ಹಾವೇರಿ ಅಳಿಯನಿಗೆ ಹಾನಗಲ್ ಒಲಿಯಲಿಲ್ಲವೇಕೆ?   ಭಾರೀ ಅಂತರದಿಂದ ಭೂಸನೂರ ಆಯ್ಕೆ

ಹಾವೇರಿ ಅಳಿಯನಿಗೆ ಹಾನಗಲ್ ಒಲಿಯಲಿಲ್ಲವೇಕೆ?     ಭಾರೀ ಅಂತರದಿಂದ ಭೂಸನೂರ ಆಯ್ಕೆ
ಹಾವೇರಿ ಅಳಿಯನಿಗೆ ಹಾನಗಲ್ ಒಲಿಯಲಿಲ್ಲವೇಕೆ?     ಭಾರೀ ಅಂತರದಿಂದ ಭೂಸನೂರ ಆಯ್ಕೆ

ಹಾವೇರಿ ಅಳಿಯನಿಗೆ ಹಾನಗಲ್ ಒಲಿಯಲಿಲ್ಲವೇಕೆ?

 ಭಾರೀ ಅಂತರದಿಂದ ಭೂಸನೂರ ಆಯ್ಕೆ

 

ಬೆಂಗಳೂರು: ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ೭೪೨೬ ಮತ್ತು ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ೩೧,೦೮೮ ಮತಗಳ ಅಂತರದಿAದ ಜಯಗಳಿಸಿದ್ದಾರೆ. 
ಅಕ್ಟೋಬರ್ ೩೦ರಂದು ಎರಡೂ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಯಿತು. ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಶೇ. ೫೭.೩೧ರಷ್ಟು ಮತ ಪಡೆದರೆ, ಕಾಂಗ್ರೆಸ್ ಶೇ. ೩೮.೨೭ರಷ್ಟು, ಜೆಡಿಎಸ್ ಶೇ. ೨.೬೬ರಷ್ಟು ಮತಗಳಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ೬೨,೨೯೨ ಮತ ಪಡೆದರೆ, ಬಿಜೆಪಿಯ ರಮೇಶ್ ಭೂಸನೂರು ೯೩,೩೮೦ ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ನಾಜಿಯಾ ಅಂಗಡಿ ೪೩೨೧, ಕರ್ನಾಟಕ ರಾಷ್ಟಿçÃಯ ಸಮಿತಿ ಅಭ್ಯರ್ಥಿ ಡಾ. ಸುನೀಲ್‌ಕುಮಾರ್ ಹೆಬ್ಬಿ ೯೧೬, ಪಕ್ಷೇತರರಾದ ಜಿಲಾನಿ ಗುದುಸಾಬ್ ಮುಲ್ಲಾ ೫೦೫, ದೀಪಕಾ ಎಸ್. ೪೦೯ ಮತಗಳನ್ನು ಪಡೆದಿದ್ದಾರೆ. ೧೦೨೯ ನೋಟಾ ಮತಗಳು ಚಲಾವಣೆಯಾಗಿವೆ.

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ. ೫೦.೯೫ರಷ್ಟು, ಬಿಜೆಪಿ ಶೇ. ೪೬.೫೫ರಷ್ಟು, ಜೆಡಿಎಸ್ ಶೇ. ೦.೫೪ರಷ್ಟು ಮತಗಳನ್ನು ಪಡೆದಿವೆ.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ೮೭,೩೦೦ ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ೭೯,೮೭೪ ಮತ ಪಡೆದಿದ್ದಾರೆ. ಜೆಡಿಎಸ್‌ನ ನಿಯಾಜ್‌ಶೇಕ್ ೯೨೩ ಮತ ಪಡೆದಿದ್ದಾರೆ. ೫೨೯ ನೋಟಾ ಮತಗಳು ಚಲಾವಣೆಯಾಗಿವೆ.


ಪಕ್ಷ ಸಂಘಟನೆಯ ಕೊರತೆಯೇ ಸೋಲಿಗೆ ಕಾರಣ: ಎಚ್‌ಡಿಕೆ


ರಾಮನಗರ: ಸಿಂಧÀಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾರ್ಯಕರ್ತರ ಒತ್ತಾಸೆ ಮೇರೆಗೆ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಿದ್ದೆವು ಹೊರತು ನಮಗೆ ಈ ಫಲಿತಾಂಶದ ಬಗ್ಗೆ ತಿಳಿದಿತ್ತು ಎಂದು ಹೇಳಿದ್ದಾರೆ.
ಮಂಗಳವಾರ ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಮಾತನಾಡಿರುವ ಅವರು, ಹಾನಗಲ್ ಕ್ಷೇತ್ರದಲ್ಲಿ ನಮಗೆ ತಳಹದಿಯೇ ಇಲ್ಲ. ಹೀಗಿರುವಾಗ ಅಲ್ಲಿನ ಫಲಿತಾಂಶದ ಬಗ್ಗೆ ಹೆಚ್ಚು ನಿರೀಕ್ಷೆಯಿರಲಿಲ್ಲ, ಉಪ ಚುನಾವಣೆಗೆ ನಾನು ಹೆಚ್ಚು ಒತ್ತು ನೀಡುವುದಿಲ್ಲ ಎಂದರು. ಆದರೆ ಸಿಂದಗಿಯಲ್ಲಿ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ, ಪಕ್ಷ ಸಂಘಟನೆಯ ಕೊರತೆಯೇ ನಮ್ಮ ಸೋಲಿಗೆ ಕಾರಣ ಎಂದು ವಿಶ್ಲೇಷಿಸಿದರು.


ಜೆಡಿಎಸ್‌ನಿಂದ ಬಿಜೆಪಿಗೆ ಅನುಕೂಲವಾಗಿಲ್ಲ: ಸಚಿವ ಅಶೋಕ್


ಬೆಂಗಳೂರು: ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಅನುಕೂಲವಾಗಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧಗಿಯಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ಸಾಧಿಸಿದೆ.  ಸಿಂದಗಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಮತಗಳ ಗೆಲುವು ದೊರೆತಿದ್ದು, ಆ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಎರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕಿಳಿಸಿದ್ದು, ಜೆಡಿಎಸ್ ಅಭ್ಯರ್ಥಿಗಳು ನಿರೀಕ್ಷಿತ ಮತಗಳನ್ನು ಪಡೆಯಲಿಲ್ಲ ಎಂದರು.
ಮುಖ್ಯಮAತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಚುನಾವಣೆ ಪರೀಕ್ಷೆ ಅಲ್ಲ. ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಬಲ ಬರುತ್ತದೆ. ಹಾನಗಲ್ ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಿ.ಎಂ. ಉದಾಸಿ ಅನಾರೋಗ್ಯದಿಂದಾಗಿ ಎರಡು ವರ್ಷಗಳಿಂದ ಕ್ಷೇತ್ರದ ಕಡೆ ಗಮನ ಹರಿಸಿರಲಿಲ್ಲ. ಆನಂತರ ನಿಧನರಾದರು. ಕಾರ್ಯಕರ್ತರು ಸೇರಿದಂತೆ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡಿದ್ದಾರೆ. ಸಾರ್ವತ್ರಿಕ ಚುನಾವಣೆಗೂ ಉಪ ಚುನಾವಣೆಗೂ ಸಂಬAಧ ಇಲ್ಲ ಎಂದು ಹೇಳಿದರು.