ಲಸಿಕೆ ಸರಬರಾಜಿಗೆ ವಿಫಲವಾಗಿದ್ದೇ ರಾಸುಗಳ ಸಾವಿಗೆ ಕಾರಣ ಮಾಜಿ ಶಾಸಕ ಕೆ.ಷಡಕ್ಷರಿ ಆರೋಪ

ಲಸಿಕೆ ಸರಬರಾಜಿಗೆ ವಿಫಲವಾಗಿದ್ದೇ ರಾಸುಗಳ ಸಾವಿಗೆ ಕಾರಣ ಮಾಜಿ ಶಾಸಕ ಕೆ.ಷಡಕ್ಷರಿ ಆರೋಪ


ಲಸಿಕೆ ಸರಬರಾಜಿಗೆ ವಿಫಲವಾಗಿದ್ದೇ ರಾಸುಗಳ ಸಾವಿಗೆ ಕಾರಣ
ಮಾಜಿ ಶಾಸಕ ಕೆ.ಷಡಕ್ಷರಿ ಆರೋಪ
ತಿಪಟೂರು : ಸರ್ಕಾರದಿಂದ ಪಶು ಇಲಾಖೆಯ ವೈದ್ಯರಿಗೆ ಸರಿಯಾದ ಸಮಯಕ್ಕೆ ರಾಸುಗಳಿಗೆ ಬರುವ ಕಾಲುಬಾಯಿ ರೋಗ, ಗೆರಸಲು ರೋಗಗಳಿಗೆ ಬೇಕಾಗಿರುವ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಸರಬರಾಜು ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಹಲವು ರಾಸುಗಳು ಸಾವನ್ನಪ್ಪಿದವು ಎಂದು ಮಾಜಿ ಶಾಸಕ ಕೆ. ಷಡಕ್ಷರಿ ಆರೋಪಿಸಿದರು.
ನಗರದ ಶಾರದನಗರ ರಸ್ತೆಯ ಕಂದಾಯ ನೌಕರರ ಭವನದ ನಂದಿನಿ ಕ್ಷೀರ ಭವನದಲ್ಲಿ ಶುಕ್ರವಾರ ತುಮುಲ್ ವತಿಯಿಂದ ರಾಸುಗಳ ವಿಮೆ ಹಾಗೂ ಇತರೆ ೪೭ ಫಲಾನುಭಿಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದಲೂ ರಾಸುಗಳಿಗೆ ಬರುವ ಕಾಲುಬಾಯಿ ರೋಗ, ಗೆರೆಸಲು ರೋಗಳಿಗೆ ಬೇಕಾಗಿರುವ ಲಸಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ ಕಳೆದ ವರ್ಷ ಸರಿಯಾದ ಸಮಯಕ್ಕೆ ಔಷಧಿಗಳನ್ನು ಸರಬರಾಜು ಮಾಡುವಲ್ಲಿ ಸರ್ಕಾರದ ಪಶು ಇಲಾಖೆ ವಿಫಲವಾದ ಹಿನ್ನೆಲೆಯಲ್ಲಿ ರೈತರ ನೂರಾರು ರಾಸುಗಳು ಅನೇಕ ರೋಗಗಳಿಂದ ಸಾವನ್ನಪ್ಪಿದವು. ಅದರಲ್ಲಿ ಕೆಲವರು ಜಾಗೃತರಾಗಿ ವಿಮೆ ಮಾಡಿಸಿಕೊಂಡಿರುವವರಿಗೆ ವಿಮಾ ಮೊತ್ತವು ದೊರೆತಿದೆ. ವಿಮೆ ಮಾಡಿಸಿಕೊಳ್ಳದ ಹಲವರು ತಮ್ಮ ರಾಸುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ ಎಂದರು.
ಇAದಿನ ಗ್ರಾಮೀಣ ಜನರ ಬದುಕಿನ ಆರ್ಥಿಕತೆ ಹೈನುಗಾರಿಕೆಯ ಮೇಲೆ ಅವಲಂಬಿತವಾಗಿದ್ದು, ಕುಟುಂಬಗಳ ಜೀವನ ನಿರ್ವಹಣೆಯೇ ಹಾಲು ಉತ್ಪಾದನೆಯಿಂದ ಆಗುತ್ತಿದೆ. ಅಂತಹ ರಾಸುಗಳನ್ನು ಆರೋಗ್ಯಯುತವಾಗಿ ನೋಡಿಕೊಳ್ಳುವುದು ರೈತರ ಕರ್ತವ್ಯವಾಗಿದೆ. ತುಮುಲ್‌ನಿಂದಲೂ ಅನೇಕ ಸೌಲಭ್ಯಗಳು ರೈತರಿಗೆ ದೊರಕುತ್ತಿದೆ. ಜೊತೆಗೆ ಹಾಲಿನಿಂದ ಬರುವ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವಂತಹ ಕಾರ್ಯವನ್ನು ಶೀಘ್ರವೇ ಮಾಡಲು ಆಲೋಚಿಸಿದ್ದಾರೆ. ತುಮುಲ್ ಕಲ್ಯಾಣ ಟ್ರಸ್ಟ್ ರೈತರಿಗೆ ಅನೇಕ ವೈದ್ಯಕೀಯ ವೆಚ್ಚಗಳನ್ನು ಸಹ ಭರಿಸುತ್ತಿದ್ದು ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಿದೆ. ಪ್ರತಿಯೊಬ್ಬರೂ ಉತ್ತಮ ಗುಣಮಟ್ಟದ ಹಾಲನ್ನು ನೀಡುವ ಮೂಲಕ ಸಂಸ್ಥೆಯೊAದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ತುಮುಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಮಾತನಾಡಿ, ತಾಲ್ಲೂಕಿನಲ್ಲಿ ೧೪೦ ಸಂಘಗಳಿAದ ಸುಮಾರು ೧.೨೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಒಕ್ಕೂಟದ ಸಹಕಾರದಿಂದ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೋವಿಡ್ ಸಂಕಷ್ಟದಲ್ಲಿ ಮೃತಪಟ್ಟ ಹಾಲು ಉತ್ಪಾದಕರಿಗೆ ೧ ಲಕ್ಷ ಪರಿಹಾರವನ್ನು ರಾಜ್ಯದಲ್ಲಿ ನೀಡಿರುವ ಮೊದಲ ಸಂಸ್ಥೆ ಇದಾಗಿದೆ. ಸಿಗುವಂತಹ ಪರಿಹಾರ ಮೊತ್ತದಲ್ಲಿ ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಹೈಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಮಾಜಿ ತಾ.ಪಂ.ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ವಿಸ್ತರಣಾಧಿಕಾರಿ ಶ್ರೀಲಕ್ಷಿö್ಮÃ, ಶಶಿಕಲಾ, ಮಲ್ಲಿಕಾರ್ಜುನ್ ಭಾಗವಹಿಸಿದ್ದರು.