ನಾಳೆ ಪೋಚುಕಟ್ಟೆ ಬಳಿ ರಾಹುಲ್ ಗಾಂಧಿ ತಂಡದ ವಾಸ್ತವ್ಯ
ನಾಳೆ ಪೋಚುಕಟ್ಟೆ ಬಳಿ ರಾಹುಲ್ ಗಾಂಧಿ ತಂಡದ ವಾಸ್ತವ್ಯ
ನಾಳೆ ಪೋಚುಕಟ್ಟೆ ಬಳಿ ರಾಹುಲ್ ಗಾಂಧಿ ತಂಡದ ವಾಸ್ತವ್ಯ
ಚಿಕ್ಕನಾಯಕನಹಳ್ಳಿ: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಅ.9 ರಂದು ತಾಲ್ಲೂಕಿನ ಹುಳಿಯಾರು ಬಳಿಯ ಪೋಚುಕಟ್ಟೆಬಳಿ ವಾಸ್ತವ್ಯ ಹೂಡಲಿದ್ದು ಸಕಲ ಸಿದ್ದತೆ ಮಾಡಲಾಗಿದೆ ಎಂದು ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ. ಚಿಕ್ಕಣ್ಣ ಶನಿವಾರ ತಿಳಿಸಿದರು.
ಪೋಚುಕಟ್ಟೆ ಬಳಿಸಿದ್ದತೆ ಕಾರ್ಯದ ನಡುವೆ ಸುದ್ದಿಗಾರರಿಗೆ ಅವರು ಮಾಹಿತಿ ನೀಡಿ ಭಾರತ್ ಜೋಡೋ ಐಕ್ಯತಾಯಾತ್ರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಅ. 9 ರಂದು ಪ್ರವೇಶಿಸಿ ಅಂದು ಸಂಜೆ 7ಕ್ಕೆ ಬರಕನಹಾಳ್ ಗೇಟ್ ಬಳಿಯ ಪೋಚುಕಟ್ಟೆಗೆ ಆಗಮಿಸಲಿದೆ. ಅಂದು ರಾಹುಲ್ ಗಾಂಧಿಯವರಿಗೂ ಸೇರಿದಂತೆ 5000 ಮಂದಿಗೆ ಊಟೋಪಚಾರ ಹಾಗೂ ವಾಸ್ತವ್ಯಕ್ಕೆ ಸಕಲ ಸಿದ್ದತೆಯನ್ನು ಕೆಪಿಸಿಸಿ ವರಿಷ್ಠರ ಆದೇಶದಂತೆ ಮಾಜಿ ಸಚಿವರಾದ ಟಿ.ಬಿ. ಜಯಚಂದ್ರರವರ ಮಾರ್ಗದರ್ಶನದಲ್ಲಿ ಸಕಲ ಸಿದ್ದತೆ ಮಾಡಲಾಗಿದೆ.
ಅ. 10 ರಂದು ಬೆಳಿಗ್ಗೆ 6-45ಕ್ಕೆ ಧ್ವಜಾರೋಹಣದ ನಂತರ ಉಪಹಾರ ಸೇವಿಸಿ ಜಾಥಾ ಬಳ್ಳೆಕಟ್ಟೆಯಿಂದ ಹುಳಿಯಾರು ಪಟ್ಟಣದಲ್ಲಿ ಹಾದುಹೋಗಲಿದೆ. ಈ ಜಾಥಾದಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ವಾದ್ಯಗೋಷ್ಠಿ, ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕಿನ ಮುಖಂಡರು, ರೈತರು ಮಹಿಳೆಯರು, ಯುವಕರು ಸಾಗಲಿದ್ದಾರೆ. ಇದಕ್ಕಾಗಿ ಹುಳಿಯಾರು ಪಟ್ಟಣವನ್ನು ಹಬ್ಬದರೂಪದಲ್ಲಿ ಸಿಂಗರಿಸಲಾಗಿದೆ.
ಈ ನಡುವೆ ರಾಂಗೋಪಾಲ್ ವೃತ್ತದಲ್ಲಿ ಸಣ್ಣಮಟ್ಟದ ಸಭೆ ನಡೆಸಿದ ನಂತರ ಯಾತ್ರೆಯು ಕೆಂಕೆರೆಯಲ್ಲಿ ತಂಗಿದ್ದು ಭೋಜನ ಸ್ವೀಕರಿಸಿ ಹಿರಿಯೂರು ಕಡೆಗೆ ಸಾಗಲಿದೆ. ಈ ಯಾತ್ರೆಗೆ ಹುಳಯಾರು ಸೇರಿದಂತೆ ತಾಲ್ಲೂಕಿನ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹುಳಿಯಾರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗಾಣದಾಳು ತಿಮ್ಮಯ್ಯ, ಮುಖಂಡರಾದ ರಾಮಯ್ಯ, ಮಂಜುನಾಥ್, ಶಿವಣ್ಣ, ರಂಗನಾಥ್, ಅಶೋಕ್, ಶಿವಕುಮಾರ್ ಮುಂತಾದವರಿದ್ದರು.