ತುಮಕೂರಿನ ಸುದ್ದಿಗಳು
Tumkur news
ಮೇಲ್ಮನೆ ಸದಸ್ಯರಾಗಿ ಆರ್. ರಾಜೇಂದ್ರ ಪ್ರಮಾಣ ವಚನ
ಬೆಂಗಳೂರು: ಡಿಸೆಂಬರ್ 10 ರಂದು ಸ್ಥಳೀಯ ಸಂಸ್ಥೆಗಳಿAದ ರಾಜ್ಯ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಆರ್. ರಾಜೇಂದ್ರ ಅವರು ಗುರುವಾರ ಪ್ರಮಾಣ ಸ್ವೀಕರಿಸಿದರು.
ರಾಜೇಂದ್ರ ಅವರೊಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ 20 ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜೇಂದ್ರ ಅವರು ಭಗವಂತ ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದು ವಿಶೇಷವಾಗಿತ್ತು ವಿವಿಧ ಕಾರಣಗಳಿಂದಾಗಿ ಐವರು ಸದಸ್ಯರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು. ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ಉದ್ದರು.
ನೂತನ ಸದಸ್ಯರುಗಳಾದ ಬಿ.ಜಿ. ಪಾಟೀಲ್, ಲಖನ್ ಜಾರಕಿಹೊಳಿ, ಗಣಪತಿ ಉಳ್ವೇಕರ್, ಸಲೀಂ ಅಹ್ಮದ್ ಹಾಗೂ ಎಂ.ಕೆ.¥ Á್ರಣೇಶ್ ಅವರುಗಳು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರದೀಪ ಶೆಟ್ಟರ್, ಕೆ.ಎಸ್. ನವೀನ್, ಅರುಣ್ ಡಿ.ಎಸ್., ದಿನೇಶ್ ಗೂಳಿಗೌಡ, ಎಚ್.ಎಸ್. ಗೋಪಿನಾಥ್ ಹಾಗೂ ಡಾ. ಡಿ. ತಿಮ್ಮಯ್ಯ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಚನ್ನರಾಜ ಹಟ್ಟಿಹೊಳಿ ಅವರು ವೀರಭದ್ರೇಶ್ವರ ಮತ್ತು ಬಸವೇಶ್ವರ, ಶರಣಗೌಡ ಪಾಟೀಲ ಬಯ್ಯಾಪುರ ಭಗವಂತ ಮತ್ತು ತಂದೆ-ತಾಯಿ, ಕೋಟ ಶ್ರೀನಿವಾಸ ಪೂಜಾರಿ ಅವರು ಭಗವಂತ ಮತ್ತು ವಿ.ಎಸ್. ಆಚಾರ್ಯ, ಸಿ.ಎನ್. ಮಂಜೇಗೌಡ ಅವರು ತಾಯಿ ಚಾಮುಂಡೇಶ್ವರಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಎನ್. ರಾಜಣ್ಣ, ಜಿ.ಪಂ. ಮಾಜಿ ಸದಸ್ಯರಾದ ಶಾಂತಲ ರಾಜಣ್ಣ, ನೂತನವಾಗಿ ಆಯ್ಕೆಯಾದ ಸದಸ್ಯರುಗಳ ಕುಟುಂಬದ ಸದಸ್ಯರು, ಅಭಿಮಾನಿಗಳು ಇದ್ದರು.
ಅಪರ ಜಿಲ್ಲಾಧಿಕಾರಿಯಾಗಿ ಕೆ. ಚನ್ನಬಸಪ್ಪ ಅಧಿಕಾರ ಸ್ವೀಕಾರ
ತುಮಕೂರು: ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ ಕೆ. ಚನ್ನಬಸಪ್ಪ (ಕೆ.ಎ.ಎಸ್.(ಆಯ್ಕೆ ಶ್ರೇಣಿ)ಅಧಿಕಾರಿ) ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ (ಸ್ಥಳೀಯ ಸಂಸ್ಥೆಗಳು) ದ್ವೆöÊವಾರ್ಷಿಕ ಚುನಾವಣೆ 2021ರ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಇವರನ್ನು ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿರುವುದರಿAದ ಸದರಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.
ಕೊರತೆಗಳ ಬಗ್ಗೆ ಚರ್ಚಿಸದ ಸಚಿವರು
ಪಾಲಿಕೆ ವಿರೋಧ ಪಕ್ಷದ ನಾಯಕ ಜೆ. ಕುಮಾರ್
ತುಮಕೂರು: ನಗರದಲ್ಲಿ ಇಂದು ಹಲವಾರು ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಇದರ ಬಗ್ಗೆ ಚರ್ಚೆ ಮಾಡದಿರುವ ಜಿಲ್ಲಾ ಸಚಿವರು ಹಾಗೂ ನಗರಾಭಿವೃದ್ಧಿ ಸಚಿವರ ನಡವಳಿಕೆಯನ್ನು ವಿರೋಧಿಸುವುದಾಗಿ ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಜೆ. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ನಡೆದ ಪಾಲಿಕೆ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಸಂತೋಷ ತಂದಿದ್ದು, ಜಿಲ್ಲಾ ಸಚಿವರು ಮತ್ತು ನಗರಾಭಿವೃದ್ಧಿ ಸಚಿವರು ತರಾತುರಿಯಲ್ಲಿ ಉದ್ಘಾಟಿಸಿ, ಇತರೆ ಯಾವುದೆ ಅಹವಾಲುಗಳನ್ನು ಸ್ವೀಕರಿಸದೆ ಇರುವುದು ಬೇಸರವಾಗಿದೆ ಎಂದಿದ್ದಾರೆ.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಮೂರನೇ ಬಾರಿಗೆ ತುಮಕೂರಿಗೆ ಭೇಟಿ ನೀಡಿದ್ದು, ಪ್ರತಿಸಲ ಜ್ವಲಂತ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದಾಗ ಮುಂದಿನ ಬಾರಿ ಚರ್ಚಿಸುತ್ತೇನೆ ಎಂದು ಹೇಳಿ ಹೋಗಿದ್ದು, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ ಎಂದು ಆರೋಪಿಸಿದರು.
ವಿದ್ಯಾನೀಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಜಯರಾಮ್‌ರಾವ್ ಅವರ 97ವರ್ಷದ ಹುಟ್ಟು ಹಬ್ಬ
ತುಮಕೂರು ನಗರದ ವಿದ್ಯಾನೀಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಜಯರಾಮ್‌ರಾವ್ ಅವರ 97ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮಹಾನಗರ ಪಾಲಿಕೆ 15ನೇ ವಾರ್ಡಿನ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್ ಹುಟ್ಟು ಹಬ್ಬದ ಶುಭಾಶಯ ತಿಳಿಸಿ, ಅಭಿನಂದಿಸಿದರು. ಈ ವೇಳೆ ಕೊಪ್ಪಲ್ ನಾಗರಾಜು, ಧನಿಯಕುಮಾರ್, ಜಗಣ್ಣ, ನಿವೃತ್ತ ಇಂಜಿನಿಯರ್ ರವೀಶ್, ಮಲ್ಲೂ, ಸುರೇಂದ್ರ ಷಾ, ಶ್ರೀನಿವಾಸ್, ಗೋಪಿ ಮತ್ತಿತರರು ಉಪಸ್ಥಿತರಿದ್ದರು.
ಎಸ್. ಗೌತಮಿಗೆ ಚಿನ್ನದ ಪದಕ
ಮಧುಗಿರಿ: ಸ್ನಾತಕೋತ್ತರ ಪದವಿಯಲ್ಲಿ ತೋಟಗಾರಿಕೆಯ ವೆಜಿಟೇಬಲ್ ಸೈನ್ಸ್ನಲ್ಲಿ ಮಧುಗಿರಿಯ ಎಸ್. ಗೌತಮಿ ಚಿನ್ನದ ಪದಕ ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ರಾಜಸ್ಥಾನದ ಕೋಟಾ ಎಂಎಸ್ಸಿ ತೋಟಗಾರಿಕೆಯ ವಿಶ್ವವಿದ್ಯಾನಿಲಯದಲ್ಲಿ ತೋಟಗಾರಿಕೆಯ ವೆಜಿಟೇಬಲ್ ಸೈನ್ಸ್ನಲ್ಲಿ ಎಸ್. ಗೌತಮಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಮಧುಗಿರಿ ತಾಲ್ಲೂಕಿನ ಎಸ್.ಶಿವಕುಮಾರ್ ಮತ್ತು ಶಾಂತಕುಮಾರಿ ಪುತ್ರಿ ಎಸ್. ಗೌತಮಿ. ತಾಲ್ಲೂಕಿನ ಹನುಮಂತಪುರ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ 1 ರಿಂದ 2, 3 ರಿಂದ 5ರವರೆಗೆ ಕೊರಟಗೆರೆ ತಾಲ್ಲೂಕಿನ ಗಿರಿನಗರ ಸರ್ಕಾರಿ ಶಾಲೆ, 6 ರಿಂದ 10 ತರಗತಿವರೆಗೂ ಸಿದ್ದರಬೆಟ್ಟದ ಮೊರಾರ್ಜಿ ವಸತಿ ಶಾಲೆಯಲ್ಲಿ ಓದಿದರು. ತುಮಕೂರು ಮೊರಾರ್ಜಿ ವಸತಿ ಶಾಲೆಯಲ್ಲಿ ಪಿಯುಸಿ ಶಿಕ್ಷಣ ಪಡೆದು, ಶಿರಸಿಯಲ್ಲಿ ಬಿಎಸ್ಸಿ ಪದವಿಯನ್ನು ಪಡೆದು, ಸ್ನಾತಕೋತ್ತರ ಪದವಿ ಪಡೆಯಲು ರಾಜಸ್ಥಾನದ ಕೋಟಾ ಎಂಎಸ್ಸಿ ತೋಟಗಾರಿಕೆಯ ವಿಶ್ವವಿದ್ಯಾನಿಲಯದಲ್ಲಿ ತೋಟಗಾರಿಕೆಯ ವೆಜಿಟೇಬಲ್ ಸೈನ್ಸ್ ಪಡೆದು ಚಿನ್ನದ ಪದಕ ಪಡೆದಿರುವುದಕ್ಕೆ ಗ್ರಾಮದಲ್ಲಿ ಶಿಕ್ಷಕರು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಚಿನ್ನದ ಪದಕ ಪಡೆದಿರುವುದು ನನಗೆ ತುಂಬಾ ಖುಷಿಯಾಗಿದೆ ಎಸ್. ಗೌತಮಿ ಪತ್ರಿಕೆಗೆ ತಿಳಿಸಿದ್ದಾರೆ.