ಪುನೀತ್ ರೀತಿ ರಾಜಕಾರಣಿಗಳು ಸಮಾಜ ಸೇವೆ ಮಾಡಲಿ: ಹೊಸಹಳ್ಳಿ ಚಂದ್ರಣ್ಣ

ಪುನೀತ್ ರೀತಿ ರಾಜಕಾರಣಿಗಳು ಸಮಾಜ ಸೇವೆ ಮಾಡಲಿ: ಹೊಸಹಳ್ಳಿ ಚಂದ್ರಣ್ಣ

ಪುನೀತ್ ರೀತಿ ರಾಜಕಾರಣಿಗಳು ಸಮಾಜ ಸೇವೆ ಮಾಡಲಿ: ಹೊಸಹಳ್ಳಿ ಚಂದ್ರಣ್ಣ


ಹುಳಿಯಾರು: ಹೊಸಹಳ್ಳಿ ಚಂದ್ರಣ್ಣ ಬಣದ ರೈತ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ನಿಧನರಾದ ನಟ ಪುನೀತ್ ರಾಜ್‌ಕುಮಾರ್ ಅವರ 12 ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಮಂಗಳವಾರ ಹುಳಿಯಾರಿನ ರಾಮಗೋಪಾಲ್ ಸರ್ಕಲ್‌ನಲ್ಲಿ ಮಾಡಲಾಯಿತು.  
          ಜಾತಿ ಧರ್ಮ ಭೇದ ಮರೆತು, ಪುನೀತ್ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಿ, ಅಗಲಿದ ನಟನಿಗೆ ಗೌರವ ಸಲ್ಲಿಸಿದರು. 
          ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಅವರು ಮಾತನಾಡಿ ಹುಟ್ಟಿದಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಆದರೆ, ಸತ್ತಾಗ ಉಸಿರು ಇಲ್ಲದಿದ್ದರೂ ಹೆಸರು ಉಳಿಯಬೇಕು ಎಂಬ ಮಾತಿಗೆ ಪುನೀತ್ ಪ್ರತ್ಯಕ್ಷ ನಿದರ್ಶನ. ಗಾಂಧೀಜಿ ನಂತರ ದೇಶದ ಇತಿಹಾಸದಲ್ಲಿ ಎಂದೂ ಕಂಡರಿಯದಷ್ಟು ಜನಸಾಗರ ಪುನೀತ್ ಅಂತಿಮ ದರ್ಶನ ಮಾಡಿದೆ. ಇದಕ್ಕೆ ಪ್ರಚಾರ ಬಯಸದೆ ಪುನೀತ್ ನಾನಾ ಸೇವಾ ಕಾರ್ಯ ಮಾಡಿದ್ದೇ ಕಾರಣ. ಹಾಗಾಗಿ ರಾಜಕಾರಣಿಗಳು ಇಡೀ ವಂಶಕ್ಕೆ ಆಗುವಷ್ಟು ದುಡ್ಡು ಕೂಡಿಡುವ ಬದಲು ಪುನೀತ್ ರೀತಿ ಸೇವಾ ಕಾರ್ಯಕ್ಕೆ ಮುಂದಾಗಲಿ ಎಂದರು.
         ಸಮಾಜಿಕ ಹೋರಾಟಗಾರ್ತಿ ಆಸಿಡ್‌ಜಯಲಕ್ಷಿö್ಮ ಅವರು ಮಾತನಾಡಿ ಪುನೀತ್ ರಾಜ್‌ಕುಮಾರ್ ಅವರು ಬಡವರ, ದೀನದಲಿತರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಒಂದು ಕೈಲಿ ಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಾಗಬಾರದು ಎನ್ನುವ ಹಾಗೆ ಕೆಲಸ ಮಾಡಿದರು. ಅವರ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಅವರ ಸ್ಮರಣೆ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿ ಕೊಂಡಿರುವುದು ಶ್ಲಾಘನೀಯ ಎಂದರು.
                ರೈತ ಸಂಘದ ಹೋಬಳಿ ಅಧ್ಯಕ್ಷ ಎಸ್.ಬೀರಪ್ಪ ಪುನೀತ್ ರಾಜ್‌ಕುಮಾರ್ ಅವರಲ್ಲಿ ಡಾ.ರಾಜಣ್ಣನಲ್ಲಿರುವ ಗುಣಗಳನ್ನು ಕಾಣುತ್ತಿದ್ದೆವು. ಅವರ ಅಕಾಲಿಕ ನಿಧನದಿಂದ ತುಂಬಾ ನೋವು ಉಂಟಾಗಿದೆ. ಅವರು ಇನ್ನೂ ಇರಬೇಕಿತ್ತು. ಅವರ ಹೆಚ್ಚಿನ ಸೇವೆ ರಾಜ್ಯದಲ್ಲಿ ಆಗಬೇಕಿತ್ತು. ಅಷ್ಟರಲ್ಲಿ ಭಗವಂತ ಬೇಗನೆ ಅವರನ್ನು ಕರೆದುಕೊಂಡು ಬಿಟ್ಟ. ಅವರು ಎಂದೆAದಿಗೂ ಅಜರಾಮರ, ಅವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸಿದರು. 
        ಪಪಂ ಸದಸ್ಯ ಎಸ್‌ಆರ್‌ಎಸ್ ದಯಾನಂದ್ ಅವರು ಮಾತನಾಡಿ ರಾಜ್ಯದ ಇತಿಹಾಸದಲ್ಲೇ ಕಿರಿಯ ವಯಸ್ಸಿನಲ್ಲಿಯೇ ಅವಿಸ್ಮರಣೆಯ ಸಾಧನೆಯನ್ನು ಪುನೀತ್ ಮಾಡಿದ್ದಾರೆ. ಅವರ ಸರಳ ಸಜ್ಜನಿಕೆ ವ್ಯಕ್ತಿತ್ವ ಮತ್ತು ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ. ಅವರ ಸಾರ್ಥಕ ಸೇವೆಯನ್ನು ಪರಿಗಣಿಸಿ ಕೆಂದ್ರ ಸರ್ಕಾರ ಮರಣೋತ್ತರವಾಗಿ ಪದ್ಮಭೂಷಣ ಪುರಸ್ಕಾರ ನೀಡಬೇಕು ಎಂದು ಒತ್ತಾಯಿಸಿದರು. 
        ದೊಡ್ಡಬಿದರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಕರಿಯಪ್ಪ, ಭಟ್ರುಚಂದ್ರಣ್ಣ, ನೀರಾಈರಣ್ಣ, ಹೊನ್ನಪ್ಪ, ಪ್ರಕಾಶ್, ಪುಷ್ಪಾ, ಸಾಕುಬಾಯಿ, ನರಸಿಂಹಮೂರ್ತಿ, ಮಹಬೂಬ್, ಹಾರೂನ್ ಷರೀಫ್, ಯೂಸೂಫ್‌ಸಾಬ್, ಗುಜರಿಫಯಾಯ್, ಗುಂಡುಫಯಾಜ್, ಕದೀರ್‌ಸಾಬ್, ಕುಮಾರಣ್ಣ ಮತ್ತಿತರರು ಇದ್ದರು.