ಅಕ್ಕಡಿ  - ಕಳಚುತ್ತಿರುವ ಕೃಷಿ ಸಂಸ್ಕೃತಿಯ ಕೊಂಡಿ -3

ಹೀಗೆ, ಗದ್ದೆ ತಾಕುಗಳಿಂದ ಮರೆಯಾದ ಅಕ್ಕಡಿ ನಮ್ಮ ಒಣ ಭೂಮಿಯಿಂದಲೂ ಕಣ್ಮರೆಯಾಗುತ್ತಿದೆ. 

ಅಕ್ಕಡಿ  - ಕಳಚುತ್ತಿರುವ ಕೃಷಿ ಸಂಸ್ಕೃತಿಯ ಕೊಂಡಿ -3

ಬೇಸಾಯ

ಮಲ್ಲಿಕಾರ್ಜುನ ಹೊಸಪಾಳ್ಯ


ವೈಪರೀತ್ಯ ಎದುರಿಸುವುದು ಮತ್ತು ಬೆಳೆ ಭದ್ರತೆ


ಹವಾಮಾನ ವೈಪರೀತ್ಯ-ಅಂದರೆ ಅಕಾಲಿಕ ಮಳೆ, ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಳ, ಬಿಸಿಗಾಳಿ, ಮಳೆ ದಿನಗಳ ಏರು-ಪೇರು, ಹೂ ಕಾಯುವ ಇಲ್ಲವೇ ಕಾಳು ಕಟ್ಟುವ ಸಮಯದಲ್ಲಿ ಮಳೆ ಅಭಾವಇತ್ಯಾದಿ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗುಣ ಅಕ್ಕಡಿ ಬೆಳೆಗಳಿಗಿದೆ. ಇದೊಂದು ರೀತಿ ಬೆಳೆ ವಿಮೆ ಇದ್ದಂತೆ. ಒಂದು ಬೆಳೆ ನಷ್ಟವಾದರೆ ಮತ್ತೊಂದು ಕೈಹಿಡಿಯುತ್ತದೆ. ಈ ಪದ್ಧತಿ ಅನುಸರಣೆಯಿಂದ ಸಂಪೂರ್ಣ ಬೆಳೆ ವೈಫಲ್ಯದ ಅಪಾಯವನ್ನು ಕಡಿಮೆ ಮಾಡಬಹುದು. 

ಕೀಟ ಮತ್ತು ರೋಗ ನಿಯಂತ್ರಣ


ಅಕ್ಕಡಿ ಬೆಳೆ ಸಂಯೋಜನೆಯು ಕೀಟ ಮತ್ತು ರೋಗ ನಿಯಂತ್ರಣಕ್ಕೆ ಪೂರಕವಾಗಿದೆ. ಬದುಗಳಅಂಚಿನಲ್ಲಿ ಸಾಮಾನ್ಯವಾಗಿ ಹಳದಿ ಹೂ ಬಿಡುವ ಹುಚ್ಚೆಳ್ಳು, ಕುಸುಬೆ, ಸೆಣಬು ಬೆಳೆಗಳನ್ನು ಹಾಕುವುದರಿಂದ ಈ ಬೆಳೆಗಳತ್ತ ಆಕರ್ಷಕವಾಗುವ ಕೀಟಗಳು ಮುಖ್ಯ ಬೆಳೆಗೆ ತೊಂದರೆ ಕೊಡುವುದಿಲ್ಲ. ಅಲ್ಲದೆ ಮುಖ್ಯ ಬೆಳೆಯ ಜೊತೆ ಮಿಶ್ರ ಮಾಡುವ ಸಾಸಿವೆಯು ಮುಂಚಿತವಾಗಿ ಹೂ ಕಾಯುತ್ತದೆ, ಇದರ ಹೂಗಳೂ ಸಹ ಹಳದಿ ಬಣ್ಣಕ್ಕಿದ್ದು ಕೀಟ ವಿಕರ್ಷಕವಾಗಿ ಕಾರ್ಯನಿರ್ವಹಿಸುತ್ತವೆ. ಆ ಮೂಲಕ ಮುಖ್ಯ ಬೆಳೆಯನ್ನು ರಕ್ಷಿಸುತ್ತದೆ. 

ಸೂರ್ಯನ ಬೆಳಕಿನ ಸದುಪಯೋಗ


ಅಕ್ಕಡಿ ಬೇಸಾಯದಲ್ಲಿ ಇರುವ ಬೆಳೆ ಸಂಯೋಜನೆ ವಿನ್ಯಾಸವು ಸೂರ್ಯನ ಬೆಳಕನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ರೂಪುಗೊಂಡಿದೆ. ಅಕ್ಕಡಿ ತಾಕುಗಳಲ್ಲಿ ಒಂದು ಅಡಿಯಿಂದ ಮೊದಲುಗೊಂಡು ಎಂಟು-ಹತ್ತು ಅಡಿಯವರೆಗೆ ಬೆಳೆಯುವ ಬೆಳೆಗಳನ್ನು ಕಾಣುತ್ತೇವೆ. ಇವೆಲ್ಲವೂ ಸೂಕ್ತ ಅಂತರಗಳಲ್ಲಿ ಇರುವುದರಿಂದ ಒಂದಕ್ಕೊಂದು ಸ್ಪರ್ಧೆ ಇರುವುದಿಲ್ಲ. ಬದಲಿಗೆ ಸೂರ್ಯನ ಬೆಳಕು ಎಲ್ಲಾ ಬೆಳೆಗಳಿಗೂ ಬೀಳುತ್ತದೆ. ಮತ್ತೊಂದು ವೈಶಿಷ್ಟ÷್ಯವೆಂದರೆ ಹಬ್ಬಿ ಬೆಳೆಯುವ ಅಲಸಂದೆ, ಅವರೆ, ರಾಜಮಾ ಮುಂತಾದುವನ್ನು ಎತ್ತರಕ್ಕೆ ಬೆಳೆಯುವ ಮತ್ತು ದೃಢವಾದ ದಂಟುಗಳುಳ್ಳ ಜೋಳ, ಮೆಕ್ಕೆ ಜೋಳ, ರಾಜಗೀರ ಇತ್ಯಾದಿಗಳ ಜೊತೆ ಮಿಶ್ರ ಮಾಡಲಾಗುತ್ತದೆ. ಈ ಸಂಗಾತಿ ಬೆಳೆಗಳಿಗೆ ಸೂರ್ಯನ ಬಿಸಿಲಿನ ಕೊರತೆಯಾಗುವುದಿಲ್ಲ. 

ಜೇನುಗಳ ಸಂತತಿ ಉಳಿವು


ಪರಾಗಸ್ಪರ್ಷ ಕ್ರಿಯೆಗೆ ಅಗತ್ಯವಾಗಿ ಬೇಕಾದ ಜೇನು ಹುಳುಗಳು ದಿನೇ-ದಿನೇ ನಾಶವಾಗುತ್ತಿವೆ. ವಿಪರೀತ ಕೀಟ ನಾಶಕಗಳ ಬಳಕೆ, ಏಕ ಬೆಳೆ ಪದ್ಧತಿಯ ಅನುಸರಣೆ ಇದಕ್ಕೆ ಪ್ರಧಾನ ಕಾರಣಗಳು. ಇಳುವರಿ ಕುಂಠಿತಕ್ಕೂ ಜೇನು ಸಂತತಿ ನಾಶಕ್ಕೂ ನೇರ ಸಂಬAಧವಿದೆ. ಅಕ್ಕಡಿ ಪದ್ಧತಿಯಲ್ಲಿ ಹೂ ಬಿಡುವ ಹತ್ತಾರು ಬೆಳೆಗಳ ಸಮ್ಮಿಶ್ರಣವಿದೆ. ಹಾಗೂ ಇವು ಐದಾರು ತಿಂಗಳುಗಳ ಕಾಲ ಹೂಕಾಯುತ್ತಲೇ ಇರುತ್ತವೆ. ಇಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆಯೂ ಕಡಿಮೆ. ಹಾಗಾಗಿ ಜೇನು ಹುಳುಗಳು ಆಕರ್ಷಿಸಲ್ಪಡುತ್ತವೆ. ಜೇನು ಸಂತತಿಗಳೂ ಉಳಿದಂತಾಯಿತು, ಬೆಳೆಗಳ ಉತ್ಪಾದಕತೆಯೂ ಹೆಚ್ಚಿದಂತಾಯಿತು. ಈ ರೀತಿಯ ಕೊಡು-ಕೊಳ್ಳುವಿಕೆ ಅಕ್ಕಡಿ ಪದ್ಧತಿಯಲ್ಲಿ ಮಾತ್ರ ಸಾಧ್ಯ. 

ದೇಸಿ ಬೀಜ ವೈವಿಧ್ಯ ಸಂರಕ್ಷಣೆ


ನಮ್ಮಲ್ಲಿ ಅಲ್ಪ-ಸ್ವಲ್ಪವಾದರೂ ದೇಸಿ ಬಿತ್ತನೆ ಬೀಜದ ತಳಿ ವೈವಿಧ್ಯ ಉಳಿದಿದ್ದರೆ ಅದು ಅಕ್ಕಡಿ ಬೇಸಾಯ ಮಾಡುವ ರೈತರಿಂದಲೇ. ಅಕ್ಕಡಿ ಪದ್ಧತಿಯು ದೇಸಿ ತಳಿಗಳಿಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ. ಇದು ರೂಪುಗೊಂಡಿರುವುದೇ ದೇಸಿ ತಳಿಗಳನ್ನಾಧರಿಸಿ. ದೇಸಿ ತಳಿಗಳ ಸಂರಕ್ಷಣೆ ಅಕ್ಕಡಿ ಬೇಸಾಯದ ಮೂಲಕ ಸಾಧ್ಯ. 

ಅಕ್ಕಡಿ ಬೇಸಾಯ ಮತ್ತು ಮಹಿಳೆ


ಅಕ್ಕಡಿ ಬೇಸಾಯದಜ್ನಾನಇರುವುದು ಬಹುತೇಕ ಮಹಿಳೆಯರಲ್ಲಿ. ಸಾಲು ಬೆಳೆಯ ಬೀಜ ಬಿತ್ತುವ ಸೂಕ್ಷ÷್ಮತೆ ಹೆಣ್ಣು ಮಕ್ಕಳಿಗೆ ಪರಂಪರೆಯಿAದ ಬಂದ ವಿದ್ಯೆಅಥವಾ ಕೌಶಲ.ಇದೊಂದು ಸೃಜನಶೀಲ ಚಟುವಟಿಕೆಯೂ ಹೌದು. ಹೆಣ್ಣು ಮಕ್ಕಳು ಇದನ್ನುಕಷ್ಟದ ಕೆಲಸ ಎಂದು ಪರಿಗಣಿಸುವುದಿಲ್ಲ. ಅಕ್ಕಡಿ ಸಾಲಿಗೆ ಎಷ್ಟು ಅಂತರದಲ್ಲಿ ಹಾಗೂ ಎಷ್ಟು ಆಳಕ್ಕೆ ಬೀಜ ಬಿತ್ತಬೇಕು, ಹೊಲದಯಾವ ಭಾಗಕ್ಕೆಯಾವಅಕ್ಕಡಿ ಕಾಳು ಹಾಕಬೇಕು ಎಂಬ ತಿಳುವಳಿಕೆ ಹೆಣ್ಣುಮಕ್ಕಳಿಗೆ ಇರುತ್ತದೆ. ಕಟಾವಿನ ಸಮಯದಲ್ಲಿಯೂ ಸಹ ಹೆಣ್ಣುಮಕ್ಕಳ ಕೌಶಲವೇ ಮುಖ್ಯ ಪಾತ್ರ ವಹಿಸುತ್ತದೆ. ಒಂದೊಂದೇ ಬೆಳೆಗಳನ್ನು ಜತನದಿಂದ ಎತ್ತಿಟ್ಟುಕೊಳ್ಳುವುದು ಅವರಿಗೆಕರಗತ. 


ಗದ್ದೆಗಳಲ್ಲಿ ಮಿಶ್ರ ಬೆಳೆ


ಭತ್ತದ ಗದ್ದೆಗಳಲ್ಲೂ ಮಿಶ್ರ ಬೇಸಾಯ ಮಾಡಬಹುದೇಎಂಬುದನ್ನು ಕಲ್ಪಿಸಿಕೊಳ್ಳಲೂ ತುಸು ಕಷ್ಟ. ಭತ್ತವು ಸದಾ ನೀರಿನಲ್ಲಿರುವ ಬೆಳೆಯಾದ್ದರಿಂದ ಅಲ್ಲಿ ಮಿಶ್ರ ಬೆಳೆ ಅಸಾಧ್ಯ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಆದರೆ ಪಶ್ಚಿಮ ಬಂಗಾಳದ ಭತ್ತದ ಗದ್ದೆಗಳ ಚಿತ್ರಣಇದಕ್ಕೆತದ್ವಿರುದ್ದ. ಅಲ್ಲಿನಗದ್ದೆ ಬಯಲುಗಳಲ್ಲಿ ಭತ್ತದಜೊತೆಗೆತರಹೇವಾರಿ ತರಕಾರಿಗಳನ್ನು ಕಾಣಬಹುದು. ಒಂದಿಂಚು ಬದುಗಳನ್ನಾಗಲೀ, ಗದ್ದೆ ಮಧ್ಯೆ ಹಾದು ಹೋಗಿರುವ ರಸ್ತೆಗಳನ್ನಾಗಲೀ ವ್ಯರ್ಥ ಮಾಡದಜಾಣತನ. ಮಳೆ ಆಶ್ರಯದಅಲ್ಲಿನ ಭತ್ತದ ತಾಕುಗಳಲ್ಲಿ ಸದಾ ನೀರು ನಿಂತಿರುತ್ತದೆ. ಅದುಅವರಿಗೆ ಸಮಸ್ಯೆಯೇಅಲ್ಲ, ಬದಲಾಗಿ ಆ ವಾತಾವರಣವನ್ನುತಮಗೆ ಅನುಕೂಲವಾಗುವಂತೆ ಬದಲಿಸಿಕೊಂಡಿದ್ದಾರೆ, ಈ ಪದ್ಧತಿಅಲ್ಲಿನ ಪರಂಪರೆಯೇಆಗಿದೆ.


ನಮ್ಮರಾಜ್ಯದದಾವಣಗೆರೆ, ಹಾವೇರಿ ಭಾಗದಲ್ಲಿಗದ್ದೆ ಬದುಗಳ ಮೇಲೆ ಈ ರೀತಿತರಕಾರಿಅಥವಾ ದ್ವಿದಳ ಧಾನ್ಯ ಬೆಳೆಯುವ ಪದ್ಧತಿ ಹಿಂದೆ ವ್ಯಾಪಕವಾಗಿಯೇಇತ್ತು. ಈಗಲೂ ಅದರ ಕುರುಹುಗಳನ್ನು ಕಾಣಬಹುದಾದರೂ ತೀರಾಕಡಿಮೆ. 


ಹೀಗೆ, ಗದ್ದೆ ತಾಕುಗಳಿಂದ ಮರೆಯಾದ ಅಕ್ಕಡಿ ನಮ್ಮ ಒಣ ಭೂಮಿಯಿಂದಲೂ ಕಣ್ಮರೆಯಾಗುತ್ತಿದೆ. 

ಈಗಿನ ಸ್ಥಿತಿ


ಆದರೆ ಈಗ ಅಕ್ಕಡಿ ಪದ್ಧತಿ ಅಪರೂಪ. ಏಕಬೆಳೆ ಹಾಕಿ ದೊಡ್ಡ ರಾಶಿ ಮಾಡಿ ಕೈತುಂಬಾ ಹಣ ಎಣಿಸುವ ಮರುಳು ಮಾತಿನ ಎದುರು ಮಿಶ್ರ ಬೆಳೆಗಳು ಮರೆಯಾಗುತ್ತಿವೆ. ಏಕಬೆಳೆಯಿಂದ ಒಂದೆರಡು ವರ್ಷ ದೊಡ್ಡರಾಶಿ, ದುಡ್ಡೂ ಬರಬಹುದು. ಆದರೆ ತೊಗರಿ, ಅವರೆ, ಹುರುಳಿ, ಹುಚ್ಚಳ್ಳು, ಹರಳು, ಸಾಸಿವೆ, ತರಕಾರಿ, ದನಗಳಿಗೆ ಮೇವು ಮುಂತಾದುವುಗಳನ್ನು ಕೊಳ್ಳಲು ಆ ದುಡ್ಡೆಲ್ಲಾ ಖರ್ಚಾಗಿ ಮೇಲೆ ಕೈಸಾಲವನ್ನೂ ಮಾಡಬೇಕಾದ ಸ್ಥಿತಿ.

ಅಕ್ಕಡಿ ಉಳಿಸಲು ಹಲವು ಯತ್ನ

ರಾಷ್ಟ್ರ ಮಟ್ಟದಲ್ಲಿ ರಿವೈಟಲೈಸಿಂಗ್ ರೈನ್ ಫೆಡ್ ಅಗ್ರಿಕಲ್ಚರ್ ಹಾಗೂ ರಾಜ್ಯದಲ್ಲಿ ಅದರ ಅಂಗವಾದ ಮಳೆ ಬೇಸಾಯ ವೇದಿಕೆಯು ಅಕ್ಕಡಿ ಪದ್ಧತಿಯ ದಾಖಲಾತಿ, ಪ್ರಚಾರ ಹಾಗೂ ಸರ್ಕಾರದ ಮಟ್ಟದಲ್ಲಿ ಗಮನಸೆಳೆಯುವ ಪ್ರಯತ್ನ ಮಾಡುತ್ತಿದೆ. ಇನ್ನಿತರ ಸಂಸ್ಥೆಗಳೂ ತಮ್ಮದೇ ವ್ಯಾಪ್ತಿಯಲ್ಲಿ ರೈತರ ಮನವೊಲಿಸಲು ಪ್ರಯತ್ನಿಸುತ್ತಿವೆ.


ಕೃಷಿಕರ ಬದುಕಿನ ಭಾಗವೇ ಆಗಿದ್ದ ಅಪರೂಪದ ಪದ್ಧತಿಯೊಂದು ಹೊಲಗಳಿಂದಲೂ, ರೈತರ ನೆನಪಿನ ಕೋಶದಿಂದಲೂ ಮರೆಯಾಗುತ್ತಿರುವುದು ಕೃಷಿರಂಗಕ್ಕೆ ಒಳ್ಳೆಯದಲ್ಲ. ಅಕ್ಕಡಿ ಬೇಸಾಯದ ಹಿಂದೆ ಪೌಷ್ಟಿಕತೆ, ನೆಲದ ಫಲವತ್ತತೆ, ಬೀಜವೈವಿಧ್ಯದ ಉಳಿಕೆ, ಸ್ವಾವಲಂಬನೆಯ ತತ್ವಗಳು ಅಡಗಿವೆ. ಹಾಗಾಗಿ ಇದನ್ನು ಉಳಿಸಿಕೊಳ್ಳುವುದು ಹಿಂದೆಂದಿಗಿಂತ ಅಗತ್ಯ.