ಜಿಲ್ಲೆಯ 2016 ಕೆರೆಗಳಲ್ಲಿ ಇನ್ನೂ 1542 ಕೆರೆಗೆಳ ಸರ್ವೆ ಬಾಕಿ ಕೆರೆ ಒತ್ತುವರಿ ತೆರವಿಗೆ ಮುಲಾಜು ಬೇಡ: ಡಿಸಿ 

ಜಿಲ್ಲೆಯ 2016 ಕೆರೆಗಳಲ್ಲಿ ಇನ್ನೂ 1542 ಕೆರೆಗೆಳ ಸರ್ವೆ ಬಾಕಿ ಕೆರೆ ಒತ್ತುವರಿ ತೆರವಿಗೆ ಮುಲಾಜು ಬೇಡ: ಡಿಸಿ ಜಿಲ್ಲೆಯ 2016 ಕೆರೆಗಳಲ್ಲಿ ಇನ್ನೂ 1542 ಕೆರೆಗೆಳ ಸರ್ವೆ ಬಾಕಿ


ಕೆರೆ ಒತ್ತುವರಿ ತೆರವಿಗೆ ಮುಲಾಜು ಬೇಡ: ಡಿಸಿ 


ತುಮಕೂರು :  ಜಿಲ್ಲೆಯ 2061 ಕೆರೆಗಳ ಪೈಕಿ 1542 ಕೆರೆಗಳ ಸರ್ವೆ ಕಾರ್ಯಬಾಕಿ ಉಳಿದಿದ್ದು, ಒತ್ತುವರಿಯಾಗಿರುವ ಕೆರೆಗಳು ಹಾಗೂ ರಾಜಗಾಲುವೆಗಳನ್ನು ಗುರುತಿಸಿ, ಯಾರ ಮುಲಾಜಿಗೂ ಒಳಗಾಗದೇ ಒತ್ತುವರಿ ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಲ್ಲದೆ ಕೆರೆ ಒತ್ತುವರಿ ತೆರವಿಗೆ ಯಾರಾದರೂ ಅಡ್ಡಿ ಬಂದಲ್ಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

 ಜಿಲ್ಲಾಧಿಕಾರಿ ಕಚೇರಿಯ ವೀಡಿಯೋ ಸಭಾಂಗಣದಲ್ಲಿ ಬುಧವಾರ ಕೆರೆಗಳ ಒತ್ತುವರಿ ತೆರವು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಜಿಲ್ಲೆಯಲ್ಲಿ ಈಗಾಗಲೇ 519 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ.  ಅದರಲ್ಲಿ 239 ಕೆರೆಗಳು ಒತ್ತುವರಿಯಿಂದ ಮುಕ್ತವಾಗಿದ್ದು, ಒತ್ತುವರಿಯಾಗಿರುವ 280 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 
ಕೆರೆಗಳನ್ನು ಶಾಶ್ವತ ಆಸ್ತಿಯನ್ನಾಗಿ ಅಭಿವೃದ್ಧಿಪಡಿಸಿ  ಮುಂದಿನ ಪೀಳಿಗೆಗೆ ಸುರಕ್ಷಿತ ಪರಿಸರ ಉಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ, ಜಿಲ್ಲೆಯ ಎಲ್ಲ ಕೆರೆಗಳ ಸರ್ವೆ ಕಾರ್ಯ ಕೈಗೊಂಡು ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು. ಕೆರೆಗಳ ಸುತ್ತ ಗಡಿ ಗುರುತಿಸಿ, ಅದರ ಸುತ್ತ ಇರುವ ಬಫರ್ ವಲಯದಲ್ಲಿ ಯಾವುದೇ ಕಟ್ಟಡ ಅಥವಾ ಇತರೆ ಕಾಮಗಾರಿಗಳಿಗೆ ಅನುಮತಿ ನೀಡಬಾರದು.  ಈ ಬಗ್ಗೆ ಕೂಡಲೇ ಸರ್ವೆ ನಡೆಸಿ ಒತ್ತುವರಿಯಾಗಿರುವ ಕೆರೆಗಳ ಮಾಹಿತಿ ನೀಡುವಂತೆ ಅವರು ಸೂಚಿಸಿದರು.
ಕೆರೆಗಳ ಒತ್ತುವರಿ ತೆರವುಗೊಳಿಸಿದ ಬಳಿಕ ಹದ್ದುಬಸ್ತು ನಿಗದಿ ಪಡಿಸಿ, ಸುತ್ತಲೂ ಟ್ರಂಚಿAಗ್ ತೆಗೆಯಬೇಕು. ಇಲ್ಲದಿದ್ದರೆ ಮತ್ತೆ ಒತ್ತುವರಿ ಮಾಡುವ ಸಾಧ್ಯತೆಗಳಿದ್ದು, ಅದಕ್ಕೆ ಅವಕಾಶ ನೀಡಬಾರದು ಮತ್ತು ತಕ್ಷಣವೇ ಗಿಡಗಳನ್ನು ನೆಡಬೇಕು ಎಂದು ಸಾಮಾಜಿಕ ಅರಣ್ಯ ಇಲಾಖಾಧಿಕಾರಿಗೆ ನಿರ್ದೇಶಿಸಿದರು.
ಕೆರೆಗಳ ಒತ್ತುವರಿ ಜೊತೆಗೆ ರಾಜಗಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿ ಒತ್ತುವರಿ ತೆರವು ಕಾರ್ಯ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್ ಇತರರು ಇದ್ದರು. 
**********


ಇಂದು ಬೆಳಿಗ್ಗೆ 11ಕ್ಕೆ ಎಲ್ಲೆಡೆ 
ಕನ್ನಡ ಗೀತೆಗಳ ಗಾಯನ 


ತುಮಕೂರು :   ಕನ್ನಡ ರಾಜ್ಯೋತ್ಸವದ ಪ್ರಯುಕ್ತ `` ಕನ್ನಡಕ್ಕಾಗಿ ನಾವು-ಅಭಿಯಾನ''ದಡಿ ಅಕ್ಟೋಬರ್ 28ರ ಬೆಳಿಗ್ಗೆ  ಬೆಳಿಗ್ಗೆ 11 ರಿಂದ 11-30 ಗಂಟೆಯವರೆಗೆ ಶ್ರೀ ಸಿದ್ದಗಂಗಾ ಮಠದಲ್ಲಿ  ``ಕನ್ನಡ ಗೀತೆಗಳ ಗಾಯನ'' ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದ್ದು,  ಕಾರ್ಯಕ್ರಮದಲ್ಲಿ ನಾಡು ಕಂಡ ಶ್ರೇಷ್ಠ ಕವಿಗಳಾದ ಡಾ: ಕುವೆಂಪು ಅವರ ``ಬಾರಿಸು ಕನ್ನಡ ಡಿಂಡಿಮವ'',  ಡಾ: ಕೆ.ಎಸ್.ನಿಸಾರ್ ಅಹಮ್ಮದ್ ಅವರ ``ಜೋಗದ ಸಿರಿ ಬೆಳಕಿನಲ್ಲಿ''  ಹಾಗೂ ಹಂಸಲೇಖ ಅವರ `` ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು'' ಸೇರಿದಂತೆ ಮೂರು ಗೀತೆಗಳನ್ನು ಮಲ್ಲಿಕಾರ್ಜುನ ಕೆಂಕೆರೆ ನೇತೃತ್ವದಲ್ಲಿ ಹಾಡಲಾಗುವುದು.  
       ಶ್ರೀ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲೆಯ ಸಚಿವರು, ಲೋಕಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಹಾನಗರಪಾಲಿಕೆ ಮೇಯರ್, ಟೂಡಾ ಅದ್ಯಕ್ಷರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಅಧಿಕಾರಿಗಳು ಭಾಗವಹಿಸಲಿದ್ದಾರೆ.   
     ಅಲ್ಲದೆ, ನಗರದ ಸರ್ಕಾರಿ ಎಂಪ್ರೆಸ್ ಕಾಲೇಜು; ಜಿಲ್ಲಾ ಆಸ್ಪತ್ರೆ ಸಭಾಂಗಣ; ತುಮಕೂರು ವಿಶ್ವವಿದ್ಯಾಲಯದ ಸಭಾಂಗಣ;  ಟೌನ್ ಹಾಲ್ ವೃತ್ತದ ಬಳಿಯ ಶ್ರೀ ಸಿದ್ದಗಂಗಾ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜು; ಸರ್ಕಾರಿ ಆಸ್ಪತ್ರೆ ಮುಂಭಾಗದ ಶ್ರೀ ಸಿದ್ದಗಂಗಾ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಮಹಿಳಾ ಕಾಲೇಜು; ಟೌನ್ ಹಾಲ್ ವೃತ್ತದ ಬಳಿಯ ಸೇಂಟ್ ಮೇರಿಸ್ ಆಂಗ್ಲ ಶಾಲೆ; ಕ್ಯಾತ್ಸಂದ್ರ ಬಳಿಯ ಶ್ರೀ ಚೈತನ್ಯ ಟೆಕ್ನೋ ಶಾಲೆ; ಬಿ ಹೆಚ್ ರಸ್ತೆಯ ಬಳಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು; ರೈಲ್ವೆ ಸ್ಟೇಷನ್ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು; ಸರ್ಕಾರಿ ಪ್ರೌಢಶಾಲಾ ಮೈದಾನದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಪ್ತಗಿರಿ ಬಡಾವಣೆಯಲ್ಲಿನ ಸಪ್ತಗಿರಿ ಪದವಿ ಪೂರ್ವ ಕಾಲೇಜು ಸೇರಿದಂತೆ  ಜಿಲ್ಲೆಯಾದ್ಯಂತ ಎಲ್ಲಾ ಶಾಲಾ,ಕಾಲೇಜು,ಗಡಿ ಪ್ರದೇಶಗಳಲ್ಲಿ,  ಸರ್ಕಾರಿ ಕಚೇರಿಗಳ ಮುಂಭಾಗದಲ್ಲಿ, ದೇವರಾಯನದುರ್ಗದ ದೇವಸ್ಥಾನದ ಮುಂಭಾಗದಲ್ಲಿ ಗೀತಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 
 ಸಾರ್ವಜನಿಕರು ಭಾಗವಹಿಸಿ ಗೀತೆಗಳನ್ನು ಹಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದ್ದಾರೆ.