ಮೇಲ್ಮನೆ ಚುನಾವಣೆ: ಪಕ್ಷಾತೀತವಾಗಿ ಉತ್ತಮ ಅಭ್ಯರ್ಥಿಯ ಆಯ್ಕೆಯ ಜವಾಬ್ದಾರಿ ಮತದಾರರದು: ಕೆ.ಎನ್. ರಾಜಣ್ಣ
ಮೇಲ್ಮನೆ ಚುನಾವಣೆ: ಪಕ್ಷಾತೀತವಾಗಿ ಉತ್ತಮ ಅಭ್ಯರ್ಥಿಯ
ಆಯ್ಕೆಯ ಜವಾಬ್ದಾರಿ ಮತದಾರರದು: ಕೆ.ಎನ್. ರಾಜಣ್ಣ
ಮಧುಗಿರಿ: ಡಿಸೆಂಬರ್ 10 ರಂದು ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮತದಾರರು ಪಕ್ಷಾತೀತವಾಗಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊಂದಿದ್ದಾರೆAದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 5536 ಮತದಾರರನ್ನು ಹೊಂದಿದ್ದು, 5240 ಗ್ರಾಮ ಪಂಚಾಯಿತಿ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಜಿಪಂ, ತಾಪಂ, ಶಿರಾ ನಗರ ಸಭೆ ಹಾಗೂ ನೀರಾವರಿ ಯೋಜನೆ ಅನುಷ್ಠಾನಕ್ಕೆ ಗುಬ್ಬಿ ತಾಲ್ಲೂಕಿನ ಅಮ್ಮಸಂದ್ರ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಹಿನ್ನೆಲೆಯಲ್ಲಿ ಚುನಾವಣೆ ನಡೆಯದ ಕಾರಣ ತುಮಕೂರು ನಗರಪಾಲಿಕೆ, ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆಯ ಸದಸ್ಯರು, ಗ್ರಾ.ಪಂ ಸದಸ್ಯರು ಸೇರಿ ಅಂತಿಮವಾಗಿ 5536 ಮತದಾನದ ಹಕ್ಕು ಹೊಂದಿದ್ದಾರೆAದರು.
ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವವರು ಪಕ್ಷಾತೀತವಾಗಿ ಆಯ್ಕೆಯಾಗಿದ್ದು ಯಾವುದೇ ಪಕ್ಷಗಳಿಗೆ ಬಹುಮತ ಇರೋದಿಲ್ಲ. ಚುನಾವಣೆಯೂ ಸಹ ಯಾವುದೇ ಪಕ್ಷದ ಚಿಹ್ನೆಯಡಿ ನಡೆಯದಿದ್ದರೂ ಕೂಡ ಆಯಾ ಪಕ್ಷದ ಅಭ್ಯರ್ಥಿಗಳು ಗುರುತಿಸಿಕೊಂಡಿರುವವರು ಬೆಂಬಲಿಸಲಿದ್ದಾರೆ. ಈ ಚುನಾವಣೆಯಲ್ಲಿ ಮತದಾನ ಮಾಡುವವರು ಸಾಮಾನ್ಯ ಮತದಾರರಲ್ಲ. ಎಲ್ಲರೂ ನಾಯಕರುಗಳೇ ಮತದಾನದ ಹಕ್ಕು ಹೊಂದಿದ್ದಾರೆ ತಿಳುವಳಿಕೆಯಿಂದ ಮತದಾನ ಮಾಡುತ್ತಾರೆ.
ಇಲ್ಲಿಯವರೆಗೂ ಯಾವುದೇ ಪಕ್ಷದವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಕ್ರೀಬ್ಕೋ ನಿರ್ದೇಶಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೆಶಕ ಆರ್. ರಾಜೇಂದ್ರ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದು ನಮ್ಮ ಪಕ್ಷದಲ್ಲಿ ಇನ್ನೂ ಆಕಾಂಕ್ಷಿಗಳಿದ್ದು ಅಭ್ಯರ್ಥಿ ಆಯ್ಕೆ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳಲಿದ್ದಾರೆ ಎಂದರು.
ಚುನಾವಣಾ ಸಂದರ್ಭದಲ್ಲಿ ಪಕ್ಷದ ಚಿಹ್ನೆ ಇರೋದಿಲ್ಲ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳಬೇಕು ಮೊದಲ ಪ್ರಾಶಸ್ತ್ಯ ಮತ ಒಂದು ಎಂದು ಅಂಕಿಯಲ್ಲಿ ಬರೆಯುವುದರ ಮೂಲಕ ಮತದಾನ ಮಾಡಬೇಕಾಗಿದೆ ಎಂದರು.