆ ನಮ್ಮ ಮೈಸೂರು ಸಂಸ್ಥಾನದ ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರು.”


ಸಾಂದರ್ಭಿಕ


 ಕೆ.ಪಿ.ಲಕ್ಷ್ಮಿ ಕಾಂತರಾಜೇ ಅರಸ್


  ನಾಲ್ವಡಿ ಕೃಷ್ಣರಾಜ ಒಡೆಯರನ್ನು ಮಹಾತ್ಮಗಾಂಧೀಜಿ ಅವರು ರಾಜರ್ಷಿ ಅಂತ ಕರೆದರು. ರಾಜನಾಗಿದ್ದರೂ ಋಷಿಯಂತಿದ್ದವರು. ಋಷಿ ಅಂದರೆ ದ್ರಷ್ಟಾರ. ದೃಷ್ಟಾರನಾಗಿ ರಾಜ್ಯವನ್ನು ರೂಪಿಸಿದವರು. ಆನತೆಯನ್ನು ಪಾಲಿಸಿದವರು. ಗಾಂಧೀಜಿ ಮತ್ತೂ ಅಂದರು, ನಾಲ್ವಡಿಯವರ ಮೈಸೂರು ಒಂದು ರಾಮರಾಜ್ಯ ಅಂತ. ರಾಮರಾಜ್ಯ ಅಂದರೆ, ಪ್ರಜೆಗಳೆಲ್ಲರಿಗೂ ಯಾವುದೇ ರೀತಿಯ ತಾರತಮ್ಯವಿಲ್ಲದೆ ಸಮಾನ ನ್ಯಾಯ ಮತ್ತು ಸಮೃದ್ಧಿಯಲ್ಲಿ ಸಮಪಾಲು ದೊರೆಯುವ ಕಾಣ್ಕೆ ಹೊಂದಿದ ನಾಡು ಅಂತ. ಅಂತಹ ನಾಡು ಮೈಸೂರು ಅಂದರು ಗಾಂಧೀಜಿ. ನಮ್ಮ ವಲ್ಲಭ್ ಭಾಯಿ ಪಟೇಲ್, ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿ ಹೇಳಿದ್ದಂತೂ ತುಂಬಾ ರೋಚಕ.


ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಮಿಲ್ಲರ್ ವರದಿ ಮತ್ತು ಮೀಸಲಾತಿಯದು ಒಂದು ಪ್ರಮುಖ ಘಟ್ಟ. ಮಹಾರಾಜರು ಮತ್ತು ಅವರ ದಿವಾನರಾಗಿದ್ದ ಎಂ.ವಿಶ್ವೇಶ್ವರಯ್ಯ ಇವರಿಬ್ಬರ ಮಾನಸಿಕ ಚಿಂತನೆ, ಆದರ್ಶ, ಧ್ಯೇಯ ಧೋರಣೆಗಳು ತಮ್ಮ ನೈಜ ಬಣ್ಣವನ್ನು ಪ್ರದರ್ಶಿಸಿದ ಪ್ರಸಂಗ. ಆಧುನಿಕ ಮೈಸೂರಿನ ಇತಿಹಾಸದಲ್ಲಿ ಈ ಪ್ರಸಂಗ ಇತಿಹಾಸದ ಜಾಡನ್ನೇ ಬದಲಾಯಿಸಿದಂಥದ್ದು.


ಆ ದಿನಗಳಲ್ಲಿ ಸಾಮಾನ್ಯವಾಗಿ ಹೆಸರು ಹೇಳಬಹದಾದಂಥ ಬಹುತೇಕ ಹುದ್ದೆಗಳಿಗೆ ಮದ್ರಾಸಿನಿಂದ ಜನರನ್ನು ಕರೆಸಿ ನೇಮಿಸಿಕೊಳ್ಳಲಾಗುತ್ತಿತ್ತು. ಜನರು ಎಂದರೆ ಬ್ರಾಹ್ಮಣರು ಎಂದರ್ಥ. ಇದಕ್ಕೆ ಮುಖ್ಯ ಕಾರಣವೆಂದರೆ ಮೈಸೂರಿನಲ್ಲಿರುತ್ತಿದ್ದ ಬ್ರಿಟಿಷ್ ರೆಸಿಡೆಂಟ್ ಅಧಿಕಾರಿ, ಮದ್ರಾಸು ನೇರವಾಗಿ ಬ್ರಿಟಿಷರ ಆಡಳಿತದಲ್ಲಿತ್ತು. ಪಕ್ಕದ ಮೈಸೂರಿನ ದೊರೆ ಬ್ರಿಟಿಷರ ಆಶ್ರಿತ ರಾಜರಾಗಿದ್ದರು. ಹಾಗೆ ನೋಡಿದರೆ ಇಡೀ ಇಂಡಿಯಾದಲ್ಲಿದ್ದುದೇ ಎರಡು ರೀತಿಯ ಸಂಸ್ಥಾನಗಳು. ಒಂದು ಬ್ರಿಟಿಷರ ನೇರ ಆಡಳಿತದಲ್ಲಿದ್ದ ರಾಜ್ಯಗಳು. ಎರಡು ಬ್ರಿಟಿಷರ ಆಶ್ರಿತ ರಾಜರುಗಳ ರಾಜ್ಯಗಳು. ಮದ್ರಾಶಿನಲ್ಲಿದ್ದ ಬ್ರಾಹ್ಮಣರು ಬುದ್ದಿವಂತರಾಗಿದ್ದರು. ಇನ್ನೊಂದು ಮಾತು ಹೇಳುವುದಾದರೆ ಬ್ರಾಹ್ಮಣರು ಯಾವ ರಾಜ್ಯದಲ್ಲಿದ್ದರೂ ಬುದ್ದಿವಂತರೇ ಅಲ್ಲದೆ, ಮದ್ರಾಸಿನಲ್ಲಿ ಬ್ರಿಟಿಷ್ ಸರಕಾರಕ್ಕೆ ಬ್ರಾಹ್ಮಣರು ಬಹಳಷ್ಟು ಸಹಾಯ ಮಾಡಿದ್ದರು/ ಮಾಡುತ್ತಿದ್ದರು. ಅವರಿಂದಾಗಿ ಮೈಸೂರಿನಲ್ಲಿ ಅವಕಾಶ ಒದಗಿದಾಗ ಮದ್ರಾಸಿನ ಜನರನ್ನು ಅಂದರೆ ಬ್ರಾಹ್ಮಣರನ್ನು ವಿವಿಧ ಹುದ್ದೆಗಳಿಗೆ ನೇಮಿಸಲಾಗುತ್ತಿತ್ತು. ವಿಧಿಯಿಲ್ಲದೆ ಮಹಾರಾಜರು ಕೆಲವೊಮ್ಮೆ ಒಪ್ಪಿಗೆ ನೀಡಬೇಕಾಗುತ್ತಿತ್ತು. ಇನ್ನು ಉಳಿದಂತೆ ಇತರ ಹುದ್ದೆಗಳಿಗೆ ಮೈಸೂರಿನವರ ನೇಮಕವಾಗುತ್ತಿದ್ದಾಗಲೂ ಬಹುತೇಕ ಅವರೆಲ್ಲರೂ ಬ್ರಾಹ್ಮಣರೇ ಆಗಿರುತ್ತಿದ್ದರು.


 ಈ ರೀತಿ ಬ್ರಾಹ್ಮಣರನ್ನೇ ಆಯ್ಕೆ ಮಾಡುವಾಗ ಅರ್ಹತೆ, ಪ್ರತಿಭೆ ಮತ್ತು ದಕ್ಷತೆಯ ಕಾರಣ ನೀಡಲಾಗುತ್ತಿತ್ತು. ತಲೆತಲಾಂತರಗಳಿಂದ ಶಿಕ್ಷಣ ಮತ್ತು ತರಬೇತಿಯೊಡನೆ ಅವಕಾಶಗಳು ಸಿಗುತ್ತಿದ್ದುದು ಬ್ರಾಹ್ಮಣರಿಗೇನೇ. ಹಿಂದುಳಿದವರು, ಪಂಚಮರು, ಗ್ರಾಮೀಣರಿಗೆ ಅವಕಾಶಗಳೇ ಸಿಗುತ್ತಿರಲಿಲ್ಲ. ಹೀಗಾಗಿ ಅವರಿಗೆ ಉನ್ನತ ಹುದ್ದೆಗಳಲ್ಲಿ ಸ್ಥಾನ ಸಿಗುವುದೆಂತು?


 ಇದನ್ನೆಲ್ಲಾ ಗಮನಿಸಿಯೇ ನಾಲ್ವಡಿ ಕೃಷ್ಣರಾಜ ಒಡೆಯರು ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಜನರಿಗೆ ಪಂಚಮರಿಗೆ, ಹೆಣ್ಣು ಮಕ್ಕಳಿಗೆ, ವಿಶೇಷ ಒತ್ತುಕೊಟ್ಟು ಶಾಲೆಗಳನ್ನು ತೆರೆದಿದ್ದು, ವಿಶೇಷ ರಿಯಾಯಿತಿಗಳನ್ನು ನೀಡಿದ್ದು, ನೇಮಕಾತಿಯಲ್ಲೂ ಸಹ ಹಿಂದುಳಿದವರಿಗೆ, ಪಂಚಮರಿಗೆ ವಿಶೇಷ ರಿಯಾಯಿತಿಗಳನ್ನು ಅವಕಾಶಗಳನ್ನು ಸೃಷ್ಟಿಸಲು ಯತ್ನಿಸಿದ್ದು.


 ಎಲ್ಲಾ ಪ್ರಜೆಗಳನ್ನು ಸಮಾನ ಭಾವದಿಂದ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಮಹಾರಾಜರು ಅವಕಾಶ ವಂಚಿತರಿಗೆ ವಿಶೇಷ ರಿಯಾಯಿತಿ ನೀಡಿ, ಹಲವಾರು ಹುದ್ದೆಗಳಲ್ಲಿ ಅಧಿಕಾರ ನೀಡಬೇಕೆಂದಾಗ ಅದಕ್ಕೆ ಅಡ್ಡಿ ಉಂಟಾಗುತ್ತಿದ್ದುದು, ಅವರೇ ನೇಮಿಸಿದ್ದ ದಿವಾನ್ ವಿಶ್ವೇಶ್ವರಯ್ಯನವರು. ವಿಶ್ವೇಶ್ವರಯ್ಯನವರದು ಒಂದೇ ಜಪ ಪ್ರತಿಭೆ, ಅರ್ಹತೆ, ದಕ್ಷತೆ, ಇವಿಲ್ಲದವರಿಗೆ ಅಂದರೆ ಅವಕಾಶ ವಂಚಿತ ಹಿಂದುಳಿದವರಿಗೆ, ಪಂಚಮರಿಗೆ ಜವಾಬ್ದಾರಿಯುತ ಹುದ್ದೆಗಳನ್ನು ನೀಡಿದರೆ ಕಾರ್ಯದಕ್ಷತೆ ಕುಂಠಿತವಾಗುತ್ತದೆ. ಇದರಿಂದ ಆಡಳಿತ, ಹಾಳಾಗುತ್ತದೆ. ಈ ಕಾರಣ ನೀಡುತ್ತಿದ್ದ ವಿಶ್ವೇಶ್ವರಯ್ಯನವರಿಗೆ ಆಡಳಿತದ ದಕ್ಷತೆ ಮುಖ್ಯ ಅನಿಸಿತ್ತೇ ಹೊರತು ಪ್ರಜಾವರ್ಗಕ್ಕೆ ಸಮಾನ ಅವಕಾಶ ನೀಡುವಿಕೆ, ಅವಕಾಶ ವಂಚಿತರಿಗೆ ಸಮಾನ ಅವಕಾಶ ನೀಡುವಿಕೆ, ಮುಖ್ಯಧಾರೆಯಿಂದ ದೂರ ಉಳಿದಿದ್ದ ಹಿಂದುಳಿದವರು, ಅಲ್ಪಸಂಖ್ಯಾತರು, ಗ್ರಾಮೀಣ ವಾಸಿಗಳು, ಪಂಚಮರು ಇಂಥವರಿಗೆ ಸ್ವಲ್ಪ ರಿಯಾಯಿತಿ ನೀಡುವುದು ಇವರನ್ನು ಮೇಲೆ ತರುವುದು ಬೇಕಾಗಿರಲಿಲ್ಲ.


 ಇದೇ ವೇಳೆಗೆ ಸರಿಯಾಗಿ ಹಿಂದುಳಿದವರು, ಪಂಚಮರು ಮುಂತಾದವರು ಅಂದರೆ ಬ್ರಾಹ್ಮಣೇತರರು, ಪ್ರಜಾಮಿತ್ರ ಮಂಡಲಿ ಹೆಸರಿನಲ್ಲಿ ಸಂಘಟಿತರಾಗಿ ಒಂದು ಚಳವಳಿಯನ್ನೇ ಪ್ರಾರಂಭಿಸಿ ಮಹಾರಾಜರ ಮೇಲೆ ಒತ್ತಡ ತರಲಾರಂಭಿಸಿದರು.


 ಪ್ರತಿಭಾಶಾಲಿ, ದಕ್ಷ ಎಂದು ತಾನೇ ನೇಮಿಸಿಕೊಂಡಿದ್ದ ದಿವಾನರ ಹಠಮಾರಿತನಕ್ಕೆ ಸೋಲುವುದೇ ಅಥವಾ ಪ್ರಜೆಗಳ ಹಿತವನ್ನು ಬೆಂಬಲಿಸುವುದೇ? ಕೆಳಗಿರುವವರನ್ನು ಮೇಲೆತ್ತಬೇಕಾದರೆ ನಾವೂ ಒಂದಷ್ಟು ಕೆಳಕ್ಕಿಳಿಯಲೇಬೇಕು; ಒಂದಷ್ಟು ಬಾಗಲೇಬೇಕು. ಇದು ಅನಿವಾರ್ಯ ಹಾಗೂ ಅವಶ್ಯಕ.


 ಮಹಾರಾಜರು ದಕ್ಷತೆಯ ಹೆಸರಿನಲ್ಲಿ ತಮ್ಮ ಪ್ರಜಾಕೋಟಿಯ ಒಂದು ಭಾಗವನ್ನು ಬಲಿಕೊಡಲು ಸಿದ್ದರಿರಲಿಲ್ಲ. ಕುಂಟನೋ, ಕುರುಡನೋ, ಹೆಳವನೋ ಎಲ್ಲರೂ ಅವರಿಗೆ ಮಕ್ಕಳಿದ್ದಂತೆಯೇ ತಾನೇ.


 ಇದರೊಂದಿಗೆ ಇದೇ ಸಮಯದಲ್ಲಿ ಇನ್ನೊಂದು ಪ್ರಕರಣ ನಡೆದಿತ್ತು. ಆರು ಜನ ಅಸಿಸ್ಟೆಂಟ್ ಕಮೀಷನರ್‌ಗಳ ಹುದ್ದೆ ಖಾಲಿಯಿತ್ತು. ಅರ್ಹತೆ, ಪ್ರತಿಭೆ ಮತ್ತು ದಕ್ಷತೆಯ ಮಾನದಂಡ ಹಿಡಿದಿದ್ದ ದಿವಾನರು ಅವರ ದೃಷ್ಠಿಯಲ್ಲಿ ಸೂಕ್ತ ಎನಿಸಿದ್ದ ಆರು ಹೆಸರುಗಳನ್ನು ಒಪ್ಪಿಗೆಗಾಗಿ ಮಹಾರಾಜರಿಗೆ ಸಲ್ಲಿಸಿದ್ದರು. ಆ ಆರೂ ಹೆಸರುಗಳು ಬ್ರಾಹ್ಮಣ ವ್ಯಕ್ತಿಗಳದ್ದೇ. ಮಹಾರಾಜರು ಇದರಲ್ಲಿ ಮೂರು ಸ್ಥಾನಗಳನ್ನು ಬ್ರಾಹ್ಮಣೇತರರಿಗೆ ನೀಡಲು ತಿಳಿಸಿದರು.
 ಪ್ರತಿಭೆಯೊಂದೇ ಸರ್ಕಾರಿ ಹುದ್ದೆಗೆ ಆಧಾರ ಎಂದು ಹಠ ಹಿಡಿದು, ಮೀಸಲಾತಿಯ ತತ್ವವನ್ನುಏ ವಿರೋಧಿಸಿದ ವಿಶ್ವೇಶ್ವರಯ್ಯನವರು ದಿವಾನಗಿರಿಗೆ ರಾಜಿನಾಮೆ ನೀಡಿದರು. ಒಲ್ಲದ ಮನಸ್ಸಿನಿಂದ ಆ ರಾಜಿನಾಮೆಯನ್ನು ಒಪ್ಪಿಕೊಂಡ ನಾಲ್ವಡಿಯವರು ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ಲೆಸ್ಲಿ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 1918ರಲ್ಲಿ ಒಂದು ಆಯೋಗವನ್ನು ರಚಿಸಿದರು. ಅವಕಾಶವಂಚಿತರನ್ನು, ಹಿಂದುಳಿದವರನ್ನು, ಪಂಚಮರನ್ನು ಆಡಳಿತಾಂಗದ ಮುಖ್ಯಧಾರೆಗೆ ತರಲು ಅವರಿಗೆ ರಿಯಾಯಿತಿ, ಮಈಸಲಾತಿ ನೀಡಬೇಕೆ? ಹೌದಾದರೆ ಎಷ್ಟು ನೀಡಬೇಕು ? ಇದು ಆಯೋಗಕ್ಕೆ ವಹಿಸಲಾಗಿದ್ದ ಜವಾಬ್ದಾರಿ. ಇಡೀ ಇಂಡಿಯಾದಲ್ಲೇ ಈ ಮಿಲ್ಲರ್ ಆಯೋಗವನ್ನು ಪ್ರಪ್ರಥಮ ಹಿಂದುಳಿದವರ ಆಯೋಗ, ಮೀಸಲಾತಿ ಆಯೋಗ ಎಂದು ಪರಿಗಣಿಸಬಹುದು.


 1919 ಆಗಸ್ಟ್ ತಿಂಗಳಲ್ಲಿ ಮಿಲ್ಲರ್ ಸಮಿತಿ ವರದಿ ನೀಡಿತು. ಮಹಾರಾಜರು ತಮ್ಮ ಸರಕಾರದ ಹಿರಿಯ ಅಧಿಕಾರಿಗಳೀಗೆ ಈ ವರದಿಯನ್ನು ನೀಡಿ ಅವರ ಸಲಹೆಯನ್ನು ಸ್ವೀಕರಿಸಿದರು. ಮಂತ್ರಿಮಂಡಲದ ಹಿರಿಯ ಸದಸ್ಯರಾಗಿದ್ದ ತಮ್ಮ ಸೋದರ ಮಾವ ಸರ್ದಾರ್ ಎಂ. ಕಾಂತರಾಜ ಅರಸರನ್ನು ದಿವಾನರನ್ನಾಗಿ ನೇಮಿಸಿದರು. ಇವರ ಕಾಲದಲ್ಲಿ ಮಿಲ್ಲರ್ ವರದಿಯ ಬಹುತೇಕ ಸಲಹೆಗಳು ಜಾರಿಗೆ ಬಂದವು.


 ಮಿಲ್ಲರ್ ವರದಿಯ ಮುಖ್ಯಾಂಶಗಳು ಹೀಗಿವೆ - ಸರ್ಕಾರದ ಆಡಳಿತಾಂಗದ ವಿವಿಧ ಇಲಾಖೆಗಳಲ್ಲಿ ಹಿಂದಳಿದ ಸಮುದಾಯಗಳ ಸದ್ಯದ ಜನಸಂಖ್ಯೆಗೆ ತಾಳೆ ಹೊಂದುವಂತೆ 7 ವರ್ಷಗಳಲ್ಲಿ ಶೇ.50ರಷ್ಟು ಹುದ್ದೆಗಳನ್ನು ಅವರಿಗೆ ಮೀಸಲಿಡಬೇಕು. ಇದಕ್ಕಾಗಿ 7 ವರ್ಷಗಳಲ್ಲಿ ನಿಗದಿತ ಅರ್ಹತೆಗಳನ್ನು ಹೊಂದಿರುವ ಹಿಂದುಳಿದ ಸಮುದಾಯಗಳ ಸದಸ್ಯರಿಗೆ ಎಲ್ಲಾ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಆದ್ಯತೆ ನೀಡಬೇಕು. ಜೊತೆಗೆ ಹುದ್ದೆಗಳಿಗೆ ನೇಮಕಾತಿಗಾಘಿ ಬರುವ ಅರ್ಜಿಗಳನ್ನೆಲ್ಲಾ ದಾಖಲು ಮಾಡುವುದಕ್ಕಾಗಿ, ಖಾಲಿ ಇರುವ ಹುದ್ದೆಗಳನ್ನು ಹೊಂದಿರುವ ಇಲಾಖೆಗಳೊಂದಿಗೆ ಅಭ್ಯರ್ಥಿಗಳಿಗೆ ಸಂಪರ್ಕ ಕಲ್ಪಿಸಿಕೊಡುವುದಕ್ಕಾಗಿ ಮತ್ತು ಈ ನಿಯಮಗಳ ಪಾಲನೆಯ ಬಗ್ಗೆ ಗಮನವಿಡುವ ಒಂದು ಎಚ್ಚರಿಕೆ ಸಮಿತಿಯಾಗಿ ಕಾರ್ಯ ನಿರ್ವಹಿಸುವುದಕ್ಕಾಗಿ ರಾಜ್ಯ ಸಭೆಯ(ಅಂದಿನ ಕೌನ್ಸಿಲ್‌ನ) ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಹೊಂದಿದ್ದ ಪ್ರಧಾನ ಉದ್ಯೋಗ ನೇಮಕಾತಿ ಮಂಡಲಿಯನ್ನು ಸ್ಥಾಪಿಸಬೇಕು.


 ಇದು ಭಾರತದಲ್ಲೇ ಮೊಟ್ಟಮೊದಲನೆಯದು ಎಂದು ಹೇಳಬಹುದಾದ ಹಿಂದುಳಿದವರಿಗಾಗಿ ಮೀಸಲಾತಿ ಸಲಹೆ ಮಾಡಿ ವರದಿ ನೀಡಿದ ನ್ಯಾಯಮೂರ್ತಿ ಲೆಸ್ಲಿ ಮಿಲ್ಲರ್ ಆಯೋಗದ ಕಥೆ. ಕಾರ್ಯಗತಗೊಳಿಸಿದವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಇದಾದದ್ದು ಮೈಸೂರು ರಾಜ್ಯದಲ್ಲಿ ಎಂಬುದು ಸಾರ್ವಕಾಲಿಕ ಐತಿಹಾಸಿಕ ಮೈಲುಗಲ್ಲು ದಾಖಲೆ. ಇದು ಮೈಸೂರಿನವರು ಕನ್ನಡಿಗರು ಹೆಮ್ಮೆಪಡುವ ಸಂಗತಿ.


ಕೆಲವು ಕ್ರಾಂತಿಕಾರಿ ಕಾನೂನುಗಳು  ಸಮಾಜದ ಕಪ್ಪು ಚುಕ್ಕೆಯಾದ ದೇವದಾಸಿ ಪದ್ದತಿಯು ಮೈಸೂರು ಸಂಸ್ಥಾನದಲ್ಲಿ ಪ್ರಾಚೀನಕಾಲದಿಂದಲೂ ಆಚರಣೆಯಲ್ಲಿತ್ತು. ದೇವದಾಸಿಯರೆಂದರೆ ದೇವಾಲಯಗಳಲ್ಲಿ ದೇವರ ಹೆಸರಿನಲ್ಲಿ ಪಮರ್ಪಿಸಿಕೊಂಡಿರುವ, ನೃತ್ಯ ಮತ್ತು ಸಂಗೀತ ಸೇವೆ ಮಾಡುವ ಸ್ತ್ರೀಯರಾಗಿದ್ದರು.  ಮೊದಮೊದಲು ಉನ್ನತ ಆದರ್ಶ, ಗೌರವದ ಸಂಪ್ರದಾಯವಾಗಿದ್ದ ದೇವದಾಸಿ ಪದ್ದತಿಯು 18 ಮತ್ತು 19ನೇ ಶತಮಾನಗಳಲ್ಲಿ ಬದಲಾವಣೆಗೊಂಡಿತು. ಅವರು ಸಲ್ಲಿಸಿರುವ ಸೇವೆ ಮತ್ತು ಸ್ಥಾನಗಳು ಕೆಳಮಟ್ಟಕ್ಕಿಳಿದು ಕೊನೆಕೊನೆಗ ಅವರನ್ನು ವೇಶ್ಯೆಯರೆಂದು ಗುರ್ತಿಸಲಾಯಿತು. ದೇವದಾಸಿ ವರ್ಗವು ಪ್ರತ್ಯೇಕ ಜಾತಿಯಾಗಿ ಗುರುತಿಸಲ್ಪಟ್ಟು ತನ್ನದೇ ಆದ ನಿಯಮ ನಿಬಂಧನೆಗಳನ್ನು ಅಳವಡಿಸಕೊಂಡಿತು. ಹಾಗೆಯೇ ಮೈಸೂರು ಪ್ರಾಂತ್ಯದಲ್ಲಿ ಆಚರಣೆಯಲ್ಲಿದ್ದ ಮತ್ತೊಂದು ಪ್ರಮುಖ ನೀಚ ಪದ್ದತಿಯೆಂದರೆ ಬಸವಿ ಪದ್ದತಿ. ಶಿವ, ವಿಷ್ಣು ಮತ್ತಿತರ ಗ್ರಾಮ ದೇವತೆಗಳ ಸೇವೆಗಾಘಿ ಬಸವಿಯರನ್ನು ಅರ್ಪಿಸಲಾಗುತ್ತಿತ್ತು. ಈ ಅನಿಷ್ಠ ಸಾಮಾಜಿಕ ಕೆಡುಕುಗಳನ್ನು ನಿರ್ಮೂಲನಗೊಳಿಸಲು ಮೈಸೂರು ಸರ್ಕಾರವು 1892ರಲ್ಲಿ ಒಂದು ಆಜ್ಞೆಯನ್ನು ಹೊರಡಿಸಿತು. ಆ ಆಜ್ಞೆಯು ನಂಜನಗೂಡಿನ ಭೋಗಾನಂದೀಶ್ವರ ದೇವಾಲಯದಲ್ಲಿ ದೇವದಾಸಿಯರನ್ನು ನೇಮಿಸಿಕೊಳ್ಳುವ ಮತ್ತು ನೃತ್ಯ ಕನ್ಯೆಯರು ನೃತ್ಯ ಮಾಡುವುದನ್ನು ನಿಷೇಧಿಸಿತ್ತು. ಆ ಆಜ್ಷೆಯು ನಂಜನಗೂಡಿನ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರವರು ಅಧಿಕಾರಕ್ಕೆ ಬಂದ ಮೇಲೆ ದೇವದಾಸಿ ಪದ್ದತಿಯನ್ನು  ತೊಡೆದುಹಾಕಲು ತೀರ್ಮಾನಿಸಿದರು. ಅದರಂತೆ 1909ರಲ್ಲಿ ರ‍್ಕಾರವು ಮತ್ತೊಂದು ಆಜ್ಞೆಯನ್ನು ಹೊರಡಿಸಿ ದೇವದಾಸಿ ಪದ್ದತಿಯು ತನ್ನ ಪಾವಿತ್ರö್ಯತೆಯನ್ನು ಕಳೆದುಕೊಂಡಿರುವ ದುಷ್ಟ ಪದ್ದತಿಯೆಂದು ಘೋಷಿಸಿ ಅದನ್ನು ನಿಷೇಧಿಸಲಾಯಿತು. 1910ರಲ್ಲಿ ಸರ್ಕಾರವು ಮತ್ತೊಂದು ಆಜ್ಞೆಯನ್ನು ಹೊರಡಿಸಿ ಸರ್ಕಾರಿ ಹತೋಟಿಯಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ‘ಗೆಜ್ಜೆಪೂಜೆ’ ಸಮಾರಂಭ ಏರ್ಪಡಿಸಬಾರದೆಂದು ನಿಷೇಧಿಸಿತು. ಈ ಆಜ್ಞೆಗಳು ದೇವದಾಸಿ ಪದ್ದತಿಯನ್ನು ಸಂರ್ಪೂವಾಗಿ ನಿರ್ಮೂಲನಗೊಳಿಸಲು ಸಾಧ್ಯವಾಘದೇ ಇದ್ದಾಗ ಸಾರ್ವಜನಿಕರು ಈ ದೃಷ್ಟ ಪದ್ದತಿಯನ್ನು ತೊಲಗಿಸಲು ಒಂದು ಕಾನೂನನ್ನೇ ಜಾರಿಗೆ ತರಬೇಕೆಂದು ಬೇಡಿಕೆಯಿತ್ತರು. ನಾಲ್ವಡಿ ಕೃಷ್ಣರಾಜ ಒಡೆಯವು ಈ ಪದ್ದತಿಯ ದುಷ್ಟತಿಯನ್ನರಿತು ಒಂದು ಕಾನೂನನ್ನು ಜಾರಿಗೆ ತಂದು ಹಿಂದಿನ ಆಜ್ಞೆ ಮತ್ತು ಕಾನೂನನ್ನು ಮೀರಿದವರಿಗೆ ಶಿಕ್ಷೆ ವಿಧಿಸುವಂತೆ ಮಾಡಿದರು. 1919ರಲ್ಲಿ ಮೈಸೂರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ದೇವದಾಸಿಯರಿಗೆ ಸರ್ಕಾರದಿಂದ ಇನಾಂ ಭೂಮಿಯನ್ನು ನೀಡಬಾರದೆಂದು ಸೂಚನೆ ನೀಡಲಾಯಿತು. ಹೀಗೆ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಆಡಳಿತದ ಅವಧಿಯಲ್ಲಿ ಹಂತಹಂತವಾಗಿ ದೇವದಾಸಿ ಪದ್ದತಿಯನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸಿದರು.


 ಆಧುನಿಕ ಸಮಾಜದ ಮತ್ತೊಂದು ಪಿಡುಗು ವೇಶ್ಯಾವೃತ್ತಿ. ನಾಲ್ವಡಿ ಕೃಷ್ಣರಾಜ ಒಡೆಯರು ಪ್ರಜಾಪ್ರಭುತ್ವ ಚೀಂತನೆಯ ರಾಜರಾಗಿದ್ದುದರಿಂದ 1936ರ ಜುಲೈ 14 ರಂದು ವೇಶ್ಯಾವತ್ತಿ ತಡೆಗಟ್ಟುವ ಸೂಪರ್ ಆಫ್ ಇಮ್ಮಾರಲ್ ಟ್ರಾಫಿಕ್ ಆಕ್ಟ್ ಎಂಬ ಕಾನೂನನ್ನು ಜಾರಿಗೆ ತಂದರು. ಈ ಕಾನೂನು ಸಾರ್ವಜನಿಕ ಬೀದಿ ಅಥವಾ ಪ್ರದೇಶಗಳನ್ನು ವೇಶ್ಯಾಕಾರ್ಯಕ್ಕೆ ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳಿಗೆ ಎರಡು ತಿಂಗಳು ಸೆರೆವಾಸ ಮತ್ತು 200 ರೂಗಳ ದಂಡ ವಿಧಿಸುವ ಅಧಿಕಾರ ಹೊಂದಿತ್ತು. ಅಪ್ರಾಪ್ತ ಕನ್ಯೆಯರನ್ನು ವೇಶ್ಯಾವೃತ್ತಿಗಿಳಿಸುವ ವ್ಯಕ್ತಿಗಳಿಗೆ ಎರಡು ವರ್ಷ ಸಜೆ ಮತ್ತು 500 ರೂಗಳ ದಂಡದ ಶಿಕ್ಷ ವಿಧಿಸುವ ಅಧಿಕಾರ ಹೊಂದಿತ್ತು. ಹೀಗೆ ಈ ಕಾನೂನನ್ನು ಜಾರಿಗೆ ತರುವುದರ ಮೂಲಕ ವೇಶ್ಯಾವೃತ್ತಿಯನ್ನು ನಿಯಂತ್ರಿಸಲು ಪ್ರಯತ್ನಿಸಲಾಯಿತು.


 ಕುಡಿತ ಮತ್ತು ಧೂಮಪಾನ ಸಮಾಜಕ್ಕಂಟಿದ ಮತ್ತೆರಡು ಶಾಪಗಳು. ಧೂಮಪಾನದಲ್ಲಿ ಉಪಯೋಗಿಸುವ ಹೊಗೆಸೊಪ್ಪು ಮನುಷ್ಯನ ಶ್ವಾಸಕೋಶ, ಹೃದಯಬೇನೆ, ಕಣ್ಣು ಕುರುಡಾಗಿಸುವಿಕೆ, ರುಚಿ ಮತ್ತು ವಾಸನಾ ಶಕ್ತಿಯ ಕುಂಠನೆ ಮುಂತಾದ ಕಾಯಿಲೆಗಳಿಗೆ ಈಡುಮಾಡುತ್ತದೆ. ಹೀಗೆ ಸಾರ್ವಜನಿಕರ ಆರೋಗ್ಯಕ್ಕೆ ಕಂಟಕಪ್ರಾಯವಾದ ಧೂಮಪಾನವನ್ನು ತಡೆಗಟ್ಟಲು, ಅದರಲ್ಲೂ ಅಪ್ರಾಪ್ತ ವಯಸ್ಕ ಹುಡುಗರನ್ನು ಧೂಮಪಾನದಿಂದ ದೂರವಿಡಲು ನಾಲ್ವಡಿ ಕೃಷ್ಣರಾಜ ಒಡೆಯರು 1911 ಅಕ್ಟೋಬರ್ 9ರಂದು ‘ದಿ ಪ್ರಿವೆನ್ಷನ್ ಆಫ್ ಜುವೆನೈಲ್ ಸ್ಮೋಕಿಂಗ್ ಆಕ್ಟ್ ಎಂಬ ಕಾನೂನಿಗೆ ಸಹಿ ಮಾಡಿದರು. ಈ ಕಾನೂನು 6 ವರ್ಷಕ್ಕೆ ಕೆಳಗನ ಅಪ್ರಾಪ್ತ ವಯಸ್ಕರಿಗೆ ತಂದೆಯ ಅನುಮತಿ ಪತ್ರವಿಲ್ಲದೆ ಹೊಗೆಸೊಪ್ಪಿನ ಪದಾರ್ಥಗಳನ್ನು ಮಾರುವವರನ್ನು ಶಿಕ್ಷೆಗೆ ಗುರಿಮಾಡಿತು.


 ಮೈಸೂರು ಸಂಸ್ಥಾನವು 1894ರಲ್ಲೇ ಬಾಲ್ಯ ವಿವಾಹ ನಿಷೇಧ ಕಾನೂನನ್ನು ಜಾರಿಗೆ ತಂದು ಬಾಲ್ಯ ವಿವಾಹಗಳನ್ನು ನಿಷೇಧಿಸುವುದರ ಮೂಲಕ ಬಾಲವಿಧವೆಯರ ಸಂಖ್ಯೆಯನ್ನು ಕಡಿತಗೊಳಿಸಿತ್ತು. ಆದರೂ ವಿಧವೆಯರ ಸ್ಥಿತಿಯು ಹಿಂದೂ ಸಮಾಜದಲ್ಲಿ ತೀರಾ ಕೆಳಮಟ್ಟದಲ್ಲಿದ್ದು ಅವರು ಕಷ್ಟದಾಯಕವಾಧ ಜೀವನವನ್ನು ನಡೆಸುತ್ತಿದ್ದರು. ಬಾಲ್ಯ ವಿವಾಹದ ಹೆಚ್ಚಳ, ಸತಿ ಪದ್ದತಿಯ ಕಣ್ಮರೆ ಮತ್ತು ವಿಧವೆಯರ ಪುನರ್ವಿವಾಹಕ್ಕೆ ಇದ್ದ ಅಡಚಣೆಗಳು ವಿಧವೆಯರ ಸಂಖ್ಯೆಯನ್ನು ಮತ್ತು ಕಷ್ಟವನ್ನು ಅಧಿಕಗೊಳಿಸಿದ್ದವು.


ವಿಧವೆಯರನ್ನು ಆಭರಣ, ಉತ್ತಮ ವಸ್ತçಗಳನ್ನು ಧರಿಸದಂತೆ ನಿರ್ಬಂಧಿಸಿದ್ದು ದಿನಕ್ಕೊಮ್ಮೆ ಊಟ ನೀಡಲಾಗುತ್ತಿತ್ತು. ಅವರ ಇರುವಿಕೆಯನ್ನು ದುರ್ಲಕ್ಷಣವೆಂದು ಭಾವಿಸಿ ತಲೆಯ ಕೂದಲನ್ನು ಬೋಳೀಸುತ್ತಿದ್ದರು. ಹೀಗೆ ಹಿಂದೂ ಸಂಪ್ರದಾಯಸ್ಥರು ವಇಧವೆಯರನ್ನು ಹೀನ ಸ್ಥಿತಿಯಲ್ಲಿ ಉಳಿಸಿದ್ದನ್ನು ಗಮಿಸಿದ ಸಮಾಜ ಸುಧಾರಕರು ವಿಧವೆಯರ ಪುನರ್ವಿವಾಹಕ್ಕಿರುವ ಅಡೆತಡೆಗಳನ್ನು ಕಾನೂನಾತ್ಮಕವಾಗಿ ತೊಲಗಿಸಬೇಕೆಂಬ ಬೇಡಿಕೆ ಬಂದಿತು. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ ಸಕಾರವು ಹಿಂದೂ ಸಂಪ್ರದಾಯಸ್ಥರು ಮತ್ತು ಧಾರ್ಮಿಕ ಮಠಗಳು ವಿರೋಧಿಸಬಹುದೆಂಬ ಕಾರಣದಿಂದ ಸಾರ್ವಜನಿಕ ಒತ್ತಾಯ ಬರುವವರೆಗೆ ಅಂತಹ ಕಾನೂನನನ್ನು ಜಾರಿಗೆ ತರುವ ಅವಶ್ಯಕತೆಯಿಲ್ಲವೆಂದು ವಾದಿಸಿದರು. 1936ರಲ್ಲಿ ಪ್ರಜಾಪ್ರತಿನಿಧಿ ಸಭೆಯು ಹಿಂದೂ ವಿಧವೆಯರ ಪುನರ್ವಿವಾಹಕ್ಕೆ ಸಂಬಂಧಿಸಿದ ಮಸೂದೆಯನ್ನು ಬಹುಮತದಿಂದ ಬೆಂಬಲಿಸಿತು. ಸಾರ್ವಜನಿಕ ಬೇಡಿಕೆಯನ್ನು ಗಮನಿಸಿದ ನಾಲ್ವಡಿ ಕೃಷ್ಣರಾಜ ಒಡೆಯರು 1938ರ ಜುಲೈ 7 ರಂದು ‘ದಿ ಮೈಸೂರು ಹಿಂದೂ ವಿಡೋ ರಿ ಮ್ಯಾರೇಜ್ ಆಕ್ಟ್ ಎಂಬ ಕಾನೂನನ್ನ ಜಾರಿಗೆ ತಂದರು. ಈ ಕಾನೂನು ಹಿಂದೂ ವಿಧವೆಯರಿಗೆ ಪುನರ್ ವಿವಾಹಕ್ಕೆ ಇದ್ದ ಅಡಚಣೆಗಳನ್ನು ತೊಲಗಿಸಿ ಹಿಂದೂ ವಿಧವೆಯರ ಪುನರ್ ವಿವಾಹಗಳನ್ನು ಕಾನೂನಾತ್ಮಕ ಮದುವೆಗಳೆಂದು ಅಂಗೀಕರಿಸಿ ಅವರ ಎಲ್ಲಾ ಹಕ್ಕುಗಳನ್ನು ಸಂರಕ್ಷಿಸಿತು. ಈ ಕಾನೂನು ಜಾರಿಗೆ ಬಂದ ಮೇಲೆ ಹಿಂದೂ ಸಂಪ್ರದಾಯಸ್ಥರ ವಿರೋಧವು ಕುಗ್ಗಿತು. ವಿಧವಾ ವಿವಾಹ ಸಮಾರಂಭಗಳನ್ನು ಸಂಪ್ರದಾಯಸ್ಥ ಹಿಂದೂಗಳು ಮೌನವಾಗಿ ವೀಕ್ಷಿಸುವಂತೆ ಮಾಡಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಜಾರಿಗೆ ತಂದ ವಿಧವಾ ವಿವಾಹ ಕಾನೂನು ಮತ್ತು ಕನ್ಯೆಯರ ವಿವಾಹ ವಯಸ್ಸಿನ ಹೆಚ್ಚಳದ ಕ್ರಮದಿಂದ ವಿಧವೆಯರ ಸಂಖ್ಯೆ ಕಡಿಮೆಯಾಯಿತು. ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ವಿಧವೆಯ ಮತ್ತು ಹೆಣ್ಣು ಮಕ್ಕಳ ಪುನರುದ್ದಾರಕ್ಕೆ ಕಾನೂನು ಸಹಾಯಕವಾಯಿತು.


 ಹಿಂದೂ ಸಮಾಜದ ಈ ಸನಾತನ ಪದ್ದತಿಯನ್ನು ವಿರೋಧಿಸಿ ಮರು ಮದುವೆಯಾದ ವಿಧವೆಯರಿಗೆ ಸಹಾಯ ಮಾಡಲು ಸರ್ಕಾರವು ಮುಂದೆ ಬಂದಿತು. ವಿಧವೆಯರಿಗೆ ಶಿಕ್ಷಣ ವೇತನವನ್ನು ನೀಡಿ ಶೈಕ್ಷಣಿಕ ಬೆಳವಣಿಗೆಗೆ ಸಹಾಯಕವಾಗಲು ‘ದೇವರಾಜ ಬಹಾದ್ದೂರ್ ಫಂಡ್’ ಎಂಬುದನ್ನು ಸ್ಥಾಪಿಸಲಾಯಿತು. ಈ ಪಂಢ್ನ ಹಣದಿಂದ ವಿಧವೆಯರಿಗೆ ಸಹಾಯಕವಾಘಲು ‘ವಿಡೋ ಹೋಂಗಳನ್ನು ಸ್ಥಾಪಿಸಲಾಯಿತು. ನಂತರ ವಿಡೋ ಹೋಂಗಳನ್ನು ‘ಅಬಲಾಶ್ರಮ’ ಎಂದು ಕರೆಯಲಾಯಿತು.


 ಸಮಾಜವು ಸ್ತ್ರೀಯರನ್ನು ಶೋಷಿಸಲು ಮತ್ತು ಅಸಡ್ಡೆಗೀಡುಮಾಡಲು ಪ್ರಮುಖ ಕಾರಣವೆಂದರೆ ಆಕೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿಲ್ಲದ್ದಾಗಿತ್ತು. ಸಹಸ್ರಾರು ವರ್ಷಗಳ ಹಿಂದ ರಚನೆಯಾದ ಹಿಂದೂ ಕಾನೂನಿನಂತೆಯೇ ಆಧುನಿಕ ಸಮಾಜವು ಮುಂದುವರೆಯುತ್ತಿರುವುದನ್ನು ಕೆಲವು ಸಮಾಜ ಸುಧಾರಕರು ವಿರೋಧಿಸಿದರು. ಹಿಂದೂ ಕಾನೂನಿಗೆ ತಿದ್ದುಪಡಿ ತರಬೇಕೆಂಬ ಬೇಡಿಕೆ ಪ್ರಬಲವಾಯಿತು. ಮಹಾರಾಜರವರ ಅಂಕಿತದೊAದಿಗೆ 1933ರ ಜೂನ್ 29ರಂದು ಜಾರಿಗೆ ಬಂದ ‘ದಿ ಹಿಂದೂ ಲಾ ವುಮೆನ್ಸ್ ರೈಟ್ಸ್ ಆಕ್ಟ್’ ಹಿಂದೂ ಸ್ತ್ರೀ ಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕನ್ನು ನೀಡಿತು. ಹೀಗೆ ಕಾನೂನಾತ್ಮಕವಾಗಿ ಆಸ್ತಿಯ ಹಕ್ಕನ್ನು ನೀಡಿದ್ದರಿಂದ ಸಮಾಜದಲ್ಲಿ  ಸ್ತ್ರೀಯರ ಸ್ಥಾನಮಾನವು ಉತ್ತಮ ಸ್ಥಿತಿಗೇರಿತು.


 ಕೈಗಾರಿಕೀಕರಣದ ಪರಭಾವದಿಂದಾಗಿ ಹೆಚ್ಚು ಹೆಚ್ಚು ಕಾರ್ಖಾನೆಗಳು ಸ್ಥಾಪನೆಗೊಂಡವು. ಕಾರ್ಖಾನೆಗಳು ಹೆಚ್ಚಿದ ಹಾಗೆ ಕಾರ್ಮಿಕರ ಸಂಖ್ಯೆಯು ಬೆಳೆಯಿತು. ಕಾರ್ಖಾನೆಗಳ ಮಾಲಿಕರು ಕಡಿಮೆ ವೇಥನಕ್ಕೆ ಸ್ತಿçÃಯರನ್ನು ಕಾರ್ಮಿಕರಾಗಿ ನೇಮಿಸಿಕೊಳ್ಳಲಾರಂಭಿಸಿದ್ದರಿAದ ಸ್ತಿçà ಕಾರ್ಮಿಕರ ಸಂಖ್ಯೆ ಹೆಚ್ಚಳಗೊಂಡಿತು. ಬ್ರಿಟಿಷ್ ಭಾರತ ಸರ್ಕಾರಿ ಕಾರ್ಖಾನೆಗಳಲ್ಲಿ ಸ್ತಿçà ಕಾರ್ಮಿಕರ ಹೆರಿಗೆಗೆ ಅನುಕೂಲವಾಗಲು ಮೂರು ವಾರಗಳ ಪ್ರಸೂತಿ ರಜೆ ಮತ್ತು ಅವಶ್ಯವಿದ್ದಾಗ ಕಾಯಿಲೆಯ ರಜೆಯನ್ನು ನೀಡಲಾಗುತ್ತಿತ್ತು. ಮೈಸೂರು ರಾಜ್ಯದಲ್ಲೂ ಸರ್ಕಾರಿ ಕಾರ್ಖಾನೆಗಳಲ್ಲಿ ಇದೇ ಕಾನೂನು ಅನುಸರಿಸಲ್ಪಡುತ್ತಿತ್ತು. ಆದರೆ ಖಾಸಗಿ ಕಾರ್ಖಾನೆಗಳು ತಮ್ಮ ಸ್ತಿçà ಕಾರ್ಮಿಕರಿಗೆ ಹೆರಿಗೆ ರಜೆ ಅಥವಾ ಭತ್ಯೆಯನ್ನು ಒದಗಿಸುತ್ತಿರಲಿಲ್ಲ.


 1929ರ ಬೊಂಬಾಯಿ ಹೆರಿಗೆ ಭತ್ಯೆ ಕಾನೂನಿಗುಣವಾಗಿ ಮೈಸೂರಿನಲ್ಲೂ ಅಂತಹ ಕಾನೂನನ್ನು ಜಾರಿಗೆ ತರಬೇಕೆಂದು ಬೋರ್ಡ್ ಆಫ್ ಇಂಡಸ್ಟಿçÃಸ್ ಅಂಡ್ ಕಾಮರ್ಸ್ ಕೋರಿತು. ಮೈಸೂರಿನ ಸ್ತ್ರೀ ಕಾರ್ಮಿಕರ ಹೆರಿಗೆ ಭತ್ಯೆ ರಜೆಯ ಸ್ಥಿತಿಗತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಕೊನೆಗೆ 1937ರಲ್ಲಿ ‘ದಿ ಮೈಸೂರು ಮೆಟರ್ನಿಟಿ ಬೆನಿಫಿಟ್ ಆಕ್ಟ್’ ಅನ್ನು ಜಾರಿಗೆ ತರಲಾಯಿತು. ಈ ಕಾನೂನು ಕಾರ್ಖಾನೆಗಳಲ್ಲಿ ದುಡಿಯುವ ಸ್ತ್ರೀ ಕಾರ್ಮಿಕಳಿಗೆ ಎಂಟು ವಾರಗಳ ಹೆರಿಗೆ ಭತ್ಯೆ ಸೌಲಭ್ಯ ನೀಡಬೇಕೆಂದು ತಿಳಿಸಿತು. ಈ ಅವಧಿಯಲ್ಲಿ ಕಾರ್ಖಾನೆಯ ಮಾಲಿಕನು ಆ ಸ್ತ್ರೀ ಯನ್ನು ಕಾರ್ಖಾನೆಯಲ್ಲಿ ದುಡಿಸಿಕೊಳ್ಳುವಂತಿರಲಿಲ್ಲ. ಹೆರಿಗೆಯ ಸಂದರ್ಭದಲ್ಲಿ ಅವಳಿಗೆ ಆರ್ಥಿಕ ಸಹಾಯ ನೀಡಲು ನಿರ್ದಿಷ್ಟ ಮೊತ್ತದ ಹಣವನ್ನು ನೀಡಬೇಕೆಂದು ತಿಳಿಸಿತು. ಹೆರಿಗೆಯ ಸಂದರ್ಭದಲ್ಲಿ ಆಕಸ್ಮಾತ್ ಸ್ತ್ರೀಯು ನಿಧನಳಾದರೆ ಮಾಲಿಕನು ಅವಳು ನಿಧನವಾದ ದಿನಾಂಕದವರೆಗೂ ಆ ಸ್ತ್ರೀಯ ಮಗುವನ್ನು ಪಾಲಿಸುವ ಪಾಲಕನಿಗೆ ಹೆರಿಗೆ ಭತ್ಯೆ ಹಣವನ್ನು ನೀಡಬೇಕಿತ್ತು. ಹೆರಿಗೆ ಸಂದರ್ಭದ ಗೈರು ಹಾಜರಿಯ ಆಧಾರದ ಮೇಲೆ ಯಾವುದೇ ಮಾಲಿಕನು ಸ್ತ್ರೀ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುವಂತಿರಲಿಲ್ಲ.


 ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಔದ್ಯೋಗಿಕ ಸ್ತ್ರೀ ಕಾರ್ಮಿಕರಿಗೆ ಹೆರಿಗೆ ಭತ್ಯೆಯ ಬಗ್ಗೆ ಕಾನೂನನ್ನು ಜಾರಿಗೆ ತಂದುದಲ್ಲದೆ ಪ್ರಸೂತಿ ಮತ್ತು ಮಕ್ಕಳ ಕೇಂದ್ರಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಪ್ರಸೂತಿ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಬೆಂಗಳೂರಿನಲ್ಲಿ 1922ರಲ್ಲಿ ಬಾಲಕೇಂದ್ರವನ್ನು ಸ್ಥಾಪಿಸಿ ಬಡಮಕ್ಕಳಿಗೆ ಉಚಿತ ಹಾಲಿನ ಪೂರೈಕೆಯನ್ನು ಮಾಡಲಾಯಿತು.


 1924ರಲ್ಲಿ ಶ್ರೀ ಎಂ.ಕಾಂತರಾಜ ಅರಸ್‌ರವರು ನೀಡಿದ 1,20,000 ರೂ ಉದಾರ ದಾನದ ಹಣದಿಂದ ಗುಣಾಂಬ ಪ್ರಸೂತಿ ಮತ್ತು ಮಕ್ಕಳ ಕಲ್ಯಾಣ ಟ್ರಸ್ಟನ್ನು ಮೈಸೂರಿನಲ್ಲಿ ಸ್ಥಾಪಿಸಲಾಯಿತು. ಈ ಟ್ರಸ್ಟ್ ಸ್ಥಾಪನೆಯೊಂದಿಗೆ ಪ್ರಸೂತಿ ಮತ್ತು ಮಕ್ಕಳ ಕೇಂದ್ರದ ಚಟುವಟಿಕೆಗಳು ಪರಗತಿಪರವಾಗಿ ಮುಂದುವರೆದವು. ಈ ಟ್ರಸ್ಟ್ 9 ಕೇಂದ್ರಗಳನ್ನು ಸ್ಥಾಪಿಸಿತು. ಈ ಕೇಂದ್ರಗಳಲ್ಲಿ ವ್ಯವಸ್ಥಿತವಾದ ನರ್ಸರಿ ಶಾಲೆಗಳನ್ನು ಸ್ಥಾಪಿಸಲಾಗಿತ್ತು. ಹೆರಿಗೆಯ ಸಂದರ್ಭದಲ್ಲಿ ಸಾವಿಗೀಡಾಗುತ್ತಿದ್ದ ಸಾವಿರಾರು ಗರ್ಭಿಣಿಯರನ್ನು ಸಾವಿನ ದವಡೆಯಿಂದ ಪಾರು ಮಾಡಲು ರಾಜ್ಯದ ಪ್ರಮುಖ ಕೇಂದ್ರಗಳಲ್ಲೆಲ್ಲಾ ಪ್ರಸೂತಿ ಕೇಂದ್ರಗಳನ್ನು ಸ್ಥಾಪಿಸಲಾಯಿತು.