ಈ ಜಗತ್ತಿನ ಮತ್ತೊಬ್ಬ ಹೊಸ ಸರ್ವಾಧಿಕಾರಿ ವ್ಲಾದಿಮಿರ್‌ ಪುಟಿನ್‌

ಈ ಜಗತ್ತಿನ ಮತ್ತೊಬ್ಬ ಹೊಸ ಸರ್ವಾಧಿಕಾರಿ ವ್ಲಾದಿಮಿರ್‌ ಪುಟಿನ್‌

ಈ ಜಗತ್ತಿನ ಮತ್ತೊಬ್ಬ ಹೊಸ ಸರ್ವಾಧಿಕಾರಿ ವ್ಲಾದಿಮಿರ್‌ ಪುಟಿನ್‌


ಈ ಜಗತ್ತಿನ ಮತ್ತೊಬ್ಬ ಹೊಸ ಸರ್ವಾಧಿಕಾರಿ ವ್ಲಾದಿಮಿರ್‌ ಪುಟಿನ್‌

ರಶ್ಯಾ-ಉಕ್ರೇನ್ ಹೋಲಿಸಿ ನೋಡಿ


ವಿವರ                             ರಶ್ಯಾ                                     ಉಕ್ರೇನ್

ವಿಸ್ತೀರ್ಣ                     17.12ಕೋಟಿ ಚ.ಕಿಮೀ            60ಲಕ್ಷ ಚ.ಕಿಮೀ

ಜನಸಂಖ್ಯೆ                   14.61ಕೋಟಿ                          4.31ಕೋಟಿ

ಭಾಷೆ                           ರಶ್ಯನ್                                  ಉಕ್ರೇನಿಯನ್

ತಲಾ ಆದಾಯ             11273ಡಾಲರ್                       4284ಡಾಲರ್
ಸೈನ್ಯ (ಸಕ್ರಿಯ)            9 ಲಕ್ಷ                                    2 ಲಕ್ಷ
ಅಣ್ವಸ್ತ್ರ                      1600/6850                            00000
ಅಧ್ಯಕ್ಷ                            ವ್ಲಾದಿಮಿರ್ ಪುಟಿನ್             ವೊಲೊಡಿಮಿರ್ ಜಿಲೆನ್ಸಕಿ


        ಅಮೆರಿಕಾ ಇಡೀ ಜಗತ್ತಿನ ದೊಡ್ಡಣ್ಣ ಎನ್ನುತ್ತಿದ್ದವರೆಲ್ಲ ನಾಲ್ಕೈದು ದಿನಗಳಿಂದ ಅವಾಕ್ಕಾಗಿ ರಶ್ಯಾದ ಕಡೆ ಮತ್ತು ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಡೆ ನೋಡುವಂತಾಗಿಬಿಟ್ಟಿದೆ. ವಿಶ್ವ ಸಂಸ್ಥೆಯನ್ನು ಅಡಕೆಲೆ ಮೆಲ್ಲುತ್ತ ಹರಟುವ ಅರಳಿಕಟ್ಟೆ ಎಂಬAತೆ ಮಾಡಿರುವ ಈತ ತನ್ನ ಬೃಹತ್ ಖಂಡದAತಿರುವ ರಶ್ಯಾದ ಮಗ್ಗುಲಲ್ಲಿದ್ದ ಉಕ್ರೇನ್ ಎಂಬ ಪುಟ್ಟ ದೇಶವನ್ನು ವಶಪಡಿಸಿಕೊಳ್ಳುವ ಸಲುವಾಗಿ ಒಂದು ವಾರದಿಂದ ಸೇನಾ ದಾಳಿ ನಡೆಸಿದ್ದಾನೆ. ನೂರಾರು ಜನರು ಸತ್ತು, ಅಸಂಖ್ಯರು ದೇಶ ಬಿಡುವ ಪ್ರಯತ್ನ ನಡೆಸಿದ್ದಾರೆ. ಉಕ್ರೇನ್ ಒಂದು ದೇಶವೇ ಅಲ್ಲ, ಅದು ರಶ್ಯಾದ ನೆಲವೇ ಆಗಿದೆ ಎನ್ನುವ ಮಾತನ್ನು ಪುಟಿನ್ ಆಡುತ್ತಿದ್ದಾನೆ.


      ಪುಟಿನ್ ರಶ್ಯಾ ಅಧ್ಯಕ್ಷನಾಗಿ ಚುನಾಯಿತನಾದದ್ದು 2012ರ ಮೇ 7ರಂದು. ಅದಕ್ಕೂ ಮೊದಲು ಒಂದು ಅವಧಿಗೆ ಅಧ್ಯಕ್ಷ ಮತ್ತು ಎರಡು ಅವಧಿಗೆ ಆ ದೇಶದ ಪ್ರಧಾನಿಯಾಗಿದ್ದ, ಅದಕ್ಕೂ ಮೊದಲು ರಶ್ಯಾದ ಬೇಹುಗಾರಿಕೆ ಸಂಸ್ಥೆ ಕೆಜಿಬಿಯಲ್ಲಿ 16 ವರ್ಷ ಇಂಟೆಲಿಜೆನ್ಸ್ ಆಫೀಸರ್ ಆಗಿದ್ದ, ಜೊತೆಗೆ ಈತ ಕಾನೂನು ಪದವೀಧರ ಬೇರೆ. 


      1991ರಲ್ಲಿ ಕೆಜಿಬಿ ಹುದ್ದೆಗೆ ರಾಜಿನಾಮೆ ನೀಡಿ,ರಾಜಕೀಯ ಚಟುವಟಿಕೆಗಳನ್ನು ಆರಂಭಿಸಿದ, 1996ರಲ್ಲಿ ಮಾಸ್ಕೋಗೆ ಹೋಗಿ ಅಧ್ಯಕ್ಷ ಬೊರಿಸ್ ಯೆಲ್‌ಸ್ಟಿನ್ ಆಡಳಿತ ವಿಭಾಗದಲ್ಲಿ ಸೇರ್ಪಡೆಗೊಂಡ. ಆಗಸ್ಟ್ 1999ರಲ್ಲಿ ಪ್ರಧಾನಿಯಾಗಿ ನೇಮಕಗೊಳ್ಳುವವರೆಗೆ ಭದ್ರತಾ ಪಡೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ, ಬೊರಿಸ್ ಯೆಲ್‌ಸ್ಟಿನ್ ರಾಜಿನಾಮೆ ನೀಡುತ್ತಿದ್ದಂತೆ ಉಸ್ತುವಾರಿ ಅಧ್ಯಕ್ಷನೂ ಆಗಿಬಿಟ್ಟ. ನಾಲ್ಕೇ ತಿಂಗಳಲ್ಲಿ ಅಧ್ಯಕ್ಷನಾಗಿ ಚುನಾಯಿತನಾ ಆದ ಈ ಪುಟಿನ್.ಮತ್ತೆ 2004ರಲ್ಲಿ ಮರು ಚುನಾಯಿತನಾದ, ನಿರಂತರ ಎರಡು ಅವಧಿಗೆ ಮಾತ್ರ ಅಧ್ಯಕ್ಷರಾಗಬೇಕೆಂಬ ನಿಯಮದ ಕಾರಣ ಮತ್ತೆ  2008ರಿಂದ ನಾಲ್ಕು ವರ್ಷದ ಅವಧಿಗೆ ಪ್ರಧಾನ ಮಂತ್ರಿಯಾಗಿ ನೇಮಕಗೊಳಿಸಿಕೊಂಡ. ಹಾಗಾಗಿ ಈ ನಿಯಮವನ್ನು ನೆಪ ಮಾತ್ರಕ್ಕೆ ಪೂರೈಸಿ, 2012ರಲ್ಲಿ ಚುನಾವಣಾ ಅಕ್ರಮಗಳ ಆರೋಪದ ನಡುವೆಯೂ ಅಧ್ಯಕ್ಷನಾಗಿ ಚುನಾಯಿತನಾದ, 2018ರಲ್ಲೂ ಮರು ಅಯ್ಕೆ ಆದ, ಕಡೆಗೆ 2021ರಲ್ಲಿ ಸಂವಿಧಾನಕ್ಕೇ ತಿದ್ದುಪಡಿ ತಂದು 2036ರವರೆಗೆ ಅಧ್ಯಕ್ಷನಾಗಿ ಉಳಿಯುವಂತೆ ನಿಯಮಗಳನ್ನು ಮಾರ್ಪಡಿಸಿಕೊಂಡಿದ್ದಾನೆ ಜೊತೆಗೆ ಜೀವನ ಪರ್ಯಂತ ಈತನ ವಿರುದ್ಧ ಯಾರೂ ಯಾವುದೇ ಕಾನೂನು ಅಥವಾ ಶಿಸ್ತು ಕ್ರಮಗಳನ್ನು ಕೈಗೊಳ್ಳದಂತೆಯೂ ನಿಯಮಗಳಿಗೆ ತಿದ್ದುಪಡಿ ಮಾಡಿಕೊಂಡಿದ್ದಾನೆ. ರಶ್ಯಾದಂತ ಒಂದು ಬೃಹತ್ ದೇಶವನ್ನು ಕೈಗೊಂಬೆ ಮಾಡಿಕೊಳ್ಳಲು ಇಷ್ಟು ಸಾಕಲ್ಲವೇ.


       ಪುಟಿನ್ ಅಧ್ಯಕ್ಷನಾದ  ಮೊದಲ ಅವಧಿಯಲ್ಲಿ ರಶ್ಯಾ ಬೆಳವಣಿಗೆ ಕಂಡಿತು, ಜಿಡಿಪಿ ನಿರಂತರ ಎಂಟು ವರ್ಷ ಮೇಲೇರಿತು,ಜನರ ಖರೀದಿ ಸಾಮರ್ಥ್ಯ 72% ಹೆಚ್ಚಾಯಿತು. ನೌಕರರ ವೇತನ ಮೂರು ಪಟ್ಟು ಜಾಸ್ತಿಯಾಯಿತು, ನಿರುದ್ಯೋಗ, ಬಡತನ 50% ಕಡಿಮೆ ಆಯಿತು, ರಶ್ಯಾ ಪ್ರಮುಖವಾಗಿ ರಫ್ತು ಮಾಡುವ ತೈಲ ಮತ್ತು ಅನಿಲದ ಧಾರಣೆಯನ್ನು ಸಿಕ್ಕಾಪಟ್ಟೆ ಏರಿಸಿದ್ದರಿಂದಾಗಿ ಇದೆಲ್ಲ ಸಾಧ್ಯವಾಯಿತು.


      ಚೆಚನ್ಯಾ,ಜಾರ್ಜಿಯಾ ಮೇಲಿನ ಯುದ್ದಗಳಲ್ಲಿ ಗೆಲುವು ಸಾಧಿಸಿದ ಪುಟಿನ್ ಕಡೆಗೆ 2015ರಲ್ಲಿ ಉಕ್ರೇನ್ ಮೇಲೂ ದಾಳಿ ಮಾಡಿ ಆ ದೇಶದ ಕ್ರಿಮಿಯಾ ನಗರವನ್ನು ವಶಪಡಿಸಿಕೊಂಡ. ಈತನ ಯುದ್ದ ದಾಹವನ್ನು ರಶ್ಯನ್ನರು ಮೊದಲಿಂದಲೂ ವಿರೋಧಿಸುತ್ತ ಬಂದಿದ್ದು, ಸಾವಿರಾರು ಪ್ರತಿಭಟನಾಕಾರರನ್ನು ಜೇಲಿಗೆ ತುಂಬಿದ್ದಾನೆ. ಸೋಮವಾರ ಆರಂಭವಾದ ದಾಳಿಯ ನಂತರವೂ ಸಾವಿರಾರರು ಜನರು ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿದ್ದಾರೆ. 


     ಎಲ್ಲ ಸರ್ವಾಧಿಕಾರಿಗಳ ಆಳ್ವಿಕೆಯಲ್ಲಿ ಆಗುವಂತೆ ರಶ್ಯಾದಲ್ಲಿ ಮಾಧ್ಯಮಗಳ ಮೇಲೆ ಸರ್ಕಾರದ ಹಿಡಿತವಿದೆ, ಪತ್ರಿಕೆಗಳು ಮುಕ್ತವಾಗಿ ಬರೆಯುವಂತಿಲ್ಲ, ಭ್ರಷ್ಟಾಚಾರದ ಅಂತಾರಾಷ್ಟಿçÃಯ ಪಾರದರ್ಶಕ ಸೂಚ್ಯಂಕದಲ್ಲಿ ರಶ್ಯಾ ಎಲ್ಲೋ ತೀರಾ ಕೆಳಗಿದೆ. ಅಥಾರಿಟೇರಿಯನಿಸಂ ಎನ್ನುತ್ತೇವಲ್ಲ ಅದು ಈಗ ರಶ್ಯಾದಲ್ಲಿ ಜಾರಿಯಲ್ಲಿದೆ.


          ವ್ಲಾದಿಮಿರ್ ಪುಟಿನ್‌ನ ವೈಯಕ್ತಿಕ ಸಂಗತಿಗಳನ್ನು ಗಮನಿಸಿದರೇನಾದರೂ ಈತ ಅತಿ ದೊಡ್ಡ ಸರ್ವಾಧಿಕಾರಿಯಾಗಲು ರೂಪುಗೊಂಡದ್ದೇಕೆAದು ಅರಿವಾಗಬಹುದೇ ನೋಡಿ.
ಪುಟಿನ್ ಜನಿಸಿದ್ದು ಈಗ ಸೇಂಟ್ ಪೀರ‍್ಸ್ಬರ್ಗ್ ಎಂದು ಕರೆಸಿಕೊಳ್ಳುವ ಲೆನಿನ್ ಗ್ರಾಡ್‌ನಲ್ಲಿ 1952ರ ಅಕ್ಟೋಬರ್ ಏಳರಂದು. ಮೂವರು ಗಂಡು ಮಕ್ಕಳಲ್ಲಿ ಈತ ಅತ್ಯಂತ ಕಿರಿಯ, ಆದರೆ ಮೊದಲ ಎರಡು ಗಂಡು ಮಕ್ಕಳು ಬದುಕಲಿಲ್ಲ. 


           ಈತನ ಅಜ್ಜ ರಶ್ಯಾ ಕ್ರಾಂತಿಕಾರಿ ನಾಯಕರಾಗಿದ್ದ ವ್ಲಾದಿಮಿರ್ ಲೆನಿನ್ ಹಾಗೂ ಜೊಸೆಫ್ ಸ್ಟಾಲಿನ್‌ಗಳ ಖಾಸಾ ಅಡಿಗೆಯವನಾಗಿದ್ದ. ಪುಟಿನ್ ಅಮ್ಮ ಕಾರ್ಖಾನೆಯೊಂದರ ಕಾರ್ಮಿಕಳಾಗಿದ್ದಳು, 1942ರಲ್ಲಿ ಯುದ್ದದಲ್ಲಿ ತೀವ್ರವಾಗಿ ಗಾಯಗೊಂಡ ಈತನ ಅಪ್ಪ ಸೋವಿಯತ್ ನೌಕಾ ಪಡೆಯಲ್ಲಿದ್ದ. ಒಂದು ವರ್ಷ ಮೊದಲೇ ರಶ್ಯಾ ಅತಿಕ್ರಮಿಸಿಕೊಂಡಿದ್ದ ಜರ್ಮನಿ ಸೈನಿಕರು ಈತನ ಅಮ್ಮನ ಅಮ್ಮನನ್ನು ಕೊಂದು ಹಾಕಿದ್ದರು. ಈತನ ಮಾವಂದಿರೆಲ್ಲ ಎರಡನೇ ಮಹಾಯುದ್ದದ ಆ ಕಾಲದಲ್ಲಿ ಎಲ್ಲೋ ನಾಪತ್ತೆಯಾಗಿಬಿಟ್ಟಿದ್ದರು.


         1960ರಲ್ಲಿ ಮನೆಗೆ ಸಮೀಪದಲ್ಲೇ ಇದ್ದ ಶಾಲೆಗೆ ಸೇರ್ಪಡೆಯಾದ ಪುಟಿನ್ ಜುಡೋದಂತ ವೈಯಕ್ತಿಕ ಯುದ್ಧ ಕಲೆ ಕಲಿತ, ಜರ್ಮನ್ ಭಾಷೆಯಲ್ಲಿ ಪರಿಣಿತನಾದ. ಬಿಡುವಿನ ವೇಳೆಯಲ್ಲಿ ಕಾರ್ಲ್ಮಾರ್ಕ್ಸ್, ಏಂಗೆಲ್ಸ್ ಹಾಗೂ ಲೆನಿನ್ ಅವರನ್ನು ಅಭ್ಯಾಸ ಮಾಡುತ್ತಿದ್ದ. 1970ರಿಂದ 75ರವರೆಗೆ ಕಾನೂನು ಪದವಿ ಅಭ್ಯಾಸ ಮಾಡಿದ ಪುಟಿನ್ ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಸದಸ್ಯನೂ ಆದ, 1991ರಲ್ಲಿ ಆ ಪಕ್ಷವನ್ನು ನಿಷೇಧಿಸುವವರೆಗೂ ಅದೇ ಪಕ್ಷದಲ್ಲಿ ಉಳಿದಿದ್ದ. ಪುಟಿನ್‌ಗೆ ಇಬ್ಬರು ಮಕ್ಕಳು, 31 ವರ್ಷ ದಾಂಪತ್ಯದ ಬಳಿಕ ಈತ ಪತ್ನಿಯೊಂದಿಗೆ ವಿಚ್ಚೇದನ ಪಡೆದುಕೊಂಡಿದ್ದಾನೆ. ಪುಟಿನ್ ಕೆಜಿಬಿ ಸೇರಿದ್ದು, ಅಲ್ಲಿಂದ ರಾಜಕೀಯಕ್ಕಿಳಿದದ್ದನ್ನು ಮೊದಲೇ ಹೇಳಿದ್ದೇನೆ. 


           ರಶ್ಯಾದಲ್ಲಿ ಯಾವುದೇ ಸಿನಿಮಾ ನಟ ಅಥವಾ ಮಾಡೆಲ್‌ಗಿಂತ ಹೆಚ್ಚು ಜನಪ್ರಿಯ ಈತ. ಅಲ್ಲಿನ ಎಲ್ಲ ಕ್ಯಾಲೆಂಡರ್‌ಗಳಲ್ಲೂ ಈತನ ಚಿತ್ರಗಳೇ. ಮಾಸ್ಕೋ ನಗರದ ದಟ್ಟಣೆಯನ್ನು ದ್ವೇಷಿಸುವ ಪುಟಿನ್ 25 ಕಿಮೀ ದೂರದ ಕೋಟೆಯೊಂದರ ಅರಮನೆಯಂತ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ. ಮಾಸ್ಕೋದ ಅಧ್ಯಕ್ಷನ ಕಚೇರಿಯಿಂದ ಮನೆಗೆ ಹೊರಟನೆಂದರೆ ಎಲ್ಲ ಝೀರೋ ಟ್ರಾಫಿಕ್, 25ನಿಮಿಷದೊಳಗೆ ಮನೆ ಸೇರಿಕೊಳ್ಳುತ್ತಾನೆ.


          ತಡ ರಾತ್ರಿವರೆಗೆ ಎದ್ದಿರುವುದು, ಸಹಜವಾಗೇ ಬೆಳಿಗ್ಗೆ ತಡವಾಗಿ ಏಳುವುದು, ಎದ್ದ ಬಳಿಕ ಕನಿಷ್ಟ ಎರಡು ಗಂಟೆ ಕಾಲ ಈಜುವುದು, ಬಳಿಕ ತಣ್ಣೀರು ಅಥವಾ ಬಿಸಿನೀರು ಜಾಕ್ಯೂಜಿಯಲ್ಲಿ ಸ್ನಾನ ಮಾಡುವುದು, ಅಳತೆಕೊಟ್ಟು ಹೊಲಿಸಿದ ಅತ್ಯುತ್ತಮ ಸೂಟ್‌ಗಳನ್ನು ಧರಿಸುವ ವ್ಲಾದಿಮಿರ್ ಪುಟಿನ್ ಒಂದು ತೊಟ್ಟೂ ಅಲ್ಕೋಹಾಲ್ ಸೇವಿಸುವುದಿಲ್ಲವಂತೆ.


         ಪುಟಿನ್‌ಗೆ ಸದಾ ತಾಜಾ ಆಹಾರ ಇರಬೇಕಂತೆ, ಅತ್ಯಂತ ಮಿತಾಹಾರಿಯಾದ ಈತನಿಗೆ ಬ್ರೆಡ್ ಟೋಸ್ಟ್ ಜೊತೆಗೆ ಕಾಟೇಜ್ ಚೀಸ್ ಮತ್ತು ಗೌಜಲಕ್ಕಿ ಮೊಟ್ಟೆಗಳ ಆಮ್ಲೆಟ್ ಅಂದರೆ ಬಹಳ ಅಚ್ಚುಮೆಚ್ಚಂತೆ. ಇಲ್ಲಿ ಈತನದೇ ಮನಸ್ಥಿತಿ ಹೊಂದಿರುವ ನಮ್ಮವರಿಗೋ ಆಮದು ಮಾಡಿಕೊಂಡ ವಿಶಿಷ್ಟ ಅಣಬೆಯಂತೆ ಅನ್ನಬೇಡಿ, ಶ್ಯ್.