``ಮೆಟ್ರೋ, ವಾಣಿಜ್ಯ ಹಬ್, ಕೈಗಾರಿಕಾ ಹಬ್ ಸೇರಿಸಿ’’ ರಾಜ್ಯ ಬಜೆಟ್ಟಿಗೆ ಸಿಎಂಗೆ ಸಂಸದ ಜಿಎಸ್‌ಬಿ ಮನವಿ
``ಮೆಟ್ರೋ, ವಾಣಿಜ್ಯ ಹಬ್, ಕೈಗಾರಿಕಾ ಹಬ್ ಸೇರಿಸಿ’’ ರಾಜ್ಯ ಬಜೆಟ್ಟಿಗೆ ಸಿಎಂಗೆ ಸಂಸದ ಜಿಎಸ್‌ಬಿ ಮನವಿ
``ಮೆಟ್ರೋ, ವಾಣಿಜ್ಯ ಹಬ್, ಕೈಗಾರಿಕಾ ಹಬ್ ಸೇರಿಸಿ’’
ರಾಜ್ಯ ಬಜೆಟ್ಟಿಗೆ ಸಿಎಂಗೆ ಸಂಸದ ಜಿಎಸ್‌ಬಿ ಮನವಿ
ತುಮಕೂರು: 2022-23ನೇ ಸಾಲಿನ ಆಯವ್ಯಯದಲ್ಲಿ ಕಲ್ಪತರುನಾಡಿಗೆ ಸಂಬಂಧಿಸಿದಂತೆ ಮೆಟ್ರೋ ಯೋಜನೆ, ವಾಣಿಜ್ಯ ಹಬ್ ಮತ್ತು ಕೈಗಾರಿಕಾ ಹಬ್, ಅಂತಾರಾಷ್ಟಿçÃಯ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಸೇರ್ಪಡೆ ಮಾಡುವಂತೆ ಸಂಸದ ಜಿ.ಎಸ್. ಬಸವರಾಜು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ತುಮಕೂರು-ವಸAತನರಸಾಪುರದವರೆಗೂ ಮೆಟ್ರೋ ಯೋಜನೆ ಜಾರಿ, ವಸಂತನರಸಾಪುರದ ಇಂಡಸ್ಟಿçಯಲ್ ನೋಡ್ ಮತ್ತು ಉದ್ದೇಶಿತ ರಿಂಗ್ ರಸ್ತೆಯ ಮಧ್ಯದ ಪ್ರದೇಶಗಳೂ ಸೇರಿದಂತೆ ತ್ರಿವಳಿ ನಗರಗಳನ್ನು ಅಂತಾರಾಷ್ಟಿçÃಯ ಮಟ್ಟದ ವಾಣಿಜ್ಯ ಹಬ್ ಮತ್ತು ಕೈಗಾರಿಕಾ ಹಬ್ ಅಗಿ ಪರಿವರ್ತಿಸಬೇಕು. ವಸಂತನರಸಾಪುರ ಇಂಡಸ್ಟಿçಯಲ್ ನೋಡ್ ಬಳಿ ಅಂತಾರಾಷ್ಟಿçÃಯ ವಿಮಾನ ನಿಲ್ದಾಣ 2 ಸ್ಥಾಪನೆ ಸಂಬAಧ ಯೋಜನೆಗಳನ್ನು ಪ್ರಸ್ತುತ ಆಯವ್ಯಯದಲ್ಲಿ ಸೇರ್ಪಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಕೋಕೊನಟ್ ಸ್ಪೆಷಲ್ ಎಕನಾಮಿಕಲ್ ಝೋನ್ ಸ್ಥಾಪಿಸಬೇಕು. ಆಯವ್ಯಯದಲ್ಲಿ ಮಂಡಿಸಿ ನೆನೆಗುದಿಗೆ ಬಿದ್ದಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸಂಬAಧ ಯೋಜನೆ ಘೋಷಣೆಯಾಗಬೇಕು. ಕ್ರೀಡಾ ಯೂನಿವರ್ಸಿಟಿ ಸ್ಥಾಪಿಸಬೇಕು. ಸಿರಾ ತಾಲ್ಲೂಕಿನಲ್ಲಿ 811 ಎಕರೆ ಸರ್ಕಾರಿ ಜಮೀನು ಮೀಸಲಿರಿಸಿ ನೆನೆಗುದಿಗೆ ಬಿದ್ದಿರುವ ಕರ್ನಾಟಕ ಹೆರಿಟೇಜ್ ಹಬ್ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು.
ಗುಬ್ಬಿ ತಾಲ್ಲೂಕು ಹೆಚ್‌ಎಎಲ್ ಘಟಕಕ್ಕೆ ಅಗತ್ಯವಿರುವ ಹೆಚ್ಚುವರಿ ಜಮೀನು ನೀಡುವ ಸಂಬAಧವೂ ಬಜೆಟ್‌ನಲ್ಲಿ ಘೋಷಿಸಬೇಕು. ಜಿಲ್ಲೆಯನ್ನು ಊರಿಗೊಂದು ಕೆರೆ - ಆ ಕೆರೆಗೆ ನದಿ ನೀರು ಯೋಜನೆಯನ್ನು ಪೈಲಟ್ ಯೋಜನೆಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿ 40 ಎಕರೆ ಜಮೀನಿನಲ್ಲಿ ಕ್ರೀಡಾಗ್ರಾಮ ಸ್ಥಾಪಿಸಬೇಕು. ಹೇಮಾವತಿ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಮೈಕ್ರೋ ಇರಿಗೇಷನ್ ಪದ್ಧತಿ ಅಳವಡಿಸಿ, ಉಳಿಯುವ ನೀರನ್ನು ಆ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆಗೆ ಬಳಸಲು ಕೆರೆಗಳಿಗೆ ಅಲೋಕೇಷನ್ ಮಾಡುವ ಯೋಜನೆಯನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ತುಮಕೂರು ಜಿಲ್ಲೆಯನ್ನು ಡಿಜಿಟಲ್ ಡಾಟಾ ಡಿಸ್ಟಿçಕ್ಟ್ ಜಿಲ್ಲೆಯಾಗಿ ಘೋಷಣೆ ಮಾಡಬೇಕು. ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೇ ಮಂಜೂರು ಮಾಡಬೇಕು. ಸ್ಮಾರ್ಟ್ಸಿಟಿ ನಿರ್ಮಾಣ ಮಾಡಿರುವ ಇಂಟಿಗ್ರೇಟೆಡ್ ಕಮ್ಯಾಂಡ್ ಕಂಟ್ರೋಲ್ ಸೆಂಟರ್‌ನ್ನು ತುಮಕೂರು ಜಿಲ್ಲೆ ಡಾಟಾ ಬ್ಯಾಂಕ್ ಆಗಿ ಪರಿವರ್ತಿಸಬೇಕು ಎಂದರು.
ಗುಬ್ಬಿಯಲ್ಲಿ ಕೆಎಸ್ಸಾರ್ಟಿಸಿ ಡಿಪೋ ಸ್ಥಾಪಿಸಬೇಕು. ಜಿಲ್ಲೆಯಲ್ಲಿ ವಾಟರ್ ಬ್ಯಾಂಕ್ ಡ್ಯಾಂ ನಿರ್ಮಾಣ ಮಾಡಲು ಸಮೀಕ್ಷೆ ನಡೆಸಬೇಕು. ಕೊರಟಗೆರೆಗೆ ಒಳಚರಂಡಿ ಯೋಜನೆ ಜಾರಿಗೊಳಿಸಬೇಕು. ತುಮಕೂರು ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸ್‌ಗೆ ಅನುದಾನ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಕೃಷಿ ಕಾಲೇಜು ಸ್ಥಾಪಿಸಬೇಕು. ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಬೇಕು. ಜಿ.ಪಂ. ಹಳೆ ಕಟ್ಟಡಗಳನ್ನು ತೆಗೆದು ಹೊಸ ಕಟ್ಟಡಗಳನ್ನು ತೆಗೆದು ಹೊಸ ಕಟ್ಟಡದ ಕಾಂಪ್ಲೆಕ್ಸ್ ನಿರ್ಮಾಣ ಮಾಡಬೇಕು. ಸ್ತಿçÃಶಕ್ತಿ ಸಂಘಗಳ ಉತ್ಪನ್ನಗಳ ಮಾರಾಟ ಮಳಿಗೆ ನಿರ್ಮಾಣ ಹಾಗೂ ಮಧುಗಿರಿ-ಸಿರಾ-ಕೊರಟಗೆರೆ ತಾಲ್ಲೂಕುಗಳ ಸಂಗಮದಲ್ಲಿ ಮೆಘಾ ಟೆಕ್ಸ್ಟೈಲ್ಸ್ ಪಾರ್ಕ್ ನಿರ್ಮಾಣ ಮಾಡುವುದು ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಸಂಸದ ಬಸವರಾಜು ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮಧುಗಿರಿ, ತಿಪಟೂರು ಜಿಲ್ಲಾ ಕೇಂದ್ರಕ್ಕೆ ಮನವಿ
ಉಪವಿಭಾಗಗಳಾದ ತಿಪಟೂರು ಮತ್ತು ಮಧುಗಿರಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವ ಸಂಬಂಧವೂ ಬಜೆಟ್‌ನಲ್ಲಿ ಸೇರ್ಪಡೆ ಮಾಡುವ ಜತೆಗೆ ಇದಕ್ಕೆ ಸಂಬಂಧಿಸಿದಂತೆ ಅಕ್ಕಪಕ್ಕದ ತಾಲ್ಲೂಕುಗಳನ್ನು ಸೇರ್ಪಡೆ ಮಾಡುವಂತೆಯೂ ಮನವಿ ಮಾಡಲಾಗಿದೆ ಎಂದರು.