ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ, ಚುನಾವಣೆ ಎನೆ ಕಿವಿ ನಿಮಿರುವುದು !’

ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ,   ಚುನಾವಣೆ ಎನೆ ಕಿವಿ ನಿಮಿರುವುದು !’
ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ,   ಚುನಾವಣೆ ಎನೆ ಕಿವಿ ನಿಮಿರುವುದು !’
ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ,   ಚುನಾವಣೆ ಎನೆ ಕಿವಿ ನಿಮಿರುವುದು !’
ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ,   ಚುನಾವಣೆ ಎನೆ ಕಿವಿ ನಿಮಿರುವುದು !’
ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ,   ಚುನಾವಣೆ ಎನೆ ಕಿವಿ ನಿಮಿರುವುದು !’
ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ,   ಚುನಾವಣೆ ಎನೆ ಕಿವಿ ನಿಮಿರುವುದು !’
ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ,   ಚುನಾವಣೆ ಎನೆ ಕಿವಿ ನಿಮಿರುವುದು !’

‘ ಕನ್ನಡ ಸಾಹಿತ್ಯ ಪರಿಷತ್ ಎನೆ ಕುಣಿದಾಡುವುದೆನ್ನೆದೆ,

ಚುನಾವಣೆ ಎನೆ ಕಿವಿ ನಿಮಿರುವುದು !’

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ

ಕೋವಿಡ್ ನೆಪದಲ್ಲಿ ಮುಂದೂಡುತ್ತ ಬಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿಗೆ ಚುನಾವಣೆ ಬಂದೇ ಬಿಟ್ಟಿದೆ. ನವೆಂಬರ್ 21ರ ಭಾನುವಾರ ಮತದಾನ ಅಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಓಟು ಹಾಕಬೇಕಾದ ದಿನ. ಆಯಾ ಜಿಲ್ಲೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗಿ ಮೂರು ವರ್ಷ ಪೂರೈಸಿರುವವರು ಓಟು ಮಾಡಲು ಅರ್ಹರು. ಬಿಳಿ ಮತ ಚೀಟಿ ರಾಜ್ಯ ಅಧ್ಯಕ್ಷರ ಪದವಿಗೆ, ಗುಲಾಬಿ ಮತ ಚೀಟಿ ಜಿಲ್ಲಾ ಅಧ್ಯಕ್ಷರನ್ನು ಆಯ್ಕೆ ಮಾಡಲು ಅಂತ ನಿಗದಿ ಮಾಡಲಾಗಿದೆ. 
ತುಮಕೂರು ಜಿಲ್ಲೆಯ ಅಧ್ಯಕ್ಷರಾಗಲು 1)ಮೇಜರ್ ಡಿ.ಚಂದ್ರಪ್ಪ, 2) ಸಾ.ಶಿ.ದೇವರಾಜ್, 3) ಪುಟ್ಟಕಾಮಯ್ಯ, 4) ಮಹದೇವಪ್ಪ, 5) ಬಿ.ಸಿ.ಶೈಲಾ ನಾಗರಾಜ್ ಹಾಗೂ 6) ಕೆ.ಎಸ್.ಸಿದ್ದಲಿಂಗಯ್ಯ ಈ ಆರು ಮಂದಿ ಮಾತ್ರ ಕಣದಲ್ಲಿದ್ದಾರೆ. ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾಗಲು 21 ಮಂದಿಯ ದೊಡ್ಡ ಸಾಲೇ ಇದೆ. ಕಳೆದ ಮೇ 9ರಂದೇ ಚುನಾವಣೆ ನಿಗದಿಯಾಗಿದ್ದು, ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದು ಅಂತಿಮವಾಗಿ ಕಣದಲ್ಲಿ ಉಳಿದಿದ್ದವರೇ ಈ ಅಭ್ಯರ್ಥಿಗಳು. ಹಾಗಾಗಿ ಏಪ್ರಿಲ್ ಮೇ ತಿಂಗಳಲ್ಲಿ ಸ್ಥಗಿತಗೊಳಿಸಿದ್ದ ಅಥವಾ ನಿಧಾನಗೊಳಿಸಿದ್ದ ಪ್ರಚಾರ ಕಾರ್ಯವನ್ನು ಈಗ ಎಲ್ಲರೂ ಮತ್ತಷ್ಟು ಚುರುಕುಗೊಳಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚಿನ ಮತದಾರರು ಇದ್ದರೂ, ಅವರಲ್ಲಿ ಶೇ. 10ರಷ್ಟು ಸದಸ್ಯರು ಈಗ ಜೀವಂತವಾಗಿಲ್ಲ, ಇದರಲ್ಲಿ ಕೋವಿಡ್-2019ರ ಕೊಡುಗೆಯೂ ಇದೆ. ಜೊತೆಗೆ ಊರು ಬಿಟ್ಟವರನ್ನೂ ಗಣಿಸಿದರೆ ಸುಮಾರು 11ಸಾವಿರ ಚಿಲ್ಲರೆ ಸದಸ್ಯರು ಓಟು ಮಾಡಬಹುದಾಗಿದೆ. ಜೊತೆಗೆ ಯಾವ ಚುನಾವಣಾ ಪ್ರಕ್ರಿಯೆಯಲ್ಲೂ ನೂರಕ್ಕೆ ನೂರು ಎಲ್ಲರೂ ಮತ ಚಲಾಯಿಸುವುದಿಲ್ಲ ಎಂಬ ಲೆಕ್ಕದಲ್ಲಿ ಎಂಟು ಸಾವಿರ ಸಕ್ರಿಯ ಸದಸ್ಯರು ಮತ ಚಲಾವಣೆ ಮಾಡಿ ಅವರಿಗೆ ಬೇಕಾದವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಚುನಾಯಿಸುವುದು ಒಂಥರಾ ಅಮೆರಿಕೆಯ ಅಧ್ಯಕ್ಷರನ್ನು ಚುನಾಯಿಸಿದಂತೆ, ಸದಸ್ಯರು ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷರನ್ನು ನೇರವಾಗಿ ಚುನಾಯಿಸಿದರೆ ಸಾಕು, ಹಾಗೆ ಚುನಾಯಿತರಾಗುವ ಅಧ್ಯಕ್ಷರು ಇಡೀ ಜಿಲ್ಲೆಯ ಎಲ್ಲ ತಾಲೂಕು ಅಧ್ಯಕ್ಷರನ್ನು ಹಾಗೂ ಉಳಿದೆಲ್ಲ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಅಪೂರ್ವ ಪರಮಾಧಿಕಾರ ಹೊಂದಿದ್ದಾರೆ. ಹೀಗಾಗಿ ಎಲ್ಲರೂ ಅಧ್ಯಕ್ಷರ ಸುತ್ತ ಪರಿಭ್ರಮಿಸತೊಡಗುತ್ತಾರೆ.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಐವತ್ತು ಅರವತ್ತು ಸದಸ್ಯರನ್ನು ಮಾತ್ರವೇ ಹೊಂದಿದ್ದ ಕಾಲವೂ ಇತ್ತು. 18 ವರ್ಷ ಪೂರೈಸಿದ, ಯಾವುದೇ ಕನ್ನಡಿಗರು ಸದಸ್ಯರಾಗಲು ಅವಕಾಶವಿರುವ ಕಾರಣದಿಂದಾಗಿ ಆಯಾ ಅವಧಿಯ ಅಧ್ಯಕ್ಷರು ಮಠಾಧೀಶರು ಹಾಗೂ ಮಂಡಿ ವರ್ತಕರಿಗೂ ಸದಸ್ಯತ್ವ ಕೊಟ್ಟಿದ್ದು ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿದ್ದ ಹಳಬರಿಗೆ ನೆನಪಿರಬಹುದು. ಈಗಲೂ ಅವರೆಲ್ಲ ಸದಸ್ಯರಾಗಿ ಉಳಿದಿರಬಹುದಾದರೂ ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರ ಸದಸ್ಯರ ಸಂಖ್ಯೆಯೂ ಈಗ ಸಾಕಷ್ಟಿದೆ.
ಕಳೆದ ತಿಂಗಳು ಆಡಳಿತಾಧಿಕಾರಿ ನೇಮಕಗೊಳ್ಳುವವರೆಗೂ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದವರು ಬಾ.ಹ.ರಮಾಕುಮಾರಿ, ಅವರ ಆಪ್ತ ವಲಯದಲ್ಲಿದ್ದ ಬಿ.ಸಿ.ಶೈಲಾ ನಾಗರಾಜ್ ಇದೇ ಅವಧಿಯಲ್ಲಿ ತುಮಕೂರು ಗ್ರಾಮಾಂತರ ತಾಲೂಕು ಅಧ್ಯಕ್ಷರಾಗಿದ್ದವರು. ಅವರು ಮುಂದಿನ ಅಧ್ಯಕ್ಷರಾಗ ಬಯಸಿ ಕಣದಲ್ಲಿದ್ದಾರೆ. 
ರಾಜ್ಯ ಸರ್ಕಾರಿ ವಿಮಾ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಅವರು ಸ್ವಯ ನಿವೃತ್ತಿ ಪಡೆದಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದಲ್ಲಿ ಇದೇ ಬಾ.ಹ.ರಮಾಕುಮಾರಿ ಹಾಗೂ ಶೈಲಾ ನಾಗರಾಜ್ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದವರು. ಹಾಗಾಗಿ ನಿಕಟ ಪೂರ್ವ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ಸೇರಿದಂತೆ ಈವರೆಗೆ ಅಸ್ತಿತ್ವದಲ್ಲಿದ್ದ ಪದಾಧಿಕಾರಿಗಳಲ್ಲಿ ಬಹುಪಾಲು ಮಂದಿ ಶೈಲಾ ನಾಗರಾಜ್ ಪರ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರಚಾರದಲ್ಲಿ ತೊಡಗಿದ್ದಾರೆ.
ಮತ್ತೊಬ್ಬ ಅಭ್ಯರ್ಥಿ ಕೆ.ಎಸ್.ಸಿದ್ಧಲಿಂಗಪ್ಪ ಕನ್ನಡ ಉಪನ್ಯಾಸಕರಾಗಿದ್ದವರು, ವಯೋ ನಿವೃತ್ತಿ ಹೊಂದುವ ಸಮಯದಲ್ಲಿ ಪದವಿಪೂರ್ವ ಉಪನಿರ್ದೇಶಕರೂ ಆಗಿದ್ದವರು. ಸಾಕ್ಷರತಾ ಆಂದೋಲನದ ಕಾರ್ಯದರ್ಶಿಯಾಗಿ, ಗುಬ್ಬಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದವರು, ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದವರು. ಕೆಎಸ್‌ಎಸ್ ಎಂದು ಶಿಕ್ಷಕ ವಲಯದಲ್ಲಿ ಪರಿಚಿತರಾದ ಕೆ.ಎಸ್. ಸಿದ್ದಲಿಂಗಪ್ಪನವರೂ ಅಧ್ಯಕ್ಷರಾಗುವ ಹಂಬಲದಲ್ಲಿ ಬೆಂಬಲಿಗ ಸದಸ್ಯರೊಂದಿಗೆ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಂಚರಿಸುತ್ತ ಓಟು ಕೇಳುತ್ತ ಪ್ರಚಾರ ಮಾಡುತ್ತಿದ್ದಾರೆ. 
ಪರಿಷತ್ ಸದಸ್ಯರಲ್ಲಿ ಇವರಿಬ್ಬರಿಗಿಂತಲೂ ಹೆಚ್ಚು ಪರಿಚಿತರಾಗಿರುವ ಮೇಜರ್ ಡಿ.ಚಂದ್ರಪ್ಪನವರೂ ಸಹ ನಿವೃತ್ತ ಅಧ್ಯಾಪಕರು, ಅಲ್ಲದೇ ಈಗಾಗಲೇ ಒಂದು ಅವಧಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದವರು. ಮತ್ತು ಇನ್ನೂ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿರುವವರು. ಈ ಸಲವೂ ಚಂದ್ರಪ್ಪನವರು ಕಣಕ್ಕಿಳಿದಿದ್ದಾರೆ.
ಶಿರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ನೀರಾವರಿ ಹಾಗೂ ರೈಲ್ವೆ ಹೋರಾಟಗಾರರು ಗಾಂಧಿ ವಿಚಾರ ಧಾರೆಯ ಸರ್ವೋದಯ ಮಂಡಲದ ಕಾರ್ಯದರ್ಶಿಯೂ ಆಗಿರುವ ನಿವೃತ್ತ ಶಿಕ್ಷಕ ಪುಟ್ಟಕಾಮಯ್ಯನವರೂ ಅಧ್ಯಕ್ಷರಾಗ ಬಯಸಿ ಪ್ರಚಾರದಲ್ಲಿ ತೊಡಗಿದ್ದಾರೆ. ತುರುವೇಕೆರೆ ತಾಲೂಕಿನ ಸಾ.ಶಿ.ದೇವರಾಜ್ ಹಾಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗ ಬಯಸಿ ದೊಡ್ಡ ಮಟ್ಟದ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ನಗರದ ಕನ್ನಡ ಭವನದ ಪಕ್ಕದಲ್ಲೇ ವಾಸವಿರುವ ಮಹದೇವಪ್ಪನವರ ಕುರಿತೂ ಹೇಳಬೇಕು. ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಮಹದೇವಪ್ಪನವರು ಲೇಖಕರೂ ಹೌದು. ಆದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಲೇಖಕರು ಅಥವಾ ಸಾಹಿತಿಗಳಿಗಿಂತ ಸಂಘಟಕರು ಮತ್ತು ಸಾಹಿತ್ಯ ಪರಿಚಾರಕರ ಅಗತ್ಯ ಹೆಚ್ಚು ಎನ್ನುವ ಮಾತೂ ಇದೆ. ಹೊಟೆಲ್ ಮಾಲಿಕರೂ ಒಮ್ಮೆ ರಾಜ್ಯ ಅಧ್ಯಕ್ಷರಾಗಿದ್ದರು ಎಂದ ಮೇಲೆ, 18 ವರ್ಷ ತುಂಬಿದ ಯಾರಾದರೂ ಸದಸ್ಯರಾಗಬಹುದು ಎಂದಾದ ಮೇಲೆ ಅಧ್ಯಕ್ಷರಾಗುವವರು ಇಂಥಿAಥ ಸಾಹಿತ್ಯ ಮತ್ತು ಸಾಹಿತ್ಯೇತರ ಅರ್ಹತೆಗಳನ್ನು ಹೊಂದಿರಬೇಕೆನ್ನುವುದು ಕಡ್ಡಾಯವಲ್ಲವಲ್ಲ. ಒಟ್ಟಾರೆ ಚಲಾವಣೆಯಾದ ಮತಗಳಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಹೆಚ್ಚಿನ ಮತಗಳನ್ನು ಪಡೆಯಬೇಕಷ್ಟೇ.
ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಇದಿಷ್ಟೇ ಸರಳವಾಗಿರುತ್ತದೆ ಅಥವಾ ಸರಳವಾಗಿದೆ ಎಂದು ತಿಳಿಯಬೇಡಿ. ಈ ನೆಲದ ಇತರ ಎಲ್ಲ ರಂಗಗಳ ಚುನಾವಣೆಗಳಂತೆಯೇ ಅಭ್ಯರ್ಥಿಗಳ ಹಿನ್ನೆಲೆ, ಜಾತಿ, ಉಪಜಾತಿ, ಪ್ರದೇಶ ಇತ್ಯಾದಿಗಳೆಂಬ ವೈರಸ್ ಸೋಂಕನ್ನು ತಗುಲಿಸಿಕೊಂಡೇ ಇರುವುದರಿಂದ, ಅವೆಲ್ಲ ಅಂಶಗಳೂ ಕೆಲಸ ಮಾಡುತ್ತವೆ. 
ಯಾವ ಅಭ್ಯರ್ಥಿ ಮುಂಚೂಣಿಯಲ್ಲಿದ್ದಾರೆ, ಯಾರು ಗೆಲ್ಲುತ್ತಾರೆ ಎಂಬುದನ್ನೆಲ್ಲ ಇನ್ನೊಂದೆರಡು ವಾರಗಳಾದ ಮೇಲೆ ಹೇಳಬಹುದೇನೋ. ಸದ್ಯಕ್ಕೆ ನೀವು ಮುಂಜಾನೆ ವಾಕಿಂಗ್ ಮುಗಿಸಿ ಬರುವಾಗಲೋ, ಕಚೇರಿಯಲ್ಲಿದ್ದಾಗಲೋ ಅಥವಾ ಇನ್ನೆಲ್ಲೋ ನಿಮ್ಮೆದುರಿಗೆ ಬಂದು ನಿಂತವರು , 
“ ಸಾರ್, ನೀವು ಕನ್ನಡ ಸಾಹಿತ್ಯ ಪರಿಷತ್ ಮೆಂರ‍್ರಾ?”
ಅಂತ ಕೇಳಿದರೆ ಏನೂ ಬೇಸರ ಮಾಡಿಕೊಳ್ಳದೆ ಹೌದಾದರೆ ಹೌದೆನ್ನಿ, ಇಲ್ಲವಾದರೆ ಇಲ್ಲವೆನ್ನಿ, ಸದಸ್ಯರೇನಾದರೂ ಆಗಿದ್ದರೆ, ನವೆಂಬರ್ 21ರ ಭಾನುವಾರ ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಓಟು ಮಾಡಿ, ಸಾಕು.