ಬೆಂಬಲ ಬೆಲೆಗೆ ರಾಗಿ-ತಕ್ಷಣ ಖರೀದಿಸಿ: ಕಾಂಗ್ರೆಸ್ ಸ್ಥಗಿತಗೊಂಡ ರೈತರ ನೊಂದಣಿ ಮತ್ತೆ ಆರಂಭಿಸಿ: ಮುರಳೀಧರ ಹಾಲಪ್ಪ
ಬೆಂಬಲ ಬೆಲೆಗೆ ರಾಗಿ-ತಕ್ಷಣ ಖರೀದಿಸಿ: ಕಾಂಗ್ರೆಸ್ ಸ್ಥಗಿತಗೊಂಡ ರೈತರ ನೊಂದಣಿ ಮತ್ತೆ ಆರಂಭಿಸಿ: ಮುರಳೀಧರ ಹಾಲಪ್ಪ
ಬೆಂಬಲ ಬೆಲೆಗೆ ರಾಗಿ-ತಕ್ಷಣ ಖರೀದಿಸಿ: ಕಾಂಗ್ರೆಸ್
ಸ್ಥಗಿತಗೊಂಡ ರೈತರ ನೊಂದಣಿ ಮತ್ತೆ ಆರಂಭಿಸಿ: ಮುರಳೀಧರ ಹಾಲಪ್ಪ
ತುಮಕೂರು: ಜಿಲ್ಲೆಯ ರಾಗಿ ಕೇಂದ್ರಗಳಲ್ಲಿ ಕೂಡಲೇ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಆರಂಭಿಸಬೇಕು,ಏಕಾಏಕಿ ಸ್ಥಗಿತಗೊಳಿಸಿರುವ ರೈತರ ನೊಂದಣಿಯನ್ನು ಆರಂಭಿಸಬೇಕು ಹಾಗೂ ರಾಗಿ ಖರೀದಿಗೆ ನಿಗದಿಪಡಿಸಿರುವ ಪ್ರಮಾಣವನ್ನು ಹೆಚ್ಚು ಮಾಡಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದೆ.
ಕೆಪಿಸಿಸಿ ವಕ್ತಾರರಾದ ಮುರುಳೀಧರ ಹಾಲಪ್ಪನವರು ಶನಿವಾರ ಜಿಲ್ಲಾ ಕಾಂಗ್ರೆಸ್ ಮುಂಚೂಣಿ ಘಟಕಗಳ ಮುಖಂಡರೊAದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎರಡನೇ ಮಹಡಿಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ ಅವರನ್ನು ಭೇಟಿ ಮಾಡಿ, ರಾಗಿ ಖರೀದಿ ನೊಂದಣಿ ಸ್ಥಗಿತಗೊಳಿಸಿರುವುದನ್ನು ಪುನರಾರಂಭಿಸಬೇಕು ಹಾಗೂ ಕೂಡಲೇ ರಾಗಿ ಖರೀದಿ ಪ್ರಾರಂಭಿಸಬೇಕೆAದು ಒತ್ತಾಯಿಸಿ, ಲಿಖಿತ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುರುಳೀಧರ ಹಾಲಪ್ಪನವರು, ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ನೊಂದಣಿ ಆರಂಭಿಸಿ, ಕೆಲವೇ ದಿನಗಳಲ್ಲಿ ಸ್ಥಗಿತಗೊಳಿಸಲಾಗಿದೆ.ಇದುವರೆಗೂ ರೈತರಿಂದ ರಾಗಿ ಖರೀದಿಸಿಲ್ಲ.ಆಯುಕ್ತರು,ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ,ಮನವಿ ಮಾಡಿದರೆ ಮಾಹಿತಿ ಪಡೆಯುತ್ತೇವೆ. ಸಭೆ ನಡೆಸುತ್ತೇವೆ ಎಂಬ ಉತ್ತರ ನೀಡುತ್ತಿದ್ದಾರೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ.ಕೂಡಲೇ ರಾಗಿ ಖರೀದಿ ಆರಂಭಿಸುವುದರ ಜೊತೆಗೆ, ನೊಂದಣಿಗೂ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಕೋರೋನದಿಂದಾಗಿ ಬೆಂಗಳೂರು ಸೇರಿದ್ದ ಯುವಜನರು ಊರುಗಳಿಗೆ ವಾಪಸ್ ಆಗಿದ್ದಾರೆ.ಅವರು ಸಹ ಕೃಷಿ ಕಾರ್ಯಗಳಲ್ಲಿ ತೊಡಗಿರುವುದರಿಂದ ಈ ಬಾರಿ ಹೆಚ್ಚು ಇಳುವರಿ ನಿರೀಕ್ಷೆಯಿದೆ. ಒಂದು ವೇಳೆ ಈ ಬಾರಿ ಅವರಿಗೆ ಸರಿಯಾದ ಬೆಲೆ ದೊರೆಯಲಿಲ್ಲವೆಂದರೆ ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸರಕಾರ ಈ ಬಾರಿ ಹೆಚ್ಚಿನ ರಾಗಿ ಖರೀದಿಗೆ ಮುಂದಾಗಬೇಕೆAದು ನಮ್ಮ ಕೋರಿಕೆಯಾಗಿದೆ ಎಂದು ಮುರುಳೀಧರ ಹಾಲಪ್ಪ ತಿಳಿಸಿದರು.
ಒಂದು ಕ್ವಿಂಟಾಲ್ ರಾಗಿಗೆ ಸರಕಾರ ೩೩೭೭ ರೂ ದರ ನಿಗಧಿ ಮಾಡಿದೆ. ಈ ಹಣದಲ್ಲಿ ರೈತ ಲಾಭ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಒಂದು ಕ್ವಿಂಟಾಲ್ ರಾಗಿಗೆ ೪೦೦೦ ರೂಗಳ ದರ ನಿಗದಿ ಜೊತೆಗೆ, ಖರೀದಿ ಪ್ರಮಾಣವನ್ನು ಗರಿಷ್ಠ ೨೦ ಕ್ವಿಂಟಾಲ್‌ನಿAದ ೨೫ ಕ್ವಿಂಟಾಲ್‌ಗೆ ಪ್ರಮಾಣ ಹೆಚ್ಚಿಸಬೇಕು.ಅಲ್ಲದೆ ಕಳೆದ ಬಾರಿಗಿಂತ ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಬೆಳೆಯೂ ಚನ್ನಾಗಿದೆ.ಆದ್ದರಿಂದ ಖರೀದಿ ಪ್ರಮಾಣವನ್ನು ಹೆಚ್ಚಿಗೆ ಮಾಡುವಂತೆ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಜಂಟಿ ನಿರ್ದೇಶಕರನ್ನು ಹಾಲಪ್ಪ ಆಗ್ರಹಿಸಿದರು.
ಕಾಂಗ್ರೆಸ್ ನಿಯೋಗಕ್ಕೆ ಪ್ರತಿಕ್ರಿಯಿಸಿದ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಎಂ..ಸಿ. ಶ್ರೀನಿವಾಸಯ್ಯ,ಕಳೆದ ಸಾಲಿನಲ್ಲಿ ಜಿಲ್ಲೆಯಿಂದ ೩೮ ಸಾವಿರ ಜನ ರೈತರು ಹೆಸರು ನೊಂದಾಯಿಸಿದ್ದರು, ಸುಮಾರು ೮.೪೬ ಲಕ್ಷ ಕ್ವಿಂಟಾಲ್ ರಾಗಿಯನ್ನು ಖರೀದಿಸಿದ್ದು, ಶೇ೯೯ರಷ್ಟು ರೈತರಿಗೆ ಹಣ ಸಂದಾಯವಾಗಿದೆ.ತಾAತ್ರಿಕ ಕಾರಣಗಳಿಂದ ೧೮ ರೈತರಿಗೆ ಹಣ ಸಂದಾಯವಾಗಬೇಕಿದೆ. ಈ ಬಾರಿ ಜಿಲ್ಲೆಯಿಂದ ೨೫,೮೦೯ ಜನ ರೈತರು ೪.೨೬ ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ಹೆಸರು ನೊಂದಾಯಿಸಿದ್ದಾರೆ. ಪ್ರಸ್ತುತ ನಿಮ್ಮ ಮನವಿಯನ್ನು ಇಂದೇ ಇಲಾಖೆಯ ಆಯುಕ್ತರಿಗೆ ಕಳುಹಿಸಿ, ಸೂಕ್ತ ನಿರ್ದೇಶನ ನೀಡುವಂತೆ ಕೋರುವುದಾಗಿ ಶ್ರೀನಿವಾಸಯ್ಯ ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ರೇವಣ್ಣಸಿದ್ದಯ್ಯ, ಸಿಮೆಂಟ್ ಮಂಜುನಾಥ್, ಗೋವಿಂದೇಗೌಡ, ಸಿದ್ದಲಿಂಗೇಗೌಡ, ಪ್ರಕಾಶ್, ವಕೀಲರಾದ ಟಿ.ಎಸ್.ನಿರಂಜನ್, ಮರಿಚನ್ನಮ್ಮ ,ಕಾರ್ಮಿಕ ಘಟಕದ ನದೀಂ, ಆದಿಲ್, ಗೀತಾ ಎಸ್.ವಿ, ಅಬ್ದುಲ್ ರಹೀಂ, ವೈ.ಎನ್.ನಾಗರಾಜು, ಸೇರಿದಂತೆ ಹಲವರು ಇದ್ದರು.
ಮಂಗಳವಾರದಿAದ ರಾಗಿ ಖರೀದಿ
ಕೇಂದ್ರ ಸರಕಾರ ಈ ವರ್ಷ ರಾಜ್ಯದಿಂದ ೨.೧೦ ಲಕ್ಷ ಮೆ.ಟನ್ ರಾಗಿ ಖರೀದಿಗೆ ಗುರಿ ನಿಗದಿ ಪಡಿಸಿತ್ತು. ಸದರಿ ಗುರಿ ತಲುಪಿದ ಕೂಡಲೇ ಸರ್ವರ್ ತಂತಾನೇ ನೊಂದಣಿ ಸ್ಥಗಿತಗೊಳಿಸಿದೆ. ಜಿಲ್ಲೆಯ ೯ ಕಡೆಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಕೆಎಫ್‌ಸಿಎಸ್‌ಸಿಯಿಂದ ಗೋಣಿ ಚೀಲಗಳು ಇನ್ನೂ ಬಂದಿಲ್ಲ. ಎರಡು ಮೂರು ದಿನಗಳಲ್ಲಿ ಬರುವ ನಿರೀಕ್ಷೆಯಿದೆ. ರೈತರು ರಾಗಿ ತರುವ ಚೀಲಗಳನ್ನು ಹಿಂದಿರುಗಿಸಲಾಗುವುದು. ಆದ್ದರಿಂದ ಫೆಬ್ರವರಿ ೧ ರಿಂದ ರಾಗಿ ಖರೀದಿ ಆರಂಭವಾಗಲಿದೆ.
- ಎಂ..ಸಿ. ಶ್ರೀನಿವಾಸಯ್ಯ, ಜಂಟಿ ನಿರ್ದೇಶಕ,
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ