ಒಂದಾನೊಂದುಕಾಲದಲ್ಲಿ ನಾಗಿನಿ ಎಂಬ ನದಿಯೊಂದಿತ್ತು . . . . ಜೀವಜಾಲ ಮಲ್ಲಿಕಾರ್ಜುನ ಹೊಸಪಾಳ್ಯ

ನೆನೆ  ಆ ದಿನವ ಒಂದಾನೊಂದುಕಾಲದಲ್ಲಿ ನಾಗಿನಿ ಎಂಬ ನದಿಯೊಂದಿತ್ತು . . . . ಜೀವಜಾಲ ಮಲ್ಲಿಕಾರ್ಜುನ ಹೊಸಪಾಳ್ಯ

ಒಂದಾನೊಂದುಕಾಲದಲ್ಲಿ ನಾಗಿನಿ ಎಂಬ ನದಿಯೊಂದಿತ್ತು . . . .   ಜೀವಜಾಲ   ಮಲ್ಲಿಕಾರ್ಜುನ ಹೊಸಪಾಳ್ಯ

ಒಂದಾನೊಂದುಕಾಲದಲ್ಲಿ ನಾಗಿನಿ ಎಂಬ ನದಿಯೊಂದಿತ್ತು . . . .


ಜೀವಜಾಲ


ಮಲ್ಲಿಕಾರ್ಜುನ ಹೊಸಪಾಳ್ಯ


‘ಮೂಡಲ್‌ಕುಣಿಗಲ್‌ಕೆರೆ ನೋಡೋಕೊಂದ್‌ಐಭೋಗ . . . .’ ಎಂದುಜನಪದರುಕಟ್ಟಿದ ಹಾಡಿನಿಂದತುಮಕೂರುಜಿಲ್ಲೆಯ ಈ ಬೃಹತ್‌ಕೆರೆಎಲ್ಲರ ನೆನಪಿನಲ್ಲುಳಿದಿದೆ, ಆದರೆ ಈ ಕೆರೆಗೆಜೀವತುಂಬುತ್ತಿದ್ದ ‘ನಾಗಿನಿ’ ನದಿಯ ಪರಿಚಯ ಬಹುತೇಕರಿಗೆಇಲ್ಲ. ಯುವಜನತೆ ಬಿಡಿ, ಹಿರಿಯರಿಗೂಇದರ ನೆನಪು ಮಸುಕಾಗಿದೆ.


ಇದೇನು ವರ್ಷವಿಡೀ ಹರಿಯುತ್ತಿದ್ದ ನದಿಯಲ್ಲ, ನೂರಾರು ಕಿಲೋ ಮೀಟರ್ ಹರಿಯುವಂಥದ್ದೂಅಲ್ಲ, ಶಿವಗಂಗೆ ಬೆಟ್ಟದಕಿಬ್ಬಿಯಲ್ಲಿ ಹುಟ್ಟಿಕುದೂರು, ತಿಪ್ಪಸಂದ್ರ, ಕುಣಿಗಲ್, ಕಗ್ಗೆರೆ ಮಾರ್ಗವಾಗಿ ಹರಿದು ಮಂಗಳಾ ಜಲಾಶಯದ ಮೂಲಕ ಶಿಂಷಾ ನದಿ ಸೇರುತ್ತಿತ್ತು. ನಾಗಿನಿ ಶಿಂಷಾ ನದಿಯ ಉಪನದಿ. ಹರಿವು ಸುಮಾರು 40 ಕಿಲೋಮೀಟರ್. ದೊಡ್ಡ ಹಳ್ಳ ಅಥವಾತೊರೆಎನ್ನಬಹುದು. ಮಾಗಡಿ ಮತ್ತುಕುಣಿಗಲ್ ತಾಲೂಕುಗಳಲ್ಲಿ ಇದರ ಹರಿವು. 


ನದಿಯುತನ್ನಹರಿವಿನ ದಾರಿಯಲ್ಲಿಹಲವು ಸರಣಿ ಕೆರೆಗಳಿಗೆ ನೀರುಣಿಸುತ್ತಿತ್ತು, ಮುಖ್ಯವಾಗಿಗಿಡದ ಹೊಸಕೆರೆ, ಲಕ್ಕಯ್ಯನಪಾಳ್ಯದ ಕೆರೆ, ಹುಲಿಕಲ್ ಬಳಿಯ ತಮ್ಮೇನಹಳ್ಳಿ ಕೆರೆ, ಮಾಯಸಂದ್ರಕೆರೆ, ಸಂಕಿಘಟ್ಟಕೆರೆ ಹಾಗೂ ಕುಣಿಗಲ್ ದೊಡ್ಡಕೆರೆಗಳಿಗೆ ಇದುಆಧಾರವಾಗಿತ್ತು.  ಕುಣಿಗಲ್‌ಕೆರೆ ಹೊರತುಪಡಿಸಿದರೆ ಉಳಿದವು ಮಧ್ಯಮಗಾತ್ರದವು. ಮಳೆಗಾಲದಲ್ಲಿ ಹಲವು ತಿಂಗಳು ಹರಿಯುತ್ತಿದ್ದ ನದಿಯಿಂದ ಈ ಕೆರೆಗಳು ತುಂಬಿ ಕೋಡಿ ಹರಿದುಕುಣಿಗಲ್‌ಕೆರೆಗೆ ಸೇರುತ್ತಿತ್ತು. 


ಈ ರೀತಿ ಶಿವಗಂಗೆ ಬೆಟ್ಟದಿಂದ ನೀರು ಪಡೆಯುತ್ತಿದ್ದಕುಣಿಗಲ್‌ದೊಡ್ಡಕೆರೆಯುಇಂದುತನ್ನ ಅಸ್ತಿತ್ವಕ್ಕಾಗಿ ಹೇಮಾವತಿಜಲಾಶಯದ ನೀರನ್ನು ಅವಲಂಬಿಸಿದೆ. ಹಲವು ಕೆರೆಗಳ ಸರಣಿಕೊಂಡಿಯ ಮೂಲಕ ಕುಣಿಗಲ್‌ದೊಡ್ಡಕೆರೆಗೆ ನೀರು ಹರಿಸುತ್ತಿದ್ದ ನಾಗಿನಿ ನದಿ ಈಗ ಕಣ್ಮರೆಯಾಗಿದೆ. ದೂರದ ಹೇಮಾವತಿ ಹರಿಸಲು ನಡೆಯುತ್ತಿರುವ ಹೋರಾಟ, ಆರೋಪ, ಪ್ರತ್ಯಾರೋಪಗಳ ನಡುವೆ ಕೈಯಳತೆಯಲ್ಲೇ ಇರುವ ನಾಗಿನಿಯ ಬಗ್ಗೆ ಇಷ್ಟೂ ವರ್ಷಗಳ ಕಾಲ ಗಮನಹರಿಸುವವರೇಇಲ್ಲವಾಗಿದ್ದುಅಚ್ಚರಿ.


ಸಾವಿರಾರುಎಕರೆಗೆ ನೀರುಣಿಸುವ ಸಾಮರ್ಥ್ಯವಿದ್ದಕುಣಿಗಲ್‌ಕೆರೆಇಂದು ಪಟ್ಟಣದಜನರಿಗೆಕುಡಿಯುವ ನೀರನ್ನೂ ಸರಬರಾಜು ಮಾಡುವ ಮೂಲವಾಗಿದೆ. ಅಲ್ಲದೆ ಸಾಮಾಜಿಕ, ಸಾಂಸ್ಕೃತಿಕ ಮತ್ತುಆರ್ಥಿಕ ಪ್ರಾಮುಖ್ಯತೆಯೂಇದಕ್ಕಿದೆ. ಹಾಗಾಗಿ ನಾಗಿನಿಯ ಹಾದಿಯನ್ನು ಸರಿಮಾಡಿ, ಕುಣಿಗಲ್‌ದೊಡ್ಡಕೆರೆಯನ್ನು ಪುನರುಜ್ಜೀವನಗೊಳಿಸುವುದು ಅತ್ಯಗತ್ಯ. 


ನಾಗಿನಿ ನದಿಯು 40 ಕಿಲೋ ಮೀಟರ್ ಹರಿದರೂ ಸಹ ಅದರಜಲಾನಯನ ಪ್ರದೇಶ ಸುಮಾರು 750 ಚದರ ಕಿಲೋ ಮೀಟರುಗಳು. ಇದುರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹರಡಿದೆ. ಈ ಬೃಹತ್ ಪ್ರದೇಶದಲ್ಲಿ ಕಳೆದ ನಾಲ್ಕು ದಶಕಗಳಲ್ಲಾದ ಅಗಾಧ ಬದಲಾವಣೆಒಂದು ನದಿಯ ನೆನಪನ್ನೇ ಇಲ್ಲವಾಗಿಸಿದ್ದು ವಿಷಾದನೀಯ. 


ನಾಗಿನಿ ಹುಟ್ಟುವ ಶಿವಗಂಗೆ ಬೆಟ್ಟ ಹಾಗೂ ಅದು ಶುರುವಿನಲ್ಲಿ ಹರಿಯುತ್ತಿದ್ದ 15-20 ಕಿಲೋಮೀಟರ್‌ಉದ್ದಕ್ಕೆಇದ್ದದಟ್ಟ ಹಾಗೂ ಕುರುಚಲುಕಾಡುಇಂದು ಹೇಳ ಹೆಸರಿಲ್ಲದಂತಾಗಿದೆಎAದು ಅಧ್ಯಯನಗಳು ತಿಳಿಸುತ್ತವೆ. 20 ಚದರ ಕಿಲೋ ಮೀಟರ್ ವ್ಯಾಪಿಸಿದ್ದ ಜಲಮೂಲಗಳು ಅರ್ದಕ್ಕರ್ಧಇಲ್ಲವಾಗಿವೆಅಥವಾಒತ್ತುವರಿಯಾಗಿವೆ. ಕಟ್ಟಡಗಳು ತಲೆಎತ್ತಿವೆ, ಹಳ್ಳದ ವ್ಯಾಪ್ತಿಕುಗ್ಗಿದೆ, ಹಳ್ಳದಗುಂಟ ಇದ್ದ ಗಿಡಮರಗಳು ಈಗಿಲ್ಲ, ಎಗ್ಗಿಲ್ಲದೆ ಮರಳು ತೆಗೆದ ಪರಿಣಾಮ ಹಳ್ಳದ ಜಾಡೇಕಾಣದಷ್ಟು ಕುರೂಪವಾಗಿಸಿದೆ.


ಒಂದು ಪುಟ್ಟ ನದಿಯ ಮೇಲೆ ಇಷ್ಟೆಲ್ಲಾ ದಾಳಿಗಳಾದರೆ ಅದು ಉಳಿದೀತಾದರೂ ಹೇಗೆ? ಈ ಜಲಾನಯನ ಪ್ರದೇಶ ಮತ್ತುಅಲ್ಲಿ ಬರುವಕೆರೆಗಳ ಕೊಂಡಿಯನ್ನುಸರಿಪಡಿಸಿದರೆ ನಾಗಿನಿಗೆ ಮರುಜೀವಕೊಡಬಹುದು. ಆ ಮೂಲಕ ಮತ್ತೆ ಮೂಡಲ್‌ಕುಣಿಗಲ್‌ಕೆರೆಯಲ್ಲಿಚಂದಿರ ಮೂಡಿ ಬರುವುದನ್ನುಕಾಣಬಹುದು.