‘ಅಸಹ್ಯ ರಾಜಕಾರಣದ ಪರಮಾವಧಿ’ ವೈ.ಎಸ್. ವಿ .ದತ್ತಾ

‘ಅಸಹ್ಯ ರಾಜಕಾರಣದ ಪರಮಾವಧಿ’ ವೈ.ಎಸ್. ವಿ .ದತ್ತಾ

‘ಅಸಹ್ಯ ರಾಜಕಾರಣದ ಪರಮಾವಧಿ’ ವೈ.ಎಸ್. ವಿ .ದತ್ತಾ

‘ಅಸಹ್ಯ ರಾಜಕಾರಣದ ಪರಮಾವಧಿ’
ವೈ.ಎಸ್. ವಿ .ದತ್ತಾ


ಕುವೆಂಪುರವರ ಸೌಹಾರ್ದತೆಯ ನೆಲೆಗಟ್ಟನ್ನು ಆದರ್ಶವಾಗಿಟ್ಟುಕೊಂಡ ಕರ್ನಾಟಕ ರಾಜ್ಯದಲ್ಲಿ ಕಳೆದಷ್ಟು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳು ನನ್ನಲ್ಲಿ ರಾಜ್ಯದ ಭವಿಷ್ಯದ ಬಗ್ಗೆ ಆತಂಕವನ್ನುಂಟು ಮಾಡಿದೆ.ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಹಿಂದು,ಕ್ರೈಸ್ತ,ಮುಸಲ್ಮಾನ,ಜೈನ,ಸಿಕ್ಖರೆಲ್ಲರು ತಮಗಿಷ್ಟದ ಧರ್ಮಗಳನ್ನು ಅನುಸರಿಸಿಕೊಂಡು ಸಹಬಾಳ್ವೆ ನಡೆಸುತ್ತಿದ್ದಾರೆ.


ನಾನೊಬ್ಬ ಶಿಕ್ಷಕನಾಗಿ,ಜನಪ್ರತಿನಿಧಿಯಾಗಿ ನೂರಾರು ಶಾಲಾ,ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಹಿಜಾಬ್ ತೊಟ್ಟ ಹುಡುಗಿಯರು,ಕುಂಕುಮವಿಟ್ಟುಕೊಂಡ ಹುಡುಗಿಯರು ಒಟ್ಟಿಗೆ ಕಲಿಯುವುದನ್ನು,ನಲಿಯುವುದನ್ನು ಕಣ್ಣಾರೆ ಕಂಡಿದ್ದೇನೆ.


ಹಾಗೆ ಒಟ್ಟಾಗಿ ಇರುವುದೆ ಈ ಭಾರತವೆಂಬ ಜಾತ್ಯಾತೀತ ನೆಲದ ಗುಣ ಮತ್ತು ಪರಂಪರೆ.ವಿವಿಧತೆಯಲ್ಲಿ ಏಕತೆಯೆ ಈ ಭಾರತ ಒಕ್ಕೂಟದ ಧ್ಯೇಯ.ವಿವಿಧ ಸಂಸ್ಕೃತಿಗಳನ್ನು ಗೌರವಿಸುತ್ತ ಏಕತೆಯಿಂದ ಬದುಕುವುವರೆ ನಿಜವಾದ ಭಾರತೀಯರು.


ಸ್ವತಂತ್ರ್ಯಾ ನಂತರ ಕಳೆದ ಎಪ್ಪತ್ತು ವರ್ಷಗಳಿಂದ ಇಲ್ಲದ ಈ ಸಮಸ್ಯೆ ಏಕಾಏಕಿಯಾಗಿ ಈಗ ಹುಟ್ಟಿಕೊಂಡಿರುವುದಕ್ಕೆ ಕಾರಣ ಯಾರು ಎಂಬುದು ಗೋಡೆಯ ಮೇಲೆ ಬರೆದ ಬರಹದಷ್ಟೆ ಸ್ಪಷ್ಟವಾಗಿದೆ.


ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯ ಬಳಿ ಹೇಳಿಕೊಳ್ಳುವಂತಹ ಯಾವ ಅಭಿವೃದ್ಧಿಯ ಕೆಲಸಗಳು ಇಲ್ಲದೆ ಇರುವುದರಿಂದ ಈ ನಾಡಿನ ಹಿಂದು-ಮುಸಲ್ಮಾನರ ಸೌಹಾರ್ದತೆಯನ್ನು ಕೆಡಿಸಿ,ಜಗಳವಾಡಿಸಿ ಆ ಮೂಲಕ ಮತ ವಿಭಜನೆಮಾಡಲು ಹೊರಟಿರುವ ನಡೆ ಅದರಲ್ಲೂ ವಿಶೇಷವಾಗಿ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿರುವುದು ಅಸಹ್ಯ ರಾಜಕಾರಣದ ಪರಮಾವಧಿ.


ಪಕ್ಷಾತೀತವಾಗಿ ನಾಡಿನ ಸರ್ವ ಜಾತಿ,ಜನಾಂಗದ ಜನರ ಹಿತ ಬಯಸುವುದು ರಾಜಕಾರಣಿಗಳಾದ ನಮ್ಮ ಕರ್ತವ್ಯ.


ಜನಪ್ರತಿನಿಧಿಗಳಾದವರು ಅಧಿಕಾರ ಸ್ವೀಕರಿಸುವಾಗ ಬಾಬಾ ಸಾಹೇಬ್ ಅಂಬೇಡ್ಕರರು ಬರೆದ ಸಂವಿಧಾನದ ಮೇಲೆ ಮಾಡಿರುವ ಪ್ರಮಾಣವನ್ನು ಮರೆತು ದೇಶದ ಜಾತ್ಯಾತೀತ ಸಿದ್ಧಾಂತವನ್ನು ಗಾಳಿಗೆ ತೂರುವ ಹೇಳಿಕೆ ಕೊಟ್ಟು ಜನರ ನೆಮ್ಮದಿ,ಶಾಂತಿಯನ್ನು ಕದಡಬೇಡಿ.

ನಾನು ನೀವು ಹಿಂದೂ ಎನ್ನುವುದು 
ಸುಳ್ಳಾದ ಕಲ್ಪಿತ ವಾಸ್ತವವಷ್ಟೇ..,
ಡಾ.ನಟರಾಜ ಕೆ ಪಿ

"ಹಿಂದೂ ಮೆಜಾರಿಟೇರಿಯನಿಸಂ'' '' ಮೆಜಾರಿಟೇರಿಯನ್ ದೃಷ್ಟಿ '' 'ಮೆಜಾರಿಟೇರಿನ್ ಪ್ರಭುತ್ವ'. ಎಂಬಂತಹ ನುಡಿಗಟ್ಟುಗಳನ್ನು ಚಾಲ್ತಿಗೆ ಬಿಡಲಾಗಿದೆ .ಈ ಬಿಜೆಪಿಗಳು ಬಂದ ನಂತರ ಇದು ಹೆಚ್ಚು ಚಾಲ್ತಿಗೆ ಬಂತು.. 


ಮೊದಲಿಗೆ ಈ ಮಾತೇ ಟೊಳ್ಳಾದದ್ದು . ಹಿಂದೂ ಎಂದು ಹೇಳಿಕೊಳ್ಳುವವನ್ಯಾವನೂ ತನ್ನಂತೆಯೆ ಹಿಂದೂ ಎಂದು ಕರೆದುಕೊಳ್ಳುವ ಪಕ್ಕದ ಜಾತಿಯವನ ಮನೆಯ ಹೆಣ್ಣು, ಗಂಡುಗಳನ್ನು ತನ್ನ ಮನೆಯ ಹೆಣ್ಣು ಗಂಡುಗಳಿಗೆ ಮದುವೆ ಮಾಡಿಕೊಳ್ಳುವುದಿಲ್ಲ.


ಮದುವೆ ಮಾಡಿಕೊಳ್ಳುವುದಿರಲಿ , ಬೇರೆ ಜಾತಿಯವನ ಅಥವಾ ಜಾತಿಯವಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದು ಗೊತ್ತಾದರೆ , ತನ್ನ ಜಾತಿಯ ಮರ್ಯಾದೆ ಹೋಯ್ತು ಎಂದು ಹತ್ಯೆ ಮಾಡಲು ಮುನ್ನುಗ್ಗುವ ವಾಸ್ತವವೇ ಇಂದಿಗೂ ನಮ್ಮನಾಳುತ್ತಿದೆ . ಆಗ ಹಿಂದೂ ಎನ್ನುವುದು ಎಲ್ಲಿಯೂ ನಮ್ಮನ್ನು ಒಂದಾಗಿ ಬೆಸೆದಿರುವುದಿಲ್ಲ..


ಹೀಗಾಗಿ ಹಿಂದೂ ಅನ್ನುವುದೇ ಮೂಲತಹ ಟೊಳ್ಳು . ನಾನು ಒಕ್ಕಲಿಗ,ಲಿಂಗಾಯತ,ವಿಶ್ವಕರ್ಮ, ತಿಗಳ,ಶೆಟ್ಟಿ,ಕುರುಬ, ಕ್ಷೌರಿಕ ..ಅಸ್ಪೃಶ್ಯ ಇತ್ಯಾದಿ . ಜಾತಿಗಳೇ ಸತ್ಯ .


ಮತ್ತು ಈ ಜಾತಿಗಳೆ ನಮ್ಮ ನಿಜವಾದ ಸಾಮಾಜಿಕ ಗುರುತುಗಳು ಕೂಡಾ . ಮತ್ತು ಈ ಎಲ್ಲ ಜಾತಿಗಳೂ ಕೂಡಾ ಚಿಕ್ಕ ಚಿಕ್ಕದಾದ , ಪರಸ್ಪರರಿಗೆ ಸಂಬಂಧವೇ ಇಲ್ಲದ ಪರಸ್ಪರ ಅಪರಿಚಿತವಾದ ಗುಂಪುಗಳು . 
ಇಂತಹ ಜಾತಿಗಳಾಗಿ ಒಡೆದುಹೋದ ಹಿಂದೂ ಜಾತಿಗಳನ್ನು ಒಂದು ಕಟ್ಟಿನಲ್ಲಿ ಕಟ್ಟಿಹಾಕಿ ಅವರೊಳಗೆ ಒಂದೇ ಎನ್ನುವ ಸುಳ್ಳನ್ನು ತುಂಬಿ ಅದರ ರಾಜಕೀಯ ಲಾಭವನ್ನು ಮಾತ್ರ ಬಿಜೆಪಿ ಪಡೆಯುತ್ತಿದೆ. ತಾವು ಒಂದೇ ಎಂಬ ಕೇವಲ ಭ್ರಮೆಯಲ್ಲಷ್ಟೇ ಈ ಒಡೆದುಹೋದ ಜಾತಿಗಳು ಬಾಳುತ್ತಿವೆ.


ಒಟ್ಟಾಗಿ ಒಂದು ಕಟ್ಟಿನಲ್ಲಿದ್ದೇವೆ ಎಂಬ ಮೂಲತಹ ಸುಳ್ಳಾದ ಕಲ್ಪಿತ ವಾಸ್ತವವಷ್ಟೇ ನಿಜವಾಗಿದ್ದು , ಅದರಾಚೆಗೆ ಸಮುದಾಯಗಳ ಸಮೀಪೀಕರಣದ ಕಿಂಚಿತ್ ಸುಧಾರಣಾ ಕಾರ್ಯವೂ ಇಲ್ಲಿ ನಡೆಯುತ್ತಿಲ್ಲ.


ಈ ಭ್ರಮೆಯ ಬದುಕಿನ ಒಳಗೆ ತಮ್ಮ ಜಾತಿ ಕೂಪಗಳೊಳಗೇ ಬಾಳುತ್ತ ಒಂಟಿ ದ್ವೀಪಗಳಾಗಿರುವ - ಅದರಲ್ಲೂ ಊರಿಗೆ ಒಂಟಿ ಒಕ್ಕಲಾಗಿ ಬಾಳುವ ಅಲ್ಪ ಸಂಖ್ಯಾತ ಜಾತಿಗಳ ಅಸಹಾಯಕತೆಯನ್ನು ಇಲ್ಲಿ ಕೇಳುವುದೇ ಬೇಡ - ಹಿಂದೂ ಜಾತಿಗಳು ಜಾತಿ ವ್ಯವಸ್ಥೆಯ ಮೇಲು ಕೀಳಿನ ಬಲಿಗಳಾಗಿವೆ ..


ಇವತ್ತಿಗೂ ಹಿಂದೂ ಜಾತಿಗಳಿಗೆ ಸತ್ತರೆ ಮಣ್ಣು ಮಾಡಲು ಊರುಗಳಲ್ಲಿ ಸ್ಮಷಾಣಗಳಿಲ್ಲ ... ಅದರಲ್ಲೂ ಸ್ವಂತ ಭೂಮಿ ಇಲ್ಲದ ಅಸಹಾಯಕ ಒಬ್ಬಂಟಿ ಜಾತಿಗಳ ಗೋಳನ್ನು ಹೇಳಿಕೊಳ್ಳಲೂ ಜನರಿಲ್ಲದ ಏಕಾಕಿತನ ತಾನೆ ತಾನಾಗಿದೆ 


ಈ ಏಕಾಂಗಿಗಳಾದ ಮತ್ತು ಸ್ಥಳೀಯ ವ್ಯಾಪ್ತಿಯ ಜಾತಿಗಳಿಗೆ ಹೋಲಿಸಿದರೆ ಮುಸ್ಲಿಮ್ , ಕ್ರಿಶ್ಚಿಯನ್ .. ಸಮುದಾಯಗಳೇ ಬಲಿಷ್ಟವಾಗಿವೆ.. ಸುವ್ಯವಸ್ಥಿತ ವಾಗಿವೆ ಸುಸಂಘಟಿತವಾಗಿವೆ...
ರಾಷ್ಟ್ರೀಯ ವ್ಯಾಪ್ತಿಯವಾಗಿವೆ 
________________