ಆರೋಗ್ಯ-ಶಿಕ್ಷಣ: ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ: ಯದುವೀರ್ ಒಡೆಯರ್

yaduveer wodeyar siddhartha education

ಆರೋಗ್ಯ-ಶಿಕ್ಷಣ: ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ: ಯದುವೀರ್ ಒಡೆಯರ್


ಆರೋಗ್ಯ-ಶಿಕ್ಷಣ: ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ
ಕಾರ್ಯ ಶ್ಲಾಘನೀಯ: ಯದುವೀರ್ ಒಡೆಯರ್

ತುಮಕೂರು: ಗ್ರಾಮಾಂತರ ಪ್ರದೇಶದ ಜನಸಮುದಾಯಕ್ಕೆ ಆರೋಗ್ಯ-ಶಿಕ್ಷಣವನ್ನು ನೀಡಬೇಕೆಂಬ ಮೈಸೂರು ಮಹಾ ರಾಜಮನೆತನದ ಪರಿಕಲ್ಪನೆಯಾಗಿತ್ತು. ಇಂದಿನ ಕಾಲದಲ್ಲಿ ಸಾಕಾರಗೊಳಿಸುತ್ತಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ರಾಜಾಡಳಿತವನ್ನು ಮರುಕಳಿಸುವ ರೀತಿಯಲ್ಲಿ ಸಾಮಾಜಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಪ್ರಶಂಸೆ ವ್ಯಕ್ತಪಡಿಸಿದರು. 

ನಗರದ ಅಗಳಕೋಟೆಯಲ್ಲಿನ ಡಾ. ಹೆಚ್.ಎಮ್. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶನಿವಾರ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಸಿದ್ದಾರ್ಥ ಅಡ್ವಾನ್ಸಡ್ ಹಾರ್ಟ್ ಸೆಂಟರ್ ವರ್ಷಾಚರಣೆ ಸವಿ ನೆನಪಿಗಾಗಿ ಸಾಹೇ ವಿಶ್ವವಿದ್ಯಾಲಯದ ಮುಂಭಾಗ ಗಿಡ ನೆಟ್ಟರು. ನಂತರ ವೇದಿಕೆಯಲ್ಲಿ ಮಕ್ಕಳ ಹೃದಯ ಶಸ್ತçಚಿಕಿತ್ಸಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಹುಟ್ಟುವ ಮಕ್ಕಳಿಗೆ ಹೃದಯದ ಖಾಯಿಲೆಗಳು ಯಾರು ಕೂಡ ನಿರೀಕ್ಷೆ ಮಾಡಿರುವುದಿಲ,್ಲ ‘ಸಿದ್ಧಾರ್ಥ ಅಡ್ವಾನ್ಸಡ್ ಹಾರ್ಟ್ ಸೆಂಟರ್ ಕೇವಲ ಒಂದು ವರ್ಷದಲ್ಲಿ ಗ್ರಾಮಾಂತರ ಪ್ರದೇಶದ ಜನಸಮುದಾಯಕ್ಕೆ ಯಶಸ್ವಿಯಾಗಿ ಮುಟ್ಟಿದೆ. ಆಸ್ಪತ್ರೆಯ ಆಡಳಿತ ಮಂಡಳಿ “ಮಕ್ಕಳ ಹೃದಯ ಶಸ್ತçಚಿಕಿತ್ಸಾ ಸೇವಾ ಘಟಕ”ಆರಂಭಿಸುತ್ತಿರುವುದು ಸಮಾಜಮುಖಿಯ ಇನ್ನೊಂದು ಕೊಡುಗೆ ಎಂದರು.


ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಮೈಸೂರು ಸಂಸ್ಥಾನ ಇಡೀ ದೇಶದಲ್ಲಿ ಹೆಸರುವಾಸಿಯಾಗಿರುವ ರಾಜಮನೆತನ. ಆರೋಗ್ಯ ಕ್ಷೇತ್ರದಲ್ಲಿ ಸಂಸ್ಥಾನ ಮಾಡಿದ ಸೇವೆಯನ್ನು ಈಗಲೂ ಸಹ ಹೋಬಳಿ ಮಟ್ಟದಲ್ಲಿನ ಆಸ್ಪತ್ರೆಗಳೇ ಸಾಕ್ಷಿ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಮೈಸೂರು ರಾಜಮನೆತನದ ಸೇವೆಗಳು ನನಗೆ ಸ್ಫೂರ್ತಿಯಾಗಿದ್ದು ಸಿದ್ದಾರ್ಥ ಎಜುಕೇಷನ್ ಸೊಸೈಟಿಯನ್ನು ಸೇವೆಯ ದಿಸೆಯಲ್ಲಿ ಕೊಂಡೊಯ್ಯುವ ನನ್ನ ಕನಸು ಇಂದು ನನಸಾಗಿದೆ ಎಂದರು.


ಮಕ್ಕಳ ಹೃದಯ ಚಿಕಿತ್ಸಾ ಘಟಕದಲ್ಲೂ ತಮ್ಮ ಸೇವೆ ನೀಡಲು ಮುಂದಾಗಿರುವುದಕ್ಕೆ ‘ಛಾಯಾ’ ಸೇವಾ ಯೋಜನೆಯಡಿಯಲ್ಲಿ ಆರ್ಥಿಕ ನೆರವು ನೀಡಲು ತಮ್ಮ ನೇತೃತ್ವದ 5 ಮಂದಿಯ ತಂಡ ಕಾರ್ಯನಿರ್ವಹಿಸಿಲಿದೆ ಎಂದು ಶ್ರೀಮತಿ ಕನ್ನಿಕಾ ಪರಮೇಶ್ವರಿ ಅವರು ವಿವರಿಸಿದರು.


‘ಸಿದ್ಧಾರ್ಥ ಅಡ್ವಾನ್ಸಡ್ ಹಾರ್ಟ್ಸೆಂಟರ್'ನ ಮೇಲ್ವಿಚಾರಕರಾದ ಹಾಗೂ 'ಕಾರ್ಡಿಯಾಕ್ ಫ್ರಾಂಟಿ¬ಡಾ' ಸಂಸ್ಥೆಯ ನಿರ್ದೇಶಕ ಡಾ. ತಮೀಮ್ ಅಹಮದ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್
ಅವರನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಸಾಹೇ ವಿವಿ ಉಪಕುಲಪತಿ ಡಾ. ಪಿ. ಬಾಲಕೃಷ್ಣ ಶೆಟ್ಟಿ ಅವರು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ  ಪ್ರಗತಿನೋಟವನ್ನು ಪ್ರಾಸ್ತಾವಿಕವಾಗಿ ವಿವರಿಸಿ, ಗಣ್ಯರನ್ನು ಸ್ವಾಗತಿಸಿದರು. ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಪ್ರಭಾಕರ್ ವಂದನೆ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಕುಲಸಚಿವ ಡಾ. ಎಮ್.ಝೆಡ್. ಕುರಿಯನ್, ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸುಶಿಲ್‌ಚಂದ್ರ ಮಹಾಪಾತ್ರ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ಬೇಗೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ್, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ. ಜಿ.ಎಂ. ಶಿವಕುಮಾರಪ್ಪ, ಉಪ ಕುಲಸಚಿವರು ಆದ ಡಾ. ಸುದೀಪ್‌ಕುಮಾರ್, ‘ಸಿದ್ಧಾರ್ಥ ಅಡ್ವಾನ್ಸಡ್ ಹಾರ್ಟ್ಸೆಂಟರ್'ನ ವೈದ್ಯಕೀಯ ತಂಡ ಹಾಗೂ ವಿವಿಧ ವಿಭಾಗಗಳ ವೈದ್ಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.