``ಪ್ರತಿ ಕನ್ನಡಿಗನ ಹೆಮ್ಮೆ ಕನ್ನಡ ರಾಜ್ಯೋತ್ಸವ’’

``ಪ್ರತಿ ಕನ್ನಡಿಗನ ಹೆಮ್ಮೆ ಕನ್ನಡ ರಾಜ್ಯೋತ್ಸವ’’


``ಪ್ರತಿ ಕನ್ನಡಿಗನ ಹೆಮ್ಮೆ ಕನ್ನಡ ರಾಜ್ಯೋತ್ಸವ’’


ಪಾವಗಡ: ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ. ಇದನ್ನು ಎಲ್ಲರೂ ಸಂಭ್ರಮದಿAದ ಆಚರಿಸೋಣ ಎಂದು ತಹಸೀಲ್ದಾರ್ ನಾಗರಾಜ್ ಅವರು ತಿಳಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕು ಕಚೇರಿಯ ಆವರಣದಲ್ಲಿ ``ಮಾತಾಡ್ ಮಾತಾಡ್ ಕನ್ನq’’À ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ರಾಜ್ಯಾದಾದ್ಯಂತ ಒಂದು ಲಕ್ಷ ಕಂಠಗಳಲ್ಲಿ ``ಬಾರಿಸು ಕನ್ನಡ ಡಿಂಡಿಮವ'', `ಜೋಗದ ಸಿರಿ ಬೆಳಕಿನಲ್ಲಿ', ``ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು'' ಎಂಬ ಮೂರು ಗೀತೆಗಳ ಗಾಯನವನ್ನ ವೇಣುಗೋಪಾಲ ಬಾಲಕಿಯರ ಶಾಲೆಯ ಮಕ್ಕಳಿಂದ ಸಾಮೂಹಿಕ ಗೀತಾ ಅಭಿಯಾನಕ್ಕೆ ತಹಶಿಲ್ದಾರರ ನಾಗರಾಜು ಚಾಲನೆ ನೀಡಿ ಮಾತನಾಡುತ್ತಾ, ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯವನ್ನು ಅಭಿಯಾನವನ್ನು ಶಾಲಾ ಮಕ್ಕಳಿಂದ ಆಯೋಜಿಸಲಾಗಿತ್ತು. ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲಿ ಮಾತನಾಡುತ್ತೇನೆ. ಕನ್ನಡದಲ್ಲಿ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವೇ ಬಳಸುತ್ತೇನೆ ಎಂದು ಸಂಕಲ್ಪಮಾಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಳಿಸುತ್ತೇನೆ. ಕನ್ನಡ ನಾಡು ನುಡಿ ಸಂಸ್ಕöÈತಿ ಹಾಗೂ ಪರಂಪರೆಯನ್ನು ಉಳಿಸಲು ಬದ್ಧನಾಗಿರುತ್ತೇನೆ ಎಂದು ತಿಳಿಸಿದರು.
ಪಿಇಓ ಚಿದಾನಂದ ಸ್ವಾಮಿ, ಇಸಿಓ ಶಿವಕುಮಾರ್, ಬಾಪೂಜಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ರಾಮಾಂಜಿನಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ಟಿ. ಖಾನ್, ವೇಣುಗೋಪಾಲಸ್ವಾಮಿ ಶಾಲೆಯ ಮುಖ್ಯ ಶಿಕ್ಷಕ ನಾರಾಯಣಪ್ಪ, ಶಿಕ್ಷಕಿಯರಾದ ಶೋಭಾ, ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು, ರಕ್ಷಣಾ ವೇದಿಕೆ ಪದಾಧಿಕಾರಿಗಳು ಇದ್ದರು.