ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ ಕೆಯುಡಬ್ಲುö್ಯಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು

ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ   ಕೆಯುಡಬ್ಲುö್ಯಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು


ಪತ್ರಿಕೆಗಳು ಹೇಳಿಕೆ-ಪ್ರತಿಹೇಳಿಕೆಗೆ ಸೀಮಿತವಾಗುತ್ತಿವೆ


ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ವಿಷಾದ


ತುಮಕೂರು: ಮಾಧ್ಯಮ ವರದಿಗಳು ಇತ್ತೀಚೆಗೆ ಹೇಳಿಕೆಗಳು ಪ್ರತಿ ಹೇಳಿಕೆಗಳಿಗೆ ಸೀಮಿತವಾಗುತ್ತಿದ್ದು ವಾಸ್ತವಾಂಶದ ಬಗ್ಗೆ ವರದಿ ಮಾಡುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ವಿಷಾದಿಸಿದರು.


ಕುಣಿಗಲ್ ತಾಲೂಕಿನ ತಪೋಕ್ಷೇತ್ರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ಕಗ್ಗೆರೆಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ರಾಜಕಾರಣಿಗಳ ಹೇಳಿಕೆಯ ಹಿಂದಿನ ಉದ್ದೇಶದ ವಿಶ್ಲೇಷಣೆ, ಅದು ಸರಿಯೇ ತಪ್ಪೇ ಎಂಬ ವಾಸ್ತವಂಶ ತನಿಖೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.


ಸ್ಥಳೀಯ ಆವೃತ್ತಿಗಳು ಬಂದು ರಾಜ್ಯವ್ಯಾಪಿ ಸುದ್ದಿಗಳೇ ಪ್ರಕಟವಾಗದಂತಾಗಿದೆ. ಪತ್ರಕರ್ತರು ವಸ್ತುನಿಷ್ಠ ವರದಿಗೆ ಒತ್ತು ನೀಡಬೇಕಿದೆ. ಮುದ್ರಣ ಮಾಧ್ಯಮ ಇಂದು ವಿಶ್ವಾಸಾರ್ಹತೆ ಉಳಿಸಿಕೊಂಡಿರುವುದು ಸಮಾಧಾನದ ಸಂಗತಿಯಾಗಿದೆ. ಪತ್ರಕರ್ತರು ಮಾಹಿತಿಯ ಕಣಜವಾಗಿರಬೇಕು. ಹೂರಣದ ರೀತಿಯಲ್ಲಿ ವರದಿಗಳು ಸಮಗ್ರತೆಯಿಂದ ಕೂಡಿರಬೇಕು ಎಂದು ಸಲಹೆ ನೀಡಿದರು. 


ಜಿಲ್ಲೆಯ ಎಲ್ಲಾ ಪತ್ರಕರ್ತರನ್ನು ಒಂದೆಡೆ ಸೇರಿಸಿ ಅವರಲ್ಲಿ ಅರಿವು ಹೆಚ್ಚಿಸುವ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಕಾರ್ಯ ಶ್ಲಾಘನೀಯ ಎಂದರು. 


ಶಾಸಕ ಡಾ. ಎಚ್.ಡಿ. ರಂಗನಾಥ್ ಕಾರ್ಯಕ್ರಮ ಉದ್ಘಾಟಿಸಿ ಪತ್ರಕರ್ತರು ಸಮಾಜದ ಓರೆ-ಕೋರೆಗಳನ್ನು ಪರಿಚಯಿಸುವ ಜೊತೆಗೆ ಜನಪ್ರತಿನಿಧಿಗಳು ತಪುö್ಪ ತಿದ್ದಿಕೊಳ್ಳುವಂತೆ ಎಚ್ಚರಿಸುತ್ತಿದ್ದಾರೆ. ಪತ್ರಕರ್ತರ ಸಂಕಷ್ಟಕ್ಕೆ ಶಾಸಕನಾಗಿ ಸ್ಪಂದಿಸುವುದು ನನ್ನ ಜವಾಬ್ದಾರಿಯಾಗಿದ್ದು ಆರೋಗ್ಯ ವಿಮೆ ಮಾಡಿಸಿ ಕೊಡುವ ಜೊತೆಗೆ ಅರ್ಹರಿಗೆ ನಿವೇಶನ ಕಲ್ಪಿಸುವುದಾಗಿ ಭರವಸೆ ನೀಡಿದರು. ಒತ್ತಡದಲ್ಲಿರುವ ಪತ್ರಕರ್ತರು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. 


ಶಾಸಕ ಮಸಾಲೆ ಜಯರಾಂ ಮುಖ್ಯ ಅತಿಥಿಯಾಗಿ ಮಾತನಾಡಿ ತುರುವೇಕೆರೆ ತಾಲೂಕಿನ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು. 


ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ. ಕೃಷ್ಣಕುಮಾರ್ ಕುಣಿಗಲ್ ತಾಲೂಕಿನಲ್ಲಿ ಕಾರ್ಯಾಗಾರ ನಡೆಯುತ್ತಿರುವುದು ಶ್ಲಾಘನೀಯ ಎಂದರು. 


ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.


ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ


ಕೆಯುಡಬ್ಲುö್ಯಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು


ತುಮಕೂರು: ಪತ್ರಿಕಾ ರಂಗದಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ. ಗಾಂಧೀಜಿ, ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪತ್ರಿಕಾರಂಗ ಮುನ್ನಡೆಯಬೇಕಿದೆ ಎಂದು ಕೆಯುಡಬ್ಲೂ÷್ಯಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.


ಕುಣಿಗಲ್ ತಾಲೂಕಿನ ಕಗ್ಗೆರೆ ತಪೋಕ್ಷೇತ್ರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರದ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಹಲವು ತಲ್ಲಣಗಳನ್ನು ಸೃಷ್ಟಿಸಿದೆ ಎಂದರು.


ಕೋವಿಡ್ ಸಂದರ್ಭದಲ್ಲಿ 45 ಜನ ಪತ್ರಕರ್ತರು ಕೊರೊನಾದಿಂದ ಮೃತಪಟ್ಟರು. ಅವರ ಕುಟುಂಬಗಳ ಸಂಕಷ್ಟಕ್ಕೆ ಸಂಘವು ಮಿಡಿಯುವ ಜೊತೆಗೆ ಸರಕಾರದಿಂದ 5 ಲಕ್ಷ ಪರಿಹಾರ ಕೊಡಿಸುವ ಕಾರ್ಯ ಮಾಡಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಸಂಘದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತರಾದ ಹಮೀದ್ ಪಾಳ್ಯ ತಿಪಟೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪತ್ರಕರ್ತರಾದವರು ಪ್ರತಿಯೊಂದನ್ನು ಪ್ರಶ್ನಿಸಿಯೇ, ವಿಮರ್ಶಿಸಿಯೇ ನೋಡಬೇಕು. ಭಾಷಾ ಬಳಕೆಯ ಅರಿವಿರಬೇಕು. ನಾವು ಕಾರ್ಯನಿರ್ವಹಿಸುವ ಜಿಲ್ಲೆ, ರಾಜ್ಯದ ಪರಿಚಯ, ಸಾಮಾನ್ಯ ಜ್ಞಾನ ಅತಿ ಅವಶ್ಯ ಎಂದು ತಿಳಿ ಹೇಳಿದರು.


ಐಎಫ್‌ಡಬ್ಲೂö್ಯಜೆ ರಾಷ್ಟಿçÃಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಕರ್ನಾಟಕ ಕರ‍್ಯನಿರತ ಪತ್ರಕರ್ತರ ಸಂಘಕ್ಕೆ ಶಿವಾನಂದ್ ಅವರು ಅಧ್ಯಕ್ಷರಾದ ಮೇಲೆ ಸಂಘ ಪ್ರವರ್ಧಮಾನಕ್ಕೆ ಬಂದಿದೆ. ಜಿಲ್ಲಾ ಸಂಘವೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪತ್ರಕರ್ತರಾದವರು ಹಮ್ಮು ಬಿಮ್ಮು ಬಿಟ್ಟು ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಜಿಲ್ಲಾ ಕಾರ್ಯಕಾರಿ ಸಮಿತಿ, ತಾಲೂಕು ಘಟಕಗಳು, ಸದಸ್ಯರ ಸಹಕಾರದೊಂದಿಗೆ ನಮ್ಮ ಅವಧಿಯಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಫುಡ್‌ಕಿಟ್ ವಿತರಣೆ, ಕಾರ್ಯಾಗಾರ ಸೇರಿದಂತೆ ಅನೇಕ ರಚನಾತ್ಮಕ ಕಾರ್ಯಗಳನ್ನು ಮಾಡಿದ್ದು, ರಾಜ್ಯ ಸಂಘದಿAದ ಮೆಚ್ಚುಗೆ ಗಳಿಸಿದೆ. ಜಿಲ್ಲಾ ಪತ್ರಿಕಾ ಭವನವನ್ನು ಸಂಘದ ಅಡಿಯಲ್ಲಿ ಮುನ್ನಡೆಸಲಾಗುತ್ತಿದೆ. ಪ್ರತೀ ತಾಲೂಕಿಗೊಂದು ಪತ್ರಿಕಾ ಭವನ ನಿರ್ಮಾಣವಾಗಲು, ಸಚಿವರು ಶಾಸಕರು ಸಹಕರಿಸಬೇಕು ಎಂದರು.


ಕುಣಿಗಲ್ ತಾಲೂಕು ಘಟಕದ ಅಧ್ಯಕ್ಷ ಕೆ.ಎ. ರವೀಂದ್ರಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ದಾಸೋಹ ಸಮಿತಿ ನಿರ್ದೇಶಕ ನಿಟ್ಟೂರು ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪ್ರಧಾನ ಕರ‍್ಯದರ್ಶಿ ಎನ್.ಡಿ. ರಂಗರಾಜು ಹಾಗೂ ಜಿಲ್ಲಾ ಉಪಾಧ್ಯಕ್ಷ ಸಿದ್ಧಲಿಂಗಸ್ವಾಮಿ ಸ್ವಾಗತಿಸಿದರು. ರಾಜ್ಯ ಕರ‍್ಯಕಾರಿ ಸಮಿತಿ ಸದಸ್ಯ ನಾಗರಾಜು, ಜಿಲ್ಲಾ ಪದಾಧಿಕಾರಿಗಳು, ನಿರ್ದೇಶಕರಾದ ಶ್ಯಾನ ಪ್ರಸನ್ನಮೂರ್ತಿ, ಸಿ. ರಂಗನಾಥ್, ಸಿ. ದೇವರಾಜು, ಮಲ್ಲಿಕಾರ್ಜುನ ದುಂಡ, ಬರಗೂರು ವಿರೂಪಾಕ್ಷ, ಸತೀಶ್ ಹಾರೋಗೆರೆ, ಎಲ್. ಯೋಗೇಶ್, ತಿಪಟೂರು ಕೃಷ್ಣ, ದಶರಥ. ರಂಗಧಾಮಯ್ಯ, ಸಿ.ಟಿ.ಎಸ್. ಗೋವಿಂದಪ್ಪ, ತಾಲೂಕು ಘಟಕದ ಎಂ.ಡಿ. ಮೋಹನ್, ಕೆ.ಎನ್. ಲೋಕೇಶ್, ಎನ್. ನರಸಿಂಹಪ್ರಸಾದ್, ಶ್ರೀನಿವಾಸ್, ಅಶೋಕ್, ರಾಮಚಂದ್ರಯ್ಯ, ಗುರುಚರಣ್‌ಸಿಂಗ್, ಕೆ.ಆರ್. ರಂಗನಾಥ್, ಆನಂದ್‌ಸಿAಗ್, ದಲಿತ್ ನಾರಾಯಣ್, ಶಂಕರ್, ಮಹಾದೇವಸ್ವಾಮಿ ಇತರರು ಉಪಸ್ಥಿತರಿದ್ದರು.


ಭಾಗವಹಿಸಿದ ಪತ್ರಕರ್ತರಿಗೆ ಪ್ರಮಾಣ ಪತ್ರ, ಬ್ಯಾಗ್ ನೆನಪಿನ ಉಡುಗೊರೆಯಾಗಿ ನೀಡಲಾಯಿತು. ಪ್ರತಿಕಾ ಛಾಯಾಗ್ರಾಹಕ ಟಿ.ಎಚ್. ಸುರೇಶ್ ಸೇರಿ ಪ್ರತೀ ತಾಲೂಕಿನಿಂದ ಇಬ್ಬರು ಹಿರಿಯ ಪತ್ರಕರ್ತರಿಗೆ ಸನ್ಮಾನ ನೆರವೇರಿಸಲಾಯಿತು.


ಮೃತರಿಗೆ ಶ್ರದ್ಧಾಂಜಲಿ: ಇತ್ತೀಚೆಗೆ ಅಗಲಿದ ಸಂಘದ ಮಾಜಿ ಅಧ್ಯಕ್ಷ ಜಿ. ಇಂದ್ರಕುಮಾರ್, ನಿರ್ದೇಶಕ ಕುಮಾರ್, ಫಯಾಜ್ ಉಲ್ಲಾ, ನಾಗರಾಜು ಸೇರಿದಂತೆ ವಿವಿಧ ಮೃತ ಪತ್ರಕರ್ತರು, ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.