ಸೆ.೨೭ ರ ಭಾರತ್ ಬಂದ್‌ಗೆ ಸಾರ್ವಜನಿಕರ ಬೆಂಬಲ ಕೋರಿದ ರೈತಸಂಘ

ಸೆ.೨೭ ರ ಭಾರತ್ ಬಂದ್‌ಗೆ ಸಾರ್ವಜನಿಕರ ಬೆಂಬಲ ಕೋರಿದ ರೈತಸಂಘ


ಸೆ.೨೭ ರ ಭಾರತ್ ಬಂದ್‌ಗೆ ಸಾರ್ವಜನಿಕರ ಬೆಂಬಲ ಕೋರಿದ ರೈತಸಂಘ
ಮಧುಗಿರಿ : ಕೇಂದ್ರ ಸರಕಾರ ಜನ ವಿರೋಧಿ ಕೃಷಿ ಕಾಯ್ದೆಯನ್ನು ವಿರೋಧಿಸಿ ಸೆ.೨೭ ರಂದು ಭಾರತ್ ಬಂದ್‌ಗೆ ಮಧುಗಿರಿ ತಾಲೂಕಿನ ರೈತ, ದಲಿತ, ಕನ್ನಡ ಪರ ಸಂಘಟನೆಗಳು ಅಂಗನವಾಡಿ ಮತ್ತು ಆಶಾಕಾರ್ಯಕರ್ತರ ಸಂಘಗಳು ಬಸ್ ಮಾಲೀಕರ ಸಂಘ, ಹಮಾಲಿಗರ ಸಂಘ, ಕರೆ ನೀಡಿದ್ದು ಸಾರ್ವಜನಿಕರು ಬೆಂಬಲಿಸುವAತೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ತಿಳಿಸಿದರು. 
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾಯ್ದೆ, ಕೃಷಿ ಕಾಯ್ದೆ ಮಸೂದೆಯನ್ನು ವಾಪಸ್ಸು ಪಡೆಯಬೇಕು. ಎತ್ತಿನ ಹೊಳೆ ಯೋಜನೆಯ ಭೂ ಸಂತ್ರಸ್ತರಿಗೆ ಪರಿಹಾರ ನೀಡಬೇಕು, ಬೆಳೆ ವಿಮೆ ಹಣವನ್ನು ರೈತರಿಗೆ ನೀಡಬೇಕು. ಸಕಾಲಕ್ಕೆ ಮಳೆಯಾಗದೆ ಶೇ೬೦ ರಷ್ಟು ಬೆಳೆಗಳು ಬಾಡಿಹೋಗಿದ್ದು ಸರಕಾರ ಮಧುಗಿರಿ ತಾಲೂಕುನ್ನು  ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು. ಎಕರೆಗೆ ೨೦ ಸಾವಿರ  ರೂ ಪರಿಹಾರ ನೀಡಬೇಕು.ಪಡಿತರ ಅಕ್ಕಿ, ರಾಗಿಯನ್ನು ಮುಂದಿನ ವರ್ಷದ ವರೆಗೂ ಇದೆ ಪ್ರಮಾಣದಲ್ಲಿ ವಿತರಿಸಬೇಕು. ಭೂ ರಹಿತ ಬಡವರಿಗೆ ಬಗರ್ ಹುಕುಂ ಸಮಿತಿ ತುರ್ತಾಗಿ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ದೊಡ್ಡಮಾಳಯ್ಯ, ಭೂಮಿಹೋರಾಟ ಸಮಿತಿಯ ಹಂದ್ರಾಳು ನಾಗಭೂಷಣ್, ಶೂದ್ರ ಸೇನೆಯ ಟಿ.ಎಚ್. ದಿಲೀಪ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಎಸ್.ಡಿ. ಪಾರ್ವತಮ್ಮ, ಕಮಲಮ್ಮ, ಬೆಟ್ಟಯ್ಯ, ಪೋತರಾಜು ಮತ್ತಿತರರು ಹಾಜರಿದ್ದರು.