ಲಾಲ್ ಬಾಗ್ನಲ್ಲಿ ಉದಯೋನ್ಮುಖ ಕವಿಯ ರಸಾಭಂಗ!? (ಹಳ್ಳಿ ಹೈದನ ನೂರೆಂಟು ನೆನಪು-ಸಿ-ಚಿಕ್ಕಣ್ಣ)
ಲಾಲ್ ಬಾಗ್ನಲ್ಲಿ ಉದಯೋನ್ಮುಖ ಕವಿಯ ರಸಾಭಂಗ!? (ಹಿಂದಿನ ಕಿನ್ನರಿಯಿಂದ ) (ಹಳ್ಳಿ ಹೈದನ ನೂರೆಂಟು ನೆನಪು-ಸಿ-ಚಿಕ್ಕಣ್ಣ)
ಲಾಲ್ ಬಾಗ್ನಲ್ಲಿ ಉದಯೋನ್ಮುಖ ಕವಿಯ ರಸಾಭಂಗ!?
(ಹಿಂದಿನ ಕಿನ್ನರಿಯಿಂದ )
(ಹಳ್ಳಿ ಹೈದನ ನೂರೆಂಟು ನೆನಪು-ಸಿ-ಚಿಕ್ಕಣ್ಣ)
ಬೇಸಿಗೆ ರಜೆ, ಹಾಸ್ಟೆಲ್ನಲ್ಲಿ ಕೆಲವರು ಊರಿಗೆ ತೆರಳಿದ್ದರು. ಅಕ್ಕ 'ನೀನು ರಜೆಗೆ ಬರಬೇಕು' ಎಂದು ಪದೇ ಪದೇ ಹೇಳಿದ್ದರು. ಊರಿಗೆ ಹೋಗುವ ಮುನ್ನ ಆ ಹುಡುಗಿಯನ್ನು ಒಮ್ಮೆ ನೋಡಿಯೇ ತೀರಬೇಕೆಂದು ಗಾಂಧಿನಗರದ ಅವಳ ಶಾಲೆ ಹತ್ತಿರ ಹೋದೆ, ಬೇಸಿಗೆ ರಜೆಯಿದ್ದರಿಂದ ಅದಾಗಲೇ ಮುಚ್ಚಿತ್ತು. ಅವಳ ಮನೆಗೆ ಹೋಗೋಣ ಎಂಬ ಯೋಚನೆ ಬಂತು. ಬೇಡ ಎಂದು ವಿವೇಕ ಹೇಳಿತು. ತಲೆಯ ತುಂಬ ಅವಳನ್ನೇ ತುಂಬಿಕೊಂಡು ಊರಿಗೆ ಹೋದೆ.
ರಂಗಾಮರದ ಕೆರೆಯಿಂದ ನಮ್ಮೂರಿನ ಗದ್ದೆ, ತೋಟಗಳಿಗೆ ನೀರು ಬಿಡುವರು. ಮಳೆಗಾಲದಲ್ಲಿ ತುಂಬಿದರೆ ಬಡವನಹಳ್ಳಿ ಮತ್ತು ನಮ್ಮ ಊರಿಗೆ ನೀರು ಬಿಡುವರು. ರ‍್ಧ ಕೆರೆ ಆದರೆ ನೀರು ಬಿಡುತ್ತಿರಲಿಲ್ಲ. ನಮ್ಮ ತೋಟಗಳು ದೊಡ್ಡ ಹಳ್ಳದ ಪಕ್ಕದಲ್ಲಿ, ಕೆರೆ ನೀರು ಹರಿಯುವ ಕಾಲುವೆಗಳ ಅಂಚಿನಲ್ಲಿದ್ದವು. ಹೀಗಾಗಿ ಮುಡುಪಯ್ಯನ ತೋಟದಲ್ಲಿ ಅಪ್ಪ ಒಂದು 10 ಅಡಿ ವ್ಯಾಸದ 10 ಅಡಿ ಆಳದ ಬಾವಿ ತೆಗೆಸುತ್ತಿದ್ದರು. ಊರಿಗೆ ಹೋದ ಮೇಲೆ ಅದರ ಜವಾಬ್ದಾರಿ ನನ್ನದಾಯಿತು, ಪಾಕೆಟ್ ರೇಡಿಯೋ ಜೇಬಿನಲ್ಲಿಟ್ಟು ಕೊಂಡು ಬಾವಿ ಕೆಲಸದ ಮೇಲುಸ್ತುವಾರಿ ನೋಡಿಕೊಳ್ಳುತ್ತಾ, ಕನ್ನಡ ಹಿಂದಿ ಹಾಡುಗಳು ಅಥವ ಚೀನಾ ಭಾರತ ಯುದ್ಧದ ವರ‍್ತೆಗಳನ್ನು ಕೇಳುತ್ತಾ ದಿನ ಕಳೆಯುತ್ತಿದ್ದೆ.
ಮನೆಗೆ ಬಂದಾಗ ಅಕ್ಕನ ಮಕ್ಕಳ ಜೊತೆ ಆಡುತ್ತಿದ್ದೆ. ಹಳೆಯ ಸ್ನೇಹಿತರ ಜತೆ ಹುಣಿಸೆ ಮರದ ಕೆಳಗೆ ಕುಳಿತು ಹರಟೆ ಹೊಡೆಯುತ್ತಿದ್ದೆ. ವ್ಯವಸಾಯದ ಕೆಲಸಗಳನ್ನೆಲ್ಲಾ ತಮ್ಮಂದಿರು ನೋಡಿಕೊಳ್ಳುತ್ತಿದ್ದರು. ಅಲ್ಲೊಂದು ಇಲ್ಲೊಂದು ಕೆಲಸದಲ್ಲಿ ನಾನೂ ನೆರವಾಗುತ್ತಿದ್ದೆ.
****
ರಜೆ ಕಳೆದು ಮಾಮೂಲಿನಂತೆ ಬೆಂಗಳೂರಿಗೆ ಬಂದೆ, 3ನೇ ಬಿ.ಕಾಂಗೆ ಫೀಕಟ್ಟಿ ಸೇರಿಕೊಂಡೆ. ಹಾಸ್ಟೆಲ್ನ 2ನೆ ನಂಬರ್ ರೂಮಿನಲ್ಲಿ ಹಿಂದೆ ಇದ್ದ ಸ್ನೇಹಿತರೇ ಮುಂದುವರಿದಿದ್ದು, ಈ ವರ‍್ಷದ Prefect ಅನ್ನು ವಹಿಸಿಕೊಳ್ಳಬೇಕೆಂದು ಒತ್ತಾಯ ಮಾಡುತ್ತಿದ್ದರು. ಮಾರಪ್ಪನೂ ಹಿಂದಿನ ವರ‍್ಷ Prefect ಕೆಲಸ ಮಾಡಿ ಹೆಸರು ಕೆಡಿಸಿಕೊಂಡಿದ್ದ. ಹಾಗಾಗಿ ಅದು ನನ್ನ ಪಾಲಿನ ಜವಾಬ್ದಾರಿಯಾಯಿತು. ಹಾಸ್ಟೆಲ್ ಕಾರ್ಯದರ್ಶಿ ಹುಡುಗರಿಂದ ವಸೂಲು ಮಾಡಿದ ದುಡ್ಡನ್ನೆಲ್ಲಾ ತನ್ನ ಬ್ಯಾಂಕ್ ಖಾತೆಗೆ ಹಾಕಿಕೊಂಡು ಸಿಮೆಂಟ್ ವ್ಯಾಪಾರ ಮಾಡುತ್ತಿದ್ದರು. ದೈನಂದಿನ ಸರ‍್ಚಿಗೆ ಸಾಮಾನು ತರಲು ಹಣ ಕೇಳಿದರೆ 'ನಾಳೆ ನೋಡೋಣ' ಎನ್ನುತ್ತಿದ್ದರು. ದಿನಸಿ ತರಕಾರಿ ಹಾಲು ತರಲು ಹಣ ಕೇಳಿದರೆ, ಕೇಳಿದ ರ‍್ಧದಷ್ಟು ನೀಡಿ ಗದರುತ್ತಿದ್ದರು. ಹೀಗೆ 3 ತಿಂಗಳು ಕಳೆಯಿತು. ಕರ‍್ಯರ‍್ಶಿಯ ಅಸಹಕಾರದಿಂದ ಊಟ-ತಿಂಡಿಗಳಲ್ಲಿ ವ್ಯತ್ಯಾಸವಾಗಲು ಆರಂಭವಾಗಿ ಹುಡುಗರೆಲ್ಲ ನನ್ನ ಮೇಲೆ ಬಿದ್ದರು. ನಾನು ಇರುವ ಸತ್ಯವನ್ನೆಲ್ಲಾ ಹೇಳಿ, ಟ್ರಸ್ಟ್ ಮೀಟಿಂಗ್ನಲ್ಲಿ ಈ ಬಗ್ಗೆ ಮನವಿ ಮಾಡುವುದಾಗಿ ಜವಾಬು ಹೇಳಿದೆ. ಮುಂದಿನ ಬಾರಿ ನಡೆದ ಟ್ರಸ್ಟ್ ಸಭೆಯಲ್ಲಿ ನಾವೆಲ್ಲ ಹುಡುಗರೂ ನುಗ್ಗಿದೆವು. 'ಏನೋ ನಿಮ್ಮ ದೂರು, ಇಲ್ಲಿಗೆ ಯಾಕೆ ಬಂದಿದ್ದೀರಿ' ಎಂದು ಕಾರ್ಯದರ್ಶಿ ಗುಡುಗಿದರು. ಅಧ್ಯಕ್ಷರು (ಅಜ್ಜಿಯವರು) ನನ್ನ ಮುಖ ನೋಡಿ 'ಏನಪ್ಪ ತೊಂದರೆ?' ಎಂದರು. ನಡೆಯುತ್ತಿರುವ ವಿದ್ಯಮಾನಗಳನ್ನೆಲ್ಲಾ ವಿವರಿಸಿದೆ. ಹಾಜರಿದ್ದ 6 ಜನ ಟ್ರಸ್ಟ್ಗಳೂ ಕಾರ್ಯದರ್ಶಿಯವರಿಗೆ ಬುದ್ಧಿ ಹೇಳಿ, ಹುಡುಗರ ದುಡ್ಡನ್ನು ನೀವು ಸ್ವಂತಕ್ಕೆ ಉಪಯೋಗಿಸಿ ಕೊಂಡಿರುವುದು ತಪ್ಪೆಂದು ಹೇಳಿ “ಇನ್ನು ಮೇಲೆ ಹೀಗಾಗಲ್ಲ ಹೋಗಿ' ಎಂದರು. ಸರಿ ಎಂದು ಹೇಳಿ ಬಂದೆವು. ನಂತರ ಒಂದು 3 ತಿಂಗಳು ಯಾವುದೇ ಸಮಸ್ಯೆ ಇಲ್ಲದೆ ಹಾಸ್ಟೆಲ್ನಲ್ಲಿ ಊಟ ತಿಂಡಿಗಳು ನಡೆದವು.
ದೇವಾಲಯವೀ ಹೂವಿನ ತೋಟಂ।
ಇವೆಲ್ಲದರ ಮಧ್ಯೆ ಸಣ್ಣ ಕಥೆಗಳನ್ನು, ಕವಿತೆಗಳನ್ನು ಒಡೆಯುವ ಪ್ರಯತ್ನವನ್ನು ಮುಂದುವರಿಸಿದೆ. ಕಾಲೇಜಿನ ರ‍್ನಾಟಕ ಸಂಘದ ಸಹ ಕಾರ್ಯದರ್ಶಿಯಾಗಿ, ಅಲ್ಲಿ ಬಿಡುವಿಲ್ಲದ ಕೆಲಸ ಬೇರೆ, ರ‍್ನಾಟಕ ಸಂಘದಿಂದ ಈ ರ‍್ಷ ನಾಟಕದ ಬದಲು ಸಂಗೀತ ಅಥವಾ ನೃತ ಕಾರ‍್ಯಕ್ರಮ ಆಯೋಜಿಸಲು ತರ‍್ಮಾನಿಸಿದೆವು. ಅದರ ಪರ‍್ಣ ಸಿದ್ಧತೆಗಳ ಬಗ್ಗೆ ತಲೆಕೆಡಿಸಿಕೊಂಡೆ.
MTR ನಲ್ಲಿ ಒಳ್ಳೆಯ ಮಸಾಲೆ ದೋಸೆ ಸಿಗುವುದು ಎಂಬ ಸುದ್ದಿ ಬೆಂಗಳೂರಿನ ಎಲ್ಲರ ಬಾಯಲ್ಲಿತ್ತು. ಒಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ಸ್ನಾನ ಮಾಡಿಕೊಂಡು, ರೂಟ್ ನಂ. 11ನ್ನು ಹತ್ತಿ, ಮಿರ‍್ವ ರ‍್ಕಲ್ನಲ್ಲಿ ಇಳಿದು ಅಲ್ಲಿಂದ ನಡೆದು ಒಖಿಖ ಗೆ ಹೋದೆ. ಕ್ಯೂಲ್ಲಿ ನಿಂತು ನನ್ನ ಸರದಿ ಬಂದಾಗ, ರವೆ ಇಡ್ಲಿ, ಮಸಾಲ ದೋಸೆ, ಕಾಫಿ, ಮುಗಿಸಿ ಬಿಲ್ ಕೊಟ್ಟು ಸೀದಾ ಲಾಲ್ಬಾಗ್ ಕಡೆ ಹೊರಟೆ, 'ದೇವಾಲಯವೀ ಹೂವಿನ ತೋಟಂ', 'ಕೈಮುಗಿದು ಒಳಗೆ ಬಾ-ಇದು ಸಸ್ಯಕಾಶಿ' ಎಂಬ ಫಲಕ ನನ್ನನ್ನು ಸ್ವಾಗತಿಸಿತು. ಪ್ರತಿ ಸಲ ಲಾಲ್ಬಾಗ್ಗೆ ಬಂದಾಗಲೂ ಏನಾದರೊಂದು ಹೊಸತು ವಿಶೇಷ ಕಾಣಿಸುತ್ತಿತ್ತು. ಒಂದು ಗಂಟೆ, ಗಡಿ ಗೋಪುರ, ಗಾಜಿನ ಮನೆ, ಕೆರೆ, ಗುಲಾಬಿ ತೋಟ ಇವುಗಳನ್ನು ಸುತ್ತು ಹಾಕಿದೆ. ಬಿಸಿಲೇರುತ್ತಿತ್ತು. ಒಂದು ದೊಡ್ಡ ಮರದ ಕೆಳಗೆ ಯಾರೂ ಇಲ್ಲ ಎಂದು ಖಾತ್ರಿ ಮಾಡಿಕೊಂಡು,ಮರಕ್ಕೆ ಒರಗಿಕೊಂಡಂತೆ ಇದ್ದ ಕಲ್ಲು ಹಾಸಿನ ಮೇಲೆ ಕುಳಿತೆ, ಹಾಸ್ಟೆಲ್ ನಿಂದ ಹೊರಡುವಾಗ ಜೇಬಿನಲ್ಲಿ ಇರಿಸಿಕೊಂಡಿದ್ದ ಬಿಳಿ ಹಾಳೆ ಒಂದನ್ನು ತೆಗೆದು ಪೆನ್ನಿನಲ್ಲಿ ಕವಿತೆ ಬರೆಯುಲು ಆರಂಭಿಸಿದೆ.
ಮುಗಿಲು ಚುಂಬಿಸುವಂತೆ ಕಾಣುವ ಮರಗಳ ರ‍್ಣನೆ, ಗುಲಾಬಿ ತೋಟದ ರ‍್ಣನೆ, ಮರದ ಕೆಳಗೆ ಕುಳಿತು ಬೇಸಿಗೆ ರಜೆಯ ಆನಂದವನ್ನು ಅನುಭವಿಸುವವರ ಬಗ್ಗೆ, ಬುತ್ತಿ ತಂದು ಚಾಪೆ ಹಾಸಿ ಕುಳಿತು ಒಟ್ಟಿಗೆ ಭೋಜನ ಮಾಡುವವರ ಬಗ್ಗೆ - ಹೀಗೆ ನಾನು ಕಂಡ ದೃಶ್ಯಗಳನ್ನೆಲ್ಲಾ ಪದ್ಯ ರೂಪದಲ್ಲಿ ಗೀಚಿದೆ. ಅಷ್ಟರಲ್ಲಿ ಒಂದು ದೊಡ್ಡ ಕುಟುಂಬ ನಾನು ಕುಳಿತಿದ್ದ ಮರದ ಕೆಳಗೆ ಬಂದ ಜಮಖಾನೆ ಹಾಸಿ ಊಟಕ್ಕೆ ತಯಾರಿ ಆರಂಭಿಸಿತ್ತು. ಮಕ್ಕಳ ಕೂಗಾಟ ಜಾಸ್ತಿಯಾಯ್ತು, ಥತ್!" ಎಂದು ಹೇಳಿ ಅಲ್ಲಿಂದ ಕಾಲುಕಿತ್ತು, ಮತ್ತೊಂದು ಏಕಾಂತ ಜಾಗವನ್ನು ಹುಡುಕಿಕೊಂಡು ಹೊರಟು ಕೆರೆಯ ಪಕ್ಕದ ನರ‍್ಜನ ಪ್ರದೇಶ. ಅದರ ಪಕ್ಕದಲ್ಲಿ ಒಂದು ಹೊಂಗೆ ಮರದ ನೆರಳು ಅದರ ಹಿಂದೆ ಒಂದು ದೊಡ್ಡ ಮೊದೆ, ಕಲ್ಲಿನ ಮೇಲೆ ಕುಳಿತು ಕವಿತೆ ರಚನೆ ಮುಂದುವರಿಸಿದೆ. ಅಷ್ಟರಲ್ಲಿ ಮೊದೆಯ ಹಿಂದೆ ಸರಸರ ಎಂಬ ಶಬ್ದ ಬಂತು. ಸರಸರ ಶಬ್ದ ಬಂದರೆ ಅಲ್ಲಿ ಹಾವುಗಳು ಓಡಾಡುವ ಸೂಚನೆ ಎಂದು ನನ್ನ ಅನುಭವ. ಎದ್ದು ಪೊದೆಯ ಹಿಂದೆ ಓಡಿ ನೋಡಿದರೆ ಅಲ್ಲಿ ಒಂದು ಹುಡುಗ ಹುಡುಗಿ ಪ್ರೇಮದಾಟದಲ್ಲಿ ತೊಡಗಿವೆ, ಪ್ರಪಂಚದ ಪರಿವೆಯೇ ಇಲ್ಲದಂತೆ, ಅಸಹ್ಯವೆನಿಸಿ, ಥ!! ಇಂತ ಪವಿತ್ರವಾದ ಪ್ರದೇಶವನ್ನು ಮನುಷ್ಯ ಹೇಗೆ ತನ್ನ ಕಾಮತೃಷೆ ತಣಿಸಲು ದುರುಪಯೋಗ ಪಡಿಸಿಕೊಳ್ಳುತ್ತಾನೆ ಎಂದು ಶಪಿಸುತ್ತಾ ಅಲ್ಲಿಂದ ಹೊರಟೆ. 11ನೇ ರೂಟ್ ಬಸ್ ಹತ್ತಿ ಮಧ್ಯಾಹ್ನದ ಹೊತ್ತಿಗೆ ಹಾಸ್ಟೆಲ್ಗೆ ಹಿಂದಿರುಗಿದೆ.
(ಮುಂದಿನ ‘ಕಿನ್ನರಿ’ಗೆ)
.