ಮಹಿಳೆಯರು ದೌರ್ಜನ್ಯವನ್ನು ಆತ್ಮಸ್ಥೆöÊರ್ಯದಿಂದ ಎದುರಿಸಿ ಲೈಂಗಿಕ ಕಿರುಕುಳವಾದರೆ ದೂರು ನೀಡಿ-ನ್ಯಾಯಾಧೀಶೆ ಅನಿತಾ

judge anitha

ಮಹಿಳೆಯರು ದೌರ್ಜನ್ಯವನ್ನು ಆತ್ಮಸ್ಥೆöÊರ್ಯದಿಂದ ಎದುರಿಸಿ ಲೈಂಗಿಕ ಕಿರುಕುಳವಾದರೆ ದೂರು ನೀಡಿ-ನ್ಯಾಯಾಧೀಶೆ ಅನಿತಾ

ಮಹಿಳೆಯರು ದೌರ್ಜನ್ಯವನ್ನು ಆತ್ಮಸ್ಥೆöÊರ್ಯದಿಂದ ಎದುರಿಸಿ
ಲೈಂಗಿಕ ಕಿರುಕುಳವಾದರೆ ದೂರು ನೀಡಿ-ನ್ಯಾಯಾಧೀಶೆ ಅನಿತಾ

ಕೋಲಾರ:- ಮಹಿಳೆಯರ ತಾವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಲೈಂಗಿಕ ಕಿರುಕುಳ,ದೌರ್ಜನ್ಯವಾದರೆ ಭಯಪಡದಿರಿ, ಆತ್ಮಸ್ಥೆöÊರ್ಯದಿಂದ ಎದುರಿಸಿ, ಪೊಲೀಸರಿಗೆ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶರಾದ ಎನ್.ಪಿ.ಅನಿತಾ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಕಾರ್ಮಿಕ ಇಲಾಖೆ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಬೆಳ್ಳಂಬರಿ ಸಿಲ್ವರ್ ಕ್ರೆöÊಸ್ಟ ಕ್ಲಾತಿಂಗ್ ಪ್ರವೇಟ್ ಲಿಮಿಟೆಡ್ ಕಾರ್ಖಾನೆ ಉದ್ಯೋಗಸ್ತರಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಡೆದರೆ ಅದರಿಂದ ಪರಿಣಾಮಗಳು ಗಂಭೀರ ಸ್ವರೂಪದ್ದು ಈ ಕಿರುಕುಳ ಮಹಿಳೆಯರ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುವುದರ ಜತೆಗೆ ಮಾನಸಿಕ ಸಮತೋಲನ ಹದೆಗೆಡುತ್ತದೆ ಎಂದರು.
 ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಮಹಿಳೆಯರಿಗೂ ಪುರುಷರಿಗೂ ಸಂವಿದಾನ ಸಮಾನ ಹಕ್ಕುಗಳನ್ನು ನೀಡಿ ಮಹಿಳೆರಿಗೆ ಹೊಸ ದಿಕ್ಸೂಚಿಯನ್ನು ತೋರಿಸಿದೆ ಅದರೂ ವಿವಿಧ ಮತಗಳ ವೈಯಕ್ತಿಕ ಕಾನೂನುಗಳಲ್ಲಿ ಸ್ತಿçà ಪುರುಷರ ಹಕ್ಕುಗಳಲ್ಲಿ ತಾರತಮ್ಯ ಉಳಿದುಕೊಂಡೇ ಬಂದಿದ್ದು ಇದರಿಂದ ಸ್ತಿçÃಯರು ಪುರುಷರು ಸಂವಿದಾನಾತ್ಮಕವಾಗಿ ಸಮಾನರಾದರೂ ಕೆಲವೆಡೆ ಅಸಮಾನತೆ ಇದೆ ಎಂದು ವಿಷಾದಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾದೀಶ ಸಿ.ಹೆಚ್. ಗಂಗಾಧರ್ ಮಾತನಾಡಿ, 75ನೇ ವರ್ಷದ ಸ್ವಾತಂತ್ರö್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿರುವ ಮಹಿಳೆÀಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಜಾಗೃತಿ ಕಾರ್ಯಕ್ರಮವನ್ನು ಮಹಿಳೆಯರು ಸದುಪಯೊಗ ಪಡಿಸಿಕೊಳ್ಳಬೇಕೆಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಮಿಕರ ಅಧಿಕಾರಿ ಶ್ರೀಕಾಂತ್ ಬಿ.ಪಾಟಿಲ್, ಮಹಿಳಾ ಕಾರ್ಮಿಕರಿಗೆ ಸಂಬAಧಿಸಿದ ಕಾನೂನುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಹಿರಿಯ ವಕೀಲ ಕೆ.ಆರ್.ಧನರಾಜ್, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳ ಬಗ್ಗೆ ಮತ್ತು ವಕೀಲ ಸೋಮಶೇಖರ್, ಕೆಲಸದ ಸ್ಥಳದಲ್ಲಿ ಮಹಿಳೆಯÀರ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ರಘುಪತಿಗೌಡ, ಕೋಲಾರ ವೃತ ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ, ಸಿಲ್ವರ್ ಕ್ರಸ್ಟ್ನ ಮುಖ್ಯಸ್ಥ ಪವನ್ ರೆಡ್ಡಿ, ತೇಜ್‌ರಾಜ್ ಮತ್ತಿತರರಿದ್ದರು.

ಚಿತ್ರಶೀರ್ಷಿಕೆ:(ಫೋಟೊ-8ಕೋಲಾರ11):ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಕಾರ್ಮಿಕ ಇಲಾಖೆ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಬೆಳ್ಳಂಬರಿ ಸಿಲ್ವರ್ ಕ್ರೆöÊಸ್ಟ ಕ್ಲಾತಿಂಗ್ ಪ್ರವೇಟ್ ಲಿಮಿಟೆಡ್ ಕಾರ್ಖಾನೆ ಉದ್ಯೋಗಸ್ತರಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶರಾದ ಎನ್.ಪಿ.ಅನಿತಾ ಉದ್ಘಾಟಿಸಿದರು.
-____________________