ತುರುವೇಕೆರೆ: ಎರಡು ದಶಕಗಳ ನಂತರ ತುಂಬಿದ ಕೆರೆಗಳು ಬೆಳ್ಳಿ ರಥದಲ್ಲಿ ಶಾಸಕ ಮಸಾಲಾ ಜಯರಾಂ ಮೆರವಣಿಗೆ

Masala Jayram

ತುರುವೇಕೆರೆ: ಎರಡು ದಶಕಗಳ ನಂತರ ತುಂಬಿದ ಕೆರೆಗಳು ಬೆಳ್ಳಿ ರಥದಲ್ಲಿ ಶಾಸಕ ಮಸಾಲಾ ಜಯರಾಂ ಮೆರವಣಿಗೆ
ತುರುವೇಕೆರೆ: ಎರಡು ದಶಕಗಳ ನಂತರ ತುಂಬಿದ ಕೆರೆಗಳು ಬೆಳ್ಳಿ ರಥದಲ್ಲಿ ಶಾಸಕ ಮಸಾಲಾ ಜಯರಾಂ ಮೆರವಣಿಗೆ

ತುರುವೇಕೆರೆ: ಎರಡು ದಶಕಗಳ ನಂತರ ತುಂಬಿದ ಕೆರೆಗಳು

ಬೆಳ್ಳಿ ರಥದಲ್ಲಿ ಶಾಸಕ ಮಸಾಲಾ ಜಯರಾಂ ಮೆರವಣಿಗೆ


ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಹತ್ತಾರು ಗ್ರಾಮಗಳ ಜನರಿಗೆ ಸಂಭ್ರಮದ ದಿನ. ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ನೀರನ್ನೇ ಕಾಣದಿದ್ದ ಕೆರೆ ಈಗ ತುಂಬಿ ಕೋಡಿ ಬಿದ್ದ ಸಡಗರ ಅವರಲ್ಲಿ ಮನೆ ಮಾಡಿತ್ತು. ಕೆರೆ ತುಂಬಿ ಕೋಡಿ ಹರಿಯಲು ಕಾರಣಕರ್ತರಾದ ಶಾಸಕ ಮಸಾಲಾ ಜಯರಾಮ್ ಅವರನ್ನು ಬೆಳ್ಳಿ ರಥದಲ್ಲಿ ಕೂರಿಸಿ, ಮೈಸೂರು ಪೇಟೆ ತೊಡಿಸಿ, ಮಂಗಳವಾದ್ಯ, ಸುಮಂಗಲಿಯರಿAದ ಪೂರ್ಣಕುಂಭ ಸ್ವಾಗತ ನೀಡುವ ಮೂಲಕ ತಮ್ಮ ಮನಸ್ಸಿನ ಸಂತಸವನ್ನು ಬಹಳ ಸಡಗರದಿಂದ ವ್ಯಕ್ತಪಡಿಸಿದರು. 
ತಾಲೂಕಿನ ಶೆಟ್ಟಿಗೊಂಡನಹಳ್ಳಿ, ಯರದೇಹಳ್ಳಿ, ಗೈನಾತಪುರ, ಪಾನಿಪಾಳ್ಯ, ಲೆಂಕನಹಳ್ಳಿ, ಮಲ್ಲೂರು, ಸೀಗೇಹಳ್ಳಿ, ದೊಡ್ಡೇರಿ, ನಾಗೇಗೌಡನ ಪಾಳ್ಯ, ಅರಳಕೆರೆ, ಮರಳಕುಪ್ಪೆ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಯರದೇಹಳ್ಳಿ ಗ್ರಾಮದ ಕೆರೆ ಕೋಡಿ ಆಗುವುದನ್ನು ಕಂಡು ಸಂತಸಪಟ್ಟರು. ತಮ್ಮ ಕೆರೆ ತುಂಬಿ ಹರಿಯಲು ಕಾರಣಕರ್ತರಾದ ಶಾಸಕ ಮಸಾಲಾ ಜಯರಾಮ್ ಅವರನ್ನು ಗ್ರಾಮಕ್ಕೆ ಕರೆಸಿ, ಅಶ್ವಾರೂಢ ಬೆಳ್ಳಿರಥದಲ್ಲಿ ಕುಳ್ಳರಿಸಿ ಗ್ರಾಮದ ತುಂಬೆಲ್ಲಾ ಭವ್ಯ ಮೆರವಣಿಗೆ ಮಾಡಿದರು. ಕೆರೆಯವರೆಗೂ ಹೆಗಲ ಮೇಲೆ ಹೊತ್ತು ಜಯಕಾರ ಹಾಕಿ ತಮ್ಮ ಅಭಿಮಾನ ತೋರಿದರು. ಕೆರೆಗೆ ಸುಮಂಗಲಿಯರು ಮತ್ತು ಶಾಸಕರಿಂದ ಕೆರೆಗೆ ಬಾಗಿನ ಅರ್ಪಿಸಿ ಸಂಭ್ರಮಿಸಿದರು. 
ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಹನಿ ನೀರೂ ಕಾಣದ ಯರದೇಹಳ್ಳಿ ಕೆರೆ ಇಂದು ತುಂಬಿ ಹರಿಯಲು ಶಾಸಕ ಮಸಾಲಾ ಜಯರಾಮ್‌ರವರ ಕೊಡುಗೆ ಅಪಾರ. ಅವರಿಗೆ ನಾವೆಷ್ಟೇ ಅಭಿಮಾನದ ಮಾತುಗಳನ್ನು ಆಡಿದರೂ ಕಡಿಮೆಯೇ. ಬತ್ತಿ ಹೋಗಿದ್ದ ನಮ್ಮ ಜಮೀನಿನಲ್ಲಿದ್ದ ಬೋರ್‌ವೆಲ್‌ಗಳಿಗೆ ಜೀವ ಬಂದಿವೆ. ಮೂರಾಬಟ್ಟೆಯಾಗಬೇಕಿದ್ದ ಬದುಕು ಹಸನಾಗಿದೆ. ಸಾವಿರಾರು ರೈತರ ಬಾಳು ಬೆಳಕಾಗಿದೆ ಎಂದು ನಾಗೇಗೌಡನ ಪಾಳ್ಯದ ಮಂಜುನಾಥ್ ಮತ್ತು ಯರದೇಹಳ್ಳಿಯ ಶಿವಲಿಂಗೇಗೌಡ ಅಭಿಮಾನದ ಮಾತುಗಳನ್ನು ಆಡಿದರು. 
ತಮ್ಮನ್ನು ಬಹಳ ಅಭಿಮಾನದಿಂದ ಕಂಡ ಗ್ರಾಮಸ್ಥರನ್ನು ಕುರಿತು ಮಾತನಾಡಿದ ಶಾಸಕ ಮಸಾಲಾ ಜಯರಾಮ್, ತಾವು ನನಗೆ ನೀಡಿದ ಶಾಸಕ ಜವಾಬ್ದಾರಿಯನ್ನು ಬಹಳ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ನಿಮ್ಮ ಋಣ ನನ್ನ ಮೇಲಿದೆ. ಇದು ನನ್ನ ಜವಾಬ್ದಾರಿ. ಸೇವೆ ಮಾಡಲೆಂದೇ ನಾನು ಶಾಸಕನಾಗಿದ್ದೇನೆ. ಗ್ರಾಮ ಪಂಚಾಯ್ತಿಯ ಸದಸ್ಯನಾಗಿ, ಪಂಚಾಯ್ತಿಯ ಅಧ್ಯಕ್ಷನಾಗಿ, ನಿಮ್ಮಗಳ ಆಶೀರ್ವಾದಿಂದ ಶಾಸಕನಾಗಿದ್ದೇನೆ. ನಿಮ್ಮ ಮನೆಯ ಮಗನಾಗಿ ನೀವಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವೆ ಎಂದು ಭಾವುಕರಾದರು.
ಅಭಿವೃದ್ಧಿ ಎಂಬುದು ಈ ಭಾಗದಲ್ಲಿ ಮರೀಚಿಕೆಯಾಗಿತ್ತು. ನಿರ್ಲಕ್ಷö್ಯಕ್ಕೆ ಒಳಗಾಗಿದ್ದ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಾಮಗಳಿಗೆ ಅಗತ್ಯವಿರುವ ನೀರು, ರಸ್ತೆ, ಚರಂಡಿ, ವಿದ್ಯುತ್‌ನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ತಾವು ಯಾವುದೇ ಪಕ್ಷ ಭೇದ ಮಾಡದೇ ಎಲ್ಲರೂ ನಮ್ಮವರೇ ಎಂಬ ರೀತಿ ಎಲ್ಲರನ್ನೂ ಪ್ರೀತಿಯಿಂದ ಕಾಣುವೆ ಎಂದರು.
90 ರಷ್ಟು ಭರ್ತಿ: ಕ್ಷೇತ್ರದಲ್ಲಿರುವ ಸುಮಾರು 90 ರಷ್ಟು ಕೆರೆಗಳು ಸಂಪೂರ್ಣತುAಬಿವೆ. ಡಿಸೆಂಬರ್ ಅಂತ್ಯದೊಳಗೆ ಉಳಿದ ಕೆರೆಗಳನ್ನು ಪೂರ್ತಿ ತುಂಬಿಸುವ ಭರವಸೆಯನ್ನು ಶಾಸಕ ಮಸಾಲಾ ಜಯರಾಮ್ ನೀಡಿದರು. ಜಿಲ್ಲೆಯಲ್ಲಿ ಹೇಮಾವತಿ ನೀರು ಸಮೃದ್ಧವಾಗಿ ಹರಿಯಲು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿಯವರ ದಕ್ಷ ಆಡಳಿತವೇ ಕಾರಣ. ಶೀಘ್ರದಲ್ಲೇ ಬಗರ್ ಹುಕುಂ ಯೋಜನೆಯಡಿ ವಿತರಣೆ ಮಾಡಬೇಕಾಗಿರುವ ಜಮೀನುಗಳನ್ನು ರೈತಾಪಿಗಳಿಗೆ ವಿತರಿಸುವುದಾಗಿ ಹೇಳಿದ ಶಾಸಕರು ಯಾರು ಪ್ರಾಮಾಣಿಕರು, ಬಡವರು, ನಿಜವಾದ ಫಲಾನುಭವಿಗಳು ಇರುವರೋ ಅವರಿಗೆ ಮಂಜೂರು ಚೀಟಿ ನೀಡುವುದಾಗಿ ಶಾಸಕರು ಹೇಳಿದರು.
ಮುಂಬರುವ ದಿನಗಳಲ್ಲಿ ಹೇಮಾವತಿ ನಾಲಾ ಕಾಲುವೆ ಆಧುನೀಕರಣಗೊಳ್ಳಲಿದೆ. ಹಾಗಾಗಿ ಸುಮಾರು 2800 ಕ್ಯೂಸೆಕ್ಸ್ ನೀರು ನಾಲೆಯಲ್ಲಿ ಹರಿಯುವುದರಿಂದ ಎಲ್ಲಾ ಕೆರೆ ಕಟ್ಟೆಗಳು ಕೆಲವೇ ದಿನಗಳಲ್ಲಿ ತುಂಬಲಿದೆ. ಜಲಜೀವನ್ ಯೋಜನೆಯಡಿ 10 ಪಂಚಾಯ್ತಿಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಯಾಗಲಿದೆ. ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯನ್ನು ಅಮೃತ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಇದರಿಂದ ಇಡೀ ಗ್ರಾಮ ಪಂಚಾಯ್ತಿಯಲ್ಲಿರುವ ಎಲ್ಲಾ ಹಳ್ಳಿಗಳು ಸಂಪೂರ್ಣ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆಂಪೇಗೌಡ, ಸದಸ್ಯರಾದ ನರಸಿಂಹಮೂರ್ತಿ, ಶಶಿಧರ್, ಶಿವಲಿಂಗೇಗೌಡ, ದೊಡ್ಡೇರಿ ರಾಜಣ್ಣ, ನಾಗೇಗೌಡನ ಪಾಳ್ಯದ ಮಂಜುನಾಥ್, ವಿ.ಬಿ. ಸುರೇಶ್, ಸೋಮಶೇಖರ್, ಮದುವೆ ಮನೆ ಕುಮಾರ್, ಇಂಜಿನಿಯರ್ ರವಿಕುಮಾರ್, ದೊಡ್ಡೇಗೌಡ, ತಮ್ಮಣ್ಣಿ, ಚಿಕ್ಕಯ್ಯ ಮತ್ತು ಪುರುಷೋತ್ತಮ್ ಮುಂತಾದವರು ಇದ್ದರು.ತುರುವೇಕೆರೆ ತಾಲೂಕು ಯರದೇಹಳ್ಳಿ ಗ್ರಾಮದ ಕೆರೆ ತುಂಬಿ ಕೋಡಿಯಾದ ಹಿನ್ನೆಲೆಯಲ್ಲಿ ಕೆರೆಗೆ ಶಾಸಕ ಮಸಾಲಾ ಜಯರಾಮ್ ಬಾಗಿನ ಸಮರ್ಪಿಸಿದರು.