ಯಾವ ಪಕ್ಷದ ಮೂಲಗಳು ಖಚಿತ!?  ಸಿದ್ದು ಸಮಾವೇಶಕ್ಕೆ ಸೇರಿದ್ದ ಜನರೆಷ್ಟು ? ಸುದ್ದಿ ವಿಶ್ಲೇಷಣೆ ದಿನೇಶ್ ಅಮಿನ್ ಮಟ್ಟು 

ಯಾವ ಪಕ್ಷದ ಮೂಲಗಳು ಖಚಿತ!?  ಸಿದ್ದು ಸಮಾವೇಶಕ್ಕೆ ಸೇರಿದ್ದ ಜನರೆಷ್ಟು ? ಸುದ್ದಿ ವಿಶ್ಲೇಷಣೆ ದಿನೇಶ್ ಅಮಿನ್ ಮಟ್ಟು 

ಯಾವ ಪಕ್ಷದ ಮೂಲಗಳು ಖಚಿತ!?    ಸಿದ್ದು ಸಮಾವೇಶಕ್ಕೆ ಸೇರಿದ್ದ ಜನರೆಷ್ಟು ?   ಸುದ್ದಿ ವಿಶ್ಲೇಷಣೆ     ದಿನೇಶ್ ಅಮಿನ್ ಮಟ್ಟು 

 ಯಾವ ಪಕ್ಷದ ಮೂಲಗಳು ಖಚಿತ!?


 ಸಿದ್ದು ಸಮಾವೇಶಕ್ಕೆ ಸೇರಿದ್ದ ಜನರೆಷ್ಟು ?


ಸುದ್ದಿ ವಿಶ್ಲೇಷಣೆ

ದಿನೇಶ್ ಅಮಿನ್ ಮಟ್ಟು 

ರಾಜಕೀಯ ವರದಿಗಳನ್ನು ಮಾಡುವ ಪತ್ರರ‍್ತರು ಪಕ್ಷದ ಆಂತರಿಕ ಸಭೆಯ ವರದಿಗಳನ್ನು ಮಾಡುವಾಗ, ವಿಶ್ಲೇಷಣೆ-ಅಂಕಣಗಳನ್ನು ಬರೆಯುವಾಗ ಪಕ್ಷದ ’ಮೂಲಗಳನ್ನು’ ಆಶ್ರಯಿಸುವುದು ವಾಡಿಕೆ. ಈ ಮೂಲಗಳು ಎಲ್ಲ ಸಂರ‍್ಭಗಳಲ್ಲಿಯೂ ಸತ್ಯ ತಿಳಿಸುವುದಿಲ್ಲ, ಒಮ್ಮೊಮ್ಮೆ ಸುಳ್ಳುಗಳನ್ನು ಪ್ಲಾಂಟ್ ಮಾಡುತ್ತವೆ. ಎಂತಹ ಮೂಲಗಳನ್ನು ಆಶ್ರಯಿಸುತ್ತಾರೆ ಎನ್ನುವುದರ ಮೇಲೆ ವರದಿಯ ವಿಶ್ವಾಸರ‍್ಹತೆ ನರ‍್ಧಾರವಾಗುತ್ತದೆ.


ಕಾಂಗ್ರೆಸ್ ಮತ್ತು ಬಿಜೆಪಿಯ ದೆಹಲಿ ನಾಯಕರು ಬಂದು ರಾಜ್ಯದ ನಾಯಕರಿಗೆ ಬುದ್ದಿ ಹೇಳಿದ ವರದಿಗಳು ಶುಕ್ರವಾರದ  ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ವರದಿಗಳಿಗೆ ಪಕ್ಷದ ಮೂಲಗಳ ಹೇಳಿಕೆಗಳೇ ಆಧಾರ. 


ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು ಹೆಚ್ಚು ಕಡಿಮೆ ಒಂದೇ ಧಾಟಿಯಲ್ಲಿವೆಯಾದ ಕಾರಣ ಎರಡೂ ಪಕ್ಷಗಳ ಬಗೆಗಿನ ವರದಿಗಳು ಆ ಪಕ್ಷಗಳ ಒಂದೇ ಮೂಲದಿಂದ ಹೊರಬಿದ್ದಿವೆ ಎಂದು ಸುಲಭದಲ್ಲಿ ಹೇಳಬಹುದು. 


‘”ಇತ್ತೀಚಿನ ದಿನಗಳಲ್ಲಿ ಚರ‍್ಚೆಯಲ್ಲಿರುವ ಮುಂದಿನ ಮುಖ್ಯಮಂತ್ರಿಯ ವಿವಾದ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಚರ‍್ಚೆಯಾಗಿದೆ, ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸಬೇಕು ಎಂದು ರಾಹುಲ್ ಗಾಂಧಿಯವರು ತಾಕೀತು ಮಾಡಿದ್ದಾರೆ. ಮುಂದಿನ ಮುಖ್ಯಮಂತ್ರಿಯ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವವರ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆಗಳಲ್ಲಿ ವರದಿ ಮಾಡಲಾಗಿದೆ. 


“ ಕರ‍್ಯರ‍್ತರಲ್ಲಿನ ಅಸಮಾಧಾನವನ್ನು ಹೋಗಲಾಡಿಸಿ ಪಕ್ಷ ಸಂಘಟಿಸಬೇಕು, ಹಿಂದುಳಿದ ಜಾತಿಗಳನ್ನು ಸೆಳೆಯುವ ಪ್ರಯತ್ನ ಮಾಡಬೇಕು, ನಾಯಕರು ಆಕ್ರಮಣಕಾರಿಯಾಗ ಬೇಕು" ಎಂದೆಲ್ಲ ಅಮಿತ್ ಶಹಾ ತಾಕೀತು ಮಾಡಿದ್ದಾರೆ. ಯಡಿಯೂರಪ್ಪನವರು ಅಮಿತ್ ಶಹಾ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯನವರ ಜನ್ಮದಿನದ ಅಮೃತಮಹೋತ್ಸವದಿಂದ ಉಂಟಾಗಿರುವ ಸಂಚಲನ ಬಗ್ಗೆ ತಿಳಿಸಿದರು ಎಂದೆಲ್ಲ ಬಿಜೆಪಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.


ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಮಾಡಲಾಗಿರುವ ಈ ಎರಡು ವರದಿಗಳಲ್ಲಿ ಯಾವುದು ಸತ್ಯ ಯಾವುದು ರ‍್ಧಸತ್ಯ ಎಂದು ನಿತ್ಯ ಪತ್ರಿಕೆ ಓದುವವರು ಊಹಿಸಿಬಿಡಬಹುದು.


ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿಯ ಬಗ್ಗೆ ರ‍್ಚೆಯಾಗುತ್ತಾ ಇರುವುದರಿಂದ ಕಾಂಗ್ರೆಸ್ ಮೂಲಗಳು ತಿಳಿಸಿರುವುದು ಸತ್ಯವೇ ಆಗಿರಬಹುದು.


ಆದರೆ ಅಪರೂಪಕ್ಕೆ ಕೈಗೆ ಸಿಕ್ಕ ಅಮಿತ್ ಶಹಾ ಅವರನ್ನು ಯಡಿಯೂರಪ್ಪನವರು ಭೇಟಿ ಮಾಡಿ ಸಿದ್ದರಾಮಯ್ಯನವರ ಜನ್ಮದಿನದ ಅಮೃತಮಹೋತ್ಸವದ ಬಗ್ಗೆ ರ‍್ಚೆಯಷ್ಟೇ ಮಾಡಿದ್ದರು ಎಂದು ನಂಬುವುದು ಸಾಧ್ಯವೇ?


ಯಡಿಯೂರಪ್ಪನವರು ಖಂಡಿತ ತನ್ನ ಮಗನ ರಾಜಕೀಯ ಭವಿಷ್ಯದ ಬಗ್ಗೆ ಅಮಿತ್ ಶಹಾ ಅವರಲ್ಲಿ ಮಾತನಾಡಿರುತ್ತಾರೆ. ಮಗನನ್ನು ಶಾಸಕ, ಸಚಿವ ಏನೂ ಮಾಡಿಲ್ಲ, ಮುಂದಿನ ಚುನಾವಣೆಯಲ್ಲಿ ಅವರಿಗೆ ಸ್ರ‍್ಧಿಸಲು ಯಾವ ಕ್ಷೇತ್ರ ಎನ್ನುವುದು ಖಾತರಿ ಇಲ್ಲ. ಕೊನೆಗೆ ಭ್ರಷ್ಟಾಚಾರದ ಹಗರಣದಲ್ಲಿ ಮಗನನ್ನು ಸಿಕ್ಕಿಸಿಹಾಕಿಕೊಳ್ಳುವ ಪ್ರಯತ್ನವನ್ನು ಪಕ್ಷದವರೇ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪನವರು ಖಂಡಿತ ತಮ್ಮ ದು:ಖವನ್ನು ತೋಡಿಕೊಂಡಿರುತ್ತಾರೆ.


ಇದರ ಜೊತೆಗೆ “”ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ದಿನಬೆಳಗಾದರೆ ತನ್ನ ಮತ್ತು ಮಗನ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ತಾನು ಮುಖ್ಯಮಂತ್ರಿಯಾಗಲು ಹೈಕಮಾಂಡ್ ಗೆ ೨ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂರ‍್ಥದಲ್ಲಿ ಆರೋಪ ಮಾಡಿದರೂ ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿರುತ್ತಾರೆ


.ಕೊನೆಗೆ ಈ ಎಲ್ಲ ಕಿತಾಪತಿಗಳ ಹಿಂದೆ ಬಿ.ಎಲ್.ಸಂತೋಷ್ ಇದ್ದಾರೆ ಎನ್ನುವ ಒಂದು ಮಾತನ್ನು ಸೇರಿಸಿರುತ್ತಾರೆ.


ಆದರೆ ಇವು ಯಾವುದನ್ನು ಬಿಜೆಪಿ ಮೂಲಗಳು ಮಾಧ್ಯಮಗಳಿಗೆ ತಿಳಿಸುವುದಿಲ್ಲ, ಅವರಿಗೆ ಪಕ್ಷದ ಹಿತಾಸಕ್ತಿ ರಕ್ಷಣೆ ಮುಖ್ಯ. ಪತ್ರರ‍್ತರು ಕೂಡಾ ಕೆದಕುವ ಸಾಹಸ ಮಾಡುವುದಿಲ್ಲ. 


ಕಾಂಗ್ರೆಸ್ ಮೂಲಗಳು ಎಲ್ಲವನ್ನು ತಿಳಿಸುತ್ತದೆ. ಪತ್ರರ‍್ತರಿಗೆ ಕೆಣಕಲು, ಕೆದಕಲು ಅವಕಾಶವನ್ನೇ ಕೊಡುವುದಿಲ್ಲ.

ಸಿದ್ಧು ಸಮಾವೇಶಕ್ಕೆ 


ಸೇರಿದ್ದ ಜನರೆಷ್ಟು ?


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೫ನೇ ಜನ್ಮದಿನದ ಅಮೃತಮಹೋತ್ಸವಕ್ಕೆ ಸೇರಿರುವ ಜನರ ಸಂಖ್ಯೆ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ಟಿವಿ ಡಿಬೇಟ್ ನಲ್ಲಿ ಬಿಜೆಪಿಯ ವಕ್ತಾರರೊಬ್ಬರು ಇಂತಹ ನೂರಾರು ಸಮಾವೇಶಗಳನ್ನು ನಾವು ಮಾಡಿದ್ದೇವೆ ಎಂದೆಲ್ಲ ಹೇಳಿಕೊಳ್ಳುತ್ತಿದ್ದರು.


ನಾನು ವೃತ್ತಿಜೀವನದಲ್ಲಿ ಕನಿಷ್ಠ ೪೦-೫೦ ರಾಜಕೀಯ ಸಮಾವೇಶಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ನೋಡಿದ್ದೆ. ಸಮಾವೇಶಗಳಿಗೆ ಅತಿಹೆಚ್ಚು ಜನಸೇರುವ ರಾಜ್ಯಗಳೆಂದರೆ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ. ಉತ್ತರಪ್ರದೇಶದ ಜನಸಂಖ್ಯೆಯೂ ಇದಕ್ಕೆ ಕಾರಣವಿರಬಹುದು.


ಒಂದು ಕಾಲದಲ್ಲಿ ಕಾನ್ಸಿರಾಮ್ ಮತ್ತು ಮಾಯಾವತಿ ಭಾಗವಹಿಸಿದ್ದ ರ‍್ಯಾಲಿ ಗಳಲ್ಲಿ ಸಾಮಾನ್ಯವಾಗಿ ಮೂರರಿಂದ ನಾಲ್ಕು ಲಕ್ಷ ಜನ ಸೇರಿದ್ದನ್ನು ನಾನು ಕಂಡಿದ್ದೆ.


ಪಶ್ಚಿಮಬಂಗಾಳದಲ್ಲಿ ಕಮ್ಯುನಿಸ್ಟರ ರ‍್ಯಾಲಿಗಳಲ್ಲಿಯೂ ಲಕ್ಷಾಂತರ ಜನ ಸೇರುತ್ತಿದ್ದರು. ಅದಕ್ಕೆ ಮುಖ್ಯ ಕಾರಣ ಅದು ಕ್ಯಾಡರ್ ಬೇಸ್ಡ್ ಪಕ್ಷವಾಗಿರುವುದು.


 ಸಿಪಿಎಂ ಸರ್ಕಾರದ ಕೊನೆ ದಿನಗಳಲ್ಲಿ ಮಮತಾ ಬ್ಯಾನರ್ಜಿ ರ‍್ಯಾಲಿಗಳಿಗೆ ಕೂಡಾ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ನನ್ನ ಅಂದಾಜಿನ ಪ್ರಕಾರ ಅವುಗಳು ಯಾವುದೂ 3-4 ಲಕ್ಷ ದಾಟಿರಲಿಲ್ಲ. 
ಉತ್ತರಪ್ರದೇಶದಲ್ಲಿನ ಈ ಬಾರಿಯ ವಿಧಾನಸಭಾ ಚುನಾವಣಾ ಕಾಲದಲ್ಲಿ ವಾರಣಾಸಿಯಲ್ಲಿ ನಡೆದ ನರೇಂದ್ರಮೋದಿಯವರ ಚುನಾವಣಾ ರ‍್ಯಾಲಿ ಈ ವರೆಗಿನ ಅತೀ ದೊಡ್ಡ ರ‍್ಯಾಲಿ ಎಂದು ಹೇಳಲಾಗುತ್ತಿದೆ. ಅಲ್ಲಿಯೂ ಸೇರಿರುವ ಜನರ ಸಂಖ್ಯೆ ೪-೪.೫೦ ಲಕ್ಷ ದಾಟಿರಲಿಲ್ಲ. 


ಸಿದ್ದರಾಮಯ್ಯನವ ಜನ್ಮದಿನದ ಅಮೃತಮಹೋತ್ಸವ ಸಮಾರಂಭದಲ್ಲಿ ಕನಿಷ್ಠ ಹತ್ತು ಲಕ್ಷ ಜನ ಸೇರಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಸಂಘಟಕರ ಅಂದಾಜು ಸುಮಾರು 15 ಲಕ್ಷ.


ಸಾಮಾನ್ಯವಾಗಿ ಸಭೆ ನಡೆಸುವ ಮೈದಾನದ ವಿಸ್ತಾರ ಇಲ್ಲವೇ ಹಾಕಿರುವ ಕುರ್ಚಿಗಳ ಆಧಾರದಲ್ಲಿ ಸೇರಿರುವ ಜನರ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ.


ಆದರೆ ನಲ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆದ ಮೈದಾನದಲ್ಲಿ ಸೇರಿರುವವರಿಗಿಂತ ಕನಿಷ್ಠ ಮೂರು ಪಟ್ಟು ಜನ ಹೊರಗೆ ರಸ್ತೆಯಲ್ಲಿದ್ದ ಕಾರಣ ಸೇರಿದ ಜನರ ಸಂಖ್ಯೆಯನ್ನು ಅಂದಾಜು ಮಾಡುವುದು ಕಷ್ಟದ ಕೆಲಸ.


 ಸಮಾರಂಭ ನಡೆದ ಮೈದಾನದ ಎಡ-ಬಲಗಳಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನ ವಾಹನಗಳಿಂದ ಇಳಿದು ೮-೧೦ ಕಿ.ಮೀ. ನಡೆದುಕೊಂಡು ಬಂದಿದ್ದರು. ಉತ್ತರ ಕರ್ನಾಟಕದ ಕಡೆಯಿಂದ ಬಂದಿದ್ದ ಬಹಳಷ್ಟು ವಾಹನಗಳು ಮೈದಾನಕ್ಕೆ ಬರಲಾಗದೆ ವಾಪಸು ಹೋಗಿವೆ. 
ಈ ಲೆಕ್ಕದಲ್ಲಿ ಸೇರಿರುವ ಜನರ ಸಂಖ್ಯೆ ಎಷ್ಟೇ ಇದ್ದರೂ ಸದ್ಯಕ್ಕೆ ರಾಜ್ಯದ ಮಾತ್ರವಲ್ಲ. ದೇಶದಲ್ಲಿನ ಈ ವರೆಗಿನ ರಾಜಕೀಯ ಸಮಾವೇಶಗಳಲ್ಲಿ ಇದು ಅತ್ಯಂತ ದೊಡ್ಡದು ಎನ್ನುವುದರಲ್ಲಿ ಅನುಮಾನ ಇಲ್ಲ.


ಏನಿದ್ದರೂ, ಯಾವ ಪಕ್ಷದಿಂದ ನಡೆದಿದ್ದರೂ ಈ ಅಭೂತಪೂರ್ವ ದಾಖಲೆ ಕರ್ನಾಟಕ ರಾಜ್ಯದ ಹೆಸರಲ್ಲಿಯೇ ಉಳಿಯಬೇಕು.