ಲವಲವಓದಿನ ಪ್ರೀತಿಗಾಗಿ -ಲವಲವಿಕೆ, ತಾಜಾತನ, ನವಿರು ಹಾಸ್ಯದ ಸಹಜ ಹರಿವು ಮಲ್ಲಿಕಾರ್ಜುನ ಹೊಸಪಾಳ್ಯರ ಇತ್ತೀಚಿನ ಸಂಕಲನ -‘ಬೆಲ್ಲಂಪುಲ್ಲಕ್ಕ’

ಲವಲವಓದಿನ ಪ್ರೀತಿಗಾಗಿ -ಲವಲವಿಕೆ, ತಾಜಾತನ, ನವಿರು ಹಾಸ್ಯದ ಸಹಜ ಹರಿವು ಮಲ್ಲಿಕಾರ್ಜುನ ಹೊಸಪಾಳ್ಯರ ಇತ್ತೀಚಿನ ಸಂಕಲನ -‘ಬೆಲ್ಲಂಪುಲ್ಲಕ್ಕ’, mallikarjuna-hosapalya-bellam-pullakka

ಲವಲವಓದಿನ ಪ್ರೀತಿಗಾಗಿ -ಲವಲವಿಕೆ, ತಾಜಾತನ, ನವಿರು ಹಾಸ್ಯದ ಸಹಜ ಹರಿವು  ಮಲ್ಲಿಕಾರ್ಜುನ ಹೊಸಪಾಳ್ಯರ ಇತ್ತೀಚಿನ ಸಂಕಲನ -‘ಬೆಲ್ಲಂಪುಲ್ಲಕ್ಕ’

ಓದಿನ ಪ್ರೀತಿಗಾಗಿ

ಮಲ್ಲಿಕಾ ಬಸವರಾಜು

ಲವಲವಿಕೆ, ತಾಜಾತನ, ನವಿರು ಹಾಸ್ಯದ ಸಹಜ ಹರಿವು

ಮಲ್ಲಿಕಾರ್ಜುನ ಹೊಸಪಾಳ್ಯರ ಇತ್ತೀಚಿನ ಸಂಕಲನ -‘ಬೆಲ್ಲಂಪುಲ್ಲಕ್ಕ’

ಮಲ್ಲಿಕಾರ್ಜುನಹೊಸಪಾಳ್ಯ ಅವರ ‘ಬೆಲ್ಲಂಪುಲ್ಲಕ್ಕ’ ಕೃತಿಯಲ್ಲಿ15 ಲೇಖನಗಳಿವೆ. ಇವುಗಳನ್ನು ಪ್ರಬಂಧಗಳು, ಲೇಖನಗಳು ಅಥವಾ ಅನುಭವಕಥನಗಳು ಅಂತ ಕರೀಬಹುದು. ಒಂಥರಾ ಚೆನ್ನಾಗಿದಾವೆ. ಹೊಸ ಪಾಳ್ಯ ಮತ್ತು ನಾನು ಒಂದೇ ತಾಲ್ಲೂಕಿನವರು. ನಮ್ಮೂರಿಗೂ ಅವರ ಊರಿಗೂ 10-15ಕಿಮೀ. ದೂರಅಷ್ಟೇ. ಹಾಗಾಗಿ ಹಬ್ಬಗಳು, ಆಚರಣೆಗಳು ಒಂದೇ ರೀತಿ ಇವೆ. ಆದರೆ ಭಾಷಾ ಪ್ರಬೇಧ ಸ್ವಲ್ಪ ಬದಲಾಗುತ್ತೆ.

 

ಮೊದಲಿಗೆ ಬೆಲ್ಲಂಪುಲ್ಲಕನಂಥ ಸಮರ್ಥ ವ್ಯಕ್ತಿತ್ವವನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದ್ದಕ್ಕೆ ಮಲ್ಲಿಕಾರ್ಜುನ್ಗೆ ಅಭಿನಂದನೆಗಳು. ಪ್ರಕಟಿಸಿದ ಭೂಮಿಬುಕ್ಸ್ಹಾಗೂ ಅಪರೂಪದ ಒಳನೋಟಗಳನ್ನು ಬರೆದ ಪ್ರಕಾಶಕಿ ವಿಶಾಲಾಕ್ಷಿಯವರಿಗೂ ಅಭಿನಂದನೆಗಳು.  ನಾನು ಈಪುಸ್ತಕ ಓದಿದಾಗ ಅನಿಸಿದ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತೇನೆ.

 

ಪುಸ್ತಕದ ಒಂದೊಂದು ಲೇಖನಗಳಿಗೂ ಕೊಟ್ಟಿರುವ ಶೀರ್ಷಿಕೆಗಳು ಅದ್ಭುತವಾಗಿವೆ. ಗದ್ದಲದ ಸಂಭ್ರಮದ ಗದ್ದೆ ಕಣಗಾಲ, ಬೆಲ್ಲಂಪುಲ್ಲಕ್ಕನ ಕಮ್ಯುನಿಕೇಶನ್ಸ್ಕಿಲ್ಲು, ರಾಜ್ಕುಮಾರ್ಮತ್ತು ರಾಗಿರೊಟ್ಟಿ, ಬಚ್ಚಿಟ್ಟ ನೆನಪುಗಳ ಬಿಚ್ಚಿಟ್ಟ ಗೋಕಟ್ಟೆ, ಬೀಜದ ಹೋರಿ, ಗಂಧಸಾಲೆಯ ಘಮಲು, ಭಪ್ಪರೇಬೆಪ್ಪಾಲೆ, ಆನೀರುನಾಯಿ ಈಕಾಡು ಪಾಪ, ಪೊರಕೆಗಳ ಮೋಹಕ ಲೋಕ, ನಾಗಾಲ್ಯಾಂಡಿನ ಮಾಮಾ ಗ್ರಾಮಗಳು…ಹೀಗೆ 15ಲೇಖನಗಳ ಶೀರ್ಷಿಕೆಗಳು ಆಕರ್ಶಕವಾಗಿವೆ. ಜೊತೆಗೆ ಒಂದಕ್ಕಿಂತ ಒಂದು ತುಂಬಾ ಚೆನ್ನಾಗಿ ಓದಿಸಿಕೊಳ್ಳುತ್ತವೆ.

ಮಲ್ಲಿಕಾರ್ಜುನ್ಬ ಹೊಸಪಾಳ್ಯ ಬಳಸಿರುವ ಭಾಷೆ ತುಂಬಾ ಚೆನ್ನಾಗಿದೆ,  ತುಂಬಾ ಸೊಗಸಾಗಿ ಗ್ರಾಮೀಣ ಕನ್ನಡವನ್ನ ತಂದಿದ್ದಾರೆ. ಅದೆಷ್ಟು ಸಹಜವಾಗಿ ಬಂದಿದೆ ಅಂದ್ರೆ, ನಾವು ಈಗದ್ದೆಗೋ ಹೊಲಕ್ಕೋಮಡವಾಯಿ ತಿರುಗಿಸಿದಾಗನೀರು ಒಂದೇ ಓಘವಾಗಿ ಸಹಜವಾಗಿ ಹರಿಯುತ್ತಲ್ಲಾ, ಆ ಓಘ ಇವರ ಭಾಷೆಯಲ್ಲಿದೆ. ಲವಲವಿಕೆ, ತಾಜಾತನ, ಜೊತೆಗೆ ನವಿರಾದ ಹಾಸ್ಯ ಇದೆ. ಅದು ಎಲ್ಲೂ ವ್ಯಂಗ್ಯ ಆಗುವುದಿಲ್ಲ. ರಾಗಿ ರೊಟ್ಟಿ ಲೇಖನದಲ್ಲಿ ’ರಾಗಿರೊಟ್ಟಿ ಮೇಲೆ ಎಳ್ಳಿಕಾಯಿ ಉಪ್ಪಿನಕಾಯಿ ಟಾಪಿಂಗ್’ಅಂತ ಬಳಸುತ್ತಾರೆ. ಆಟಾಪಿಂಗ್ ಅನ್ನೋಪದ ಇಂಗ್ಲಿಷ್ಅಂತ ಅನಿಸುವುದೇ ಇಲ್ಲ. ಅಷ್ಟು ಸಹಜವಾಗಿದೆ. ಈಶೈಲಿ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ರೀತಿಭಾಳಾ ಇಷ್ಟ ಆಯ್ತು.

 

ಗ್ರಾಮೀಣ ಮಹಿಳೆಯರ ಕ್ರಿಯಾಶೀಲತೆ, ಶಕ್ತಿಸಾಮರ್ಥ್ಯ, ಜಾಣ್ಮೆ, ಸಮಯ ಪ್ರಜ್ನೆ, ಅವರ ಆಕಷ್ಟದ ಬದುಕು ಏನಿದೆ ಅವೆಲ್ಲವನ್ನೂ ಸಹ ಇಲ್ಲಿನ ಕೆಲಲೇಖನಗಳು ಕಟ್ಟಿಕೊಡುತ್ತವೆ. ಎಲ್ಲೂ ಸಹ ದನ್ನ ವೈಭವೀಕರಿಸದೆ, ಕೀಳಾಗಿಯೂ ನೋಡದೆ, ಸಹಜವಾಗಿ ಆವ್ಯಕ್ತಿ ಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಇದಕ್ಕಾಗಿ ಮಲ್ಲಿಕಾರ್ಜುನ್ಗೆ ಮತ್ತೊಮ್ಮೆ ಅಭಿನಂದನೆ ಹೇಳ್ತೀನಿ. 

 

ಬೆಲ್ಲಂಪುಲ್ಲಕ್ಕನಂಥಾ ಹಲವಾರು ವ್ಯಕ್ತಿತ್ವಗಳನ್ನು ನಾವುಹಳ್ಳಿಗಳಲ್ಲಿ ನೋಡಿರ್ತೀವಿ. ಆದರೆ ಬರೆಯಲು ಆಗಿರುವುದಿಲ್ಲ. ಆಕೆಯ ಹೆಸರಿನ ಅರ್ಥಬಹುಶಃ ಎಲ್ಲರಿಗೂ ಇಷ್ಟ ವಾಗುವಂತೆ ನಡೆದು ಕೊಳ್ಳುವುದರಿಂದ ಬಂದಿದ್ದು ಅನ್ಸುತ್ತೆ. ಅವಳಿದ್ದ ಕಡೆಒಂದು ಜೀವ ಜಾತ್ರೆಯೇ ನೆರೆದಿರುತ್ತಲ್ಲಾ. ನಗು, ಮಾತು, ತಮಾಷೆ,  ಹರಟೆ, ಅವಳ ಜೊತೆಸಂತೆಗೆ ಹೋಗುವುದು, ಕೆಲಸಕ್ಕೆ ಹೋಗುವುದು, ಅವೆಲ್ಲವೂ ಹೆಣ್ಣು ಮಕ್ಕಳಿಗೆ ಇಷ್ಟವಾಗುವಂತಹುದೇ. ಅದರಲ್ಲಿಯೂ ವಯಸ್ಸಿನ ಹುಡುಗಿಯರಿಗೆ ಆಕೆಯ ಆಂಗಿಕ ಭಾಷೆಯೂ ಸೇರಿ ಬೆಲ್ಲ ತಿಂದಷ್ಟು ಸಿಹಿ ಆಗಿರುತ್ತಿತ್ತು ಅನ್ಸುತ್ತೆ ಆಪುಲ್ಲಕ್ಕನ ಸಾವಾಸ. ಹಳ್ಳಿಗಳಲ್ಲಿ ಈರೀತಿ ಹೆಸರುಗಳಿರುತ್ತವೆ.

 

ಪೊರಕೆ ಲೇಖನದಲ್ಲೂಕೂಡ ಗ್ರಾಮೀಣ ಹೆಣ್ಣು ಮಕ್ಕಳು ಅವರಕೃಷಿಕಾರ್ಯದ ಹೊರತಾಗಿಯೂ ಪೊರಕೆ ಕಟ್ಟಿಮಾರುವುದು, ಅವುಗಳ ಕಲಾತ್ಮಕತೆ, ವೈವಿಧ್ಯ ಇತ್ಯಾದಿ ವಿವರಗಳು ಚೆನ್ನಾಗಿ ಮೂಡಿಬಂದಿವೆ. ಇನ್ನು ಕಣಗಾಲದ ಲೇಖನ ಓದಿ ಬಹಳಾ ಖುಷಿಆಯ್ತು. ಆದರೆ ಅದುಬೇಗ ಮುಕ್ತಾಯ ಆಯಿತೇನೋ ಅಂತಅನ್ನಿಸಿತು, ಇನ್ನೂವಿಸ್ತರಿಸಬಹುದಿತ್ತು. ನಾವುಬೇಸಾಯಶುರು ಮಾಡಿದ ಹೊಸದರಲ್ಲಿ ಒಮ್ಮೆರಾಗಿ ಹಾಕಿಸಿದ್ದೆವು. ಕಟಾವಿನ ದಿನ ಕಣ ನೋಡೋದಿಕ್ಕೆ ನಾನು ಭಾಳಾ ಕನಸುಕಟ್ಟಿ ಕೊಂಡು ಹೋಗಿದ್ದೆ. ಆದ್ರೆ ಒಂದುಯಂತ್ರ ಬಂದುಭರ್ರೋಅಂತ ಅರ್ಧಗಂಟೇಲಿ ಕಟಾವು ಮಾಡಿರಾಗಿ ಒಂದುಕಡೆ ಹೊಟ್ಟು ಒಂದುಕಡೆ ಹಾಕಿ ದುಡ್ಡುಇಸಗೊಂಡು ಹೊರಟೇ ಹೋಯ್ತು. ಒಂದು ಸಂಭ್ರಮಇಲ್ಲ,  ಒಂದುಸಡಗರ ಇಲ್ಲ.

 

ಈಪುಸ್ತಕದ ಕಣಗಾಲಲೇಖನದ ಕೊನೆಯಲ್ಲೂ ಅಂತಹುದೇ ನಿರಾಸೆಯ ಚಿತ್ರ ಬರುತ್ತದೆ. ಕಣ ಬರೀಮನುಷ್ಯರನ್ನಷ್ಟೇ ಅಲ್ಲ, ಎಷ್ಟೋ ಜೀವರಾಶಿಗಳನ್ನ ಪೊರೆಯುತ್ತದೆ. ಕಣಕ್ಕೆ ಬಂದ ಯಾರಿಗೂ ಇಲ್ಲ ಎನ್ನುವುದಿಲ್ಲ. ಅವರಶಕ್ತ್ಯಾನುಸಾರ ಕೊಟ್ಟೇ ಕಳಿಸುತ್ತಿದ್ದರು. ನಾವುಸಣ್ಣವರಿದ್ದಾಗ ಕಣದ ಖುಷಿ ನೋಡಲು ಸ್ಕೂಲಿಗೆ ಚಕ್ಕರ್ಹಾಕಿ ಹೋಗುತ್ತಾ ಇದ್ದೆವು. ಅಂತಹುದೊಂದು ಖುಷಿಯನ್ನು ಮತ್ತೆ ತಂದುಕೊಡುತ್ತದೆ ಕಣಗಾಲ ಪ್ರಬಂಧ. ಹಾಗೆಯೇ ’ಗೋಕಟ್ಟೆ’ಲೇಖನಸಹಗತಿಸುತ್ತಿರುವ ಮಿಂಚುಹುಳುಗಳ ನೆನಪು ತರುತ್ತದೆ. ’ಆನೀರುನಾಯಿ ಈಕಾಡುಪಾ”ಬರಹದಲ್ಲಿ ತುಮಕೂರಿನಕಾಡುಪಾಪಗಳು ಹಾಗೂ ಅವುಗಳ ಸಂರಕ್ಷಣೆಗೆ ಶ್ರಮಿಸುತ್ತಿರುವ ಗುಂಡಪ್ಪನವರನ್ನೂ ನೆನಪಿಸಿಕೊಂಡು ದಾಖಲಿಸಿರುವುದು ಶ್ಲಾಘನೀಯ.

 

ಮಲ್ಲಿಕಾರ್ಜುನ್ಬರಹಕ್ಕಿರುವ ವಿಶೇಷತೆ ಅಂದ್ರೆ, ಒಂದು ಚಿತ್ರ ಕಣ್ಮುಂದೆ ರೀಲು ಬಿಚ್ಚಿಕೊಂಡು ಬಂದಂಗೆ ಸರಾಗವಾಗಿ ಬರೆಯುತ್ತಾರೆ. ಮಣಿಪುರ, ನಾಗಾಲ್ಯಾಂಡ್ಕಥನಗಳನ್ನು ಓದುವಾಗ ಅಲ್ಲಿನ ಯಾವೊಂದು ವಿವರಗಳೂ ತಪ್ಪಿಹೋಗದ ಹಾಗೆ ಬರಹದಲ್ಲಿ ತರುತ್ತಾರೆ. ಅಲ್ಲಿನ ಸಂಸ್ಕೃತಿ, ಐತಿಹಾಸಿಕ ವಿವರಗಳು, ಆಚರಣೆಗಳು, ಆಹಾರ ಎಲ್ಲವುಗಳ ಮಾಹಿತಿ ಇದೆ. ಹಾಗಾಗಿ ಇವು ಕೇವಲ ಪ್ರವಾಸಿ ಕಥನಗಳಷ್ಟೇ ಆಗುವುದಿಲ್ಲ.

 

ನಾಗಾಲ್ಯಾಂಡ್ಲೇಖನದಲ್ಲಿ ತಮ್ಮ ಸಹ ಪ್ರವಾಸಿಗರ ಬಗ್ಗೆ ಬರೆಯುತ್ತಾರೆ. ಚಿನ್ನಸ್ವಾಮಿ, ನಂದೀಶ್ಪಡಿ ಪಾಟಲುಗಳ ಬಗ್ಗೆ ವಿವರಗಳಿವೆ. ಅಲ್ಲೆಲ್ಲಾನ ವಿರಾದಹಾಸ್ಯವಿದೆಯೇ ಹೊರತು ಎಲ್ಲೂ ವ್ಯಂಗ್ಯ ಆಗಲ್ಲ. ಓದಿದ ಮೇಲೂ ಆವ್ಯಕ್ತಿಗಳ ಬಗ್ಗೆಒಂದುಗೌರವ ಹಾಗೇ ಉಳಿಯುತ್ತೆ ಹೊರತೂ ಎಲ್ಲೂ ಹಗುರವಾದ ಭಾವನೆ ಬರಲ್ಲ. ಇನ್ನುಹಳ್ಳಿ ಬಯ್ಗುಳಗಳು, ಅವುಗಳನ್ನ ಕೇಳುವುದೂ ಅನಾಗರಿಕ ಅನ್ನೋ ಕಾಲದಲ್ಲಿ ನಾವಿದ್ದೀವಿ, ಅವುಗಳನ್ನುಸೊಗಸಾಗಿ ಇಲ್ಲಿಓದಬಹುದು. ಅದು ಮಲ್ಲಿಕಾರ್ಜುನ್ಬ ರಹದ ತಾಕತ್ತು. ಇಂತಹಇನ್ನಷ್ಟು ಪಾತ್ರಗಳ ಬಗ್ಗೆ ಓದಲು ಕಾಯುತ್ತಿರುತ್ತೇನೆ.