ಬರಹಕ್ಕಿಳಿಯಲಿಲ್ಲ ಸರ್ಕಾರ ನೀಡಿದ ಭರವಸೆ: ನಿಲ್ಲಲಿಲ್ಲ ಪೌರ ಕಾರ್ಮಿಕರ ಮುಷ್ಕರ
ಬರಹಕ್ಕಿಳಿಯಲಿಲ್ಲ ಸರ್ಕಾರ ನೀಡಿದ ಭರವಸೆ: ನಿಲ್ಲಲಿಲ್ಲ ಪೌರ ಕಾರ್ಮಿಕರ ಮುಷ್ಕರ
ಬರಹಕ್ಕಿಳಿಯಲಿಲ್ಲ ಸರ್ಕಾರ ನೀಡಿದ ಭರವಸೆ:
ನಿಲ್ಲಲಿಲ್ಲ ಪೌರ ಕಾರ್ಮಿಕರ ಮುಷ್ಕರ
ತುಮಕೂರು: ಸೇವೆ ಖಾಯಂಗೆ ಒತ್ತಾಯಿಸಿ ಮುನಿಸಿಪಲ್ ಕಾರ್ಮಿಕರ ಸಂಘಟನೆಗಳು ರಾಜ್ಯದಾದ್ಯಂತ ಎರಡು ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟ ಮು಼ಷ್ಕರವು ಮುಂದುವರೆದಿದೆ. ಶುಕ್ರವಾರ ಮುಖ್ಯ ಮಂತ್ರಿಯವರ ಜೊತೆಯಲ್ಲಿ ನಡೆದ ಮಾತುಕತೆಯ ವಿಚಾರಗಳು ಸಭಾ ನಡವಳಿಯಲ್ಲಿ ಯಥಾವತ್ತು ಬಾರದೆ ಇರುವ ಕಾರಣದಿಂದ ಮುಷ್ಕರವು ಮುಂದುವರೆಯುವAತಾಗಿದೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ್ ಮುಜೀಬ್ ಅವರು ಅರೋಪಿಸಿದ್ದಾರೆ,
ಕಾರ್ಮಿಕರ ಪ್ರತಿನಿಧಿಗಳು ಎಲ್ಲಾ ಗುತ್ತಿಗೆ ಕಾರ್ಮಿರಕರ ಖಾಯಂಮಾತಿಗೆ ಒತ್ತಾಯಿಸಿದ್ದರು, ಪ್ರತಿಯಾಗಿ ಮುಖ್ಯ ಮಂತ್ರಿಯವರು ನೇರ ಪಾವತಿಯಲ್ಲಿರುವ ಪೌರ ಕಾರ್ಮಿಕರನ್ನು 3 ತಿಂಗಳಲ್ಲಿ ಖಾಯಂ ಮಾಡಲು ಹಾಗೂ ಉಳಿದ ಗುತ್ತಿಗೆ ಮುನಿಸಿಪಲ್ ಕಾರ್ಮಿಕರನ್ನು ಗುತ್ತಿಗೆಯಿಂದ ಹೊರತಂದು ಅವರ ನೇರ ಪಾವತಿಗೆ ತರಲು ಮತ್ತು ಪರಿಹಾರ ನೀಡಲು ಕಾರ್ಮಿಕ ಪ್ರತಿನಿಧಿಗಳನ್ನು ಒಳಗೊಂಡು ಸಮಿತಿ ರಚಿಸುವ ಭರವಸೆ ನೀಡಲಾಗಿತ್ತು. ಅದನ್ನು ಸಭಾ ನಡವಳಿಯಲ್ಲಿ ತರದೇ ಇರುವುದರಿಂದಾಗಿ ಮುಷ್ಕರವನ್ನು ಮುಂದುವರೆಸುವAತಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆಯುತ್ತಿರುವ ಮುನಿಸಿಪಲ್ ಕಾರ್ಮಿಕರ ಮುಷ್ಕರದ ಸ್ಥಳಕ್ಕೆ ಮಾಜಿ ಸಚಿವ ಸೋಗಡು ಶಿವಣ್ಣನವರು ಅಗಮಿಸಿ ಹೋರಾಟವನ್ನು ಬೆಂಬಲಿಸಿ ಸರ್ಕಾರಕ್ಕೆ ಬೇಡಿಕೆಯನ್ನು ಪರಿಗಣಿಸುವಂತೆ ಪತ್ರ ಬರೆಯುವುದಾಗಿ ನುಡಿದರು, ಜನತ ದಳದ ಮುಖಂಡ ಗೋವಿಂದರಾಜು, ಮಹಾ ನಗರ ಪಾಲಿಕೆ ಸದಸ್ಯ ಶ್ರೀನಿವಾಸ್, ಮಂಜುನಾಥ್ ಅರ್ದಶ್ ಕುಮಾರ್, ಪಟ್ಟರಾಜು, ಸಿ.ಎನ್.ರಮೇಶ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೈ.ಹೆಚ್ ಹುಚ್ಚಯ್ಯ ಮುಷ್ಕರ ಬೆಂಬಲಿಸಿ ಮಾತನಾಡಿದರು .
ತುಮಕೂರು ಪೌರ ಕಾರ್ಮಿಕರ ಸಂಘದ ಕೆಂಪರಾಜು, ಸಿ.ವೆಂಕಟೇಶ್ ,ನಾಗರಾಜು,ಎನ್.ಕೆ.ಸುಬ್ರಮಣ್ಯ, ತುಮಕೂರು ಮಹಾ ನಗರ ಪಾಲಿಕೆ ಕಸದ ಅಟೋ ಚಾಲಕರು ಮತ್ತು ಸಹಾಯಕರ ಸಂಘ. ರಿ ಮಂಜುನಾಥ್ ಶಿವರಾಜು , ತುಮಕೂರು ಜಿಲ್ಲಾ ನೀರು ಸರಬರಾಜು ನೌರಕರರ ಸಂಘ.ರಿ ಕೆ. ಕುಮಾರ್ , ಚಂದ್ರಯ್ಯ , ಮಂಜುನಾಥ್, ಕೋಳಗೇರಿ ಹಿತ್ರಕ್ಷಣಾ ಸಮಿತಿ ಅರುಣ್, ತಿರುಮಲಯ್ಯ, , ಚಿ.ನಾ ಹಳ್ಳಿಯ ಬಿಳಿಗೆರೆ ರಘು, ತಿಪಟೂರು ರಮೇಶ್ ಇದ್ದರು.
,