ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಇಂದು ನೂತನ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆ

ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಇಂದು ನೂತನ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆ

ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ
ಇಂದು ನೂತನ ಆಡಳಿತ ಕಚೇರಿ ಕಟ್ಟಡದ ಉದ್ಘಾಟನೆ


ತುಮಕೂರು: ಇಲ್ಲಿನ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿಯ ನೂತನ ಆಡಳಿತ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭ ಶುಕ್ರವಾರ ಬೆಳಗ್ಗೆ 9 ಗಂಟೆಯಿAದ ನಡೆಯಲಿದೆ. ನಗರದ ಶಿರಾ ರಸ್ತೆಯಲ್ಲಿನ ಬಾವಿಕಟ್ಟೆ ಆರ್ಕೆಡ್ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆಡಳಿತ ಕಚೇರಿ ಕಟ್ಟಡವನ್ನು ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೆರವೇರಿಸುವರು.


ಸಹಕಾರಿಯ ನಗದು ಕೊಠಡಿ ಮತ್ತು ಭದ್ರತಾ ಕೊಠಡಿ ಉದ್ಘಾಟನೆಯನ್ನು ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮೀಜಿಯವರು ನೆರವೇರಿಸಲಿದ್ದಾರೆ. ಗಣಪತಿ ಪೂಜಾ ಕಾರ್ಯಕ್ರಮವನ್ನು ನೊಣವಿನಕೆರೆ ಶ್ರೀಕ್ಷೇತ್ರದ ಶ್ರೀ ಕರಿಬಸವ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ನೆರವೇರಿಸಲಿದ್ದು, ವ್ಯವಸ್ಥಾಪಕರ ಹಾಗೂ ನಿರ್ದೇಶಕರ ಕೊಠಡಿ ಉದ್ಘಾಟನೆಯನ್ನು ಬಾಳೆಹೊನ್ನೂ ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಲಿದ್ದಾರೆ.


ಸಮಾರಂಭದ ಅಧ್ಯಕ್ಷತೆಯನ್ನು ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷ ಬಿ.ಎಸ್. ಮಂಜುನಾಥ್ ವಹಿಸಲಿದ್ದಾರೆ. ಸೇಫ್ ಡೆಪಾಸಿಟ್ ಲಾಕರ್ಸ್ ಕೊಠಡಿಯನ್ನು ಕಾನೂನು ಮತ್ತು ಸಂಸದೀಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಉದ್ಘಾಟಿಸಲಿದ್ದಾರೆ. ಸೌಹಾರ್ದ ಸಹಕಾರಿ ಧ್ವಜಾರೋಹಣ ನೆರವೇರಿಸಲಿರುವ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಗಣಕಯಂತ್ರ ಉದ್ಘಾಟನೆ ನೆರವೇರಿಸಲಿದ್ದಾರೆ.


ದಾಖಲಾತಿಗಳ ಭದ್ರತಾ ಕೊಠಡಿಯನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಲಿದ್ದು, ಸಂಸದ ಜಿ.ಎಸ್. ಬಸವರಾಜ್ ಅಧ್ಯಕ್ಷರ ಕೊಠಡಿ ಉದ್ಘಾಟಿಸಲಿದ್ದಾರೆ. ಉಪಾಧ್ಯಕ್ಷರ ಕೊಠಡಿಯನ್ನು ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಉದ್ಘಾಟಿಸಲಿದ್ದಾರೆ. ಆಡಳಿತ ಕೊಠಡಿ ಉದ್ಘಾಟನೆಯನ್ನು ಮಾಜಿ ಶಾಸಕ ಎಸ್. ಶಿವಣ್ಣ ನೆರವೇರಿಸಲಿದ್ದು, ಆಡಳಿಲತ ಮಂಡಳಿ ಸಭಾ ಕೊಠಡಿಯನ್ನು ಮಾಜಿ ಶಾಸಕ, ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೆ.ಎನ್. ರಾಜಣ್ಣ ಉದ್ಘಾಟಿಸಲಿದ್ದಾರೆ.


ಗಣಕಯಂತ್ರದ ಕೊಠಡಿಯನ್ನು ತುಮಕೂರು ಮಹಾನಗರ ಪಾಲಿಕೆ ಮಹಾಪೌರ ಬಿ.ಜೆ. ಕೃಷ್ಣಪ್ಪ ಉದ್ಘಾಟಿಸಲಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಠಡಿಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್. ನಾಗೇಶ್ ಉದ್ಘಾಟಿಸಲಿದ್ದಾರೆ. ಇ-ಸ್ಟಾö್ಯಂಪ್ ಉದ್ಘಾಟನೆಯನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಬಿ.ಹೆಚ್. ಕೃಷ್ಣಾರೆಡ್ಡಿ ನೆರವೇರಿಸಲಿದ್ದಾರೆ. ಸಹಕಾರಿಯ ನೂತನ ವೆಬ್‌ಸೈಟ್‌ಯನ್ನು ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷ ಬಿ.ಎಸ್. ಮಂಜುನಾತ್ ಉದ್ಘಾಟಿಸಲಿದ್ದು, ಸ್ನೇಹ ಸಂಗಮ ಕನ್ವೆನ್ಷನ್ ಹಾಲ್ ವೆಬ್‌ಸೈಟ್ ಉದ್ಘಾಟನೆಯನ್ನು ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ರವಿಶಂಕರ್ ಉದ್ಘಾಟಿಸಲಿದ್ದಾರೆ.