ಫೋಟೋ ದೊಂದಿಗೆ ಸಮಾಚಾರಗಳು

ಶಾಲಾ ಫೋಟೋ ಹಿಂಭಾಗ ಮತ್ತು ಹಕ್ಕಿ ಪಂಜದಲ್ಲಿದ್ದವು ನಾಗರ ಹಾವುಗಳು!?,

ಶಾಲಾ ಫೋಟೋ ಹಿಂಭಾಗ ಮತ್ತು ಹಕ್ಕಿ ಪಂಜದಲ್ಲಿದ್ದವು ನಾಗರ ಹಾವುಗಳು!?
1 / 5

1. ಶಾಲಾ ಫೋಟೋ ಹಿಂಭಾಗ ಮತ್ತು ಹಕ್ಕಿ ಪಂಜದಲ್ಲಿದ್ದವು ನಾಗರ ಹಾವುಗಳು!?

ಶಾಲಾ ಫೋಟೋ ಹಿಂಭಾಗ ಮತ್ತು ಹಕ್ಕಿ ಪಂಜದಲ್ಲಿದ್ದವು ನಾಗರ ಹಾವುಗಳು!?
……………………………………………………………………
ತುರುವೇಕೆರೆ :ಅತಿ ಮಳೆ ಕಾರಣಕ್ಕೆ ಹಾವುಗಳು ಹೊರಗೆ ಸಂಚಾರ ಮಾಡುತ್ತಿವೆ. ಇಲ್ಲಿಯ ಸುಬ್ರಹ್ಮಣ್ಯ ನಗರದ ಸುಬ್ರಹ್ಮಣ್ಯ ಸರ್ಕಾರಿ ಶಾಲೆಯ ಪೋಟೋ ಹಿಂಭಾಗ ನಾಗರ ಹಾವು ಇದ್ದುಅದನ್ನು ಯಶಸ್ವಿಯಾಗಿ ಹಿಡಿದುಅರಣ್ಯ ಪ್ರದೇಶಕ್ಕೆ ಬಿಡಲಾಯಿತು. 


ವಿದ್ಯಾರ್ಥಿಗಳಿಲ್ಲದೇ ಕಳೆದ ಒಂದೆರೆಡು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಶಾಲೆಯನ್ನು ಸಿ ಆರ್ ಪಿ ಕಛೇರಿನ್ನಾಗಿ ಮಾರ್ಪಡಿಸುವ ಸಲುವಾಗಿ ಸಿ ಆರ್ ಪಿ ಲೋಕೇಶ್ ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ಕಛೇರಿಗೆ ಸಂಬAಧಿಸಿದ ಪುಸ್ತಕಗಳನ್ನು ತಂದು ಕೊಠಡಿಯೊಳಗೆ ಇಟ್ಟುಕಿಟಿಕಿಬಾಗಿಲು ತೆರೆಯಲು ಮುಂದಾದ ವೇಳೆ ಪಕ್ಕದಲ್ಲೇಇದ್ದದೇವರ ಫೋಟೋ ಹಿಂಭಾಗ ಹಾವಿನ ಬಾಲ ಇರುವುದುಕಂಡುಬAದಿದೆ. ನಂತರ ಶಬ್ದಕ್ಕೆ ನಾಗರಹಾವು ಹೆಡೆಎತ್ತಿದೆ. 


ಗಾಬರಿಗೊಂಡಲೋಕೇಶ್‌ಅಕ್ಕಪಕ್ಕದ ನಿವಾಸಿಗಳನ್ನು ಕರೆದಿದ್ದಾರೆ. ಕೆಲವರು ಹಾವನ್ನು ಹೊಡೆಯಲು ಮುಂದಾದರು. ಆದರೆಅದಕ್ಕೆಆಸ್ಪದಕೊಡದ ಸಿ ಆರ್ ಪಿ ಲೋಕೇಶ್‌ಉರಗತಜ್ಞ ಬಾಣಸಂದ್ರರವೀಶ್ ಗೆ ದೂರವಾಣಿಕರೆ ಮಾಡಿ ವಸ್ತು ಸ್ಥಿತಿಯನ್ನು ತಿಳಿಸಿದರು. ಸ್ಥಳಕ್ಕೆ ಬಂದ ಬಾಣಸಂದ್ರರವೀಶ್ ಬಹಳ ಸೂಕ್ಷö್ಮವಾಗಿ ನಾಗರಹಾವನ್ನು ಹಿಡಿಯುತ್ತಿದ್ದಂತೆಎಲ್ಲರೂ ನೆಮ್ಮದಿಯ ನಿಟ್ಟಿಸುರು ಬಿಟ್ಟರು. ನಂತರರವೀಶ್ ನಾಗರ ಹಾವನ್ನುಅರಣ್ಯ ಪ್ರದೇಶಕ್ಕೆ ಬಿಟ್ಟರು. ಬಹುಶಃ ನಾಗರ ಹಾವು ಹೆಂಚಿನ ಸಂದಿಯಿAದ ಬಂದಿರಬಹುದುಎAದು ಊಹಿಸಲಾಗಿದೆ.
ಪಂಜರದೊಳಗೆ –ಇಲ್ಲಿಯ ಬಿರ್ಲಾಕಾರ್ನರ್ ನ ಮನೆಯೊಂದರಲ್ಲಿಇರಿಸಲಾಗಿದ್ದ ಹಕ್ಕಿಯ ಪಂಜರದೊಳಗೆ ನುಗ್ಗಿದ್ದ ನಾಗರ ಹಾವು ಪಂಜರದೊಳಗಿದ್ದ ಗಂಡು ಹೆಣ್ಣು ಹಕ್ಕಿಗಳ ಪೈಕಿ ಹೆಣ್ಣು ಹಕ್ಕಿ ಯನ್ನುತಿಂದು ಪಂಜರದೊಳಗೇ ಕುಳಿತಿದ್ದ ಘಟನೆ ನಡೆದಿದೆ.


 ಹಕ್ಕಿಯಚೀರಾಟ ಹೆಚ್ಚಾಗಿದ್ದರಿಂದ ಮನೆಯವರು ಮನೆಯಿಂದ ಹೊರಬಂದು ಪಂಜರದತ್ತಕಣ್ಣು ಹಾಯಿಸಿದ್ದಾರೆ. ಆಗ ಹೆಡೆಎತ್ತಿದ್ದ ನಾಗರ ಹಾವು ಕಂಡುಬAದಿದೆ. ಅಲ್ಲದೇ ಮತ್ತೊಂದು ಹಕ್ಕಿಯನ್ನು ಹಿಡಿಯುವಯತ್ನ ಮಾಡುತ್ತಿತ್ತು. ಹಕ್ಕಿ ತನ್ನಜೀವ ಉಳಿಸಿಕೊಳ್ಳಲು ಚೀರಾಡುತ್ತಾ ಹೋರಾಡುತ್ತಿತ್ತು. ಕೂಡಲೇಉರಗತಜ್ಞ ಬಾಣಸಂದ್ರರವೀಶ್ ಗೆ ಕರೆ ಮಾಡಿದರು. ಸ್ಥಳಕ್ಕೆ ಧಾವಿಸಿದ ರವೀಶ್ ಬಹಳ ಚಾಕಚಕ್ಯತೆಯಿಂದ ನಾಗರಹಾವನ್ನು ಹಿಡಿಯಲು ಯಶಸ್ವಿಯಾದರು. ಇದರೊಂದಿಗೆ ಮತ್ತೊಂದು ಹಕ್ಕಿಯಜೀವವನ್ನೂ ಉಳಿಸಿದಂತಾಯಿತು. 
 ಸಹಜ– ಈ ಮಳೆಗಾಲದಲ್ಲಿ ಹಾವುಗಳು ಹುತ್ತದಲ್ಲಿಇರದೇ ಹೊರಬರುತ್ತವೆ. ಹಾವಿಗೆ ಜನರು ಹೇಗೆ ಹೆದರುತ್ತಾರೋ ಹಾಗೆಯೇ ಹಾವಿಗೂ ಹೆದರಿಕೆಇರುತ್ತದೆ. ಹಾವಿಗೆ ಗಾಬರಿಪಡಿಸದೇಕೂಡಲೇತಮಗೆಕರೆ ಮಾಡಿದಲ್ಲಿ ಹಾವಿನ ರಕ್ಷಣೆ ಮಾಡುವುದಾಗಿಬಾಣಸಂದ್ರರವೀಶ್‌ಹೇಳಿದ್ದಾರೆ.

ಇವರದೂರವಾಣಿ ಸಂಖ್ಯೆ ಹೀಗಿದೆ. 97419 29060 ಗೆ ಕರೆ ಮಾಡಲುಕೋರಲಾಗಿದೆ. 

22 ಟಿವಿಕೆ 1 –ತುರುವೇಕೆರೆಯ ಸುಬ್ರಹ್ಮಣ್ಯ ಸರ್ಕಾರಿ ಶಾಲೆಯ ಫೋಟೋ ಹಿಂದಿದ್ದ ನಾಗರಹಾವು.
 22 ಟಿವಿಕೆ 2 –ತುರುವೇಕೆರೆಯ ಬಿರ್ಲಾಕಾರ್ನರ್ ನ ಮನೆಯೊಂದರ ಹಕ್ಕಿಯ ಪಂಜರದೊಳಗಿದ್ದ ನಾಗರಹಾವು. ಪಂಜರದಲ್ಲೇ ಮತ್ತೊಂದು ಹಕ್ಕಿ ಇರುವುದನ್ನುಕಾಣಬಹುದು.

Next