ದೆಹಲಿ ಮಾದರಿಯಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿ: ಸರ್ಕಾರಕ್ಕೆ ಮನವಿ

ಅತಿಥಿ-ಉಪನ್ಯಾಸಕರನ್ನು-ದೆಹಲಿ-ಮಾದರಿಯಲ್ಲಿ-ಖಾಯಂಗೆ-ಆಗ್ರಹ

ದೆಹಲಿ ಮಾದರಿಯಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿ: ಸರ್ಕಾರಕ್ಕೆ ಮನವಿ

ದೆಹಲಿ ಮಾದರಿಯಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿ: ಸರ್ಕಾರಕ್ಕೆ ಮನವಿ

 ಕೋಲಾರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ತಾಲೂಕು ದಂಡಾಧಿಕಾರಿ ನಾಗರಾಜ ವಿ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


 ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಡಿಸೆಂಬರ್ 10 ರಿಂದ ಸಾಮೂಹಿಕ ತರಗತಿ ಬಹಿಷ್ಕರಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಹೋ ರಾತ್ರಿ ಹೋರಾಟ ಹಾಗೂ ಧರಣಿಗಳನ್ನು ಮಾಡುತ್ತಿದ್ದರೂ ಸಹ ಇದುವರೆಗೂ ತಮ್ಮ ಸರ್ಕಾರದಿಂದ ಯಾವುದೇ ರೀತಿಯ ಧನಾತ್ಮಕ ಸೂಚನೆಗಳನ್ನು ನೀಡದಿರುವುದು ತುಂಬಾ ಶೋಚನೀಯ, ದೇಶದಲ್ಲೇ ಎನ್.ಇ.ಪಿ ಜಾರಿಗೆ ತಂದ ಮೊದಲ ರಾಜ್ಯ ಎಂದು ಬೀಗುವ ನೀವು ಅದೇ ರಾಜ್ಯದ 8 ಲಕ್ಷ ಪದವಿ ವಿದ್ಯಾರ್ಥಿಗಳು 15000 ಅತಿಥಿ ಉಪನ್ಯಾಸಕರು ಇಂದು ಬೀದಿಗೆ ಬಿದ್ದಿರುವುದು ಕಾಣುವುದಿಲ್ಲ. ತಾವುಗಳು ನೀಡುವ ವರ್ಷಕ್ಕೆ 6 ತಿಂಗಳ ಸಂಬಳವನ್ನು ಪಡೆದು ತಂದೆ-ತಾಯಿ, ಹೆಂಡತಿ-ಮಕ್ಕಳನ್ನು ಪೋಷಣೆ ಮಾಡಲಾಗದೇ ನೇಣಿಗೆ ಶರಣಾಗುತ್ತಿರುವ ಅತಿಥಿ ಉಪನ್ಯಾಸಕರನ್ನು ಕಂಡರೂ ಕುರುಡರಂತೆ ವರ್ತಿಸುತ್ತಿರುವುದು ಶೋಚನೀಯ.


 ತಾವುಗಳು ರಚಿಸಿರುವ ಸಮಿತಿಯಿಂದ ನಮಗೆ ನ್ಯಾಯ ದೊರಕುತ್ತದೆಂದು ನಂಬಿಕೆಯಿಲ್ಲ. ಏಕೆಂದರೆ ಸರ್ಕಾರಗಳು ರಚಿಸಿರುವ ಎಷ್ಟೋ ಸಮಿತಿಗಳು ಇಂದಿಗೂ ಜಾರಿಯಾಗಿಲ್ಲ. ಆದ್ದರಿಂದ ತಾವು ಆದಷ್ಟು ಬೇಗನೆ ನಮ್ಮ ಬೇಡಿಕೆಗಳನ್ನು ಈಡೇರಿಸಿ, ಶೈಕ್ಷಣಿಕ ಚಟುವಟಿಕೆಗಳಲ್ಲಿ ನಮ್ಮನ್ನು ಪಾಲ್ಗೊಳ್ಳುವಂತೆ ಮಾಡಬೇಕೆಂದು ಮನವಿ ಮಾಡುತ್ತೇವೆ.


ಬೇಡಿಕೆಗಳು:


ದೆಹಲಿ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಎಲ್ಲಾ ಅತಿಥಿ ಉಪನ್ಯಾಸಕರನು ್ನಖಾಯಂ ಮಾಡಿ. ಇಲ್ಲವೇ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಕನಿಷ್ಠ ವೇತನ ನೀಡಿ ಹಾಗೂ ಸೇವಾ ಭದ್ರತೆಯನ್ನು ಒದಗಿಸಿಕೊಡಬೇಕು, ಸಹಾಯಕ ಪ್ರಾದ್ಯಾಪಕರ ಉಪನ್ಯಾಸಕರ ನೇಮಕಾತಿಯಲ್ಲಿ ನಮ್ಮ ಪ್ರತಿ ವರ್ಷದ ಸೇವೆಗೆ ಕನಿಷ್ಠ 3 ಕೃಂಪಾಕಗಳನ್ನು ನೀಡಬೇಕು, ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು, ಕಡಿಮೆ ಸಂಬಳದಿAದ ಕುಟುಂಬ ನಿರ್ವಹಣೆ ಮಾಡಲಾಗದೇ ಆತ್ಮಹತ್ಯೆ ಮಾಡಿಕೊಂಡಿರುವAತಹ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಕನಿಷ್ಠ 20 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.


ಅತಿಥಿ ಉಪನ್ಯಾಸಕರ ಸಂಘದ ಹೋರಾಟಕ್ಕೆ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ವಿಜಯಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಅಂಗಕನವಾಡಿ ಕಾರ್ಯಕರ್ತೆಯರಾದ ಶಿಲ್ಪ ಭಾವಹಿಸುವ ಮೂಲಕ ತಮ್ಮ ಸಂಘಟನೆಗಳ ಬೆಂಬಲ ವ್ಯಕ್ತಪಡಿಸಿದರು.


 ಅತಿಥಿ ಉಪನ್ಯಾಸಕರು ನಗರದ ಸರ್ವಜ್ಞ ಪಾರ್ಕಿನಿಂದ ಪಾದಯಾತ್ರೆ ಮಾಡುತ್ತಾ ಮೆಕ್ಕೆ ವೃತ್ತದ ಬಳಿ ಕೆಲಕಾಲ ಮಾನವ ಸರಪಳಿಯನ್ನು ನಿರ್ಮಿಸಿ ನಂತರ ತಾಲೂಕು ಕಚೇರಿಗೆ ಆಗಮಿಸಿ ತಮ್ಮ ಬೇಡಿಕೆಗಳ ಅಹವಾಲನ್ನು ತಾಲೂಕು ದಂಡಾಧಿಕಾರಿಗಳಾದ ನಾಗರಾಜ ವಿ ರವರ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಟ್ಟರು.


 ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ಆರ್ ಲಕ್ಷಿö್ಮÃನಾರಾಯಣ, ಜಿಲ್ಲಾಧ್ಯಕ್ಷ ಡಾ.ನೂರ್ ಅಹಮದ್ ಎಂ.ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವ ವಿ ಸೇರಿದಂತೆ ಅತಿಥಿ ಉಪನ್ಯಾಸಕರು ಇದ್ದರು.