ಬಿಜೆಪಿಯಿಂದ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಗಂಡಾಂತರ: ಬಯ್ಯಾರೆಡ್ಡಿ
bayyareddy
ಬಿಜೆಪಿಯಿಂದ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಗಂಡಾAತರ: ಬಯ್ಯಾರೆಡ್ಡಿ
ಕೋಲಾರ: ಸಂಸತ್ತಿನಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತಿದೆ. ಆಳುವ ಬಿಜೆಪಿ ಸರ್ಕಾರ ತನ್ನ ಅತಿಯಾದ ಬಹುಮತ ಬಳಸಿಕೊಂಡು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದಬ್ಬಾಳಿಕೆಯ ಮಾರ್ಗದಿಂದ ಕಾನೂನುಗಳನ್ನು ಅಂಗೀಕರಿಸುತ್ತಿದೆ ಎಂದು ಸಿಪಿಐಎಂ ರಾಜ್ಯ ಮುಖಂಡ ಜಿ.ಸಿ. ಬಯ್ಯಾರೆಡ್ಡಿ ಖಂಡಿಸಿದರು.
ನಗರದ ಹಾಲಿಸ್ಟರ್ ಮೆಮೋರಿಯಲ್ ಹಾಲ್‌ನಲ್ಲಿ ಭಾನುವಾರ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್್ಸವಾದ)ದಿಂದ ನಡೆದ 17ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಜಾತೀಯತೆ, ಮತೀಯವಾದ, ಅಸಮಾನತೆಯನ್ನು ಜೀವಂತವಾಗಿರಿಸಿ ಮನುವಾದಿ ಬೆಂಬಲಿತ ಸಂವಿಧಾನವನ್ನು ಬಲಿಷ್ಟಗೊಳಿಸುವ ಶಕ್ತಿಗಳು ಸಂಸತ್‌ನಲ್ಲಿ ಅಧಿಕಾರ ವಹಿಸಿಕೊಂಡಿವೆ. ಮೋದಿ ಸರ್ವಾಧಿಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ದೇಶಕ್ಕೆ ಅಪಾಯ ಕಾದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರದಿAದ ಸಾಮಾನ್ಯ ವರ್ಗದ ಹಿತರಕ್ಷಣೆಯನ್ನು ಕಡೆಗಣಿಸಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಗಂಡಾAತರ ಬಂದಿದೆ. ಮುಂದೆ ಒಂದು ದಿನ ಹಳ್ಳಿಯ ಹಾದಿಬೀದಿಗಳಲ್ಲಿ ದೇಶಕ್ಕೆ ಆರ್‌ಎಸ್‌ಎಸ್‌ನ ಮನುವಾದ ಬೇಕೇ ಅಥವಾ ಅಂಬೇಡ್ಕರ್ ರಚಿಸಿದ ಸಂವಿಧಾನ ಬೇಕೇ ಎಂಬ ಚರ್ಚೆ ನಡೆಯುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋಮುವಾದಿ ಬೆಳವಣಿಗೆಗೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಗಾಂಧೀಜಿಯವರ ಮೌಲ್ಯಗಳು, ಸಂವಿಧಾನದ ಆಶಯಗಳ ಬಗ್ಗೆ ಗೌರವ ಇದ್ದರೆ ಕಾಂಗ್ರೆಸ್ ಪಕ್ಷದ ಎರಡು ಬಣಗಳು ಒಗ್ಗೂಡಬೇಕು. ಪ್ರಗತಿಪರ ಆಲೋಚನೆಗಳ ಜೊತೆ ಕೈಜೋಡಿಸಬೇಕಾಗಿದೆ ಎಂದರು.
ದೇಶದಲ್ಲಿ ರಾಜಕೀಯ ಸ್ವಾತಂತ್ರ÷್ಯ ಸಿಕ್ಕರೆ ಸಾಲದು. ಸಾಮಾಜಿಕ ನ್ಯಾಯ ಪರಿಕಲ್ಪನೆಯ ಸ್ವಾತಂತ್ರ÷್ಯ ವ್ಯವಸ್ಥೆ ಪ್ರತಿಯೊಬ್ಬರಿಗೂ ಸಿಗಬೇಕಾಗಿದೆ. ಶೋಷಿತರು, ಮಹಿಳೆಯರು ಮತ್ತು ದಲಿತರಿಗೆ ಎಲ್ಲಾ ರಂಗದಲ್ಲಿ ಸಮಾನ ಅವಕಾಶ ಸಿಕ್ಕಾಗ ಮಾತ್ರ ಸ್ವಾತಂತ್ರ÷್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಪಿ. ಜಯರಾಮರೆಡ್ಡಿ ಮಾತನಾಡಿ, ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾದ ಅವಕಾಶಗಳನ್ನು ಒದಗಿಸುವುದು ಪಕ್ಷದ ಸಿದ್ಧಾಂತ. ಬಿಜೆಪಿ ಕೇವಲ ಅಂಬಾನಿ, ಅದಾನಿಯಂತಹ ಶ್ರೀಮಂತ ವರ್ಗದವರ ಹಿತರಕ್ಷಣೆ ಮಾಡುವುದು ಮೋದಿ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಸಮ್ಮೇಳನವು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಡೆಯುತ್ತಿದೆ. ಶಾಶ್ವತ ನೀರಾವರಿ ಯೋಜನೆಗಳು, ಸ್ಥಳೀಯ ಕೈಗಾರಿಕೆಗಳು, ಬೆಮಲ್ ಉಳಿಸಬೇಕು. ಬಿಜಿಎಂಎಲ್ ಪುನರಾರಂಭಿಸಲು ಜನರಿಗೆ ಮೂಲ ಸೌಲಭ್ಯ ಒದಗಿಸುವಂತೆ ಮಾಡುವುದು ಸಮ್ಮೇಳನದ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪಿ. ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪಿ.ಆರ್. ಸೂರ್ಯನಾರಾಯಣ, ವಿ. ಗೀತಾ, ಎ.ಆರ್. ಬಾಬು, ಟಿ.ಎಂ. ವೆಂಕಟೇಶ್, ಜಿಲ್ಲಾ ಸಮಿತಿ ಸದಸ್ಯರಾದ ಪುಣ್ಯಹಳ್ಳಿ ಶಂಕರ್, ಚಲಪತಿ, ತಂಗರಾಜ್, ಈರಪ್ಪ ರೆಡ್ಡಿ, ನವೀನ್ ಹಾಜರಿದ್ದರು. ಅರ್ಜುನನ್ ಧ್ವಜಾರೋಹಣ ನೆರವೇರಿಸಿದರು.