ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಕ್ಯಾತಸಂದ್ರದ ಈ ಶಾಲೆಗೆ ಶತಮಾನದ ಸಂಭ್ರಮ 

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಕ್ಯಾತಸಂದ್ರದ ಈ ಶಾಲೆಗೆ ಶತಮಾನದ ಸಂಭ್ರಮ 

ಒಂದು ಗಳಿಗೆ ಕುಚ್ಚಂಗಿ ಪ್ರಸನ್ನ ಕ್ಯಾತಸಂದ್ರದ ಈ ಶಾಲೆಗೆ ಶತಮಾನದ ಸಂಭ್ರಮ 

ಒಂದು ಗಳಿಗೆ
ಕುಚ್ಚಂಗಿ ಪ್ರಸನ್ನ
ಕ್ಯಾತಸಂದ್ರದ ಈ ಶಾಲೆಗೆ ಶತಮಾನದ ಸಂಭ್ರಮ 

ನೀವು ಹಳ್ಳಿಗಳಲ್ಲಿ ಹುಟ್ಟಿ ಬೆಳೆದವರಾಗಿದ್ದರೆ, ಸರ್ಕಾರಿ ಶಾಲೆಗಳಲ್ಲಿ ಓದಿದವರಾಗಿದ್ದರೆ ನಿಮಗೆ ಖಂಡಿತಾ ಈ ಬರವಣಿಗೆ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಇವತ್ತು ಬೆಳ್ಳಂಬೆಳಗ್ಗೆ ನನಗೆ ನನ್ನ ಬಾಲ್ಯವೆಲ್ಲ ಶಾಲಾ ದಿನಗಳೆಲ್ಲ ಮತ್ತೆ ಕಣ್ಣ ಮುಂದೆ ಬಂದAತಾಯಿತು, ಇಂಥ ಅಮೂಲ್ಯವಾದ ಅನುಭವಕ್ಕೆ ಕಾರಣರಾದವರು ನಮ್ಮ ಜಿಲ್ಲೆಯ ಜನಪ್ರಿಯ ಹಾಗೂ ಡೇರ್ ಡೆವಿಲ್ ರಾಜಕಾರಣಿ ಕೆ.ಎನ್.ರಾಜಣ್ಣನವರು.


ವಿಷಯ ತೀರಾ ಸರಳ ಆದರೆ ಅಷ್ಟೇ ಮಹತ್ವದ್ದು, ಇವತ್ತು ಬೆಳಿಗ್ಗೆ ಕ್ಯಾತಸಂದ್ರದ ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಯಲ್ಲಿ ಪುಟ್ಟದೊಂದು ಸಮಾರಂಭ. ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಈ ಶಾಲೆಗೆ ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ. ಸರ್ಕಾರಿ ಶಾಲೆಗೆ ಕಂಪ್ಯೂಟರ್ ಲ್ಯಾಬ್ ಏಕೆ ಅಂತ ಕೇಳಬೇಡಿ. ಓದುತ್ತಾ ನಿಮಗೇ ಅರ್ಥವಾಗುತ್ತದೆ.


ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು, ತುಮಕೂರು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ಮುಖ್ಯ ಅತಿಥಿಗಳು, ಇವರ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಕೆಎನ್‌ಅರ್ ಅಭಿಮಾನಿಗಳು, ಅಧಿಕಾರಿಗಳು ಇದ್ದರು.


ಕ್ಯಾತಸಂದ್ರದ ಪೇಟೆ ಬೀದಿಯಲ್ಲಿರುವ ಪಾರಂಪರಿಕ ಹೆಂಚಿನ ಕಟ್ಟಡದಲ್ಲಿರುವ ಈ ಶಾಲೆ ಪ್ರಾರಂಭವಾದದ್ದು 1902ನೇ ಇಸ್ವಿಯಲ್ಲಿ, ಕಾಲಾನಂತರದಲ್ಲಿ ಆ ಕಟ್ಟಡದ ಸುತ್ತ ಇನ್ನಷ್ಟು ಕಟ್ಟಡಗಳಾಗಿದ್ದರೂ ಮೂಲ ಕಟ್ಟಡವನ್ನು ಜೋಪಾನವಾಗಿ ಉಳಿಸಿಕೊಂಡಿದ್ದಾರೆ. 1967ರಲ್ಲಿ ಬಾಲಕ ಕೆಎನ್‌ಆರ್ ಈ ಶಾಲೆಯ ವಿದ್ಯಾರ್ಥಿಯಾಗಿದ್ದವರಂತೆ, ಅವರು ಈ ಶಾಲೆಯ ನೆನಪುಗಳನ್ನು ಒಂದೊAದಾಗಿ ನೆನಪಿಸಿಕೊಂಡು ಹೇಳುತ್ತಾ ಇದ್ದರೆ ಇಡೀ ಸಭೆ ವಿಸ್ಮಯದಿಂದ ಕೇಳುತ್ತ ಕುಳಿತು ಬಿಟ್ಟಿತ್ತು. ಇಲ್ಲಿ ಕಲಿತವರಲ್ಲಿ ಬಹಳಷ್ಟು ಜನ ಸಮಾಜದಲ್ಲಿ ಅತ್ಯುನ್ನತ ಹಂತ ತಲುಪಿದ್ದಾರೆ ಎಂದು ಅವರ ಹೆಸರುಗಳನ್ನು ನೆನಪಿಸಿಕೊಂಡರು, ಜೊತೆಗೆ ಅವರ ಗುರುಗಳಾಗಿದ್ದ ಅನೇಕರ ವ್ಯಕ್ತಿತ್ವವನ್ನು ಅವರವರ ನಿಲುವು, ವೇಷ ಭೂಷಣ ಹಾಗೂ ನಡವಳಿಕೆಗಳ ಸಮೇತ ಎಷ್ಟು ಖರಾರುವಕ್ಕಾಗಿ ವಿವರಿಸಿದರೆಂದರೆ ಅವರೆಲ್ಲ ನಮ್ಮ ಕಣ್ಣ ಮುಂದೆ ಬಂದು ನಿಂತರೇನೋ ಅಂತ ಅನಿಸಿಬಿಟ್ಟಿತು. ಜೊತೆಗೆ ಅವರು ಮಾತನಾಡುತ್ತಲೇ ಇದ್ದಾಗ ಆಗ ತಾನೇ ಶಾಲಾ ಆವರಣಕ್ಕೆ ಪ್ರವೇಶಿಸಿದ ಅವರ ಸಹಪಾಠಿಯನ್ನೂ ಗುರುತಿಸಿ ನೋಡಿ ಇವನು ಇಷ್ಟು ತಡವಾಗಿ ರ‍್ತಾ ಇದ್ದಾನೆ ಎಂದು ಆತ್ಮೀಯವಾಗಿ ಬರಮಾಡಿಕೊಂಡರು.


ಇವತ್ತಿನ ಸ್ಪರ್ಧಾತ್ಮಕ ಪರಿಸರದಲ್ಲಿ ಸರ್ಕಾರಿ ಶಾಲೆಗೆ ಸೇರುವ ಮಕ್ಕಳು ಸಹಜವಾಗೇ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರೇ ಆಗಿದ್ದು, ದೊಡ್ಡ ಮೊತ್ತದ ಡೊನೇಶನ್, ಫೀ ತೆತ್ತು ಖಾಸಗಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಎದುರು ನಾಚಿಕೆಯಿಂದ,ಕೀಳರಿಮೆಯಿAದ ತಲೆ ತಗ್ಗಿಸಬಾರದು ಎಂಬ ದೃಷ್ಟಿಯಿಂದ ತಾವು ಕಲಿತ ಶಾಲೆಗೆ ಕೆಎನ್‌ಆರ್ 13 ಹೊಚ್ಚ ಹೊಸ ಆಧುನಿಕ ಕಂಪ್ಯೂಟರ್‌ಗಳನ್ನು ಯುಪಿಎಸ್, ಕುರ್ಚಿ,ಮೇಜುಗಳಷ್ಟೇ ಅಲ್ಲದೇ, ಸಾಫ್ಟ್ವೇರ್ ಹಾಗೂ ಇಂಟರ್‌ನೆಟ್ ಕನೆಕ್ಷನ್ ಸಹಿತ ಡಿಸಿಸಿ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಿದ್ದಾರೆ. ಜೊತೆಗೆ ಶಾಲೆಯ ಎಲ್ಲ ಶಿಕ್ಷಕ, ಶಿಕ್ಷಕಿಯರಿಗೂ ಕಂಪ್ಯೂಟರ್ ತರಬೇತಿ ನೀಡಲೂ ವ್ಯವಸ್ಥೆ ಮಾಡಿದ್ದಾರೆ. 
ಹತ್ತಾರು ವರ್ಷದ ಹಿಂದೆ ಎಲ್ಲ ಸರ್ಕಾರಿ ಶಾಲೆಗಳಿಗೆ ಹತ್ತಾರು ಗಣಕಯಂತ್ರಗಳನ್ನು ಸರ್ಕಾರದ ಕಡೆಯಿಂದ ಯಾರೋ ಸರಬರಾಜು ಮಾಡಿದ್ದಾರಂತೆ, ಅವುಗಳೆಲ್ಲ ಎಲ್ಲೋ ಧೂಳು ಹಿಡಿಯತ್ತ ಬಿದ್ದಿವೆ ಮತ್ತು ಈಗ ಕೆಲಸಕ್ಕೆ ಬಾರದಂತಾಗಿವೆ, ಇದರಲ್ಲಿ ದೊಡ್ಡ ಹಗರಣವೇ ಇದೆ ಎಂದು ಕೆಎನ್‌ಆರ್ ಹೇಳುತ್ತಿದ್ದರು.


ಒಂದೂಕಾಲು ಶತಮಾನ ಸಮೀಪಿಸುತ್ತಿರುವ ಈ ಐತಿಹಾಸಿಕ ಶಾಲೆಗೆ ಇಡೀ ನಗರ ಹಿಂದೆAದೂ ಕಂಡಿರದ ರೀತಿಯಲ್ಲಿ ಅದ್ದೂರಿಯಾಗಿ ಶತಮಾನೋತ್ಸವ ಸಮಾರಂಭ ಮಾಡಬೇಕೆಂದು ರಾಜಣ್ಣನವರು ಸಂಕಲ್ಪ ಮಾಡಿಬಿಟ್ಟಿದ್ದಾರೆ. ಬೇಸಿಗೆ ರಜೆಯಲ್ಲಿ ಮಾಡಬಹುದಾದ ಈ ಸಮಾರಂಭಕ್ಕೆ ಖುದ್ದು  ಮುಖ್ಯಮಂತ್ರಿಯವರನ್ನೇ ಕರೆತನ್ನಿ ಎಂದು ಸಂಸದ ಜಿಎಸ್‌ಬಿಗೆ ಹೇಳುತ್ತಿದ್ದರು ಕೆಎನ್‌ಅರ್. 


ಈ ಶಾಲೆಯನ್ನು ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಈಗಾಗಲೇ ದತ್ತು ತೆಗೆದುಕೊಂಡಿದ್ದಾರೆ ಎನ್ನುವುದು ಇನ್ನೂ ವಿಶೇಷವಾದ ಸಂಗತಿ, ಇದೇ ಆವರಣದಲ್ಲಿರುವ ಹೈಸ್ಕೂಲಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಆಗಿದೆ. ಒಟ್ಟಾರೆ ಇನ್ನೊಂದು ಎರಡು ಮೂರು ತಿಂಗಳಲ್ಲಿ ಇಡೀ ಆವರಣಕ್ಕೆ ಕಾಯಕಲ್ಪ ನೀಡಲಿದ್ದಾರೆ ಈ ನಮ್ಮ ಶಾಸಕರು.

13 ಕಂಪ್ಯೂಟರ್‌ಗಳನ್ನು ಯುಪಿಎಸ್, ಟೇಬಲ್, ಕುರ್ಚಿಗಳು ಹಾಗೂ ಯುಪಿಎಸ್ ಸಹಿತ ಕೊಡುಗೆಯಾಗಿ ನೀಡಿದೆ


ಕ್ಯಾತಸಂದ್ರದ ನಿವಾಸಿಗಳಾಗಿರುವ ಹಾಗೂ ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿರುವ ಬಹುಪಾಲು ಎಲ್ಲರೂ ಇದೇ ಶಾಲೆಯ ಹಳೆಯ ವಿದ್ಯಾರ್ಥಿಗಳು, ಮಾಜಿ ಪ್ರಧಾನರಾದ ಚಂದ್ರಮೌಳೇಶ್ವರ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ.ಆನಂದ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆ.ಹೆಚ್.ಜಯರಾಮ್, ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ.ಮೂರ್ತಿ, ನರಸಿಂಹಮೂರ್ತಿ, ಜಿ.ಆರ್.ರವಿಶಂಕರ್ , ಪಾಲಿಕೆ ಸದಸ್ಯ ಶಿವರಾಜ್, ಅರುಣ್ ಸೇರಿ ಹತ್ತಾರು ಪ್ರಮುಖರಿದ್ದರು. ಡಿಸಿಸಿ ಬ್ಯಾಂಕ್ ಸಿಒಓ ಶ್ರೀಧರ್, ಸಲಹೆಗಾರ ಜಂಗಮಪ್ಪ, ಡಿಡಿಪಿಐ ನಂಜಯ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಭಾಗ್ಯಮ್ಮ, ಶಾಲಾ ಸಿಬ್ಬಂದಿ ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.